ಸಿನಿಮಾ ಸುದ್ದಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಿನಿಮಾ ಸುದ್ದಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಆಗಸ್ಟ್ 16, 2024

ಶಿವಮೊಗ್ಗದ ಆರ್ ಟಿ ಒ ಬಿ.ಶಂಕರಪ್ಪ ವಿಧಿವಶ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ಪ್ರಾದೇಶಿಕ ಸಾರಿಗೆ ಕಚೇರಿಯ ಆರ್ ಟಿ ಒ ಅಧಿಕಾರಿಯಾಗಿ ನಿರ್ವಹಿಸುತ್ತಿದ್ದ ಬಿ.ಶಂಕರಪ್ಪ ಅನಾರೋಗ್ಯದ ಹಿನ್ನಲೆಯಲ್ಲಿ ಇಂದು ಅಸುನೀಗಿದ್ದಾರೆ. 


ಬಿ.ಶಂಕರಪ್ಪನವರಿಗೆ 59 ವರ್ಷವಾಗಿದ್ದು ನಿವೃತ್ತಿಗೆ ಇನ್ನೂ 9 ತಿಂಗಳ ಅವಧಿ ಉಳಿದಿತ್ತು. ಅನಾರೋಗ್ಯದ ಹಿನ್ನಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 


ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. 1/07/2023 ರಿಂದ ಪ್ರಭಾಗಿಯಾಗಿದ್ದ ಬಿ.ಶಂಕರಪ್ಪನವರು  ಸುಮಾರು ಒಂದು ತಿಂಗಳ ಹಿಂದೆ ರೆಗ್ಯೂಲರ್ ಆರ್ ಟಿಒ ಆಗಿ ನಿಯುಕ್ತಿಗೊಂಡಿದ್ದರು. ಆದರೆ ಇಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಮೂಲತಃ ಗುಲ್ಬರ್ಗದವರು ಎನ್ನಲಾಗಿದೆ.

ಆ.30 ಕ್ಕೆ ಬಿಡುಗಡೆಗೆ ಕುಳಿತಿದೆ ಟೇಕ್ವಾಂಡೋ ಗರ್ಲ್



ಸುದ್ದಿಲೈವ್/ಶಿವಮೊಗ್ಗ


ಟೇಕ್ವಾಂಡೋ(ಸಮರಕಲೆ) ಗರ್ಲ್ ಚಿತ್ರ ಆಗಸ್ಟ್ 30 ಕ್ಕೆ ಬಿಡುಗಡೆಯಾಗುತ್ತಿದೆ. ಶಿವಮೊಗ್ಗದ ಡಾ.ಸುಮಿತ ಪ್ರವೀಣ್ ಭಾನು ಆತ್ರೇಯ ಕ್ರಿಯೇಶನ್ಸ್ ಅವರ ಚೊಚ್ಚಲ ನಿರ್ಮಾಣದ ಈ ಚಿತ್ರ ಸೌತ್ ಕೋರಿಯಾದ ಸಮರಕಲೆ ಚಿತ್ರವಾಗಿದೆ. 


ರವೀಂದ್ರ ವಂಶಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಹೆಣ್ಣಮಕ್ಕಳ ರಕ್ಷಣೆಯನ್ನ ತಾವು ಹೇಗೆ ಮಾಡಿಕೊಳ್ಳಬೇಕು ಎಂದು ಈ ಚಿತ್ರದ ಸಂದೇಶವಿದೆ. ಇಂದು ಚಿತ್ರ ತಂಡ ಶಿವಮೊಗ್ಗದ ಪ್ರೆಸ್ ಟ್ರಸ್ಟ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಚಿತ್ರ ತಂಡ ರಾಜ್ಯಾದ್ಯಂತ ಶಾಲಾ ಮಕ್ಕಳು ಚಿತ್ರ ನೋಡುವಂತೆ ಕೋರಿದೆ. 200 ಮಕ್ಕಳಿಗೆ ಈ ಚಿತ್ರದಲ್ಲಿ ಪಾತ್ರವಹಿಸಿದ್ದಾರೆ. 


ಚಿತ್ರ ಬಿಡುಗಡೆಯ ವಿಳಂಬವಾಗಿದೆ. ಜೂನ್ ನಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರ ಆ.30 ಕ್ಕೆ ಸಿದ್ದವಾಗಿದೆ.  ನಿರ್ಮಾಪಕರಾದ ಡಾ.ಸುಮಿತ ಪ್ರವೀಣ್ ಭಾನು ಅವರ ಪುತ್ರಿ ಸರ್ಷ ಋತು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಟ್ವೆಕ್ವಾಂಡೋ ಎಂಬುದು ಹೊಡೆದಾಡುವುದಲ್ಲ ಬದಲಿಗೆ ಸಾಧನೆ ಮಾಡುವುದು ಎಂಬುದು ಚಿತ್ರದಸಂದೇಶವಾಗಿದೆ.


ಎರಡು ಹಾಡುಗಳಿವೆ. ಈ ಕುರಿತು ಮಾತನಾಡಿದ 6 ನೇ ತರಗತಿಯಲ್ಲಿ ಓದುತ್ತಿರುವ ಸ್ಪರ್ಷ ಭಾನು ಮಹಿಳೆಯರ ಮೇಲೆ ಸಮಾಜದಲ್ಲಿ ನಡೆಯುವ ಈ ಚಿತ್ರದಲ್ಲಿ ಚಿತ್ರಿಸಲಾಗಿದೆ. ಈಗಾಗಲೇ ಬಾಲನಟಿಯಾಗಿ ಕಾಂಗ್ರೋ, ಗಂಗೆಗೌರಿ, ತಾರಕೇಶ್ವರ ಸೇರಿದಂತೆ 6 ಚಿತ್ರಗಳಲ್ಲಿ ಅಭಿನಯಿಸಿರುವುದಾಗಿ ತಿಳಿಸಿದ್ದಾರೆ. 


ಬ್ಲಾಕ್ ಬೆಲ್ಟ್ ಪಡೆದಿರುವ ಈ ಬಾಲನಟಿ ಡಾನ್-1 ಪರೀಕ್ಷೆ ಎದುರಿಸಬೇಕಿದೆ. ಬೆಂಗಳೂರಿನಲ್ಲಿ ರಾಜಾಜಿನಗರದಲ್ಲಿ ಶೂಟಿಂಗ್ ನಡೆದಿದೆ. 50 ಲಕ್ಷ ಬಜೆಟ್ ನ ಚಿತ್ರವಾಗಿದೆ. ರಾಜ್ಯಾದ್ಯಂತ ಪ್ರತಿ ಜಿಲ್ಲೆಯ ಒಂದು ಚಿತ್ರಗಳಲ್ಲಿ ಚಿತ್ರ ಬಿಡುಗಡೆ ಮಾಡಲು ಚಿಙತಿಸಲಾಗಿದೆ ಎಂದು ಚಿತ್ರದ ನಿರ್ಮಾಪಕಿ ಡಾ.ಸುಮಿತ ಪ್ರವೀಣ್ ಭಾನು ತಿಳಿಸಿದ್ದಾರೆ

ಭಾನುವಾರ, ಆಗಸ್ಟ್ 11, 2024

ಹಬ್ಬದ ಪ್ರಯುಕ್ತ ಸೌಹಾರ್ಧ ಸಭೆ


 


ಸುದ್ದಿಲೈವ್/ಸೊರಬ ಆಗಸ್ಟ್, 11: 


ಗಣೇಶ ಹಾಗೂ ಈದ್ ಮಿಲಾದ್‌ ಹಬ್ಬವನ್ನು ಶಾಂತಿಯುತ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಆಚರಿಸುವಂತೆ ಪಿಎಸ್ಐ ಹೆಚ್ ಏನ್ ನಾಗರಾಜ್  ಹೇಳಿದರು.

 

ಇಂದು ಪಟ್ಟಣದ ಪೊಲೀಸ್ ಇಲಾಖೆಯ  ಆವರಣದಲ್ಲಿ ಸೆಪ್ಟೆಂಬರ್‌ 07ರಂದು ಗಣೇಶ ಚತುರ್ಥಿ ಹಾಗೂ ಸೆಪ್ಟೆಂಬರ್‌ 16 ನಡೆಯಲಿರುವ ಈದ್ ಮಿಲಾದ್ ಹಬ್ಬದ ಆಚರಣೆಯನ್ನು ಸೌಹಾರ್ಧಯುತವಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ಕರೆಯಲಾದ ಸೌಹಾರ್ಧ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು 


ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಆಯಾ ಪೊಲೀಸ್ ಠಾಣೆಯಲ್ಲಿ ಸ್ಥಾಪಿಸಲಾಗುವ ಏಕಗವಾಕ್ಷಿಯಲ್ಲಿ ಅನುಮತಿ ಪಡೆದು ಪ್ರತಿಷ್ಠಾಪನೆ ಮಾಡಬೇಕು. ಈ ಹಿಂದಿನ ಹಳೆಯ ಪದ್ಧತಿ, ನಿಯಮ ಅನುಸರಿಸಿ ಎಲ್ಲಾ ರೀತಿಯ ಸಿದ್ಧತೆ ಹಾಗೂ ಶಾಂತಿಯುತವಾಗಿ ಆಚರಿಸಬೇಕು. ಹೊಸದಾಗಿ ಸೂಕ್ಷ್ಮಯುತವಾದ ಪ್ರದೇಶಗಳಲ್ಲಿ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಗೆ ಅವಕಾಶವಿರುವುದಿಲ್ಲ ಎಂದರು.


ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ಮಾಡಿದ ಸ್ಥಳಗಳಲ್ಲಿ ಬೆಳಕು ಹಾಗೂ ಸಿಸಿಟಿವಿ ವ್ಯವಸ್ಥೆ ಮಾಡಿಕೊಳ್ಳಬೇಕು. ಆಯೋಜಕರೇ ಸಂಪೂರ್ಣ ಹೊಣೆ ಹೊರಬೇಕು. ಹಾಗೂ ಅಹಿತಕರ ಘಟನೆಗಳು ನಡೆದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಬೇಕು. ಹಬ್ಬದ ಆಚರಣೆಗಳಲ್ಲಿ ಪ್ರಚೋದನಾಕಾರಿ ಹೇಳಿಕೆ, ಅಸಭ್ಯ ವರ್ತನೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.


ಯಾವುದೇ ವಿದ್ಯುತ್ ಅವಘಡಗಳು ನಡೆಯದಂತೆ ಮೂರ್ತಿಗಳ ಕಡಿಮೆ ಎತ್ತರ, ಗಣಪತಿ ಅಲಂಕಾರ ಹಾಗೂ ಸಣ್ಣ ಗೋಪುರಗಳ ನಿರ್ಮಾಣ ಮಾಡಬೇಕು. ಧ್ವನಿವರ್ಧಕಗಳಿಗೆ ಬೆಳಗ್ಗೆ 6 ರಿಂದ ರಾತ್ರಿ 10ಗಂಟೆಯವರೆಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಹಬ್ಬಗಳ ಆಚರಣೆ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.


ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿ, ಸೌಹಾರ್ಧತೆಯಿಂದ ಆಚರಣೆ ಮಾಡಬೇಕು. ಇಲಾಖೆಯಿಂದ ನೀಡಲಾಗುವ ಸೂಚನೆಗಳನ್ನು ನಿರ್ಬಂಧ ಎಂದುಕೊಳ್ಳಬಾರದು. ಎಲ್ಲರೂ ಕಾನೂನನ್ನು ಗೌರವಿಸಬೇಕು, ಇಲಾಖೆಯು ಸಹ ಎಲ್ಲರಿಗೂ ಸಹಕಾರ ನೀಡಲಿದೆ ಎಂದರು.


ಈ ಸಂದರ್ಭ ದಲ್ಲಿ ಸಾರ್ವಜನಿಕ ಸಂಘ ಸಂಸ್ಥೆಗಳ ಸದಸ್ಯರು ಪದಾಧಿಕಾರಿಗಳು ಹಾಗೂ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ನಾಗೇಶ್, ಲೋಕೇಶ್, ರಾಘವೇಂದ್ರ ಅವರು ಉಪಸ್ಥಿತರಿದ್ದರು.

ಗುರುವಾರ, ಆಗಸ್ಟ್ 8, 2024

ಒಂದು ವೇಳೆ ಶಾಸಕರು ಹಾಗೂ ಎಸಿ ಮಧ್ಯ ಪ್ರವೇಶಿಸದಿದ್ದರೆ ಶಿವಮೊಗ್ಗದ ಗ್ರಾಮದೇವತೆ ದೇವಸ್ಥಾನ ನಾಳೆಯಂದ ಓಪನ್ ಆಗ್ತಾ ಇರಲಿಲ್ವಾ?



ಸುದ್ದಿಲೈವ್/ಶಿವಮೊಗ್ಗ


ಮುಜರಾಯಿ ಇಲಾಖೆಯ ಯಡವಟ್ಟು ಮುಂದುವರೆದಿದೆ. ಒಂದು ವೇಳೆ ಶಾಸಕರ ಉಪವಿಭಾಗಾಧಿಕಾರಿಗಳು ಮದ್ಯ ಪ್ರವೇಶಿಸದ ಇದ್ದಿದ್ದರೆ ಈ ಪ್ರಕರಣ ಎಲ್ಲಿಗೆ ಹೋಗಿ ನಿಲ್ಲುತ್ತಿತ್ತು ಗೊತ್ತಾಗುತ್ತಿರಲಿಲ್ಲ.


ಶಿವಮೊಗ್ಗ ಗ್ರಾಮದೇವತೆ ಕೋಟೆ ಶ್ರೀಚಂಡಿಕಾದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರ ವರ್ಚಸ್ಸಿನಿಂದ ದೇವಸ್ಥಾನ ಬೆಳೆದಿದೆ. ದೇವಸ್ಥಾನ ಇಂದು ಬೆಳೆದು ನಿಂತಿದೆ ಮತ್ತು ಅಭಿವೃದ್ಧಿ ಹೊಂದಿದೆ ಎಂದರೆ ಸರ್ಕಾರದ ಪ್ರಯತ್ನ ಶೂನ್ಯವೇ.  ಆದರೆ ಅರ್ಚಕ ಶಂಕರಾನಂದ ಜೋಯಿಸ್ ಅವರ ಪ್ರಯತ್ನ ಮತ್ತು ಅವರ ಭಕ್ತರ ಶ್ರಮದಿಂದ ದೇವಸ್ಥಾನ ಬೆಳೆದಿದೆ.   


ಸರ್ಕಾರ ಅಭಿವೃದ್ಧಿ ಪಡಿಸದೆ ಹುಂಡಿಗೆ ಬಿದ್ದ ಕಾಸಿನ ಮೇಲೆ ಕಣ್ಣಿಟ್ಟಿದೆ. ಈ ಕಾಸು ಅರ್ಚಕರ ಸಂಬಳ, ದೇವಸ್ಥಾನದ ಹೂವು ಹಣ್ಣು ನಿರ್ವಹಣೆಗೆ ಖರ್ಚಾಗಬೇಕು‌. ಈ ಖರ್ಚನ್ನ ಹುಂಡಿ ಕಾಸಿನಲ್ಲೇ ತೆಗೆಯಬೇಕು. ಆದರೆ ಸರ್ಕಾರ ಹಣ ಎತ್ತುಕೊಂಡು ಹೋಯಿತೆ ಹೊರತು ನಿರ್ವಹಣೆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. 


ಈ ಕುರಿತು ಅರ್ಚಕ ಶಂಕರಾನಂದ ಜೋಯಿಸ್ ವಾಟ್ಸಪ್ ಸಂದೇಶ ಇಂದು ತಲ್ಲಣ ಹುಟ್ಟಿಸಿದೆ. ವಾಟ್ಸಪ್ ಸಂದೇಶ ಹೀಗಿದೆ 'ಕೋಟೆ ರಸ್ತೆಯಲ್ಲಿ ಶ್ರೀ ಚಂಡಿಕಾದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರಾದ ನಮಗೆ 2023 ಅಕ್ಟೋಬರ್ ತಿಂಗಳಿನಿಂದ ಕೊಡಬೇಕಾದ ನಿತ್ಯಕಟ್ಲೆ, ಹೆಚ್ಚುಕಟ್ಲೆ  ದೇವಸ್ಥಾನದ ಸಂಭಾವನೆ ಇತ್ಯಾದಿ ಖರ್ಚುವೆಚ್ಚಗಳನ್ನು ಕೊಡದೇ ಶಿವಮೊಗ್ಗ ತಾಲೂಕು ಕಛೇರಿಯ ಅಧಿಕಾರಿಗಳು ಕಳೆದ 10 ತಿಂಗಳಿನಿಂದ ಇಲ್ಲಸಲ್ಲದ ಸಬೂಬುಗಳನ್ನು ಹೇಳಿ  ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ನಮ್ಮ ಮನವಿಮೇರೆಗೆ ಶಿವಮೊಗ್ಗ ವಿಭಾಗಾಧಿಕಾರಿ ಗಳು ಜರೂರು ಕ್ರಮ ವಹಿಸಲು ಆದೇಶ ನೀಡಿದ್ದರೂ 


ಈ ವಿಷಯವಾಗಿ ಅನೇಕಬಾರಿ ಸಂಬಂಧಪಟ್ಟ  ಅಧಿಕಾರಿಗಳಲ್ಲಿ ಲಿಖಿತ ಮನವಿ ವಾಟ್ಸಾಪ್ ಮಾಡಿಕೊಂಡರೂ ಯಾವುದೇ ರೀತಿಯ ಸೂಕ್ತ ಅಧಿಕೃತ ಮಾಹಿತಿಯನ್ನಾಗಲಿ  ಹಿಂಬರಹವಾಗಲೀ ಕೊಡದೆ ಬೇಜವಾಬ್ದಾರಿ ಯಿಂದ ವರ್ತಿಸುತ್ತಿದ್ದಾರೆ.  ದೇವಸ್ಥಾನದ ಹುಂಡಿ ಹಣವನ್ನು  ಭಕ್ತಾದಿಗಳಿಗೆ  ಅರ್ಚಕರಿಗೆ ಗೊತ್ತಾಗದಂತೆ  ದೇವಸ್ಥಾನದ ಖರ್ಚು ವೆಚ್ಚ ಗಳಿಗೆ ಬಳಸದೆ ನಿಶ್ಚಿತ ಠೇವಣಿ ಇಟ್ಟು ಮೋಸ ಅನ್ಯಾಯ  ಮಾಡುತ್ತಿದ್ದಾರೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕೂಡ ಮಾಡಿರುವುದಿಲ್ಲ ಎಂದು ದೂರಲಾಗಿದೆ. 

 

ಅರ್ಚಕರು ಭಕ್ತಾದಿಗಳ ಅಪೇಕ್ಷೆಯ ಮೇರೆಗೆ ಯಾವುದೇ ಧಾರ್ಮಿಕ ಕಾರ್ಯಕ್ರಮ ಮಾಡಬಾರದು ಎಂದು ನೋಟೀಸ್ ಕೊಟ್ಟಿರುತ್ತಾರೆ. ಅನಿವಾರ್ಯವಾಗಿ 

ಈ ಎಲ್ಲ ಕಾರಣದಿಂದಾಗಿ ಅಮ್ಮನವರ ಪ್ರೇರಣೆಯಿಂದ ದಿನಾಂಕ  09-08-2024 ಶುಕ್ರವಾರದಿಂದ ಪ್ರತಿ ನಿತ್ಯ  ಲೋಕಕಲ್ಯಾಣಾರ್ಥವಾಗಿ ಸಂಕಲ್ಪಿಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ  ಪೂಜೆಯನ್ನು ಮಾಡಿ,  ಅನಿರ್ದಿಷ್ಟಾವಧಿಯವರೆಗೆ ದೇವಸ್ಥಾನದ ಬಾಗಿಲನ್ನು ಮುಚ್ಚಲು ನಿರ್ಧರಿಸಿದೆ ಆದ್ದರಿಂದ ಸಮಸ್ಯೆಗಳು ನಿವಾರಣೆ ಆಗುವವರೆಗೆ ಸನ್ಮಾನ್ಯ ಭಕ್ತಾದಿಗಳು ಸಾರ್ವಜನಿಕರು  ಸಹಕರಿಸಬೇಕಾಗಿ ಕೋರುತ್ತೇವೆ ಎಂಬ ಸಂದೇಶ ತಲ್ಲಣ ಮೂಡಿಸಿದೆ. 


ಶಾಸಕ ಚೆನ್ನಬಸಪ್ಪ, ಎಸಿ ಸತ್ಯನಾರಾಯಣ ಅವರ ಪ್ರಯತ್ನದಿಂದ ಪ್ರಕರಣ ಬಹುತೇಕ ಸುಖಾಂತ್ಯಗೊಂಡಿದೆ. ಸುಖಾಂತ್ಯದ ವಿಷಯವಲ್ಲ. ಈ ರೀತಿಯ ಅವ್ಯವಸ್ಥೆಗೆ ಕಾರಣವೇನು? ಎಲ್ಲವೂ ಅಧಿಕಾರಿಗಳ ಬಳಿ ಹೋಗಿ ಕೈಮುಗಿದು ನಿಲ್ಲಬೇಕೆಂದರೆ ಅದು ನಿಯಮದಲ್ಲಿ ಇದೆಯಾ? ಸರ್ಕಾರಿ ಅಧಿಕಾರಿಗಳ ಸಂಬಳ ಹಿಡಿದಿಟ್ಟರೆ ಹೇಗಿರುತ್ತೆ? ಪರಿಸ್ಥಿತಿಯನ್ನ ಅವಲೋಕಿಸದೆ ಮುಂದುವರೆದರೆ ಮತ್ತಷ್ಟು ತಲೆನೋವಾಗುವುದು ಖಚಿತ

ಶನಿವಾರ, ಆಗಸ್ಟ್ 3, 2024

ಆ.18 ರಂದು ʼಸೇಮ್‌ ಸೇಮ್ ಬಟ್‌ ಡಿಫರೆಂಟ್ʼ ಪ್ರದರ್ಶನ



ಸುದ್ದಿಲೈವ್/ಶಿವಮೊಗ್ಗ


ಸಹ್ಯಾದ್ರಿ ರಂಗ ತರಂಗ (ರಿ) ಶಿವಮೊಗ್ಗ ಹಾಗೂ ದಕ್ಷಿಣ ಭಾರತ ಸಾಂಸ್ಕೃತಿಕ ಸಂಘ ಶಿವಮೊಗ್ಗದವತಿಯಿಂದ ಆ.18 ರಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ ʼಸೇಮ್‌ ಸೇಮ್ ಬಟ್‌ ಡಿಫರೆಂಟ್ʼ (Same Same But Different) ಎಂಬ ನಾಟಕ  ಸಂಜೆ 6.30ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.


ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಂಘಟನೆಯ ನಾಗಭೂಷಣ್, ಶಿವಮೊಗ್ಗದ ಸಹ್ಯಾದ್ರಿ ರಂಗ ತರಂಗ (ರಿ) ಹಾಗೂ ದಕ್ಷಿಣ ಭಾರತ ಸಾಂಸ್ಕೃತಿಕ ಸಂಘದ ಸಂಯುಕ್ತ ಆಶ್ರಯದಲ್ಲಿ ಈ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದ್ದು,  ಮುಂಬೈನ ಪ್ರಖ್ಯಾತ ರಂಗ ತಂಡ-ತಮಾಷಾ ಥಿಯೇಟರ್ಸ್ ತಂಡದ ಕಲಾವಿದರು ಈ ನಾಟಕ ಪ್ರದರ್ಶನ ನೀಡಲಿದ್ದಾರೆ. 


ಒಂದು ವಿಭಿನ್ನ ಅಪರೂಪದ ಸಂಗೀತ ನಾಟಕ ಸೇಮ್ ʼಸೇಮ್‌ ಬಟ್‌ ಡಿಫರೆಂಟ್ʼ (Same Same But Different) ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರದರ್ಶನಕಂಡು ಖ್ಯಾತಿಗಳಿಸಿದೆ. ಇದೊಂದು ಅಪರೂಪದ ಸಂಗೀತ ಪಯಣವಾಗಿದ್ದು, ಶ್ರೀಮತಿ ಸಪನ್‌ ಸರನ್‌ ಅವರು ಈ ನಾಟಕ ನಿರ್ದೇಶನ ಮಾಡಿದ್ದಾರೆ.


ಅಂತರಾಷ್ಟ್ರೀಯ ಗುಣಮಟ್ಟದ ನಾಟಕ ನೋಡಲು ಶಿವಮೊಗ್ಗದ ಪ್ರೇಕ್ಷಕರು ತೀವ್ರ ಆಸಕ್ತಿ ತೋರುತ್ತಿದ್ದಾರೆ. ಮುಂಬೈ, ಡೆಲ್ಲಿ, ಪೂನಾ, ಕೊಲ್ಕತ್ತಾ, ಬೆಂಗಳೂರಿನಂತ ಮಹಾನಗರಗಳಲ್ಲಿ ಮಾತ್ರ ಪ್ರದರ್ಶನಗೊಳ್ಳುತ್ತಿದ್ದ ಇಂಥ ನಾಟಕಗಳನ್ನು ಶಿವಮೊಗ್ಗ ಜನತೆಗೂ ಸಿಗುವಂತೆ ಮಾಡಲು ಸಹ್ಯಾದ್ರಿ ರಂಗತರಂಗ ಸಂಸ್ಥೆ ವಿಶೇಷ ಶ್ರಮವಹಿಸಿದೆ ಎಂದರು. 


ಸೇಮ್ ಸೇಮ್‌ ಬಟ್‌ ಡಿಫರೆಂಟ್(Same Same But Different):ಎರೆಡು ವಿಭಿನ್ನ ಹಿನ್ನೆಲೆಯಿಂದ ಬಂದ ಇಬ್ಬರು ಪ್ರತಿಭಾವಂತ ಗಾಯಕರು ಅನೇಕ ಸಾಮಾಜಿಕ ಹಾಗು ಕಲಾತ್ಮಕ ಸವಾಲುಗಳನ್ನು ಎದುರಿಸುತ್ತಾ ಮುಖಾಮುಖಿಯಾಗುವ ಒಂದು ಕುತೂಹಲದ ಸನ್ನಿವೇಷವನ್ನು ನಾಟಕ ಯಶಸ್ವಿಯಾಗಿ ಹಿಡಿದಿಡುತ್ತದೆ. 


ತಮ್ಮೆಲ್ಲಾ ಅನುಭವಗಳನ್ನು ಪ್ರಾಮಾಣಿಕವಾಗಿ, ತಮಾಷೆಯಾಗಿ ಹಾಗೂ ಭಾವನಾತ್ಮಕವಾಗಿ ಇಬ್ಬರು ಕಟ್ಟಿಕೊಡುತ್ತಾರೆ. ದೇಶದ ಶಾಸ್ತ್ರೀಯ, ಜಾನಪದ, ಸಿನಿಮಾ ಸಂಗೀತದ ಮೂಲಕ ಸಾಗುವ ಈ ನಾಟಕಕ್ಕೆ ಅಷ್ಡೇ ಪರಿಣಾಮಕಾರಿಯಾಗಿ ಸಂಗೀತವನ್ನು ರೋಹಿತ್‌ದಾಸ್‌, ತುಶಾರ್‌ ಕದಮ್‌ ಮತ್ತು ಸದಾನಂದ ಮಲಿಕ್‌ ಒದಗಿಸಿದ್ದಾರೆ. ಮಹಾರಾಷ್ಟ್ರದ ಪ್ರಖ್ಯಾತ ರಂಗನಟರಾದ ಜಾಹ್ನವಿ ಶ್ರೀಮಾಣ್ಕರ್ ಹಾಗು ಕೈಲಾಶ್‌ ವಾಘ್ಮೋರೆ ಇಡೀ ನಾಟಕವನ್ನು ಪ್ರೇಕ್ಷಕನಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು. 


ತಮಾಷಾ ಥಿಯೇಟರ್ಸ್:


2012 ರಲ್ಲಿ ಸುನಿಲ್‌ ಶಾನಭಾಗ್‌ ಹಾಗು ಸಪನ್‌ ಸರನ್‌ ಅವರಿಂದ ಆರಂಭವಾದ ಈ ರಂಗ ತಂಡ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಅಪರೂಪದ ಹಾಗೂ ವಿಭಿನ್ನ ರಂಗಪ್ರಸ್ತುತಿಗಳಿಗೆ ಖ್ಯಾತಿಗಳಿಸಿದೆ. ಸಮಾಜದ ಎಲ್ಲಾ ರಂಗಗಳಲ್ಲೂ ಬದಲಾಗುತ್ತಿರುವ ಸನ್ನಿವೇಷಗಳನ್ನು ನಾಟಕಗಳ ಮೂಲಕ ವಿಶ್ಲೇಷಣೆಗೆ ಒತ್ತುಕೊಡುತ್ತಿದೆ. ಕಲಾಮಾಧ್ಯಮಕ್ಕೆ ಇರುವ ಅಗಾಧವಾದ ಸಾಧ್ಯತೆಗಳ ಅನ್ವೇಷಣೆ ತಂಡದ ಮುಖ್ಯ ಧ್ಯೇಯ. ಹೊಸಪಠ್ಯ, ಹೊಸವಿಚಾರ ಹಾಗೂ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುವುದು ತಂಡದ ಉದ್ದೇಶವಾಗಿದೆ ಎಂದರು.

ಸಪನ್‌ ಸರನ್:

ಮುಂಬೈ ಮೂಲದ ಶ್ರೀಮತಿ ಸಪನ್‌ ಸರನ್‌ ಅವರು ಕವಿಗಳು ಹಾಗೂ ಬರಹಗಾರರು. ತಮಾಷಾ ಥಿಯೇಟರ್ಸ್‌ ಆರಂಭಿಸುವಲ್ಲಿ ಇವರ ಪಾತ್ರ ದೊಡ್ಡದು. ರಂಗ ಸಾಧ್ಯತೆಗಳ ಬಗ್ಗೆ ಸತತವಾಗಿ ಅನ್ವೇಷಣೆ ಮಾಡುತ್ತಿರುವ ಸಪನ್‌,  ಪ್ರದರ್ಶನ ಕಲೆಯ ವಿವಿಧ ಆಯಾಮಗಳನ್ನು ಪ್ರದರ್ಶಿಸಲು `ಸ್ಟುಡಿಯೊ ತಮಾಷಾ’ ಎಂಬ ಸಂಸ್ಥೆ ಆರಂಭಿಸಿದ್ದಾರೆ. 


ಖ್ಯಾತ ನೃತ್ಯಪಟು ಅಸ್ತಾದ್‌ದೇಬು ಮೂಲಕ ರಂಗಭೂಮಿ ಪ್ರವೇಶಿಸಿದ ಸಪನ್‌ ʼಕ್ಲಬ್‌ ಡಿಸೈರ್‌ʼ ಎಂಬ ರಂಗ ಕೃತಿಯನ್ನು ರಚಿಸಿದ್ದಾರೆ. ಸುನೀಲ್‌ ಶಾನಭಾಗ್‌ ನಿರ್ದೇಶನದ ಈ ನಾಟಕ 2015ರ ಭಾರಂಗಮ್‌ ಅಂತರಾಷ್ಟ್ರೀಯ ರಂಗೋತ್ಸವಕ್ಕೆ ಆಯ್ಕೆಯಾಗಿತ್ತು. ಅಲ್ಲದೆ, ಇಂಗ್ಲೆಂಡ್‌ ಸರ್ಕಾರದ ಆಹ್ವಾನದ ಮೇರೆಗೆ ದಕ್ಶಿಣ ಏಷ್ಯಾ ಮಹಿಳೆಯರ ಕುರಿತ ಅಧ್ಯಯನಕ್ಕೆ ಆಯ್ಕೆಯಾದವರು. ತೆಂಡುಲ್ಕರ್-ದುಬೆ ಫೆಲೋಶಿಪ್‌ ಪಡೆದ ಇವರು ಮಹಿಳಾ ದೌರ್ಜನ್ಯದ ವಿರುದ್ದ ಬೀದಿಗಿಳಿದು ಹೋರಾಟ ಮಾಡಿದವರು. ಇವರ ಕವನಗಳು ಹಲವು ಪತ್ರಿಕೆಗಳಲ್ಲಿ ಹಾಗು ಸಾಹಿತ್ಯ ಅಕಾಡೆಮಿಯ ಪ್ರಕಟಣೆಗಳಲ್ಲಿ ಪ್ರಕಟವಾಗಿವೆ ಎಂದು ತಿಳಿಸಿದರು.‌

ಪತ್ರಿಕಾಗೋಷ್ಠಿಯಲ್ಲಿ ಇದ್ದವರು: ಚಂದ್ರಪ್ಪ, ಕಾಂತೇಶ್ ಕದರಮಂಡಲಗಿ, ಡಾ. ನಾಗಭೂಷಣ, ಬಿ.ವಿ.ತಿಪ್ಪಣ್ಣ, ಹೆಚ್.ಎಸ್. ಸುರೇಶ್, ಶ್ರೀಕಂಠ ಪ್ರಸಾದ್, ರವಿಶಂಕರ್, ವಿಶ್ವೇಶ್ವರಯ್ಯ, ಹಾಲಸ್ವಾಮಿ ಆರ್.ಎಸ್. ಉಪಸ್ಥಿತರಿದ್ದರು.

ಇದನ್ನೂ ಓದಿ-https://www.suddilive.in/2024/08/blog-post_83.html

ಶುಕ್ರವಾರ, ಆಗಸ್ಟ್ 2, 2024

ಕಿರುಚಿತ್ರ ಬಿಡುಗಡೆ-ಸಾಧಕರ ಪ್ರಯತ್ನಕ್ಕೆ ಬೆಂಬಲಿಸಿ



ಸುದ್ದಿಲೈವ್/ಶಿವಮೊಗ್ಗ


ಫೀನಿಕ್ಸ್ (Phoenix) ಎಂಬ ಹೆಸರೇ ಒಂದು ವಿಭಿನ್ನ, Phoenix ಎಂದರೆ  ತನ್ನ ಬೂದಿಯಿಂದಲೇ ಎದ್ದುಬರುವ ಕಾಲ್ಪನಿಕ ಪಕ್ಷಿ ಹಾಗೂ ಅಮರತ್ವವನ್ನು ಬಿಂಬಿಸುವ ಹೆಸರು. ಈ ಒಂದು ವಿಭಿನ್ನ ಶೀರ್ಷಿಕೆಯನ್ನು ಇಟ್ಟುಕೊಂಡು , ದೊಡ್ಡದಾದ ಪ್ರಯತ್ನವನ್ನ ಶಿವಮೊಗ್ಗದ ಪ್ರತಿಭೆಗಳು ಮಾಡಿದ್ದಾರೆ. 


ಈಗಾಗಲೇ ಥಗ್ಸ್ ಅಫ್ ರಗಡ ಕಿರು ಚಿತ್ರದಿಂದ ಸದ್ದುಗೊಂಡ ಸಿನಿಮಾಟೋಗ್ರಾಫರ್ ಅನುಷ್ ಗೌಡ ರವರು ಫೀನಿಕ್ಸ್ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದು, ಅಶ್ವಿನ್ ರವರು ಸಿನಿಮ್ಯಾಟೋಗ್ರಾಫಿ ಮಾಡಿದ್ದಾರೆ.


ಈ ಕಿರುಚಿತ್ರಕ್ಕೆ Minus X Minus ತಂಡ ಹಣ ಹೂಡಿದ್ದು KSS CREATIONS ಅಸೋಸಿಯೇಷನ್ ಮಾಡಿದ್ದಾರೆ. ಗಗನ್, ಪೂರ್ಣಚಂದ್ರ, ನಿಖಿಲ್ ಕುಮಾರ್, ರೋಹನ್, ಸೂರಜ್, ಕಿರಣ್ ರವರು ಈ ಕಿರು ಚಿತ್ರದಲ್ಲಿ ಅಭಿನಯಿಸಿದ್ದಾರೆ. 


Phoenix ಇದೊಂದು ದೊಡ್ಡ ಮಟ್ಟದ Action ಕಿರು ಚಿತ್ರ. ಅನುಷ್ ಗೌಡ ರವರ ದೊಡ್ಡ ಮಟ್ಟದ ಆಲೋಚನೆ ಹಾಗೂ ಮೇಕಿಂಗ್ ಸ್ಟೈಲ್ ಈ ಕಿರು ಚಿತ್ರದಲ್ಲಿ ನೀವು ಕಾಣಬಹುದು ಹಾಗೂ ಕಿರು ಚಿತ್ರದಲ್ಲೇ ಇದೊಂದು ಹೊಸದಾದ ಪ್ರಯತ್ನ ,   


ದೊಡ್ಡ ದೊಡ್ಡ ಸಿನಿಮಾಗಳು ಬಳಸುವಂತಹ VFX ಟೆಕ್ನಾಲಜಿ ಕೂಡ ಈ ಕಿರು ಚಿತ್ರದಲ್ಲಿ ಬಳಸಲಾಗಿದೆ. ಈಗಾಗಲೇ ಟೀಸರ್ Minus X Minus ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮವಾದ ಪ್ರತಿಕ್ರಿಯೆ ಬಂದಿದೆ.


ಆಗಸ್ಟ್ 10 ಕ್ಕೆ Phoenix ಕಿರುಚಿತ್ರ Minus X Minus ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದ್ದು , ಈ ಹೊಸದಾದ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲ  ಇರಲಿ ಹಾಗೂ Phoenix ಕಿರುಚಿತ್ರ ಯಾವ ಮೂವಿಗೂ ಕಮ್ಮಿ ಇಲ್ಲ , ಎಂದು Phoenix ಕಿರು ಚಿತ್ರದ Marketing Head ಕಿಶನ್ ರವರು ತಿಳಿಸಿದ್ದಾರೆ. ಟೀಸರ್ ಲಿಂಕ್ https://youtu.be/7UMV6Ps_iUo?si=CiX_firpMxAXPE0g


ಇದನ್ನೂ ಓದಿ-https://www.suddilive.in/2024/08/blog-post_5.html

ಮಂಗಳವಾರ, ಜುಲೈ 23, 2024

ಶಿಕ್ಷಣ ಸಚಿವರ ತವರು ಕ್ಷೇತ್ರದಲ್ಲಿಯೇ ನಡೆದ ಘಟನೆ-ಸರ್ಕಾರಿ ಶಾಲೆ ಗೋಡೆ ಕುಸಿತ

ಕುಸಿದು ಬಿದ್ದ ಶಾಲೆ ಗೋಡೆ

ಸುದ್ದಿಲೈವ್/ಸೊರಬ


ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ತವರು ಕ್ಷೇತ್ರದಲ್ಲಿಯೇ ಶಾಲ ಕೊಠಡಿಯ ಗೋಡೆ ಕುಸಿದು ಬಿದ್ದದೆ. ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ವಿದ್ಯಾರ್ಥಿಗಳು ಪಾರಾಗಿದ್ದಾರೆ. 


ತಾಲೂಕಿನ ಮಳೆಯ ಅರ್ಭಟ ಮುಂದುವರೆದಿದ್ದು, ಆನವಟ್ಟಿ ಪಟ್ಟಣದ ಸರ್ಕಾರಿ ಉರ್ದು ಪ್ರೌಢ ಶಾಲೆಯ ಗೋಡೆ ಮಂಗಳವಾರ ಕುಸಿದು ಬಿದ್ದಿದೆ. ಈ ಶಾಲೆ ಶಿಕ್ಷಣ ಸಚಿವರ ತವರು ಕ್ಷೇತ್ರ ಕುಬಟೂರನಿಂದ 2 ಕಿಮಿ ದೂರದಲ್ಲಿದೆ. ಗೋಡೆ ಕುಸಿತಕ್ಕೆ ಬೆಂಚುಗಳು ಮುರಿದು ಹೋಗಿವೆ. 


ಶಾಲೆಯಲ್ಲಿ 104 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಮಧ್ಯಾಹ್ನ ತರಗತಿ ಮುಗಿಸಿ ವಿದ್ಯಾರ್ಥಿಗಳಿಗೆ ವಿಶ್ರಾಂತಿ ನೀಡಲಾಗಿತ್ತು. ತರಗತಿಯಲ್ಲಿ 31 ವಿದ್ಯಾರ್ಥಿಗಳಿದ್ದರು. ಅದೃಷ್ಟವಶಾತ್ ವಿದ್ಯಾರ್ಥಿಗಳಿಗೆ ನೀಡಿದ ವಿಶ್ರಾಂತಿ ಸಮಯದಲ್ಲಿ ಕೊಠಡಿ ಗೋಡೆ ಕುಸಿದಿದೆ. 


ವಿದ್ಯಾರ್ಥಿಗಳಿಗೆ ಅನಾಹುತವಾಗಿಲ್ಲ. ಶಾಲೆಯು ಶಿಥಿಲಾವ್ಯಸ್ಥೆಯಲ್ಲಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂಬುದು ಪೋಷಕರ ಆರೋಪವಾಗಿದೆ. ಅದರೆ ನಿನ್ನೆ ತಾನೆ ಬಿಇಒರವರು ಬಂದು ತಪಾಸಣೆ ನಡೆಸಿದ್ದು, ತಪಾಸಣೆ ನಡೆಸಿದ ಮರುದಿನವೇ ಈ ಘಟನೆ ನಡೆದಿದೆ.‌

ಭಾನುವಾರ, ಜುಲೈ 21, 2024

ನೀರಿನಲ್ಲಿ ಈಜಿ ವಿದ್ಯುತ್ ಸಂಪರ್ಕ ಸರಿಪಡಿಸಿದ ಪವರ್ ಮ್ಯಾನ್

ಸುದ್ದಿಲೈವ್/ತೀರ್ಥಹಳ್ಳಿ


ಮಲೆನಾಡಿನಲ್ಲಿ ನಿರಂತರ ಸುರಿಯುತ್ತಿರವ ಮಳೆ ಹಿನ್ನೆಲೆಯಲ್ಲಿ ಹಳ್ಳದಿಣ್ಣೆಗಳು ತುಂಬಿ ತುಳುಕುತ್ತಿವೆ. ಅದರಂತೆ ವಿದ್ಯುತ್ ತಂತಿ ಸರಿಪಡಿಸಲು ಪವರ್ ಮ್ಯಾನ್ ವೊಬ್ಬ ಸಾಹಸ ಮೆರೆದಿದ್ದಾನೆ.



ವಿದ್ಯುತ್ ಸಂಪರ್ಕ ಕಲ್ಪಿಸಲು ಪವರ್ ಮ್ಯಾನ್ ವೊಬ್ಬ ರಭಸವಾಗಿ ಹರಿಯುತ್ತಿರವ ಹಳ್ಳದಲ್ಲಿ ಈಜಿ ವಿದ್ಯುತ್ ಲೈನ್ ಸರಿಪಡಿಸಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಅರೇಹಳ್ಳಿ ಗ್ರಾ. ಪಂ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ನೀರಿನ ಮಧ್ಯೆ ಇದ್ದ ವಿದ್ಯುತ್ ತಂತಿ ತುಂಡಾದ ಹಿನ್ನೆಲೆಯಲ್ಲಿ ಕೆಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ವ್ಯತ್ಯಗೊಂಡಿದೆ. ನೀರಿಗೆ ಇಳಿದ ಸಿಬ್ಬಂದಿ ವಿದ್ಯುತ್ ಸಂಪರ್ಕ ಸರಿಪಡಿಸಿದ್ದಾನೆ. 

ನೀರಿನಲ್ಲಿ ಈಜಿ ತೆರಳುತ್ತಿರುವ ಪವರ್ ಮ್ಯಾನ್ ಸಂತೋಷ್


ನೀರಿಗೆ ಜಿಗಿದು ಸಂಪರ್ಕ ಸರಿಪಡಿಸಿದ ಪವರ್ ಮ್ಯಾನ್ ನನ್ನ ಸಂತೋಷ್ ಎಂದು ತಿಳಿದುಬಂದಿದೆ. ಕಲಬುರ್ಗಿ ಮೂಲಕ ಸಂತೋಷ್ ಮಲೆನಾಡಿನ ಜಲಾವೃತ ಪ್ರದೇಶದಲ್ಲಿರುವ ವಿದ್ಯುತ್ ಕಂಬಕ್ಕೆ ತೆರಳಲು ಸಾಹಸ ಪಟ್ಟಿದ್ದಾನೆ. ಆಗುಂಬೆ ಭಾಗಕ್ಕೆ ಕಮ್ಮರಡಿಯ ಸಬ್ ಡಿವಿಜನಿಂದ ಈ ವಿದ್ಯುತ್ ಸಂಪರ್ಕ ಕಲ್ಪಿಸ ಲಾಗಿದೆ. 


ಈತ ನೀರಿನಲ್ಲಿ ಈಜು ಹೊಡೆದುಕೊಂಡು ಹೋಗಿದ್ದು ತಪ್ಪು ಎನಿಸಿರಬಹುದು. ಆದರೆ ಮಲೆನಾಡಿನಲ್ಲಿ ಸುರಿದ ಮಳೆ ಅವಾಂತರವನ್ನ ಸೃಷ್ಠಿಸಿದೆ. ನೀರಿನಲ್ಲಿ ಇಳಿಯುವಾಗ ಸುರಕ್ಷತೆ ಇಲ್ಲದಿರುವುದು ತಪ್ಪಾಗಿದೆ.ಈ ಸಂಪರ್ಕವು ಸರಿ ಮಾಡಿದೆ ಇದ್ದರೆ ಮೂರು ಪಂಚಾಯಿತಿ ವಿದ್ಯುತ್ ಸಂಪರ್ಕ ಇಲ್ಲದಂತಾಗುತ್ತಿತ್ತು. ಇದನ್ನ ಮನಗಂಡು ನೀರಿಗೆ ಧುಮಕಿದ ಸಂತೋಷ್  ದುರಸ್ತಿ ಕೆಲಸ ನಡೆಸಿದ್ದಾನೆ. 

ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳಿಂದ ಚಾತುರ್ಮಾಸ ವ್ರತ ಸಂಕಲ್ಪ

ಸುದ್ದಿಲೈವ್/ಶಿವಮೊಗ್ಗ

ಶ್ರೀಮದ್ ಜಗದ್ಗುರು ಶಂಕರಾಚಾರ್ಯರ ಕೂಡಲಿ ಶೃಂಗೇರಿ ಮಹಾ ಸಂಸ್ಥಾನ  ದಕ್ಷಿಣಮ್ನಾಯ ಮೂಲ ಶಾರದ ಪೀಠಾದ ಜಗದ್ಗುರು ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳು




ತಮ್ಮ ೪೦ನೇ ವರ್ಷದ ಚಾತುರ್ಮಾಸ ವ್ರತ ಸಂಕಲ್ಪವನ್ನು ವ್ಯಾಸ ಪೂಜೆಯೊಂದಿಗೆ ಇಂದು ನೆರವೇರಿಸಿದರು.


ಮಾತೃಕಾ ಸ್ವರೂಪಿಣಿ ಶ್ರೀ ಶಾರದಾಂಬಾ ಪ್ರೇರಣೆ ಶ್ರೀ ವಿದ್ಯಾಶಂಕರನ ಅನುಗ್ರಹ ಸದ್ಗುರುಗಳ ಆಶೀರ್ವಾದ ಕೃಪೆಯಿಂದ ಚಾತುರ್ಮಾಸ್ಯದ ಅಂಗವಾಗಿ ಶ್ರೀ ಮಠದಲ್ಲಿ ಲೋಕ ಕಲ್ಯಾಣಾರ್ಥ ಇಷ್ಟಅಷ್ಟಕಾಮ್ಯಾಪ್ರಾಪ್ತಿಗಾಗಿ ನಿತ್ಯವೂ ಅಂದರೆ ಜು.21 ಭಾನುವಾರ ದಿಂದ ಸೆಪ್ಟಂಬರ್ 19  ಬುಧವಾರದವರೆಗೆ ಗುರುಗಳ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ.


ಈ ಪ್ರಯುಕ್ತ ಭಕ್ತರಾದ ತಾವೆಲ್ಲರೂ ಕುಟುಂಬ ಸಮೇತರಾಗಿ ಈ ಪುಣ್ಯಕಾರ್ಯದಲ್ಲಿ ಭಾಗವಹಿಸಿ, ಪರಿವಾರ ಸಹಿತ ಶ್ರೀ ವಿದ್ಯಾಶಂಕರ, ಶ್ರೀ ವಾಲುಕಾಪರಮೇಶ್ವರ, ಶ್ರೀ ಚಂದ್ರಮೌಳೇಶ್ವರ, ಶ್ರೀ ಚಕ್ರನಿವಾಸಿನಿ ಸಹಿತ ಶ್ರೀ ಶಾರದಾಂಬೆ ದೇವರ ಮತ್ತು ಶ್ರೀ ಶ್ರೀ ಶಂಕರರಾಚಾರ್ಯ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಮಹಾಸ್ವಾಮಿಗಳ ಪೂರ್ಣಾನುಗ್ರಹಕ್ಕೆ ಪಾತ್ರರಾಗಿ, ತ್ರಿಕರಣ ಪೂರ್ವಕ ಸಹಕರಿಸಬೇಕಾಗಿ ಮಠದ ಪರವಾಗಿ ವಿನಂತಿಸಿಕೊಳ್ಳುತ್ತೇವೆ. 


ಧಾರ್ಮಿಕ ಸೇವಾ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರಮೇಶ್ ಹುಲಿಮನಿ, ವ್ಯವಸ್ಥಾಪಕರು-9844570404, 9632570137, 9353958230  ಇವರನ್ನು ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ-https://www.suddilive.in/2024/07/blog-post_149.html

ಗುರುವಾರ, ಜುಲೈ 18, 2024

ತುಂಬಿದ ಅಂಬಳಿಗೋಳ ಜಲಾಶಯದಲ್ಲಿ

 ಸುದ್ದಿಲೈವ್/ಶಿಕಾರಿಪುರ 


ಶಿಕಾರಿಪುರದ ಎರಡು ಪ್ರಮುಖ ಜಲಾಶಯಗಳಲ್ಲಿ ಮಳೆಯ ಹೆಚ್ಚಳಕ್ಕೆ ತುಂಬಿತುಳುಕುತ್ತಿವೆ. ಮಲೆನಾಡಿನಲ್ಲಿ ಮಳೆ ಚುರುಕುಗೊಂಡಿದೆ. ಹಳ್ಳ-ಕೊಳ್ಳ, ಕೆರೆಗಟ್ಟೆಗಳು ತುಂಬಿತುಳುಕುತ್ತಿವೆ. ನದಿಗಳಂತು ಬೋರ್ಗೆರೆಯಲು ಆರಂಭಿಸಿವೆ. 



ಹಳ್ಳ-ಕೊಳ್ಳಗಳಲ್ಲಿ ಜಲಾಶಯ ಭರ್ತಿಯಾಗುತ್ತಿರುವ ಬೆನ್ನಲ್ಲೇ ಪೊಲೀಸರು ನೀರಿನಕಡೆ, ನದಿಕಡೆ ಜಲಾಶಯದ ಕಡೆ ಹೋಗದಿರುವಂತೆ ಎಚ್ಚರಿಕೆಯ ಬ್ಯಾನರ್ರು, ಬ್ಯಾರಿಕೇಡ್ ಗಳನ್ನ ಅಳವಡಿಸಿದ್ದಾರೆ. ಆದರೆ ಕೆಲವರು ಭರ್ತಿಯಾದ ಅಂಬ್ಳಿಗೋಳದ ಜಲಾಶಯಕ್ಕೆ ಮೀನು ಹಿಡಿಯಲು ಮುಂದಾಗಿದ್ದಾರೆ.

ಈ ಹುಚ್ಚಾಟ ಮೆರೆದಿರುವ ಯುವಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.‌




ಇದನ್ನೂ ಓದಿ-https://www.suddilive.in/2024/07/blog-post_848.html


ಮಲೆನಾಡಿನ ಮಹಾನಟಿ-ಮಹಾನಟ ಕಾರ್ಯಕ್ರಮ

 ಸುದ್ದಿಲೈವ್/ಶಿವಮೊಗ್ಗ


ಕ್ರಿಯೇಟಿವ್ ಗ್ರೂಪ್ ನಿಂದ ಮಲೆನಾಡಿನ ಮಹಾನಟಿ-ಮಹಾನಟ ಕಾರ್ಯಕ್ರಮವನ್ನ ಕೋಟೆ ಮಾರಿಕಾಂಬ ದೇವಸ್ಥಾನದಲ್ಲಿ ಜು.28 ರಂದು ನಡೆಯಲಿದೆ. 


ಈ ಬಗ್ಗೆ ಸುದ್ದಿಗೋಷ್ಣಟಿ ನಡೆಸಿದ ಸಂಸ್ಥೆಯ ಪರಮೇಶ್ವರ್ ಶೈನ್ ಸಂಸ್ಥೆಯಿಂದ ಉತ್ತಮ ನಟನೆ ನಾಡಿದ ಕಲಾವಿದರಿಗೆ ಸಿನಿಮಾ ಮತ್ತು ಧಾರವಾಹಿಗಳಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಮಗುವಿನ ಹಾವಭಾವದ ಮೂಲಕ ಪ್ರತಿಭೆಯನ್ನ ಗುರುತಿಸಲಾಗುತ್ತಿದೆ. 


6 ರಿಂದ 60 ವರ್ಷದ ವರೆಗೆ ಅವಕಾಶ ನೀಡಲಾಗಿದೆ. ಕಳೆದ ಬಾರಿ ಮುದ್ದುಕೃಷ್ಣ ಮುದ್ದು ರಾಧೆ. ಅಂಧರ ಶಾಲೆ ಮಕ್ಕಳಿಗೆ ಉಚಿತವಾಗಿದೆ. ಇವರನ್ನ ಹೊರತು ಪಡಿಸಿ ಪ್ರವೇಶ ಶುಲ್ಕ 250 ರೂ. ನಿಗದಿ ಪಡಿಸಲಾಗಿದೆ. 


9 ನೇ ವರ್ಷದ ಕಾರ್ಯಕ್ರಮಗಳಿವೆ. ಇದುವರೆಗೆ ಮಕ್ಕಳಿಗಾಗಿ ಕಾರ್ಯಕ್ರಮ ನಡೆಸುತ್ತಿದ್ದ ಸಂಸ್ಥೆ ಈ ಬಾರಿ ಮಕ್ಕಳು ಮತ್ತು ದೊಡ್ಡವರಿಗೆ ಅವಕಾಶ ಕಲ್ಪಿಸಲಾಗುತ್ತಿದೆ.  ಹೆಚ್ಚಿನ ಮಾಹಿತಿಗಾಗಿ 9986506166, ಶೃತಿ ಶೇಟ್-7259572232 ಅಶ್ವಿನಿಗೌಡ-9845958313 ಸಂಪರ್ಕಿಸ ಬಹುದಾಗಿದೆ. 

ಇದನ್ಬೂ ಓದಿ-http://www.suddilive.in/2024/07/blog-post_699.html


ನಟನೆ, ಪೌರಾಣಿಕ ಡೈಲಾಗ್, ನೃತ್ಯ, ಹೇಳಲು ಅವಕಾಶವಿದೆ. ನಂತರ ಚೀಟಿಯ ಮೂಲಕ ಏನು ಮಾಡಬೇಕು ಎಂಬುದನ್ನ ಸೂವಿಸಲಾಗುತ್ತಿದೆ.‌ ಸೋತವರಿಗೆ ಮುಂದಿನ ನಿರ್ದೇಶನವನ್ನೂ ಸೂಚಿಸಲಾಗುತ್ತಿದೆ.


ಮಂಗಳವಾರ, ಜುಲೈ 16, 2024

ಶ್ರೀದೇವಿ ಮಹಾತ್ಮ ಧಾರವಾಹಿ ತಂಡ ಸಿಗಂದೂರಿನಲ್ಲಿ ಬೆಳಗಿದ ಅಖಂಡ ದೀಪ

ಸುದ್ದಿಲೈವ್/ಶಿವಮೊಗ್ಗ

ಶ್ರೀ ರಾಘವೇಂದ್ರ ಸ್ವಾಮಿ‌ ಮಹಿಮೆ, ಎರಡುವರೆ ವರ್ಷ ಟೆಲಿಕಾಸ್ಟ್ ಆದ  ಯಡಿಯೂರು ಸಿದ್ದಲಿಂಗೇಶ್ಚರ, ಯಲ್ಲಮ್ಮ ದೇವಿ ಮಹತ್ಮೆಯನ್ನ ಲೋಕರ್ಪಣೆ ಮಾಡಿರುವ ಸುವರ್ಣ ಚಾನೆಲ್ ನಿಂದ ಮತ್ತೊಂದು ಪೌರಾಣಿಕ ಧಾರವಾಹಿ ಶ್ರೀದೇವಿ ಮಹಾತ್ಮೆ ಈಗಾಗಲೇ ಪ್ರಸಾರವಾಗುತ್ತಿದೆ.

ಈ ತಂಡ ಶಕ್ತಿಕೇಂದ್ರವಾಗಿರುವ ಸಿಗಂದೂರಿನ ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದೆ.ಈ ವೇಳೆ ನಡೆದ ಸಭಾಕಾರ್ಯಕ್ರಮದಲ್ಲಿ ನಿರ್ಮಾಪಕ ಅರವಿಂದ್ ಮಾತನಾಡಿ, ಯಡಿಯೂರು ಸಿದ್ದಲಿಂಗೇಶ್ವರ ಧಾರವಾಹಿ 1000 ಎಪಿಸೋಡ್ ಮುಗಿದಿದೆ. 500 ಎಪಿಸೋಡನ್ನ ಯಲ್ಲಮ್ಮ ದೇವಿ ಮಹತ್ಮೆ ಮುಗಿಸಿದೆ. ಪೌರಾಣಿಕ ಧಾರವಾಹಿ ಸುಲಭವಾಗಿ ನಿರ್ಮಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ ಎಂದು ಹೇಳಿದರು.

ಅದರದೇ ಆದ ವಸ್ತ್ರಾಲಂಕಾರ, ಸೆಟ್ ನ್ನ ನಿರ್ಮಿಸಬೇಕಾಗುತ್ತದೆ. ಪೌರಾಣಿಕ ಧಾರವಾಹಿ ನಿರ್ಮಾಣಕ್ಕೆ ಟಿವಿಚಾನೆಲ್ ಗಳು ಹೊರ ರಾಜ್ಯದ ನಿರ್ಮಾಪಕರಿಗೆ ಕೊಡುತ್ತದೆ‌. ಆದರೆ ಸ್ಟಾರ್ ಸುವರ್ಣ ಟಿವಿ ಯಡಿಯೂರು ಸಿದ್ದಲಿಂಗೇಶ್ವರ ಧಾರವಾಹಿಯನ್ನ ಮೊದಲ ಬಾರಿಗೆ ಕನ್ನಡಿಗರಿಗೆ ನೀಡಿದೆ. ಧಾರವಾಹಿ ಪ್ರತಿದಿನ 7 ಗಂಟೆಗೆ ಪ್ರಸಾರವಾಗುತ್ತಿದೆ ಎಂದರು.

ಶಿವನ ಪಾತ್ರಧಾರಿ ಅರ್ಜುನ್ ರಮೇಶ್ ಮಾತನಾಡಿ, ಮೂರು ಬಾರಿ ಶಿವನ ಪಾತ್ರ ನನಗೆ ಸಿಕ್ಕಿದೆ. ಸಣ್ಣ ಗರ್ವನೂ ಇದೆ. ಪೌರಾಣಿಕ ಧಾರವಾಹಿಗಳು ಆಧುನಿಕ ಯುಗದಲ್ಲಿ ಜನ ಬೆಂಬಲಿಸುವಂತೆ ಕೋರಿದರು.

ರೀಲ್ಸ್ ಮಾಡುದ್ರೆ ಫೇಮಸ್ ಆಗ್ತೀವಿ. ಆಕ್ಟಿಂಗ್ ದುನಿಯಾದಲ್ಲಿ ಅವಕಾಶಗಳು ಬರ್ತಾವೆ  ಜಂಟಲ್ ಮ್ಯಾನ್  ಸಿನಿಮಾದಲ್ಲಿ ವಿಲನ್ ಪಾತ್ರಮಾಡಿದ್ದೀನಿ. ಕೆಲ ಧಾರವಾಹಿಯನ್ನ ತಿರಸ್ಕರಿಸಿದ್ದೇನೆ. ಕಾರಣ ಒಂದೇ ಉದ್ದೇಶ ಒಳ್ಳೆಯಪಾತ್ರ ಮಾಡುವುದು ನನ್ನ ಉದ್ದೇಶ ಎಂದರು.

ಪಾರ್ವತಿಯ ಪಾತ್ರಧಾರಿ ಜೀವಿತರವರು ಮಾತನಾಡಿ, ತಾಯಿ ಪಾತ್ರ ಮಾಡಲು ದೊಡ್ಡಪುಣ್ಯ ಮಾಡಿದ್ದೇನೆ. ಇದು ಮೊದಲನೇ ಧಾರವಾಹಿಯಾಗಿದೆ. ಒತ್ತಡ ವಿಲ್ಲದೆ ಕೆಲಸ ಮಾಡುತ್ತಿರುವೆ. ಧಾರವಾಹಿ ಈ ತಿಂಗಳು ಒಂದರಿಂದ ಆರಂಭವಾಗಿದೆ ಜನರು ಪ್ರತಿದಿನ ಸಂಜೆ 7 ಗಂಟೆಗೆ ನೋಡುವಂತೆ ಕೋರಿದರು.

ವೇದಿಕೆ ಮೇಲೆ ಗೋಪಾಲ ಕೃಷ್ಣ ಶರ್ಮ, ಧರ್ಮಾಧಿಕಾರಿಗಳ ಪುತ್ರ ರವಿಕುಮಾರ್ ಉಪಸ್ಥಿತರಿದ್ದರು. ಸ್ಟಾರ್ ಸುವರ್ಣ ದೀಪವನ್ನ ರವಿಕುಮಾರ್ ಬೆಳಗಿದರು.

ಇದನ್ನೂ ಓದಿ-https://suddilive.in/archives/19471

ಬುಧವಾರ, ಜುಲೈ 10, 2024

ಜು.19 ರಂದು ಹೆಜ್ಜಾರು ಸಿನಿಮಾ ಬಿಡುಗಡೆ

ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿಯ ಜಿಂಕ್ ಲೈನ್ ನಿವಾಸಿ, ಕೆ.ಕಲ್ಯಾಣ್ ಜೊತೆ ಸಹಾಯಕ ಬರಹಗಾರಗಾರನಾಗಿ ಕೆಲಸ ಮಾಡಿಕೊಂಡಿದ್ದ ಹರ್ಷಪ್ರಿಯ ಎಂಬುವರ ಚೊಚ್ಚಲ ನಿರ್ದೇಶಕ ಸಿನಿಮಾ ಹೆಜ್ಜಾರು ಸಿನಿಮಾ ಜು.19 ರಂದು ಬಿಡುಗಡೆಯಾಗಲಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಿನಿಮಾದ ನಿರ್ದೇಶಕ ಹಾಗೂ ನಾಯಕನಟ ಹರ್ಷಪ್ರಿಯ ಈ ಹಿಂದೆ ಧಾರವಾಹಿಗಳಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಕೃಷ್ಣ ರುಕ್ಮಣಿ, ಅಂಮೃತವಾಹಿನಿಯಲ್ಲಿ ಫಿಕ್ಷನ್ ಹೆಡ್ ಆಗಿ ಕೆಲಸ ಮಾಡಿ ಅವರು ಹೆಜ್ಜಾರುವಿನಲ್ಲಿ ಮುಖ್ಯನಿರ್ದೇಶಕನಾಗಿ ಹಾಗೂ ನಾಯಕನಟರಾಗಿ ಕೆಲಸ ಮಾಡಿದ್ದಾರೆ.

ಖಾಸಗಿ ಪುಟ ಹಾಗೂ ಹಿಂದಿಯ ವೈ ನ ಹೀರೋಯಿನ್ ಆಗಿದ್ದ ಲಿಯೋನಿಲ್ಲಾ ಶ್ವೇತಾ ಡಿಸೋಜಾ ಹೆಜ್ಜಾರುವಿನಲ್ಲಿ ನಾಯಕಿ ನಟರಾಗಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಮತ್ತೊಂದಿಷ್ಟು ಜನ ಪಾತ್ರಧಾರಿಗಳಾಗಿದ್ದಾರೆ.‌

ಒಬ್ಬರ ಜೀವನದಲ್ಲಿ ನಡೆದ ಘಟನೆ ಮತ್ತೊಬ್ಬರ ಜೀವನದಲ್ಲಿ ಸಂಭವಿಸುವ ಸಾಧ್ಯತೆಗಳ ಬಗ್ಗೆ ಸಿನಿಮಾ ಕಥೆಗಳಾಗಿದೆ. ಇದನ್ನ ಪ್ಯಾರಲೆಲ್ ಲೈಫ್ ಕಥೆ ಎನ್ನಬಹುದು 80% ಮಂಗಳೂರು 20% ಬೆಂಗಳೂರಿ ನಲ್ಲಿ ಶೂಟಿಂಗ್ ನಡೆದಿದೆ. ಸಿನಿಮಾದಲ್ಲಿ 80% ಮಳೆ ಇರುತ್ತೆ

ಮೂರು ಹಾಡುಗಳಿವೆ. ಒಂದು ಹಾಡು ಪೂರ್ಣಚಂದ್ರ ತೇಜಸ್ವಿಯವರದ್ದಾಗಿದೆ. ಟ್ರ್ಯಾಜಡಿ ನಡೆದವರ ಜೀವನದಲ್ಲಿ ಹಾಗೆ ಉಳಿಯುತ್ತದೆ. ಕಾಲ್ಪನಿಕ ಸಿನಿಮಾವಾಗಿದೆ. 3.80 ಕೋಟಿ ಸಿನಿಮಾ ಇದಾಗಿದೆ. ಜು.19 ರಂದು ಸಿನಿಮಾ ಬಿಡುಗಡೆ 80 ಮಲ್ಟಿ ಕಾಂಪ್ಲೆಕ್ಸ್ ನಲ್ಲಿ ಬಿಡುಗಡೆ ಆಗಲಿದೆ.

ಕನ್ನಡದ ಮೊಟ್ಟ ಮೊದಲ ಪ್ಯಾರಲರ್ ಲೈಫ್ ಸಿನಿಮಾ ಹೆಜ್ಜಾರು” ತನ್ನ ಮೊದಲ ಟೀಸರ್ ಮೂಲಕವೇ ಇಂಡಸ್ಟ್ರಿಗೆ ಒಂದು ಒಳ್ಳೆಯ ಕಂಟೆಂಟ್ ಸಿನಿಮಾ ಬರುತ್ತಿರುವ ಸೂಚನೆಯನ್ನು ದೊಡ್ಡ ಮಟ್ಟದಲ್ಲಿಯೇ ಪ್ರೇಕ್ಷಕರಿಗೆ ಕೊಟ್ಟಿದೆ ಎಂದರು.

ಇದನ್ನೂ ಓದಿ-https://suddilive.in/archives/18916

ಬುಧವಾರ, ಜೂನ್ 19, 2024

ಚೆಫ್ ಚಿದಂಬರ ಚಿತ್ರತಂಡ ಶಿವಮೊಗ್ಗದಲ್ಲಿ, ದರ್ಶನ್ ಬಗ್ಗೆ ಅನಿರುದ್ಧ್ ಹೇಳಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ಚೆಫ್ ಚಿದಂಬರ ಚಿತ್ರ ತಂಡದಿಂದ ಇಂದು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದೆ. ಸುದ್ದಿಗೋಷ್ಠಿಯಲ್ಲಿ ನಟ ಅನಿರುದ್ಧ್ ಇದೊಂದು ಹೊಸ ಪ್ರಯೋಗದ ಚಿತ್ರವೆಂದು ಬಣ್ಣಿಸಿದ್ದಾರೆ.

ಚಿತ್ರದಲ್ಲಿ ಸಾಹಿತ್ಯ, ಸಂಗೀತ ಉತ್ತಮ ವಾಗಿದೆ. ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿದೆ.ಸಿನಿಮಾ ನೋಡಿ ಚಿತ್ರ ತಂಡವನ್ನು ಜನ ಪ್ರೋತ್ಸಾಹಿಸಬೇಕು. ವಿನೂತನ ಪ್ರಯತ್ನದ ಮೂಲಕ ಸಿನಿಮಾ ಮಾಡಿದ್ದೇವೆ. ಮನೋರಂಜನೆಗೆ ಬೇಕಾದ ಎಲ್ಲಾ ಅಂಶ ಈ ಚಿತ್ರದಲ್ಲಿದೆ ಎಂದರು.

ಇದು ನನ್ನ 24 ನೇ ಚಿತ್ರವಾಗಿದೆ. ಚಿತ್ರವನ್ನ ಚಲನಚಿತ್ರ ಮಂದಿರಕ್ಕೆ ಬಂದು ಜನ ನೋಡುವ ಮೂಲಕ ಹೆಚ್ಚಿನ‌ ಪ್ರೋತ್ಸಾಹ ನೀಡಬೇಕು ಎಂದರು.

ದರ್ಶನ್ ಪ್ರಕರಣ ವಿಚಾರ

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್  ಅವರು ಆರೋಪಿಯಾಗಿದ್ದಾರೆ. ಇದೊಂದು  ಚಿತ್ರರಂಗಕ್ಕೆ ಕಪ್ಪು ಚುಕ್ಕೆ ಅನ್ನೋದು ಸಮಂಜಸ ಅಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.

ದರ್ಶನ್ ಒಳ್ಳೆಯ ನಟರು ಅವರ ಜೀವನದಲ್ಲಿ ಈ ಘಟನೆ ಆಗಬಾರದಿತ್ತು. ಇದೊಂದು ದುಸ್ಥಿತಿ ಅಂತ ಹೇಳಬಹುದು. ಎಲ್ಲರಿಗೂ ಇದೊಂದು ಎಚ್ಚರಿಕೆ ನಿಜ. ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧಗಳ ಚರ್ಚೆ ಜೋರಾಗಿದೆ. ಆದರೆ ಅದನ್ನ ಹೇಗೆ ಬಳಸುತ್ತೇವೆ ಅನ್ನೊದನ್ನೂ ಚಿಂತಿಸಬೇಕು ಎಂದರು.

ಎಲ್ಲದಕ್ಕೂ ಕಾನೂನು ಇದೆ ಕಾನೂನಿಗೆ ನಾವು ಬದ್ಧವಾಗಿರಬೇಕು. ಸೈಬರ್ ಪೊಲೀಸರಿಗೆ ದೂರು ಕೊಟ್ಟಿದ್ದರೆ ಸಾಕಾಗಿತ್ತು. ಈ ಘಟನೆ ಆಗಬಾರದಿತ್ತು ತುಂಬಾ ಬೇಜಾರಾಗುತ್ತಿದೆ. ಇದರಿಂದ ಚಿತ್ರರಂಗಕ್ಕೆ ಕಪ್ಪು ಚುಕ್ಕೆ ಎನ್ನುವುದು ಸರಿಯಲ್ಲ ಎಂದರು.

ಇದನ್ನೂ ಓದಿ-https://suddilive.in/archives/17245

ಬುಧವಾರ, ಜೂನ್ 12, 2024

ಟಿವಿ, ಸಿನಿಮಾ ರಂಗದಲ್ಲಿ ತರಬೇತಿ ಬೇಕೆ, ಹಾಗಾದರೆ ಈ ಸುದ್ದಿ ಓದಿ

ಸುದ್ದಿಲೈವ್/ಶಿವಮೊಗ್ಗ

ಸಿನಿಮಾ ರಂಗ, ರಂಭೂಮಿ ಮತ್ತು ಫಿಲ್ಮ್, ಟಿವಿ ಥಿಯೇಟರ್ ನಲ್ಲಿ ತೊಡಗಿಸಿಕೊಳ್ಳಲು ಆಸಕ್ತರಿಗೆ ಆಸ್ಕ್ ಚೆಲುವರಂಗ ಅಭಿನಯ ಶಾಲೆ ಹೆಲ್ಪ್ ಆಗಲಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಅಜಿತ್ ನೀನಾಸಂ,  ಬೇಕ್ ಇನ್ ಆಕ್ಟಿಂಗ್, ಅಭಿನಯ ಸಿದ್ದಾಂತದಲ್ಲಿ ಆಸಕ್ತರಿಗೆ ಈ ಶಾಲೆಯಲ್ಲಿ ಪ್ರತಿದಿನ 5-30 ರಿಂದ 9-30 ರವರೆಗೆ ಅಭಿನಯ ತರಬೇತಿ ನೀಡಲಾಗುವುದು. ಮಂಜು ಕೊಡಗು, ನಾನು, ಸಾಸ್ವೆಹಳ್ಳಿ ಸತೀಶ್, ಲಕ್ಷ್ಮಣ್ ಕೆ.ಪಿ, ಪ್ರೆಕ್ಟ್ ನ ಮೇಲೆ ತರಬೇತಿ ಪಡೆದ ವೆಂಕಟೇಶ್ವರ, ಕ್ರಿಸ್ಟೋಫರ್ ಡಿಸೋಜಾ,  16‌ಕ್ಕೂ ಹೆಚ್ಚು ನುರಿತ ಕಲಾವಿದರಿಂದ ತರಬೇತಿ ನೀಡಲಾಗುತ್ತಿದೆ ಎಂದರು.

ಜೂನ್ 16 ರಿಂದ ಜುಲೈ 31 ರ ವರೆಗೆ ತರಬೇತಿ ನೀಡಲಾಗುತ್ತದೆ. ಇದು ವಾರಕ್ಕೆ ಮೂರು ದಿನ ಸಂಜೆಯ ಮೇಲೆ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಇದನ್ನ ಜುಲೈ‌ 25 ರಿಂದ ನಡೆಯಲಿದೆ. ದುರ್ಗಿಗುಡಿಯ ಮಲ್ಲಿಕಾರ್ಜುನ ಚಲನ ಚಿತ್ರ ಮಂದಿರದ ಪಕ್ಕದಲ್ಲಿರುವ ಲಕ್ಷ್ಮಿ ಗ್ಯಾಲಕ್ಸಿಯಲ್ಲಿ ಜೂ.16 ರಿಂದ ಉದ್ಘಾಟನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ರೆಗ್ಯುಲರ್ ತರಗತಿಗಳು, ವಾರಾಂತ್ಯದ ತರಗತಿಗಳು, ಪರ್ಸನಲ್ ಟ್ರೈನಿಂಗ್ ಇರುತ್ತದೆ.  ರೆಗ್ಯಲರ್ ತರಬೇತಿಗೆ 17 ವರ್ಷದ ವಯೋಮಿತಿಯವರಿಗೆ ಅವಕಾಶವಿದೆ. ಉಳಿದ ತರಗತಿಗಳಿಗೆ ವಯೋಮಿತಿ ಇರಲ್ಲ. ರೆಗ್ಯುಲರ್ ತರಗತಿಗಳಿಗೆ ತಿಂಗಳಿಗೆ ಒಂದು ಸಾವಿರ ಶುಲ್ಕವಿದೆ. ಇಲ್ಲಿ 30 ಜನರಿಗೆ ಮಾತ್ರ ಅವಕಾಶವಿದೆ.

ಆಸಕ್ತರು 8088203972 ಇಲ್ಲಿ ಸಂಪರ್ಕಿಸಬಹುದಾಗಿದೆ ಎಂದರು.

ಇದನ್ನೂ ಓದಿ-https://suddilive.in/archives/16744

ದರ್ಶನ್ ಬಗ್ಗೆ ಇಂದ್ರಜಿತ್ ಲಂಕೇಶ್ ಅವರ ಕಾಮೆಂಟ್ಸ್ ಏನು? ಮಗನ ಗೌರಿ ಸಿನಿಮಾ ಯಾವಾಗ ರಿಲೀಸು?

ಸುದ್ದಿಲೈವ್/ಶಿವಮೊಗ್ಗ

ಪಿ ಲಂಕೇಶ್ ಅವರ ಮೊಮ್ಮಗ ಇಂದ್ರಜಿತ್ ಲಂಕೇಶ್ ರ ಮಗ ಸಮರ್ಜಿತ್ ಲಂಕೇಶ್ ಅಭಿನಯದ ಗೌರಿ ಚಲನ ಚಿತ್ರದ ಪ್ರಮೋಷನ್ ಗಾಗಿ ಚಿತ್ರದ ನಟ ಇಂದ್ರಜಿತ್ ಲಂಕೇಶ್ ನಾಯಕ ನಟಿ ಸಾನಿಯಾ ಅಯ್ಯರ್ ಶಿವಮೊಗ್ಗಕ್ಕೆ ಆಗಮಿಸಿದ್ದರು.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಇಂದ್ರಜಿತ್ ಲಂಜೇಶ್, ಗೌರಿ ಚಲನಚಿತ್ರ ನಿರ್ಮಿಸಕಾಗಿದೆ.ಬಿಡುಗಡೆ ಹಂತಕ್ಕೆ ಬಂದಿದೆ. ಸಿನಿಮಾ ದೊಡ್ಡ ಬಜೆಟ್ ಆಗಿದೆ. ಅದ್ದೂರಿಯಾಗಿ ಐದು ಜನ ಸಂಗೀತ ನಿರ್ಧೇಶಕರಿದ್ದಾರೆ, ಮಾಥ್ಯು. ಕೆ ಕಲ್ಯಾಣ್, ಸೇರಿದಂತೆ ಐದ ಜನ ಸಂಗೀತ ನಿರ್ದೇಶಕರಿದ್ದಾರೆ.

ಸಾನಿಯಾ ಅಯ್ಯರ್ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಚಿತ್ರದ ನಾಯಕ ನಟ ಸಮರ್ಜಿತ್ ಲಂಕೇಶ್ ಥಿಯೇಟರ್ ಸ್ಟಡಿಸ್ ಮಾಡಿದ್ದಾರೆ. ಇಬ್ಬರು ಕನ್ನಡ ಪ್ರತಿಭೆಗಳಿದ್ದಾರೆ. ಪ್ರಿಯಾಂಕ ಉಪೇಂದ್ರ, ಲೂಸ್ ಮಾದ, ನೀನಾಸಂ ಸುಧೀರ್, ಅಕುಲ್ ಬಾಲಾಜಿ, ಚಂದು ಗೌಡ ಮೊದಲಾದ ಕಲಾವಿದರು ಅಭಿನಯಿಸಿದ್ದಾರೆ ಎಂದರು.

ಮುಂದಿನ ತಿಂಗಳು ಸಿನಿಮಾ ಬಿಡುಗಡೆಯಾಗಲಿದೆ. ಅಕ್ಕ ಗೌರಿಯ ನೆನಪಿಗಾಗಿ ಸಿನಿಮಾಕ್ಕೆ ಅದೇ ಹೆಸರು ಇಡಕಾಗಿದೆ. ಗೌರಿಯ ನೆನಪಿಗಾಗಿ ಆರಂಭಿಸಲಾಗಿದೆ ವಿನಃ ಇದು ಗೌರಿ ಸಿದ್ದಾಂತದ ಸಿನಿಮಾ ಅಲ್ಲ. ಕನ್ನಡಕ್ಕೆ ಸೀಮಿತವಾಗಿದೆ. ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲು ಯುವಕರ ಮೇಲೆ ಒತ್ತಡ ಹಾಕಬಾರದು ಎಂಬ ಕಾರಣಕ್ಕೆ ಕನ್ನಡಕ್ಕೆ ಸೀಮಿತವಿಡಲಾಗಿದೆ ಎಂದರು.

ಪ್ಯಾನ್ ಇಂಡಿಯಾ ಸಿನಿಮಾ ರಚಿಸಿದರೆ ಹೊರೆಯಾಗಲಿದೆ. ಅದಕ್ಕೆ ತಕ್ಕಂತ ಜಾಹೀರಾತು ಹೊರೆಯಾಗಲಿದೆ. ಕಮರ್ಷಿಯಲ್ ಆದರೂ ಒಳ್ಳೆಯ ಮೆಸೇಜ್ ಇದೆ. ಗೌರಿ ತತ್ವದ ಮೇಲೆ ಸಿನಿಮಾ ಮಾಡುತ್ತಿಲ್ಲ. ಗೌರಿಯ ಕಥೆಯಲ್ಲ. ಆದರೆ ಅಕ್ಕನ ನೆನಪಿಗಾಗಿ ಸಿನಿಮಾ ಮಾಡುತ್ತಿರುವುದಾಗಿ ತಿಳಿಸಿದರು.

ನೈಜ ಘಟನೆಯ ಸಿನಿಮಾ ಇದಾಗಿದೆ. ಸಿನಿಮಾ ಕಥೆಯ ವಿಷಯದಲ್ಲಿ ಗೆದ್ದಿದ್ದೀನಿ ಸೋತಿದ್ದೀನಿ, ಆದರೆ ಗುಣಮಟ್ಟದಲ್ಲಿ ಸೋತಿಲ್ಲ. ನಮಗೆ ವಿದೇಶದ ಖರ್ಚು ರಾಜ್ಯದಲ್ಲಿ ಎರಡು ಶೂಟಿಂಗ್ ಮಾಡಬಹುದು. ಹಾಗಾಗಿ ವಿದೇಶದಲ್ಲಿ ಶೂಟಿಂಗ್ ಮಾಡಿಲ್ಲ. ಕಥೆಗೆ ವಿದೇಶಕ್ಕೆ ಹೋಗಿ ಶೂಟಿಂಗ್ ನ ಅವಶ್ಯಕತೆ ಇರಲಿಲ್ಲವೆಂದರು.

ನಾಯಕ ನಟನ ಮಾತು

ಚಿಕ್ಕ ವಯಸ್ಸಿನಿಂದ ಸಿನಿಮಾ ಇಂಡಸ್ಟ್ರೀಸ್ ಹೆಚ್ಚು ಪ್ರೀತಿ. ಸುದೀಪ್ ಮತ್ತು ನನ್ನ ತಂದೆಯ ಸಿನಿಮಾಗಳ ಪ್ರೇರಣೆ. ಯೋಗರಾಜ್ ಭಟ್ ರವರ ಗರಡಿ ಮತ್ತು ಕರಟಕಧಮನಕ ಸಿನಿಮಾದಲ್ಲಿ ಅಸಿಸ್ಟೆಂಟ್ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಅಸಿಸ್ಟೆಂಟ್ ನೃತ್ಯ ನಿರ್ದೇಶಕರಾಗಿದ್ದೇನೆ. ಪಲ್ಲವಿ ಮತ್ತು ಎಲ್ಲಿಂದಲೋ ಬಂದವರು ಸಿನಿಮಾವನ್ನ ಅತ್ತೆ ಜೊತೆ ನೋಡಿದ್ದ ನೆನಪನ್ನ ಮೆಲಕು ಹಾಕೊದ ನವ ನಾಯಕ ಅಪ್ಪು ಸಾರ್ ಮತ್ತು ಸುದೀಪ್ ನನಗೆ ಇನ್ಸಪರೇಷನ್ ಎಂದು ಹೇಳಿದರು.

ಸಾನಿಯಾ ಅಯ್ಯರ್ ಮಾತು

ನಟಿ ಸಾನಿಯಾ ಅಯ್ಯರ್ ಮಾತನಾಡಿ, ಸಿನಿಮಾದಲ್ಲಿ ಹೊಸಬರಿಗೆ ಅವಕಾಶ ನೀಡಿರುವುದು ಖುಷಿಯಾಗಿದೆ. ಸಮರ್ಜಿತ್ ಇಡೀ ತಂಡದಲ್ಲಿ ಕೆಲಸ ಮಾಡುವಾಗ ಕುಟುಂಬಸ್ಥಳು ಎಂಬಂತೆ ಟ್ರೀಟ್ ಸಿಕ್ಕಿದೆ. ಸಮರ್ಜಿತ್ ನೋಡಿದಾಗ ಅಪ್ಪು ಸಾರ್ ನೆನಪಾಗುತ್ತದೆ.

ಪಾತ್ರಕ್ಕಾಗಿ ಕಲಿಯಬೇಕಾದ ಅಂಶ ಸಿನಿಮಾದಲ್ಲಿದೆ. ಇಂದ್ರಜಿತ್ ಸಾರ್ ಇಲ್ಲವಾದರೆ ನನ್ನ ಕನಸು ಚಿಗುರು ಒಡೆಯುತ್ತಿರಲಿಲ್ಲ. ನಾನು ಧಾರವಾಹಿಯಿಂದ ಜರ್ನಿ ಆರಂಭಿಸಿದೆ ಸಿನಿಮಾದಲ್ಲಿ ತೆರೆದುಕೊಳ್ಳಲು ಅವಕಾಶ ಸಿಕ್ಕಿದೆ ಎಂದು ಬಣ್ಣಿಸಿದ ಅವರು ತಾವೇ ಬರೆದ ಕಾವ್ಯವನ್ನೂ ಹೇಳಿದ್ದು ಗಮನಾರ್ಹವಾಗಿತ್ತು.‌

ದರ್ಶನ್ ಬಗ್ಗೆ ನೋ ಕಾನೆಂಟ್ಸ್

ದರ್ಶನ್ ಪ್ರಕರಣ ತನಿಖೆ ಹಂತದಲ್ಲಿದೆ. ನಾನು ಕಾಮೆಂಟ್ಸ್ ಹೇಳುವುದು ಸರಿಯಲ್ಲ.
ಕಾಮೆಂಟ್ಸ್ ಗೆ ಜಗತ್ತಿನ ಡೊಂಕು ತಿದ್ದುವ ಬಸಣ್ಣನವರ ವಚನ ಹೇಳಿ ಕಾಮೆಂಟ್ಸ್ ಮಾಡಲು ನಿರಾಕರಿಸಿದರು.

ಕನ್ನಡ ಸಿನಿಮಾ ರಂಗ ಇನ್ಬೂ ಬೆಳೆಯಬೇಕು

ತಾಂತ್ರಿಕವಾಗಿ ಮುಂದುವರೆದಿದೆ. ನಟ ನ ಟಿಯರು, ಛಾಯಾಗ್ರಹಕರು, ಕಥೆಗಳಲ್ಲಿ ವಿಫಲರಾಗಿದ್ದೇವೆ. ಕಥೆಯ ಗುಣಮಟ್ಟ ಹೆಚ್ಚಿಸಬೇಕಿದೆ. 70 ರ ದಶಕದಲ್ಲಿ ಡಾ. ರಾಜ್, ಲಂಕೇಶ್, ಪುಟ್ಟಣ್ಣ ಕಣಗಲ್ ಅವರು ಕನ್ಬಡ ಸಿನಿಮಾ ಇಂಡಸ್ಟ್ರೀಸ್ ನಲ್ಲಿ ಕ್ರಾಂತಿಮಾಡಿದ್ದಾರೆ. ಸಿನಿಮಾ ನಿರ್ದೇಶಕರ ಮಾಧ್ಯಮವಾದುದ್ದರಿಂದ ಅವರನ್ನ ಬೆಳೆಸಬೇಕಿದೆ.

ಸಾಹಿತಿಗಳು ಸಿನಿನಾದಿಂದ ದೂರವಾಗಿದ್ದಾರೆ. ಅವರಿಗೆ ಉತ್ತಮ ಸಂಭಾವನೆ ನೀಡಿದಾಗ ಬರುತ್ತಾರೆ. ಹಳ್ಳಿಗಳಿಂದ ಬಂದವರಿಗೆ ಪ್ರೋತ್ಸಹಿಸಬೇಕಿದೆ. ಸಿನಿಮಾ ರಂಗದಲ್ಲಿ ಥಿಯೇಟರ್ ಗಳು ಮುಚ್ಚುಹೋಗುತ್ತಿಚೆ. ಇದು ಬದಕಾವಣೆಯ ಕಾಲವಾಗಿದೆ. ಡಿಜಿಟಲ್ ಮೀಡಿಯಾವಾದುದರಿಂದ ಇದನ್ನ ಎದುರಿಸಲೇ ಬೇಕಿದೆ ಎಂದರು.

ಇದನ್ನೂ ಓದಿ-https://suddilive.in/archives/16735

ಸೋಮವಾರ, ಜೂನ್ 10, 2024

ಕೃತಜ್ಞತಾ ಸಭೆಯಲ್ಲಿ ಡಾ.ಶಿವರಾಜ್ ಕುಮಾರ್ ಹೇಳಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ನಾನು ಕಳೆದ 52 ದಿನಗಳಿಂದ ನಿಮ್ಮ ಜೊತೆ ಕಾರ್ಯಕರ್ತನಾಗಿ ಕೆಲಸ ಮಾಡಿರುವೆ. ಆದರೆ ಕೆಲವರು ಇದನ್ನೂ ಬೇರೆ ರೀತಿ ಬಿಂಬಿಸಲಾಗುತ್ತಿದೆ ಎಂದು ಶಿವರಾಜ್ ಕುಮಾರ್ ವಿಷಾದ ವ್ಯಕ್ತಪಡಿಸಿದರು.

ನಗರದ ಈಡಿಗರ ಸಮುದಾಯ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆಗೆ ಶ್ರಮಿಸಿದ ಚುನಾಯಿತ ಪ್ರತಿನಿಧಿಗಳು, ಮುಖಂಡರು ಕಾರ್ಯಕರ್ತರು ಹಾಗೂ ಅಭಿಮಾನಿಗಳ ಕೃತಜ್ಞತಾ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.

ನಾನು ಸಿನಿಮಾ ಮೊದಲಾದ ಎಲ್ಲವನ್ನೂ ಬಿಟ್ಟು ಹೋಟೆಲ್ ನಲ್ಲೋ ಬೇರೆಡೆಯಲ್ಲೋ ಕೂಲಿ ಕೆಲಸ ಮಾಡಿಕೊಂಡು ಇರುತ್ತೇನೆ. ಹೆಂಡತಿ ಮಕ್ಕಳೊಂಡನೆ ಚೆನ್ಬಾಗಿರುತ್ತೇನೆ. ಆದರೆ ಬೇರೆಯವರು ಈ ರೀತಿ ಯಾಕೆ ಮಾತನಾಡುತ್ತಾರೆ ಎಂದು ಯೋಚಿಸಿದೆ. ಎಲ್ಲರೂ ನಮ್ಮವರೇ ಆದುದರಿಂದ ಯಾರ ಮಾತಿಗೂ ಉತ್ತರಿಸುವ ಅಗತ್ಯವಿಲ್ಲ ಎಂದು  ಶಿವಣ್ಣ ಸ್ವಲ್ಪ ನೊಂದರೀತಿ ಮಾತನಾಡಿದರು.

ನಾನು ಡ್ಯಾನ್ಸ್ ಮಾಡಿರುವುದನ್ನ ಟೀಕಿಸಲಾಗಿದೆ. ಟೀಕೆಗಳಿಗೆ ಉತ್ತರಿಸದೆ  ನಿಭಾಯಿಸಿಕೊಂಡು ಹೋಗಬೇಕು ಎಂಬ ನಿರ್ಧಾರಕ್ಕೆ ಬಂದಿರುವೆ. ಗೀತ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇ ತಪ್ಪಾ? ಅದು ತಪ್ಪಾಗಿದ್ದರೆ ಪಾರ್ವತಮ್ಮ ರಾಜ್ ಕುಮಾರ್ ಹುಟ್ಟುತ್ತಿರಲಿಲ್ಲ. ಗೀತ ಸೋತಿರಬಹುದು ಸೋಲೇ ಗೆಲುವಿನ ಮೊದಲ ಮೆಟ್ಟಿಲು ಎಂದು ಬಣ್ಣಿಸಿದರು.

ಶಿಜಾರಿಪುರದ ವಿಧಾನ ಸಭೆ ಚುನಾವಯಲ್ಲಿ ಪರಾಜಿತಗೊಂಡ ನಾಗರಾಜ್ ಅವರ ಹೆಸರು ಬಾಯಿಯಲ್ಲಿ ಹೇಳಲು ಆಗದ ಕಾರಣ ನನಗೆ ಸಿನಿಮಾ‌ ಡೈಲಾಗ್ ನೆನಪಿರುತ್ತದೆ. ಆದರೆ ಕೆಲವರ ಹೆಸರು ನೆನಪಿರಲ್ಲ. ನನಗೂ ವಯಸ್ಸು 62 ಆಯಿತು ಎಂದರು.

ಸೋಮವಾರ, ಮೇ 27, 2024

ಹಮ್ ದೋ, ಹಮಾರೆ ಭಾರ ಸಿನಿಮಾ ಬಿಡುಗಡೆ ಮಾಡದಂತೆ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ಜೀ ವಾಹಿನಿಯಲ್ಲಿ ಬಿತ್ತರವಾಗುತ್ತಿರುವ ಹಮ್ ದೋ ಹಮಾರೆ ಭಾರಾ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದ್ದು, ಇದರಲ್ಲಿ ಅಕ್ಲಾಹುವಿನ ಬಗ್ಗೆ ಮತ್ತು ಕುರಾನ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು ಸಿನಿನಾವನ್ನ ಬಿಡುಗಡೆ ಮಾಡದಂತೆ ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್ ಇಂದು ಸುದ್ದಿಗೋಷ್ಠಿ ನಡೆಸಿ ಆಗ್ರಹಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮಸ್ಜಿದ್ ನ ಅಧ್ಯಕ್ಷ ಮುನಾವರ್‌ಪಾಷ ಮಾತನಾಡಿ, ಹಮ್ ದೋ ಹಮ್ ಭಾರದ ಸಿನಿಮಾ‌ ಟ್ರೈಲರ್‌ ನಲ್ಲಿ ಕುರಾನ್ ಶರೀಫ್ ರಲ್ಲಿ ಸೂರೆ ಎ ಬಕರ ಉಪದೇಶಗಳು ಹಾಗೂ ಸಂದೇಶಗಳ ಕುರಿತಂತೆ ತಪ್ಪು ಅಪಾರ್ಥ ಸೃಷ್ಠಿಸಿ ಪ್ರಚೋದನಾತ್ಮಕ ಹೇಳಿಕೆ ನೀಡುವಂತೆ ಮಾಡಲಾಗಿದೆ ಎಂದು ದೂರಿದರು.

ಪ್ರಚೋದನಾತ್ಮಕ ಹೇಳಿಕೆ ನೀಡುವ ಮೂಲಕ ಸಮಾಜದ ಸಾಮರಸ್ಯ ಹಾಳು ಮಾಡಲಾಗುತ್ತಿದೆ.‌ಇಸ್ಲಾಂ ಧರ್ಮದ ಬಗ್ಗೆ ಇರುವ ಭಾವನೆಗೆ ಮತ್ತು ನಂಬಿಕೆಗೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಿನಿಮಾ ಬಿಡುಗಡೆ ಮಾಡದಂತೆ ಮುನಾವರ ಪಾಷ ಮನವಿ ಮಾಡಿಕೊಂಡಿದ್ದಾರೆ.

ರಾಷ್ಟ್ರಪತಿಗಳಿಗೆ, ಪ್ರಧಾನಮಂತ್ರಿಗಳಿಗೆ, ರಾಜ್ಯದರಾಜ್ಯಪಾಲರಿಗೆ, ರಾಜ್ಯದ ಮುಖ್ಯಮಂತ್ರಿಗಳಿಗೆ, ರಾಜ್ಯದ ಗೃಹ ಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಶಿವಮೊಗ್ಗದ ಡಿಸಿ ಮತ್ತು ಎಸ್ಪಿ ಅವರಿಗೆ ಮನವಿ ಮಾಡಿಕೊಙಡಿರುವ ಇವರು, ಸಿನಿಮಾ ಬಿಡುಗಡೆಯಾಗದಂತೆ ಕ್ರಮ ಜರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಅಖಿಲ ಭಾರತ ಚಿತ್ರೀಕರಣ ಮತ್ತು ವಾಣಿಜ್ಯ ಮಂಡಳಿ ಚೆನ್ನೈ ಹಾಗೂ ಮಹಾರಾಷ್ಟ್ರ, ಹಿಂದಿ ಚಲನಚಿತ್ರ ಹಾಗೂ ವಾಣಿಜ್ಯ ಮಂಡಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಮತ್ತು ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರ ವಿರುದ್ಧ ಕ್ರಮ ಜರುಗಿಸಬೇಕು. ಮತ್ತು ಸಮಾಜದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಸ್ಜೀದ್ ಕಮಿಟಿಯ ಕಾರ್ಯದರ್ಶಿ ಅಶ್ರಫ್ ಅಹಮದ್, ಸತ್ತಾರ್ ಬೇಗ್, ವಕೀಲರಾದ ನಯಾಜ್ ಅಹಮದ್ ಖಾನ್, ಖಾಜಿ ಅಶ್ರಫ್ ಹುಸೇ್ ಸಾಬ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/15572

ಬುಧವಾರ, ಮೇ 15, 2024

ಹೊಸ ಕರ್ನಾಟಕ ಫಿಲಂ ಅಸೋಸಿಯೇಷನ್ ಅಸ್ಥಿತ್ವಕ್ಕೆ

ಸುದ್ದಿಲೈವ್/ಶಿವಮೊಗ್ಗ

ರಾಜ್ಯದಲ್ಲಿ ಕರ್ನಾಟಕ ಫಿಲಂ ಅಸೋಸಿಯೇಷನ್ 2023 ರಲ್ಲಿ ಎಂ ಎಸ್ ರವೀಂದ್ರ ಅಸ್ಥಿತ್ವಕ್ಕೆ ಬಂದಿದ್ದು, ಈಗ ಆ ಅಸೋಸಿಯೇಷನ್ ಆಕ್ಟಿವ್ ಆಗಿ ಕೆಲಸ ಆರಂಭಿಸಿದೆ.

ಏಳೆಂಟು ಚೇಂಬರ್ ಇವೆ. ಅದರಲ್ಲಿ ನಮ್ಮ ಚೇಂಬರ್ ಗೆ 2000 ರೂ. ನಲ್ಲಿ ಸದಸ್ಯತ್ವಪಡೆಯಬಹುದು. ಐಡಿ ಕಾರ್ಡ್,ಮೆಮೆಂಟೋ ನೀಡಲಾಗುವುದು ಇದು ಅಜೀವ ಸದಸ್ಯತ್ವವಾಗಿರುತ್ತದೆ ಎಂದು ಅಸೋಸಿಯೇಷನ್ ನ ಡಾ.ಎನ್ ಎಲ್ ಪ್ರಹ್ಲಾದ ಇಂದು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿತಿ ಮಾತನಾಡಿದರು.

ನಟ, ನಟಿಯರು, ಸ್ಕ್ರಿಪ್ಟ್ ರೈಟರ್ಸ್ ಲೈಟ್ ಬಾಯ್ ಈ ಅಸೋಸಿಯೇಷನ್‌ಗೆ ಸದಸ್ಯರಾಗಿ ಅನುಕೂಲತೆ ಪಡೆಯಬಹುದು. ಹಲವು ಕಾರ್ಯಕ್ರಮವಿದೆ. ತರಬೇತಿ ಕಾರ್ಯಗಾರ ನೀಡಲಾಗುವುದು ಎಂದರು.

500 ರೂ. ಗೆ ಸಿನಿಮಾ ಟೈಟಲ್ ಪಡೆಯಬಹುದು. 5000 ರೂ. ಮೂವಿ ಟೈಟಲ್ ನೋಂದಣಿ ಪಡೆಯಬಹುದು. ಈ ಬಗ್ಗೆ 31 ಜಿಲ್ಲೆಯಲ್ಲೂ ಅಸೋಸಿಯೇಷನ್ ಸುದ್ದಿಗೋಷ್ಠಿ ನಡೆಸಿ ಜನರಿಗೆ ಮಾಹಿತಿ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಅಧ್ಯಕ್ಷ ರವೀಂದ್ರ ಅವರು ಮಾತನಾಡಿ, ಇರುವ ಫೀಲಂ ಚೇಂಬರ್ ಗಳಿಗೆ ಹಣ ಹೆಚ್ಚಿಗೆ ನೀಡಿ ನೋಂದಣಿ, ಟೈಟಲ್ ಗಳನ್ನ ಪಡೆಯಬೇಕಿದೆ. ಹಾಗಾಗಿ ಕಡಿಮೆ ಹಣದಲ್ಲಿ ನೋಂದಣಿ ಮಾಡಿಕೊಡಲಿದ್ದೇವೆ. 8 ವರ್ಷದಿಂದ ಸಿನಿಮಾದಲ್ಲಿದ್ದೇನೆ.

ಕಡಿಮೆ ಬಜೆಟ್ ಸಿನಿಮಾ ರಚಿಸಿದವರಿಗೆ ಅನ್ಯಾಯವಾಗುತ್ತಿದೆ. ಹಣವಿದ್ದರೆ ಒಟಿಟಿ, ಅಸೋಸಿಯೇಷನ್ ಸಹಾಯಕ್ಜೆ ಬರೊಲ್ಲ. ಇತರೆ ಅಸೋಸಿಯೇಷನ್ ಗೆ 25 ಸಾವಿರ ರೂ. ಹಣವನ್ನ ಯಾಕೆ ಕಟ್ಟಬೇಕು. ಹಾಗಾಗಿ ಹೊಸ ಅಸೋಸಿಯೇಷನ್ ಆರಂಭವಗಿದೆ. 12 ಹೊಸ ಸಿನಿಮಾ ನೋಂದಣಿ ನಮ್ಮ ಅಸೋಸಿಯೇಷನ್ ನಲ್ಲಿ ಮಾಡಿಕೊಡಲಾಗಿದೆ. 356 ಜನ ಸದಸ್ಯರಾಗಿದ್ದಾರೆ ಎಂದರು.

ಇದನ್ನೂ ಓದಿ-https://suddilive.in/archives/14787