ಶೈಕ್ಷಣಿಕ ಸುದ್ದಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶೈಕ್ಷಣಿಕ ಸುದ್ದಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಆಗಸ್ಟ್ 19, 2024

ಕೋಡಿ ಬಿದ್ದ ಅಬ್ಬಲಗೆರೆ ಕೆರೆ-ಶಾಲೆ ಆವರಣನೂ ಕೆರೆಯಂತಾಗಿದೆ



ಸುದ್ದಿಲೈವ್/ಶಿವಮೊಗ್ಗ


ಕಳೆದೆರಡು ದಿನಗಳಿಂದ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುರಿಯುತ್ತಿರುವ ಮಳೆ ಸಣ್ಣಪ್ರಮಾಣದಲ್ಲಿ ತಲೆನೋವು ತಂದೊಡ್ಡಿದೆ. ಒಂದು ಕಡೆ ಸಂತೋಷ ಪಡುವ ವಿಷಯವಾದರೂ ಮತ್ತೊಂದೆಡೆ ಆತಂಕವನ್ನ ತಂದೊಡ್ಡಿದೆ.


ಇಲ್ಲಿಂದ ಆರು ಕಿಲೋಮೀಟರ್ ನಷ್ಟು ದೂರದ ಅಬ್ಬಲಗೆರೆಯ ಕೆರೆ ಕೋಡಿ ಬಿದ್ದಿದೆ. ಈ ಕೆರೆ ಕಳೆದ ವರ್ಷನೂ  ಕೋಡಿ ಬಿದ್ದಿತ್ತು. ಆದರೆ ಬೇಸಿಗೆಗೆ ನೀರೇ ಇಲ್ಲದಂತಾಗಿತ್ತು. ಮಣ್ಣನ್ನೂ ಸಹ ತೆಗೆದ ಪರಿಣಾಮ ಈ ಕೆರೆ ತುಂಬುವುದೇ ಕಷ್ಟ ಎನ್ನಲಾಗುತ್ತಿತ್ತು. ಆದರೆ ಈ ಬಾರಿ ಮತ್ತೆ ಕೋಡಿ ತುಂಬಿದೆ.‌ ಜಲಪಾತದಂತೆ ಸೃಷ್ಠಿಯಾಗಿದೆ. ಇದೇ ರೀತಿ ಮಳೆ ವಾರಕ್ಕೆ ಬೀಳುವ ಮಳೆ ಒಂದು ದಿನಕ್ಕೆ ಬಿದ್ದರೆ ಸವಳಂಗ ರಸ್ತೆಯಲ್ಲಿ ಓಡಾಡಲು ವಾಹನಗಳಿಗೆ ಅಡಚಣೆ ಉಂಟಾಗಲಿದೆ.  



ಅದರಂತೆ ಮಧ್ಯಾಹ್ನ ಸುರಿದ ಮಳೆ ಬಸವಗಂಗೂರಿನ ಸರ್ಕಾರಿ ಶಾಲೆಯ ಒಳಗೆ ಹರಿದಿದೆ. ಈ ರೀತಿ ಮಧ್ಯಾಹ್ನದ ಮಳೆ ಅವಾಂತರ ಸೃಷ್ಠಿಸಿದೆ.

ಬೊಮ್ಮನ್ ಕಟ್ಟೆಗೆ ಕಾಂತೇಶ್ ಭೇಟಿ


ಶಿವಮೊಗ್ಗ ನಗರದ ಬೊಮ್ಮನಕಟ್ಟೆಯಲ್ಲಿ ಕೆರೆ ಕೊಡಿ ಒಡೆದು ನೀರು ನುಗ್ಗಿದ್ದು ಮಾಜಿ ಡಿಸಿಎಂ ಅವರ ಪುತ್ರ ಕೆ.ಈ.ಕಾಂತೇಶ್  ಮನೆಗಳಿಗೆ  ಭೇಟಿ ನೀಡಿ ಸಾರ್ವಜನಿಕರಿಗೆ ಧೈರ್ಯ ತುಂಬಿದ್ದಾರೆ.‌

ಭತ್ತದ ನಾಟಿ ಮಾಡಿದ ವಿದ್ಯಾರ್ಥಿಗಳು

 


ಸುದ್ದಿಲೈವ್/ಶಿವಮೊಗ್ಗ


ಪಾಠದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಭತ್ತದ ನಾಟಿ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿದೇವರಬನ ಗಣಿವಾರ ಖಾಸಗಿ ಶಾಲೆಯ ಮಕ್ಕಳಿಂದ ಭತದ ನಾಟಿ ಮಾಡಿಸಲಾಗಿದೆ. 



ಕೊಡಚಾದ್ರಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಗೆ ನಾಟಿ ಪಾಠ ಕಲಿಸಿಕೊಡಲಾಯಿತು. ಮಕ್ಕಳಿಗೆ ಬದುಕಿನ ಶಿಕ್ಷಣವಾದ ಕೃಷಿಯಲ್ಲಿ ನಾಟಿ ಮಾಡುವ ಕಲಿಸುತ್ತಿರುವ ಶಾಲೆ.ಸತತ ಐದನೇ ವರ್ಷ ನಾಟಿ ತರಬೇತಿ ನೀಡಲು ಗದ್ದೆಗೆ ಕರೆದುಕೊಂಡು ಹೊಗಿ ಪಾಠ ಕಲಿಸಿಕೊಡುವ ಪ್ರಯತ್ನವನ್ನ ಕೊಡಚಾದ್ರಿ ಆಂಗ್ಲ ಶಾಲೆ ಮಾಡಿದೆ. 


ವಿದ್ಯಾರ್ಥಿಗಳನ್ನು ನೇರವಾಗಿ ಭತ್ತದ ಗದ್ದೆಗೆ ಕರೆದುಕೊಂಡು ಭತ್ತದ ನಾಟಿ ಮಾಡಿಸಲಾಗಿದೆ. ಕಲಿಕೆ ಕೇವಲ ಪುಸ್ತಕದಲ್ಲಿರುವ ಪಠ್ಯಕ್ರಮಕ್ಕಷ್ಟೇ ಸೀಮಿತ ಆಗಬಾರದು ಎಂಬುದು ಶಿಕ್ಷಕರ ಆಶಯವಾಗಿದೆ. ಕೆಸರು ಗದ್ದೆಯಲ್ಲಿ ನಾಟಿ ಮಾಡಿ ಹೊಸ ಅನುಭವ ಪಡೆದ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಕಂಬಳದ ಸಂಭ್ರಮ ಅನುಭವವನ್ನ ವಿದ್ಯಾರ್ಥಿಗಳು ಪಡೆದಿದ್ದಾರೆ. 

ಮಂಗಳವಾರ, ಆಗಸ್ಟ್ 6, 2024

ಅಚ್ಚರಿ‌ಮೂಡಿಸಿದ ಔಟ್‌ಲುಕ್ ರ‍್ಯಾಂಕಿಗ್



ಸುದ್ದಿಲೈವ್/ಶಿವಮೊಗ್ಗ


ಔಟ್ಲುಕ್ ಮ್ಯಾಗಜೀನ್‌ನ ಪ್ರಕಟಿಸಿರುವ ಭಾರತದ ಸಾರ್ವಜನಿಕ ವಲಯದ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳ ರ‍್ಯಾಂಕಿಂಗ್ ನಲ್ಲಿ ಕುವೆಂಪು ವಿವಿ 30ನೇ ಸ್ಥಾನ ಪಡೆದಿದೆ. ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಯತ್ನಗಳ ನಡುವೆ 30 ನೇ ಸ್ಥಾನ ಪಡೆದಿರುವುದು ಅಚ್ಚರಿಮೂಡಿಸಿದೆ. 


ದೇಶದ ಮುದ್ರಣ ಮಾಧ್ಯಮದಲ್ಲಿ ಪ್ರಸಿದ್ಧ ನಿಯತಕಾಲಿಕೆಯಾದ ಔಟ್ಲುಕ್ ಮ್ಯಾಗಜಿನ್ ವಿವಿಧ ಮಾನದಂಡಗಳನ್ನು ಪರಿಗಣಿಸಿ ಭಾರತದ ಸಾರ್ವಜನಿಕ ವಲಯದ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳ  ರ‍್ಯಾಂಕಿಂಗ್ ಅನ್ನು ಆ. 03ರಂದು ಪ್ರಕಟಿಸಿದೆ. ಇದರಲ್ಲಿ ಒಟ್ಟು ದೇಶದ 75 ಸಂಸ್ಥೆಗಳಿದ್ದು ಕರ್ನಾಟಕದ ಗ್ರಾಮೀಣ ಭಾಗದ ವಿವಿಯಾದ ಕುವೆಂಪು ವಿವಿ ಅಗ್ರ 30ನೇ ಸ್ಥಾನ ಪಡೆದಿದೆ.


ನಿಯತಕಾಲಿಕೆಯು ಶೈಕ್ಷಣಿಕ ವಾತಾವರಣ, ಸಂಶೋಧನೆ ಮೂಲಭೂತ ಸೌಕರ್ಯಗಳು, ಆಡಳಿತ ಮತ್ತು ವಿಸ್ತರಣಾ ಕಾರ್ಯಕ್ರಮಗಳ ಐದು ಮಾನದಂಡಗಳ ಆಧಾರದಲ್ಲಿ ರ‍್ಯಾಂಕಿಂಗ್ ಪಟ್ಟಿ ಸಿದ್ಧಪಡಿಸಿದೆ. ಕುವೆಂಪು ವಿಶ್ವವಿದ್ಯಾಲಯವು ಒಟ್ಟು ಸಾವಿರ ಅಂಕಗಳಿಗೆ 877 ಪಾಯಿಂಟ್ ಗಳಿಸಿದೆ. ಇದೇ ಪಟ್ಟಿಯಲ್ಲಿ ಮೈಸೂರು ವಿಶ್ವವಿದ್ಯಾಲಯವು ಎಂಟನೇ ಸ್ಥಾನ ಗಳಿಸಿದ್ದರೆ, ಬೆಂಗಳೂರು ವಿಶ್ವವಿದ್ಯಾಲಯವು 24ನೇ ಸ್ಥಾನದಲ್ಲಿದೆ. ಹಾಗೂ ಈ ಪಟ್ಟಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಮತ್ತು ತುಮಕೂರು ವಿವಿಗಳು ಕರ್ನಾಟಕದಿಂದ ಸ್ಥಾನ ಪಡೆದಿವೆ.


ನಿಯತಕಾಲಿಕೆಯು ಪರಿಗಣಿಸಿರುವ ಮಾನದಂಡಗಳು ಇಂತಿವೆ: ಶೈಕ್ಷಣಿಕ ಮತ್ತು ಸಂಶೋಧನಾ ಉತ್ಕೃಷ್ಟತೆ, ಔದ್ಯಮಿಕ ವಲಯ ಮತ್ತು ಉದ್ಯೋ ಗ ಕಲ್ಪಿಸುವಿಕೆ, ಮೂಲಭೂತ ಶೈಕ್ಷಣಿಕ ಸೌಲಭ್ಯಗಳು, ಆಡಳಿತ ಮತ್ತು ವಿಸ್ತರಣಾ ಕಾರ್ಯಕ್ರಮಗಳು ಹಾಗೂ ವೈವಿಧ್ಯತೆಯನ್ನು ಒಳಗೊಳ್ಳುವ ಸಾಮರ್ಥ್ಯವನ್ನು ಪರಿಗಣನೆಗೆ ತೆಗೆದುಕೊಂಡು ಒಟ್ಟು ಸಾವಿರ ಅಂಕಗಳಿಗೆ ಮೌಲ್ಯಮಾಪನ ಮಾಡಲಾಗಿದೆ.


ವಿದ್ಯಾರ್ಥಿಯೊಬ್ಬ ಇತ್ತೀಚೆಗೆ ಕಾಲೇಜಿನ ಆವರಣದಲ್ಲಿಯೇ ಹಾಸ್ಟೆಲ್ ಗಳ ಅವ್ಯವಸ್ಥೆ ಕುರಿತು ಪತ್ರಬರೆದಿದ್ದು ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣ ಮರೆಮಾಚುವ ಮುನ್ನ ಖಾಸಗಿ ಸಂಸ್ಥೆ ಯಾವ ಮಾನದಂಡ ಇಟ್ಟುಕೊಂಡು 30 ನೇ ರ್ಯಾಂಕಿಂಗ್ ನೀಡಿರುವುದು ಅಚ್ಚರಿ ಮೂಡಿಸಿದೆ.


ಇದನ್ನೂ ಓದಿ-https://www.suddilive.in/2024/08/21-job.html

ಶುಕ್ರವಾರ, ಆಗಸ್ಟ್ 2, 2024

ಕಿರುಚಿತ್ರ ಬಿಡುಗಡೆ-ಸಾಧಕರ ಪ್ರಯತ್ನಕ್ಕೆ ಬೆಂಬಲಿಸಿ



ಸುದ್ದಿಲೈವ್/ಶಿವಮೊಗ್ಗ


ಫೀನಿಕ್ಸ್ (Phoenix) ಎಂಬ ಹೆಸರೇ ಒಂದು ವಿಭಿನ್ನ, Phoenix ಎಂದರೆ  ತನ್ನ ಬೂದಿಯಿಂದಲೇ ಎದ್ದುಬರುವ ಕಾಲ್ಪನಿಕ ಪಕ್ಷಿ ಹಾಗೂ ಅಮರತ್ವವನ್ನು ಬಿಂಬಿಸುವ ಹೆಸರು. ಈ ಒಂದು ವಿಭಿನ್ನ ಶೀರ್ಷಿಕೆಯನ್ನು ಇಟ್ಟುಕೊಂಡು , ದೊಡ್ಡದಾದ ಪ್ರಯತ್ನವನ್ನ ಶಿವಮೊಗ್ಗದ ಪ್ರತಿಭೆಗಳು ಮಾಡಿದ್ದಾರೆ. 


ಈಗಾಗಲೇ ಥಗ್ಸ್ ಅಫ್ ರಗಡ ಕಿರು ಚಿತ್ರದಿಂದ ಸದ್ದುಗೊಂಡ ಸಿನಿಮಾಟೋಗ್ರಾಫರ್ ಅನುಷ್ ಗೌಡ ರವರು ಫೀನಿಕ್ಸ್ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದು, ಅಶ್ವಿನ್ ರವರು ಸಿನಿಮ್ಯಾಟೋಗ್ರಾಫಿ ಮಾಡಿದ್ದಾರೆ.


ಈ ಕಿರುಚಿತ್ರಕ್ಕೆ Minus X Minus ತಂಡ ಹಣ ಹೂಡಿದ್ದು KSS CREATIONS ಅಸೋಸಿಯೇಷನ್ ಮಾಡಿದ್ದಾರೆ. ಗಗನ್, ಪೂರ್ಣಚಂದ್ರ, ನಿಖಿಲ್ ಕುಮಾರ್, ರೋಹನ್, ಸೂರಜ್, ಕಿರಣ್ ರವರು ಈ ಕಿರು ಚಿತ್ರದಲ್ಲಿ ಅಭಿನಯಿಸಿದ್ದಾರೆ. 


Phoenix ಇದೊಂದು ದೊಡ್ಡ ಮಟ್ಟದ Action ಕಿರು ಚಿತ್ರ. ಅನುಷ್ ಗೌಡ ರವರ ದೊಡ್ಡ ಮಟ್ಟದ ಆಲೋಚನೆ ಹಾಗೂ ಮೇಕಿಂಗ್ ಸ್ಟೈಲ್ ಈ ಕಿರು ಚಿತ್ರದಲ್ಲಿ ನೀವು ಕಾಣಬಹುದು ಹಾಗೂ ಕಿರು ಚಿತ್ರದಲ್ಲೇ ಇದೊಂದು ಹೊಸದಾದ ಪ್ರಯತ್ನ ,   


ದೊಡ್ಡ ದೊಡ್ಡ ಸಿನಿಮಾಗಳು ಬಳಸುವಂತಹ VFX ಟೆಕ್ನಾಲಜಿ ಕೂಡ ಈ ಕಿರು ಚಿತ್ರದಲ್ಲಿ ಬಳಸಲಾಗಿದೆ. ಈಗಾಗಲೇ ಟೀಸರ್ Minus X Minus ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮವಾದ ಪ್ರತಿಕ್ರಿಯೆ ಬಂದಿದೆ.


ಆಗಸ್ಟ್ 10 ಕ್ಕೆ Phoenix ಕಿರುಚಿತ್ರ Minus X Minus ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದ್ದು , ಈ ಹೊಸದಾದ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲ  ಇರಲಿ ಹಾಗೂ Phoenix ಕಿರುಚಿತ್ರ ಯಾವ ಮೂವಿಗೂ ಕಮ್ಮಿ ಇಲ್ಲ , ಎಂದು Phoenix ಕಿರು ಚಿತ್ರದ Marketing Head ಕಿಶನ್ ರವರು ತಿಳಿಸಿದ್ದಾರೆ. ಟೀಸರ್ ಲಿಂಕ್ https://youtu.be/7UMV6Ps_iUo?si=CiX_firpMxAXPE0g


ಇದನ್ನೂ ಓದಿ-https://www.suddilive.in/2024/08/blog-post_5.html

ಮಂಗಳವಾರ, ಜುಲೈ 30, 2024

ಸಾಗರದ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ



ಸುದ್ದಿಲೈವ್/ಸಾಗರ


ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಈಗಾಗಲೇ ಎರಡು ತಾಲೂಕಿನಲ್ಲಿ ರಜೆ ಘೋಷಿಸಲಾಗಿದೆ. 


ಸಾಗರದಲ್ಲೂ ಮಳೆ ಅಬ್ಬರಿಸುತ್ತಿದ್ದು ರಜೆ ಘೋಷಿಸಲಾಗಿದೆ. ಸಾಗರದಲ್ಲಿ ಮಳೆ ಮುಂದುವರೆದಿದ್ದು ಶಾಲಾ ಕಾಲೇಜು ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. 


ಇದನ್ನೂ ಓದಿ-https://www.suddilive.in/2024/07/blog-post_209.html

ಶಿವಮೊಗ್ಗ ಜಿಲ್ಲೆಯ ಎರಡು ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ರಜೆ

 


ಸುದ್ದಿಲೈವ್/ಶಿವಮೊಗ್ಗ


ಮಲೆನಾಡಿನ‌ಮಳೆಯ ಆರ್ಭಟ ಮುಂದುವರೆದುದೆ ಪರಿಣಾಮ ನಾಳೆ ಶಿವಮೊಗ್ಗ ಜಿಲ್ಲೆಯ ಎರಡು ತಾಲೂಕಿನ ಶಾಲಾ, ಕಾಲೇಜು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. 


ಎರಡು ಮೂರು ದಿನಗಳಿಂದ ಬಿಡುವು ನಿಡಿದ್ದ ಮಳೆರಾಯ ಮಲೆನಾಡಿನಲ್ಲಿ ಮತ್ತೆ ಆರ್ಭಟಿಸಿದ್ದಾನೆ. ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿಯಲ್ಲಿ ಮಳೆ ಹೆಚ್ಚಾಗಿದೆ. ಪರಿಣಾಮ ಸಾಗರ ಮತ್ತು ಹೊಸನಗರ ತಾಲೂಕಿನ‌ ಶಾಲಾ ಕಾಲೇಜುಗಳಿಗೆ ಹಾಗೂ ಅಂಗನವಾಡಿಗೆ ಆಯಾ ತಾಲೂಕಿನ ತಹಶೀಲ್ದಾರ್ ರಜೆ ಘೋಷಿಸಿದ್ದಾರೆ. ಸಾಗರದಲ್ಲಿ ಮಳೆ ಹೆಚ್ಚಿದೆ. ಅಧಿಕೃತ ರಜೆಯ ಘೋಷಣೆ ಹೊರ ಬೀಳಬೇಕಿದೆ.‌


ಇದನ್ನೂ ಓದಿ-https://www.suddilive.in/2024/07/blog-post_514.html

ಶುಕ್ರವಾರ, ಜುಲೈ 26, 2024

ಇನ್ನೆರಡು ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

 


ಸುದ್ದಿಲೈವ್/ಶಿವಮೊಗ್ಗ


ಅಧಿಕ ಮಳೆಯಿಂದಾಗಿ ಜಿಲ್ಲೆಯ ಇನ್ನೆರಡು ತಾಲೂಕಿಗೂ ರಜೆ ಘೋಷಿಸಲಸಲಾಗಿದೆ. ಈಗಾಗಲೇ ಹೊಸನಗರ ಮತ್ತು ಸಾಗರ ತಾಲೂಕಿನಲ್ಲಿ ರಜೆ ಘೋಷಣೆ ಬೆನ್ನೇಲ್ಲೇ ಶಾಲೆಗಳ ರಜೆ ಪಟ್ಟಿಗೆ ಇನ್ಬೆರಡು ತಾಲೂಕುಗಳು ಸೇರ್ಪಡೆಯಾಗಿದೆ.

ಸೊರಬ ಮತ್ತು ತೀರ್ಥಹಳ್ಳಿ ಶಾಲೆಗೆ ರಜೆ ಘೋಷಿಸಲಾಗಿದೆ. ಇದರಿಙದ ಜಿಲ್ಲೆ 7 ತಾಲೂಕುಗಳಲ್ಲಿ 4 ತಾಲೂಕಿನ ಶಾಲಾ ಕಾಲೇಜು ಮತ್ತು ಅಂಗನವಾಡಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ನಾಳೆ ಎರಡು ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

 


ಸುದ್ದಿಲೈವ್/ಶಿವಮೊಗ್ಗ


ಮಲೆನಾಡಿನಲ್ಲಿ ಅದರಲ್ಲೂ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕಿನಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಈ ಮಳೆಗೆ ನಾಳೆಯೂ ಎರಡು ತಾಲೂಕಿನಲ್ಲಿ ರಜೆ ಘೋಷಿಸಲಾಗೆ. 


ಅಧಿಕ ಮಳೆಯಿಂದ ಶುಕ್ರವಾರ ಈ ಮೂರು ತಾಲೂಕಿನ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಆದರೆ ಇಲ್ಲಿಯ ವರೆಗೆ ಎರಡು ತಾಲೂಕಿನ ಶಾಲ ಕಾಲೇಜುಗಳಿಗೆ ಆಯಾ ತಹಶೀಲ್ದಾರರು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. 


ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ಮಳೆಯ ಆರ್ಭಟಕ್ಕೆ ರಜೆ ಘೋಷಿಸಲಾಗಿದೆ. ತೀರ್ಥಹಳ್ಳಿಯಲ್ಲೂ ಶುಕ್ರವಾರ ಮಳೆ ಸುರಿದಿದೆ. ಹವಮಾನ ಇಲಾಖೆ ಏನು ಅಲರ್ಅ್ ಇದೆ ಎಂದು ಅವಲೋಕಿಸಿ ರಜೆ ನೀಡಬೇಕೋ ಅಥವಾ‌ಬೇಡವೋ ಎಂಬ ತೀರ್ಮಾನ ಮಾಡಲಿದ್ದಾರೆ.


ಇದನ್ನೂ ಓದಿ-https://www.suddilive.in/2024/07/blog-post_776.html

ಬಿಸಿಎಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳ ದಿಡೀರ್ ಪ್ರತಿಭಟನೆ-ವಾರ್ಡನ್ ಗೆ ಘೇರಾವ್-ಕುತೂಹಲ ಮೂಡಿಸಿದ ವಾರ್ಡ್ ನ್ ಹೇಳಿಕೆ-

 


ಸುದ್ದಿಲೈವ್/ಶಿವಮೊಗ್ಗ


ನಗರದ ಪಾಜಪೇಯಿ ಬಡಾವಣೆಯಲ್ಲಿರುವ‌ ಬಿಸಿಎಂ ಮೆಟ್ರಕ್ ನಂತರದ ಹಾಸ್ಟೆಲ್ ನಲ್ಲಿ ಮಳೆಯನ್ನೇ ಲೆಕ್ಕಿಸದೆ ವಿದ್ಯಾರ್ಥಿಗಳು ದಿಡೀರ್ ಪ್ರತಿಭಟನೆ ನಡೆಸಿದ್ದಾರೆ. ತಡವಾಗಿ ಬಂದ ವಾರ್ಡನ್ ಚಂದ್ರಶೇಖರ್ ಅವರನ್ನ ವಿದ್ಯಾರ್ಥಿಗಳು ಘೇರಾವ್ ಮಾಡಿದ್ದಾರೆ. 


ಅಧಿಕಾರಿಗಳಿಗೆ ದಿಕ್ಕಾರ, ಬೇಕೇ ಬೇಕು  ನ್ಯಾಯಬೇಕು ಎಂಬ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಸುಧೀರ್ಘ ಪ್ರತಿಔಟನೆ ನಡೆದರೂ ಮೇಲಾಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂಬುದು ವಿದ್ಯಾರ್ಥಿಗಳ ಆರೋಪ


ಊಟ, ವಿದ್ಯುತ್ ಮತ್ತು ನೀರಿನ ಬಗ್ಗೆ ವಿದ್ಯಾರ್ಥಿಗಳು ಆಕ್ಷೇಪಿಸಿದ್ದಾರೆ. ಹಾಸ್ಟೆಲ್ ನಲ್ಲಿ ಪೌಷ್ಠಿಕ ಆಹಾರ ಸಿಗುತ್ತಿಲ್ಲ. ಸೋಲಾರ್ ಹಾಳಾಗಿದ್ದರೂ ದುರಸ್ತಿ ಮಾಡಿಸುತ್ತಿಲ್ಲ. ಕಳೆದ ಎರಡು ವರ್ಷದಿಂದ ಸೋಲಾರ್ ಕೆಟ್ಟಿದ್ದರು ರಿಪೇರಿ ಮಾಡುತ್ತಿಲ್ಲ.  ಮೇಲಧಿಕಾರಿಗಳ ಗಮನಕ್ಕೆ  ತರಲಾಗಿದ್ದರೂ ನಿರ್ಲಕ್ಷಿಸಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. 


ಬಡಾವಣೆಯಲ್ಲಿ ನಾಲ್ಕು ಹಾಸ್ಟೆಲ್ ಗಳಿವೆ. ಎರಡು ಬಿಸಿಎಂ, ಒಂದು ಎಸ್ ಸಿ ಮತ್ತು  ಎಸ್ ಟಿ ಹಾಸ್ಟೆಲ್ ಗಳಿವೆ. ಎಸ್ ಸಿಎಸ್ಟಿ ಹಾಸ್ಟೆಲ್ ಗೆ ಸ್ಟಡಿ ಟೇಬಲ್ ಬೆಡ್ ನ್ನ ನೀಡಾಗಿದೆ. ಬಿಸಿಎಂ ಹಾಸ್ಟೆಲ್ ಗೆ ಬರುತ್ತಿಲ್ಲ ಏಕೆ? ಬೇಸಿದ ಅನ್ನ ನೀಡುವುದಿಲ್ಲ. ಸಾಂಬಾರ್ ಬಾಯಿಗೆ ಹಾಕಲು ಸಾಧ್ಯವಿಲ್ಲ.  ಟೀಗಳನ್ನ ಕುಡಿಯುವ ಸ್ಥಿತಿಯಲ್ಲೇ ಇರಲ್ಲವೆಂದು ವಿದ್ಯಾರ್ಥಿಗಳ ಆರೋಪವಾಗಿದೆ. 



ಬೆಳಿಗ್ಗೆ ಟಿಫನ್ ಇನ್ ಟೈಮ್ಗೆ ಬರುತ್ತಿಲ್ಲ. ವಾರಕ್ಕೊಮ್ಮೆ ನೀಡುವ ಚಿಕನ್ ಸಹ ಗುಣಮಟ್ಟದಲ್ಲಿರಲ್ಲ. ಇದನ್ನ ಮೇಲಾಧಿಕಾರಿಗಳ ಗಮನಕ್ಕೆ ತರಲಾದರೂ ಪ್ರಯೋಜನವಾಗಿಲ್ಲ. ನಮ್ಮ ಹಣದಲ್ಲೆ  ಊಟ ಮಾಡುತ್ತಿದ್ದೇವೆ ಎಂಬುದು ವಿದ್ಯಾರ್ಥಿಗಳ ದೂರಾಗಿದೆ


ಸಿಟಿ ಬಸ್ ಸಂಪರ್ಕವೂ ಸಹ ಸರಿಯಾದ ವ್ಯವಸ್ಥೆ ಇಲ್ಲ. ಎರಡು ಬಸ್ ಇಲ್ಲಿಗೆ ಬರುತ್ತೆ ಬಸ್ ಗಳಲ್ಲಿ ನಾಲ್ಕು ಹಾಸ್ಟೆಲ್ ಗಳು ಐನೂರು ಜನ ವಿದ್ಯಾರ್ಥಿಗಳು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾರ್ಡನ್ ಸರಿಯಾಗಿ ಸಮಸ್ಯೆ ಬಗೆಹರಿಸುತ್ತಿಲ್ಲ. ಎಂಬುದು ದೂರಾಗಿದೆ. 


ಸ್ಥಳಕ್ಕೆ ಬಂದ ವಾರ್ಡನ್ ನನ್ನ ವಿದ್ಯಾರ್ಥಿಗಳು ಮುತ್ತಿಗೆಹಾಕಿದ್ದಾರೆ. ವಾರ್ಡ್ ನ್ ಸಹ  ಅಮಾನತ್ತುಗೊಂಡರೆ ಅಬ್ಬಬ್ಬ ಎಂದರೆ  6 ತಿಂಗಳು ಮನೆಯಲ್ಲಿರುತ್ತೇನೆ. ಮತ್ತೆ ಡ್ಯೂಟಿಗೆ ಜಾಯಿನ್ ಹಾಕ್ತೀನಿ ಎಂದು ಹೇಳಿರುವುದು ಪ್ರತಿಭಟನೆಯಲ್ಲಿ ಕುತೂಹಲ ಮೂಡಿಸಿದೆ. 


ಸ್ಥಳಕ್ಕೆ 112 ಧಾವಿಸಿದೆ. ನಾಲ್ಕೂ ಹಾಸ್ಟೆಲ್ ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡು ಎರಡು ಗಂಟೆ ಕಳೆದರೂ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. 

ಇದನ್ನೂ ಓದಿ-https://www.suddilive.in/2024/07/blog-post_914.html

ಸಾಗರ ಮತ್ತು ತೀರ್ಥಹಳ್ಳಿ ತಾಲೂಕಿನಲ್ಲೂ ಶಾಲಾ ಕಾಲೇಜುಗಳಿಗೆ ರಜೆ



ಸುದ್ದಿಲೈವ್/ತೀರ್ಥಹಳ್ಳಿ/ಸಾಗರ


ಹೊಸನಗರ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಬೆನ್ನಲ್ಲೇ ಇನ್ನೆರೆಡು ತಾಲೂಕಿನಲ್ಲಿ ಶೈಕ್ಷಣಿಕ ಚಟುವಟಿಕಗಳಿಗೆ  ರಜೆ ಘೋಷಿಸಲಾಗಿದೆ. 


ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನ ಶಾಲೆ, ಕಾಲೇಜುಗಳಿಗೆ ಆಯಾ ತಹಶೀಲ್ದಾರ್‌ಗಳು ರಜೆ ಘೋಷಣೆ ಮಾಡಿದ್ದಾರೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಜು.26ರಂದು ಈ ತಾಲೂಕುಗಳ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.


ಈಗಾಗಲೇ ಹೊಸನಗರ ತಾಲೂಕಿನ ಶಾಲೆ, ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಿಸಿ ತಹಶೀಲ್ದಾರ್‌ ಆದೇಶ ಹೊರಡಿಸಿದ್ದರು. ಸದ್ಯ ಶಿವಮೊಗ್ಗ ಜಿಲ್ಲೆಯ ಮೂರು ತಾಲೂಕಿನ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.


ಇದನ್ನೂ ಓದಿ-https://www.suddilive.in/2024/07/blog-post_880.html


ಹೊಸನಗರ ತಾಲೂಕಿನಾದ್ಯಂತ ಶಾಲಾ, ಕಾಲೇಜುಗಳಿಗೆ ಇಂದು ರಜೆ


ಸುದ್ದಿಲೈವ್/ಹೊಸನಗರ


ಹೊಸನಗರದಲ್ಲಿ ನಾಲ್ಕೈದು ದಿನಗಳ ಹಿಂದೆ ಆರಂಭವಾಗಿದ್ದ ಶಾಲಾಕಾಲೇಜುಗಳಿಗೆ ಇಂದು ಮತ್ತೆ ರಜೆ ಘೋಷಿಸಲಾಗಿದೆ. ರಜೆಯನ್ನ ತಹಶೀಲ್ದಾರ್ ರಶ್ಮಿ ಹಾಲೇಶ್ ಘೋಷಿಸಿದ್ದಾರೆ.


ತಾಲೂಕಿನಾದ್ಯಂತ ಮಳೆ ಮತ್ತು ಗಾಳಿ ತೀವ್ರವಾಗಿ ಬೀಸುತ್ತಿದ್ದು, ಇಂದು ಮಳೆ ಹೆಚ್ಚಾಗುವ ಸಂಭಾವನೀಯವಿರುವುದರಿಂದ, ಪ್ರಾಥಮಿಕ, ಪ್ರೌಢ ಶಾಲೆಗಳು, ಕಾಲೇಜು ಹಾಗೂ ಅಂಗನವಾಡಿಗಳಿಗೆ ತಹಶೀಲ್ದಾರ್ ರಜೆ ಘೋಷಿಸಿದ್ದಾರೆ. 

ಇದನ್ನೂ ಓದಿ-https://www.suddilive.in/2024/07/blog-post_979.html

ಗುರುವಾರ, ಜುಲೈ 25, 2024

ಸಿಬಿಆರ್ ಕಾನೂನು ಕಾಲೇಜಿನಲ್ಲಿ ಗುರು ಪೂರ್ಣಿಮ

ಸುದ್ದಿಲೈವ್/ಶಿವಮೊಗ್ಗ

ಸಿ ಬಿ ಆರ್ ಕಾನೂನು ಕಾಲೇಜು ಮತ್ತು ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರ ಶಿವಮೊಗ್ಗ, ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ  ಗುರು ಪೂರ್ಣಿಮೆಯ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ ಜರುಗಿತು. 


ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದಂತಹ ಎಸ್ ಎನ್ ನಾಗರಾಜ್ ರವರು ಆಗಮಿಸಿದ್ದರು ಹಾಗೂ ಈ ಕಾರ್ಯಕ್ರಮದಲ್ಲಿ ಸಹ ಪ್ರಾಧ್ಯಾಪಕರಾದಂತಹ ಡಾ. ಬಿ ಸಿ ಬಸಪ್ಪ, ಡಾ. ಆದರ್ಶ ಎಂ ಎನ್, ಹಾಗೂ ಸಹಾಯಕ ಪ್ರಾಧ್ಯಾಪಕರಾದಂತಹ ಮಹಾಂತೇಶ್ ಗೌಡ,  


ಛಾಯಕುಮಾರ್, ಅನುಪಮಾ ಬಿ.ಯು ಇವರ ಉಪಸ್ಥಿತಿಯಲ್ಲಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಅಂತಹ ಡಾ. ಎ. ಅನಲರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 



ಈ ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಹಾಗೂ ಗ್ರಂಥಪಾಲಕರಿಗೆ ಮತ್ತು ಸಹಾಯಕ ಸಿಬ್ಬಂದಿಗಳಿಗೆ ಕಿರು ನೆನಪಿನ ಕಾಣಿಕೆಯ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು.

ಇದನ್ನೂ ಓದಿ-https://www.suddilive.in/2024/07/blog-post_916.html

ವರ್ಗಾವಣೆ ಕೌನ್ಸಲಿಂಗ್ ನಿಲ್ಲಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಕರರಿಂದ ಪ್ರತಿಭಟನೆ

ಕೌನ್ಸಲಿಂಗ್ ನಡೆಯುತ್ತಿರುವ ಕೊಠಡಿ


ಸುದ್ದಿಲೈವ್/ಶಿವಮೊಗ್ಗ

ಶಾಲಾ ಶಿಕ್ಷಕರ ವರ್ಗಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಇಂದು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರು ಪ್ರತಿಭಟನೆ ನಡೆಸಿದ್ದಾರೆ.

ಮೀನಾಕ್ಷಿ ಭವನದ ಪಕ್ಕದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ನಡೆಯುತ್ತಿದ್ದು, ಇಲ್ಲಿ ವರ್ಗಾವಣೆಗಾಗಿ ಕೌನ್ಸಿಲಿಂಗ್ ಗೆ ಬಂದ ಪ್ರಾಥಮಿಕ ಶಿಕ್ಷಕರು ಪ್ರತಿಭಟನೆಗೆ ಇಳಿದು ಕೌನ್ಸಿಲಿಂಗ್ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

ಕಳೆದ 25 ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರು ಹೊರ ಊರುಗಳಲ್ಲಿ ಕೆಲಸ ಮಾಡಿಕೊಂಡು  ಬರುತ್ತಿದ್ದು ಇವರೆಲ್ಲರೂ ವರ್ಗಾವಣೆಗಾಗಿ ಜಾತಕ ಪಕ್ಷಿಯಂತೆ ಕಾಯತ್ತಿದ್ದರೂ ವರ್ಗಾವಣೆ ಮಾತ್ರ ದೊರೆತಿಲ್ಲ ಎಂದು ಶಿಕ್ಷಕರು ಅರೊಪಿಸಿದ್ದಾರೆ.

ನಿಲ್ಲಿಸಿ ನಿಲ್ಲಿಸಿ ಕೌನ್ಸಿಲಿಂಗ್ ನಿಲ್ಲಿಸಿ, ಅಯ್ಯೋಯ್ಯೋ.. ಅನ್ಯಾಯ ಎಂದು ಶಿಕ್ಷಕರು ಘೋಷಣೆ ಕೂಗಿದ್ದಾರೆ.



6,7,8 ನೇ ತರಗತಿಗಳಿಗೆ ಪ್ರಾಥಮಿಕ ಶಿಕ್ಷಕರನ್ನೇ ಪಾಠ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರ ಹುದ್ದೆಯನ್ನ ನೇಮಕ ಮಾಡಿಲ್ಲ. ಹಾಗಾಗಿ 2017 ರಲ್ಲಿ ಜಾರಿಗೆ ಆದ ಸಿ ಅಂಡ್ ಆರ್ ತಿದ್ದುಪಡಿ ಮಾಡಬೇಕು ಎಂದು ಶಿಕ್ಷಕರು ಆಗ್ರಹಿಸಿದ್ದಾರೆ.

ಇದು ವರೆಗೂ 271 ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ನಡೆದಿದೆ. ಈ ಕೌನ್ಸಿಲಿಂಗ್ ನ್ನ ಪ್ರತಿಭಟನಾಕಾರರು ನಿಲ್ಲಿಸುವಂತೆ ಶಿಕ್ಷಕರು ಆಗ್ರಹಿಸಿದರೂ ಕೌನ್ಸಿಲಿಂಗ್ ಮುಂದು ವರೆದಿದೆ.

ಇದನ್ನೂ ಓದಿ-https://www.suddilive.in/2024/07/blog-post_383.html

ಮಂಗಳವಾರ, ಜುಲೈ 23, 2024

ಶಿಕ್ಷಣ ಸಚಿವರ ತವರು ಕ್ಷೇತ್ರದಲ್ಲಿಯೇ ನಡೆದ ಘಟನೆ-ಸರ್ಕಾರಿ ಶಾಲೆ ಗೋಡೆ ಕುಸಿತ

ಕುಸಿದು ಬಿದ್ದ ಶಾಲೆ ಗೋಡೆ

ಸುದ್ದಿಲೈವ್/ಸೊರಬ


ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ತವರು ಕ್ಷೇತ್ರದಲ್ಲಿಯೇ ಶಾಲ ಕೊಠಡಿಯ ಗೋಡೆ ಕುಸಿದು ಬಿದ್ದದೆ. ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ವಿದ್ಯಾರ್ಥಿಗಳು ಪಾರಾಗಿದ್ದಾರೆ. 


ತಾಲೂಕಿನ ಮಳೆಯ ಅರ್ಭಟ ಮುಂದುವರೆದಿದ್ದು, ಆನವಟ್ಟಿ ಪಟ್ಟಣದ ಸರ್ಕಾರಿ ಉರ್ದು ಪ್ರೌಢ ಶಾಲೆಯ ಗೋಡೆ ಮಂಗಳವಾರ ಕುಸಿದು ಬಿದ್ದಿದೆ. ಈ ಶಾಲೆ ಶಿಕ್ಷಣ ಸಚಿವರ ತವರು ಕ್ಷೇತ್ರ ಕುಬಟೂರನಿಂದ 2 ಕಿಮಿ ದೂರದಲ್ಲಿದೆ. ಗೋಡೆ ಕುಸಿತಕ್ಕೆ ಬೆಂಚುಗಳು ಮುರಿದು ಹೋಗಿವೆ. 


ಶಾಲೆಯಲ್ಲಿ 104 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಮಧ್ಯಾಹ್ನ ತರಗತಿ ಮುಗಿಸಿ ವಿದ್ಯಾರ್ಥಿಗಳಿಗೆ ವಿಶ್ರಾಂತಿ ನೀಡಲಾಗಿತ್ತು. ತರಗತಿಯಲ್ಲಿ 31 ವಿದ್ಯಾರ್ಥಿಗಳಿದ್ದರು. ಅದೃಷ್ಟವಶಾತ್ ವಿದ್ಯಾರ್ಥಿಗಳಿಗೆ ನೀಡಿದ ವಿಶ್ರಾಂತಿ ಸಮಯದಲ್ಲಿ ಕೊಠಡಿ ಗೋಡೆ ಕುಸಿದಿದೆ. 


ವಿದ್ಯಾರ್ಥಿಗಳಿಗೆ ಅನಾಹುತವಾಗಿಲ್ಲ. ಶಾಲೆಯು ಶಿಥಿಲಾವ್ಯಸ್ಥೆಯಲ್ಲಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂಬುದು ಪೋಷಕರ ಆರೋಪವಾಗಿದೆ. ಅದರೆ ನಿನ್ನೆ ತಾನೆ ಬಿಇಒರವರು ಬಂದು ತಪಾಸಣೆ ನಡೆಸಿದ್ದು, ತಪಾಸಣೆ ನಡೆಸಿದ ಮರುದಿನವೇ ಈ ಘಟನೆ ನಡೆದಿದೆ.‌

ಗುರುವಾರ, ಜುಲೈ 18, 2024

ನಾಳೆ ಜಿಲ್ಲೆಯಾದ್ಯಂತ ಶಾಲೆ, ಕಾಲೇಜು ಅಂಗನವಾಡಿಗಳಿಗೆ ರಜೆ ಘೋಷಿಸಿದ ಡಿಸಿ


ಸುದ್ದಿಲೈವ್/ಶಿವಮೊಗ್ಗ

ನಾಳೆ ಶಿವಮೊಗ್ಗ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜಾ ಘೋಷಿಸಿ ಜಿಲ್ಲಾಧಿಕಾರಿ ಗುರದತ್ತ ಹೆಗಡೆ ಆದೇಶಿಸಿದ್ದಾರೆ. 


ಜಿಲ್ಲೆಯಲ್ಲಿ ಸತತವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಕಾರಣ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಗನವಾಡಿ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ,  ಪದವಿ ಪೂರ್ವಕಾಲೇಜು,  ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳು, ಐಟಿಐ ಮತ್ತು ಡಿಪ್ಲೋಮೋ ಕಾಲೇಜುಗಳಿಗೆ ಶುಕ್ರವಾರ  ರಜೆ ಘೋಷಿಸಿ ಮಾನ್ಯ ಜಿಲ್ಲಾಧಿಕಾರಿ ಗುರುದತ್ ಹೆಗಡೆಯವರು ಆದೇಶ ಹೊರಡಿಸಿದ್ದಾರೆ.

ಡಿಸಿಯವರು ಘೋಷಿಸುವ ಮುನ್ನ ಹೊಸನಗರ, ತೀರ್ಥಹಳ್ಳಿ, ಸೊರಬ ಮತ್ತು ಸಾಗರ ತಾಲೂಕಿನ ತಹಶೀಲ್ದಾರ್ ಅವರು ಶಾಲಾ‌, ಕಾಲೇಜುಗಳಿಗೆ ಆದೇಶಿಸಿ ರಜೆ ಘೋಷಿಸಿದ್ದರು. ಈಗ ಇಡೀ ಜಿಲ್ಲೆಗೆ ರಜೆಯನ್ನ ಡಿಸಿ ಗುರುದತ್ತ ಹೆಗಡೆ ಆದೇಶಿಸಿ ಹೊರಡಿಸಿದ್ದಾರೆ. 

ಇದನ್ನೂ ಓದಿ-https://www.suddilive.in/2024/07/ksrtc_18.html

ಬುಧವಾರ, ಜುಲೈ 17, 2024

ನಾಳೆ ತೀರ್ಥಹಳ್ಳಿ ಶಾಲೆ ಮತ್ತು ಕಾಲೇಜುಗಳಿಗೆ ರಜೆ

ಸುದ್ದಿಲೈವ್/ತೀರ್ಥಹಳ್ಳಿ

ಹೊಸನಗರ ತಾಲೂಕಿನಲ್ಲಿ ಹೆಚ್ಚಾದ ಮಳೆಯ ಬೆನ್ನಲ್ಲೇ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.‌ಈಗ ಜಿಲ್ಲೆಯ ಮತ್ತೊಂದು ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಾಗಿದೆ.

ತೀರ್ಥಹಳ್ಳಿಯಲ್ಲೂ ಮಳೆ ಹೆಚ್ಚಾದ ಪರಿಣಾಮ ರಜೆ ಘೋಷಿಸಲಾಗಿದೆ. ಹೊಸನಗರ ಮತ್ತು ತೀರ್ಥಹಳ್ಳಿಯ ಶಾಲೆಗಳಿಗೆ ರಜೆ ನೀಡಿದಂತಾಗಿದೆ ಜಿಲ್ಲೆಯ ಎರಡು ತಾಲೂಕಿನಲ್ಲಿ ರಜೆ ಘೋಷಿಲಾಗಿದೆ.‌

ನಾಳೆ ಹೊಸನಗರ ತಾಲೂಕಿನ ಶಾಲಾ ಕಾಲೇಜು ಅಂಗನವಾಡಿಗಳಿಗೆ ರಜೆ

ಸುದ್ದಿಲೈವ್/ಶಿವಮೊಗ್ಗ

ಜಿಲ್ಲೆಯಲ್ಲಿ ಮಳೆ ಹೊಸನಗರ ತಾಲೂಕಿನಲ್ಲಿ ಆವರಿಸಿಕೊಂಡಂತೆ ಕಾಣುತ್ತಿದೆ. ಮಂಗಳವಾರ ಇಡೀ ಜಿಲ್ಲೆಗೆ ಹೆಚ್ಚಿನ ಮಳೆಯಿಂದಾಗಿ ರಜೆ ಘೋಷಿಸಲಾಗಿತ್ತು. ಇಂದು ಸರ್ಕಾರಿ ರಜೆ ಇದ್ದಿದರರಿಂದ ಶಾಲೆ ಕಾಲೇಜುಗಳಿಗೂ ರಜೆ ನೀಡಲಾಗಿದೆ.

ಆದರೆ ನಾಳೆ ಹೊಸನಗರ ತಾಲುಕಿನ ಶಾಲಾ ಕಾಲೇಜು ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಜಿಲ್ಲೆಯ ಇತರೆ ಭದ್ರಾವತಿ, ಶಿವಮೊಗ್ಗ, ಸಾಗರದಲ್ಲಿ ಎಂದಿನಂತೆ ಶಾಲಾ ಕಾಲೇಜುಗಳು ನಡೆಯಲಿವೆ. ಇದು ಸಧ್ಯಕ್ಕೆ ಇರುವ ಮಾಹಿತಿಯಾಗಿದೆ.

ಇದನ್ನೂ ಓದಿ-https://suddilive.in/archives/19598

ಸೋಮವಾರ, ಜುಲೈ 15, 2024

ನಾಳೆ ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಸುದ್ದಿಲೈವ್/ಶಿವಮೊಗ್ಗ

ಮೂರು ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಬೆನ್ನಲ್ಲೇ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಶಾಲಾ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿ ತಾಲೂಕಿನಾದ್ಯಂತ ಶಾಲ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮಳೆಯ ಪ್ರಮಾಣ ಹೆಚ್ಚಾದ ಬೆನ್ನಲ್ಲೇ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ರಜೆ ಘೋಷಿಸಲಾಗಿದೆ. ಅಂಗನವಾಡಿಗೂ ರಜೆ  ಘೋಷಿಸಲಾಗಿದೆ.

ಇದನ್ನೂ ಓದಿ-https://suddilive.in/archives/19385

ನಾಳೆ ತೀರ್ಥಹಳ್ಳಿ ಶಾಲೆಗಳಿಗೆ ರಜೆ ಘೋಷಣೆ

ಸುದ್ದಿಲೈವ್\ತೀರ್ಥಹಳ್ಳಿ

ಮಲೆನಾಡಿನಲ್ಲಿ ಮಳೆಯ ಅಬ್ಬರದ ಹಿನ್ನೆಲೆಯಲ್ಲಿ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈಗಾಗಲೇ ಹೊಸನಗರ ಮತ್ತು ಸಾಗರದ ತಾಲೂಕಿನಲ್ಲಿ ರಜೆ ಘೋಷಿಸದ ಬೆನ್ನಲ್ಲೇ ತೀರ್ಥಹಳ್ಳಿಯಲ್ಲಿ ಏನಾಗಲಿದೆ ಎಂಬ ಆತಂಕ ಮನೆ ಮಾಡಲಿದೆ.

ಸುಧೀರ್ಘ ಕಾಲದ ಸಭೆ ಮತ್ತು ಚರ್ಚೆಯ ಬಳಿಕ ನಾಳೆ ತೀರ್ಥಹಳ್ಳಿಯಲ್ಲಿ ಮಳೆಯ ಕಾರಣ ಶಾಲಾ ಕಾಲೇಜು ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಜಕ್ಕನ್ ಗೌಡರ್ ಸ್ಪಷ್ಟಪಡಿಸಿದ್ದಾರೆ.

24 ಗಂಟೆಯಲ್ಲಿ ತೀರ್ಥಹಳ್ಳಿಯಲ್ಲಿ ಭಾರಿ ಮಳೆ ಸುರಿದಿದೆ. ಇದರ ಬೆನ್ನಲ್ಲೇ ಜಿಲ್ಲೆಯಲ್ಲಿ ಮೂರು ತಾಲೂಕುಗಳಿಗೆ ನಾಳೆ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ತೀರ್ಥಹಳ್ಳಿಯಲ್ಲಿ ಎರಡು ಪ್ರಮುಖ ಖಾಸಗಿ ಶಾಲೆಗಳು ರಜೆ ಘೋಷಿಸಿದೆ. ಆದರೆ ಸುಧೀರ್ಘ ಚರ್ಚೆ ಮತ್ತು ಸಭೆಯ ಮೂಲಕ ತಹಶೀಲ್ದಾರ್ ಜಕ್ಕಣ್ಣ ಗೌಡರ್ ರಜೆ ಘೋಷಿಸಿದ್ದಾರೆ.

ಇದನ್ನೂ ಓದಿ-https://suddilive.in/archives/19375

ಬುಧವಾರ, ಜುಲೈ 10, 2024

ಜುಲೈ.12 ರಂದು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗಳ ಮುಂದೆ ಎಬಿವಿಪಿ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಶೈಕ್ಷಣಿಕ ಸಮಸ್ಯೆಗಳನ್ನ ಸರಿಪಡಿಸುವಂತೆ ಆಗ್ರಹಿಸಿ ಜುಲೈ.12 ರಂದು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಟಕ ದಕ್ಷಿಣ ಪ್ರಾಂತ ತೀರ್ಮಾನಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಕಾರ್ಯದರ್ಶಿ ಪ್ರವೀಣ್ ರಾಜ್ಯಾದ್ಯಂತ ಪ್ರತಿಭಟನೆಗೆ ಸಂಘಟನೆ ತೀರ್ಮಾನಿಸಿದೆ. ಅದರಂತೆ ಪ್ರತಿಭಟನೆಯಲ್ಲಿ ಪ್ರಮುಖ ಬೇಡಿಗಳಾದ ಬೇಡಿಕೆ  ಬಸ್ ಪಾಸ್ ಮತ್ತು ಬಸ್ ಗಳ ಸಮಸ್ಯೆ ಸರಿಪಡಿಸಬೇಕು. ಬಸ್ ಪಾಸ್ ವಿತರಣೆಯನ್ನ ವಿಸ್ತರಿಸಬೇಕು. ಬಸ್ ಗಳ ಓಡಾಟ ಹೆಚ್ಚಿಸಬೇಕು. ಸಮಯಕ್ಕೆ ಸರಿಯಾಗಿ ಬಸ್ ಗಳನ್ನ ಒದಗಿಸುವ ವ್ಯವಸ್ಥೆ ಬೇಕಿದೆ ಎಂದು ಆಗ್ರಹಿಸಿದರು.

ಹಾಸ್ಟೆಲ್ ಪ್ರವೇಶಾಥಿ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬವನ್ನ ವಿರೋಧಿಸಿರುವ ಸಂಘಟನೆ ವಿದ್ಯಾರ್ಥಿ ವೇತನವನ್ನ ನೀಡದ ಸರ್ಕಾರದ ವಿರುದ್ಧ ಕೆಂಡಕಾರಿದೆ. ಜೂನ್ ತಿಂಗಳಲ್ಲಿ ಶಾಲಾ ಕಾಲೇಜುಗಳು ಆರಂಭವಾದರೂ ಸೆಪ್ಟಂಬರ್ ವರೆಗೂ ಹಾಸ್ಟೆಲ್ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗುತ್ತಿಲ್ಲ. ಮೂರು ತಿಂಗಳು ವಿದ್ಯಾರ್ಥಿಗಳು ಎಲ್ಲಿ ಉಳಿದುಕೊಙಡು ಶಿಕ್ಷಣ ಪಡೆಯಬೇಕು ಎಂದು ಪ್ರಶ್ನಿಸಿದರು.

ಲಕ್ಷಾಂತರ ಬಡ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವನ್ನ ನಂಬಿ ಶಿಕ್ಷಣವನ್ನ ಪಡೆಯುತ್ತಾರೆ. ತಮ್ಮ ಶಿಕ್ಷಣಕ್ಕೆ ಸರ್ಕಾರಗಳು ನೀಡುವ ವಿದ್ಯಾರ್ಥಿ ವೇತನ ಸಹಕಾರಿಯಾಗಲಿದೆ. ವಿದ್ಯಾಸಿರಿಯ ವಿದ್ಯಾರ್ಥಿ ವೇತನ ಸರಿಯಾಗಿ ಜಮೆಯಾಗಿಲ್ಲ. ರೈತ ವಿದ್ಯಾನಿಧಿಯನ್ನ ರದ್ಧುಗೊಳಿಸಿ, ಇನ್ನುಳಿದ ವಿದ್ಯಾರ್ಥಿ ವೇತನ ಸರಿಯಾಗಿ ಜಮೆ ಮಾಡದೆ ಇರುವ ರಾಜ್ಯಸರ್ಕಾರದ ವಿರುದ್ಧ ಸಂಘಟನೆ ಪ್ರತಿಭಟನೆಗೆ ತೀರ್ಮಾನಿಸಿದೆ ಎಂದರು.

ಏಕರೂಪ ವೇಳಾಪಟ್ಟಿಗೆ ಸಂಬಂಧಿಸಿದಂತೆ ಸುತ್ತೋಲೆಯನ್ನ ಹೊರಡಿಸಲಾಗಿದೆ. ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳಲ್ಲಿ ಏಕರೂಪ ವೇಳಾಪಟ್ಟಿಯನ್ನ ಸಮರ್ಪಕವಾಗಿ ಜಾರಿಗೆ ಮಾಡುವಂತೆ ಎಬಿವಿಪಿ ಆಗ್ರಹಿಸಿದೆ.

ಇದನ್ನೂ ಓದಿ-https://suddilive.in/archives/18906