ಬುಧವಾರ, ಜುಲೈ 31, 2024

ಶಿಮೂಲ್ ಚುನಾವಣೆ-ಯಾರೆಲ್ಲ ನಾಮಪತ್ರ ಸಲ್ಲಿಸಿದ್ದಾರೆ?



ಸುದ್ದಿಲೈವ್/ಶಿವಮೊಗ್ಗ


ಶಿಮೂಲ್ ಆಡಳಿತ ಮಂಡಳಿಯ ಸಾಮಾನ್ಯ ಚುನಾವಣೆಗೆ 14ದಿನ ಬಾಕಿ ಇದ್ದು, ಈಗಾಗಲೇ 14 ಜನ ನಾಮಪತ್ರ ಸಲ್ಲಿಸಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡರು ಶಿಮೂಲ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.


ಮುಂದಿನ ಐದು ವರ್ಷಕ್ಕೆ ಶಿಮುಲ್‌ನ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆಯಾಗಲಿದೆ. ಜುಲೈ 30ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು. ನಿನ್ನೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಇಂದು 13 ನಾಮಪತ್ರ ಸಲ್ಲಿಕೆಯಾಗಿದೆ.


ಆಗಸ್ಟ್‌ 6ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.  ಆ.8ರಂದು ನಾಮಪತ್ರ ವಾಪಸ್‌ ಪಡೆಯಬಹುದಾಗಿದೆ.  ಆ.14ರಂದು ಮತದಾನ ನಡೆಯಲಿದೆ. ಬಳಿಕ ಮತ ಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ. ಚುನಾವಣ ಅಧಿಕಾರಿಯಾಗಿ ತಹಶೀಲ್ದಾರ್‌ ಬಿ.ಎನ್‌.ಗಿರೀಶ್‌ ಅವರನ್ನು ನೇಮಿಸಲಾಗಿದೆ.


ನಾಮಪತ್ರ ಸಲ್ಲಿಸಿದ ಆಕಾಂಕ್ಷಿಗಳು


ಶಿವಮೊಗ್ಗ, ದಾವಣಗೆರೆ ಹಾಗು ಚಿತ್ರದುರ್ಗ ಜಿಲ್ಲೆಯಿಂದ ನಾಮಪತ್ರ ಸಲ್ಲಿಕೆಯಾಗಲಿದ್ದು ಶಿವಮೊಗ್ಗ ವಿಭಾಗದಿಂದ ತೀರ್ಥಹಳ್ಳಿಯ ಕಲ್ಲುಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಆರ್ ಎಂ ಮಂಜುನಾಥ್ ಗೌಡ, ಭದ್ರಾವತಿ ತಾಲೂಕಿನ ಕೆಂಚೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಎಸ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.


ಸಾಗರ ವಿಭಾಗದಿಂದ ದೊಡ್ಡಜೋಗಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಬಿ.ಡಿ.ಭೂಕಾಂತ್, ಸೊರಬ ತಾಲೂಕಿನ ಹಿರೇಮಾಗಡಿ ಹಾಲು ಉತ್ಪಾದಕರ ಸಂಘದಿಂದ ಗಂಗಾಧರಪ್ಪ, ಸಾಗರ ತಾಲೂಕಿನ ಸಂಗಣ್ಣನಕೆರೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ ದಿವಾಕರ್, ಆವಿನಹಳ್ಳಿ ಹಾಲು ಉತ್ಪಾದಕರ ಸಂಘದಿಂದ ಹೆಚ್ ಎಂ ರವಿಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.


ದಾವಣಗೆರೆಯ ನ್ಯಾಮತಿ ತಾಲೂಕಿನ ಕುರುವ ಹಾಲು ಉತ್ಪಾದಕರ ಸಂಘದಿಂದ ಸುರೇಶ್ ಕೆ.ಜಿ, ಚನ್ನಗಿರಿ ತಾಲೂಕಿನ ಕಂಚುಗಾರನಹಳ್ಳಿ ಹಾಲು ಉತ್ಪಾದಕರ ಸಂಘದಿಂದ ಹೆಚ್ ಕೆ ಬಸಪ್ಪ, ಚಿತ್ರದುರ್ಗದ ಹಿರಿಯೂರು ತಾಲೂಕಿನ ಬಬ್ಬೂರು ಹಾಲು ಉತ್ಪಾದಕರ ಸಂಘದಿಂದ ಯಶವಂತರಾಜು, ಚಿತ್ರದುರ್ಗದ ಸಿರಿಗೆರೆ ಹಾಲು ಉತ್ಪಾದಕರ ಸಂಘದಿಂದ ಪಿ.ತಿಪ್ಪೇಸ್ವಾಮಿ,


ಹೊಸದುರ್ಗದ ಕೊರಟೀಕೆರೆ ಹಾಲು ಉತ್ಪಾಕರ ಸಂಘದಿಂದ ರಮೇಶಪ್ಪ, ಹೊಳಲ್ಕೆರೆಯ ಮಾಳೇನಹಳ್ಳಿ ಹಾಲು ಉತ್ಪಾದಕರ ಸಂಘದಿಂದ ಜಿ.ಆರ್.ಮಂಜುನಾಥ್, ಚಿತ್ರದುರ್ಗದ ಸಿದ್ದಾಪುರ ಹಾಲು ಉತ್ಪಾದಕರ ಸಂಘದಿಂದ ಪಿ.ಎಸ್.ಗುರುಶಾಂತಪ್ಪ ನಾಮಪತ್ರ ಸಲ್ಲಿಸಿದ್ದಾರೆ.


ಇದನ್ನೂ ಓದಿ-https://www.suddilive.in/2024/07/blog-post_152.html

ಚಂದನಕೆರೆ-ಯಡೇಹಳ್ಳಿ ಅರಣ್ಯ ಪ್ರದೇಶದಲ್ಲಿ ಪ್ರತಿಭಟನೆ ಅಂತ್ಯಗೊಳಿಸಲು ಜಿಲ್ಲಾಧಿಕಾರಿಗಳಿಂದ ಮನವಿ



ಸುದ್ದಿಲೈವ್/ಭದ್ರಾವತಿ


ಹೊಳೆಹೊನ್ನೂರು ಚಂದನಕೆರೆ ಸರ್ವೆ ನಂ. 12 ಎಂ.ಪಿ.ಎಂ. ನೆಡುತೋಪು ಮತ್ತು ಯಡೇಹಳ್ಳಿ ಸರ್ವೆ ನಂ. 66 ರಲ್ಲಿನ ಅರಣ್ಯ ಪ್ರದೇಶದಲ್ಲಿ ಮಂಜೂರಾದ ಹಕ್ಕುಪತ್ರಗಳನ್ನು ವಜಾ ಮಾಡಿರುವ ವಿರುದ್ಧ ದಲಿತ ಸಂಘಟನೆಗಳು ಹಾಗೂ ಮಾನವ ಹಕ್ಕು ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ನಿರತ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ನಿರ್ದೇಶಕರು ಅರಣ್ಯ ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ತಂಡವು ಪ್ರತಿಭಟನೆ ಅಂತ್ಯಗೊಳಿಸುವಂತೆ ಮನವಿ ಮಾಡಿದರು.


ಚಂದನಕೆರೆ ಸ.ನಂ.12ರಲ್ಲಿ 1980 ರಿಂದ ಎಂ.ಪಿ.ಎಂ. ರವರ ಸ್ವಾಧೀನದಲ್ಲಿದ್ದು, ನೀಲಗಿರಿ ನೆಡುತೋಪು ಇರುತ್ತದೆ. 2012-13 ರಲ್ಲಿ ಭದ್ರಾವತಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಸ್ವಾಧೀನ ಕೋರಿದ ಪ್ರಕರಣಗಳು ವಜಾ ಆಗಿದ್ದು, ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿ ಇರುವುದರಿಂದ ಪ್ರತಿಭಟನಾಕಾರರ ಮನವಿಯನ್ನು ವಿಲೇ ಮಾಡಲು ಕಷ್ಟಸಾಧ್ಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆರವರು ಪ್ರತಿಭಟನಾಕಾರರಿಗೆ ತಿಳುವಳಿಕೆ ನೀಡಿದರು.


ಪ್ರತಿಭಟನೆ ಮಾಡುತ್ತಿರುವ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳು ಓಡಾಡುವ ಸ್ಥಳವಾಗಿದ್ದು, ಮಳೆಗಾಲ ಆಗಿದ್ದರಿಂದ ಗುಡುಗು ಮಿಂಚಿಗೆ ಪ್ರಾಣ ಹಾನಿಯಾಗುವ ಸಂಭವವಿರುತ್ತದೆ. ಇದು ಪ್ರತಿಭಟನೆ ಮಾಡಲು ಸೂಕ್ತ ಸ್ಥಳವಲ್ಲದ್ದರಿಂದ ಈ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ದಕ್ಕೆ ಆಗುವ ಸಂಭವವಿರುತ್ತದೆ. ಮತ್ತು ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿಯುವುದು ಅಪರಾಧವಾಗಿರುತ್ತದೆ ಆದ್ದರಿಂದ ಪ್ರತಿಭಟನೆಯನ್ನು ಬೇರೆಡೆಗೆ ಸ್ಥಳಾಂತರಿಸಿ ಪ್ರತಿಭಟನೆಯನ್ನು ಕೈ ಬಿಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು. 


ಚಂದನಕೆರೆ ಸ. ನಂ. 12 ಎಂ.ಪಿ.ಎಂ. ನೆಡುತೋಪು ಪ್ರದೇಶವಾಗಿದ್ದು, ತೀವ್ರತರವಾದ ಅರಣ್ಯ ಪ್ರದೇಶವನ್ನು ಹೊಂದಿದೆ.  ಅರಣ್ಯ ನಾಶವು ಉಪಗ್ರಹ ಆಧಾರಿತವಾಗಿ ಗುರುತಿಸಿ ದಾಖಲಾಗಿರುತ್ತದೆ.  ಯಡೇಹಳ್ಳಿ ಸ.ನಂ.66 ಕಿರು ಅರಣ್ಯ ಪ್ರದೇಶವಾಗಿದ್ದು, ಅರಣ್ಯ ಪ್ರದೇಶದಲ್ಲಿ ಮಂಜೂರಾದ ಹಕ್ಕು ಪತ್ರಗಳನ್ನು ಪ್ರಾದೇಶಿಕ ನ್ಯಾಯಾಲಯವು ವಜಾ ಮಾಡಿರುತ್ತದೆ.  ಅರಣ್ಯ ಪ್ರದೇಶದಲ್ಲಿ ಮಂಜೂರಾತಿ ಮತ್ತು ಸಾಗುವಳಿ ನೀಡುವುದು ಅರಣ್ಯ ಸಂರಕ್ಷಣಾ ಕಾಯ್ದೆ-1980ರ ಅನ್ವಯ ನಿಷಿದ್ಧವಾಗಿರುತ್ತದೆ.  ಹಾಗೂ ಉಚ್ಛ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯಗಳು ಅರಣ್ಯ ಪ್ರದೇಶಗಳಲ್ಲಿ ಮಂಜೂರಾತಿ ವಿರುದ್ಧ ನೀಡಿದ ತೀರ್ಪುಗಳನ್ನು ಉಲ್ಲೇಖಿಸಿ ಸಾಗುವಳಿ ಮಾಡುವುದು ತಪ್ಪಾದ ಕ್ರಮವಾಗಿದೆ ಎಂದು ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರತಿಭಟನಾ ನಿರತರಿಗೆ ವಿವರಿಸಿದರು. 


ಚಂದನಕೆರೆ ಮತ್ತು ಯಡೇಹಳ್ಳಿ ಪ್ರದೇಶವು ಎಂ.ಪಿ.ಎಂ. ನೆಡುತೋಪು ಮತ್ತು ಅರಣ್ಯ ಪ್ರದೇಶವಾಗಿದ್ದು, ಈ ಪ್ರದೇಶಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪುಗಳು ಇರುವುದರಿಂದ ಮಂಜೂರಾತಿಗಳನ್ನು ಕಾನೂನುಗಳ ವ್ಯಾಪ್ತಿಯಲ್ಲಿ ಪರಿಶೀಲಿಸಲಾಗುವುದು. ಆದ್ದರಿಂದ ಪ್ರತಿಭಟನೆಯನ್ನು ಕೈಬಿಡುವಂತೆ ಜಿಲ್ಲಾಡಿಳಿತದವರು ಮನವಿ ಮಾಡಿದರು.  


ಈ ಸಂದರ್ಭದಲ್ಲಿ ಭದ್ರಾವತಿ ತಹಶೀಲ್ದಾರರು ಮತ್ತು ತಾಲೂಕಿನ ಕಂದಾಯ, ಅರಣ್ಯ, ಎಂ.ಪಿ.ಎಂ. ಮತ್ತು ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು. 


ಇದನ್ನೂ ಓದಿ-https://www.suddilive.in/2024/07/blog-post_910.html

ನಗರದಲ್ಲಿ ಬಿಸಿಲು-ಕಣ್ಣಮುಚ್ಚಾಲೆ ಆಟದಲ್ಲಿ ನದಿಯ ಒಳಹರಿವು

ಇಮಾಮ್ ಬಾಡಾದ ನದಿ ದಂಡೆ

ಬೈಪಾಸ್ ರಸ್ತೆಯ ಸೇತುವೆ


ಸುದ್ದಿಲೈವ್/ಶಿವಮೊಗ್ಗ


ಜಿಲ್ಲೆಯಲ್ಲಿ ಮಳೆಯ ಮುನ್ಸೂಚನೆ ಇದೆ. ಆದರೆ ನಗರದಲ್ಲಿ ಬಿಸಿಲು ಬೀಳುತ್ತಿದೆ. ಆದರೆ ತುಂಗ ನದಿ ಅಪಾಯಮಟ್ಟದಲ್ಲೇ ಹರಿಯತ್ತಿದೆ. ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ನದಿಗೆ ಬಿಟ್ಟಿರುವ ರಾಜಾಕಾಲುವೆಯಲ್ಲಿ ಡ್ರೈನೇಜ್ ನೀರು ಬಡಾವಣೆಗೆ ನುಗ್ಗುತ್ತಿವೆ. 

ಕೂಡಲಿಯಲ್ಲಿ ಸ್ನಾಘಟ್ಟಕ್ಕೆ ಇಳಿಯದಂತೆ ತಡೆ


82 ಸಾವಿರ ಕ್ಯೂಸೆಕ್ ನೀರು ತುಂಗೆಯಲ್ಲಿ ಹರಿದು ಬರುತ್ತಿದೆ. ಅದರಂತೆ ಭದ್ರ ನದಿಗೂ 40 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಭದ್ರ ನದಿ ಭದ್ರಾವತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದೆ. 


ಎರಡೂ ನದಿ ಕೂಡಲಿಯಲ್ಲಿ ಸೇರುವುದರಿಂದ ಹಿಂದೂ ಸಂಪ್ರದಾಯದಂತೆ ಕೂಡಲಿ ಸ್ನಾನಕ್ಕೆ ಪಾವಿತ್ರತೆ ಇದೆ. ಆದರೆ ತುಂಗ ಮತ್ತು ಭದ್ರನದಿಯ ಒಳಹರಿವು 1 ಲಕ್ಚ ಕ್ಯೂಸೆಕ್ ಗೂ ಹೆಚ್ಚಾಗುವುದರಿಂದ ಸ್ನಾನಘಟ್ಟದಲ್ಲಿ ಸ್ನಾನ ಮಾಡುವುದು ಮತ್ತು ನದಿಗೆ ಇಳಿಯುವುದನ್ನ‌ ನಿಷೇಧಿಸಲಾಗಿದೆ. 


ಹಳೇಮಂಡ್ಲಿಯಲ್ಲಿ ರಸ್ತೆಯ ಮೇಲೆ ಹರಿದ ನೀರು


ಹಳೇ ಮಂಡ್ಲಿಯ ಬಳಿ ರಸ್ತೆಯ ಮೇಲೆ ನೀರು

ನಗರ ಭಾಗವಾಗಿರುವ ಹಳೇ ಮಂಡ್ಲಿಯಲ್ಲೂ ತುಂಗ ನದಿಯ ನೀರು ತೀರ್ಥಹಳ್ಳಿಯ ರಸ್ತೆಯ ಮೇಲೆ ಹರಿಯುತ್ತಿದೆ. ಸಧ್ಯಕ್ಕೆ ಯಾವ ಅಪಾಯವೂ ಇಲ್ಲವಾಗಿದೆ.ಮತ್ತೂರಿನಲ್ಲಿ ತುಂಗ ನದಿ ತೋಟಕ್ಕೆ ನುಗ್ಗಿದೆ ಅಡಿಕೆ ತೋಟ ಜಲಾವೃತವಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. 

ಇದನ್ನೂ ಓದಿ-https://www.suddilive.in/2024/07/blog-post_753.html

ಹವಮಾನ ಇಲಾಖೆಯ ಅಲರ್ಟ್



 ಸುದ್ದಿಲೈವ್


01.08.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಹೇಗಿರಲಿದೆ ಎಂಬ ಮುನ್ಸೂಚನೆಯನ್ನ ಹವಮಾನ ಇಲಾಖೆ ಪ್ರಕಟಿಸಿದೆ. ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಮಧ್ಯಾಹ್ನ ನಂತರ, ಸಂಜೆ ಹಾಗೂ ರಾತ್ರಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.


ಮಲೆನಾಡು ಭಾಗಗಳಲ್ಲಿಯೂ ಸಂಜೆ ಅಥವಾ ರಾತ್ರಿ ಮಳೆಯ ಮುನ್ಸೂಚೆನೆ ಇದೆ. ಕೊಡಗು ಹಾಗೂ ಹಾಸನ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಚಿಕ್ಕಮಗಳೂರಿನ ಶಿೃಂಗೇರಿ, ಕುದುರೆಮುಖ, ಮೂಡಿಗೆರೆ ಭಾಗಗಳಲ್ಲಿ ಮಳೆ ಹೆಚ್ಚಾಗಿ ಸುರಿಯುವ ಮುನ್ಸೂಚನೆ ಇಧ. ಉಳಿದ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಶಿವಮೊಗ್ಗದ ಆಗುಂಬೆ, ತೀರ್ಥಹಳ್ಳಿ ಭಾಗಗಳಲ್ಲಿಯೂ ಹೆಚ್ಚಾಗಿ ಬೀಳುವ ನಿರೀಕ್ಷೆ ಇಧ , ಉಳಿದ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.


ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ತುಮಕೂರು, ದಾವಣಗೆರೆ, ಹಾವೇರಿ, ವಿಜಯಪುರ, ಕಲಬುರ್ಗಿ, ಬೀದರ್, ರಾಯಚೂರು, ಯಾದಗಿರಿ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಇರಲಿದೆ ಎಂದು ಹವಮಾನ ಇಲಾಖೆ ಮನ್ಸೂಚನೆ ನೀಡಿದೆ. 


ನಿನ್ನೆಯ ಮಳೆಯ ಅನಿರೀಕ್ಷಿತವಾಗಿತ್ತು. ಆಗಾಧ ಪ್ರಮಾಣದ ಮೋಡ ಹಾಗೂ ಅತಿ ಭಾರಿ ಮಳೆಗೆ ಬೇರೆಯದೇ ವೈಜ್ಞಾನಿಕ ಕಾರಣಗಳಿರಬಹುದು. ಸಾಮಾನ್ಯ ಮುಂಗಾರು ಆಗಿರಲಾರದು ಎಂದು ಹೇಳಲಾಗುತ್ತಿದೆ. 

ಈಗಿನಂತೆ ಆಗಷ್ಟ್ 2ರಿಂದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ. ಆಗಷ್ಟ್ 6ರಿಂದ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ (ಗುಡುಗು ಸಹಿತ ಇರಬಹುದು).


ಮುಂಗಾರು ದುರ್ಬಲ


ಹಿಂದೂಮಹಾಸಾಗರ ಹಾಗೂ ದಕ್ಷಿಣ ಅರಬ್ಬಿ ಸಮುದ್ರ ಗಮನಿಸುವಾಗ ಈ ಪ್ರಶ್ನೆ ಉದ್ಭವಿಸುತ್ತಿದೆ. ಮಾರುತಗಳು ಮಂದವಾಗಿ ದುರ್ಬಲಗೊಂಡತೆ ಗೋಚರಿಸುತ್ತಿದೆ.


ಇದನ್ನೂ ಓದಿ-https://www.suddilive.in/2024/07/blog-post_753.html

ಭದ್ರಾವತಿಯಲ್ಲಿ ನಾಲ್ಕು ಬಡಾವಣೆಗಳ ಮನೆಗಳು ಜಲಾವೃತ






ಸುದ್ದಿಲೈವ್/ಭದ್ರಾವತಿ


ಮಲೆನಾಡಿನ ಭಾಗದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಬಿಆರ್ ಪಿಯ ಭದ್ರಾ ಜಲಾಶಯ ಗರಿಷ್ಠ ಮಟ್ಟ ತಲುಪಿದೆ. ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದ್ದು, ಜಲಾಶಯದಲ್ಲಿ ಸದ್ಯ 184.5 ಅಡಿ ನೀರು ಸಂಗ್ರಹವಾಗಿದೆ. 


ಜಲಾಶಯಕ್ಕೆ 65 ಸಾವಿರ ಕ್ಯೂಸೆಕ್ ಒಳ ಹರಿವಿದ್ದು, ಜಲಾಶಯದಿಂದ 45 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರ ಬಿಡುತ್ತಿರುವ ಕಾರಣ ಭದ್ರಾವತಿ ನಗರದ ಹೊಸ ಸೇತುವೆ  ಮುಳುಗಡೆ ಆಗಿದೆ. 


ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರ ಬಿಡುತ್ತಿರುವ ಕಾರಣ ಭದ್ರಾವತಿ ನಗರದ ಹೊಸ ಸೇತುವೆ ಮುಳುಗಡೆ ಆಗಿದೆ. ಸೇತುವೆ ಮೇಲೆ ಭಾರಿ ಪ್ರಮಾಣದ ನೀರು ಹರಿದು ಹೋಗ್ತಿರುವ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಸ್ತೆಯ ಎರಡು ಕಡೆ ಬ್ಯಾರಿಕೇಡ್ ಹಾಕಿ ಪೊಲೀಸರು ಸಂಚಾರ ನಿರ್ಬಂಧ ವಿಧಿಸಿದ್ದಾರೆ. ಇನ್ನು ಸೇತುವೆ ಮೇಲೆ ನೀರು ಹರಿಯುತ್ತಿರುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ನಾಗರೀಕರು ಸೇತುವೆ ಬಳಿ ಧಾವಿಸುತ್ತಿದ್ದಾರೆ. 



ಸೇತುವೆ ಮೇಲೆ ಭಾರಿ ಪ್ರಮಾಣದ ನೀರು ಹರಿದು ಹೋಗ್ತಿರುವ ಪರಿಣಾಮ, ಭದ್ರಾವತಿ ನಗರದ ಕವಲಂದಿ, ಅಂಬೇಡ್ಕರ್ ‌ನಗರ, ಗೌಳಿ ನಗರ, ಎಕ್ಸಿನಾ ಕಾಲೋನಿ ಜಲಾವೃತಗೊಂಡಿವೆ. 4 ಬಡಾವಣೆಗಳಿಂದ ಸುಮಾರು 100 ಕ್ಕೂ ಅಧಿಕ ಮನೆಗಳಿಗೆ ನೀರು ತುಂಬಿಕೊಂಡಿದ್ದು, ಜಲಾವೃತಗೊಂಡ ಮನೆಗಳ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. 


ಭದ್ರಾವತಿ ನಗರದಲ್ಲಿ ಒಟ್ಟು 3 ಕಾಳಜಿ ಕೇಂದ್ರ ತೆರೆದಿದ್ದು, ಸದ್ಯ ಒಂದು ಕಾಳಜಿ ಕೇಂದ್ರದಲ್ಲಿ ಸುಮಾರು 32 ಕುಟುಂಬಗಳು ಆಶ್ರಯ ಪಡೆದಿವೆ. ಇನ್ನು ಸ್ಥಳಕ್ಕೆ ಶಾಸಕ ಸಂಗಮೇಶ್ವರ ಹಾಗು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಡ್ರೈನೇಜ್ ನೀರಿನಿಂದ ದೇವಸ್ಥಾನ ಜಲಾವೃತ-ಇಮಾಮ್ ಬಾಡಾದಲ್ಲಿ ಈಗ ರಾಜಾಕಾಲುವೆ ನೀರು ಹಿಂದಕ್ಕೆ ಹೊಡೆಯುತ್ತಿರುವ ಭೀತಿ

 

ಡ್ರೈನೇಜ್ ನೀರಿನಿಂದ ಕರಿರಾಯ ಕೆಂಚರಾಯ ದೇವಸ್ಥಾನದ ದೇವರು ಜಲಾವೃತ


ಸುದ್ದಿಲೈವ್/ಶಿವಮೊಗ್ಗ


ನದಿಯ ಅಪಾಯಮಟ್ಟದಲ್ಲಿ ಹರಿಯುತ್ತಿರುವುದರಿಂದ ರಾಜಕಾಲುವೆ ನೀರಿನಿಂದ ಡ್ರೈನೇಜ್ ನೀರು ವಾಪಾಸ್ ಹೊಡೆಯುತ್ತಿದೆ. ಪರಿಣಾಮ ಇಮಾಮ್ ಬಾಡಾ ನಿವಾಸಿಗಳು ಪರದಾಡುವಂತಾಗಿದೆ.


ಇಮಾಮ್ ಬಾಡಾ ರಸ್ತೆಯ ಮಗ್ಗಲಿಗೆ ಇರುವ ಕರಿರಾಯ ಕೆಂಚರಾಯ  ದೇವಸ್ಥಾನದ ಗರ್ಭಗುಡಿಯು ಒಳಗೆ  ಡ್ರೈನೇಜ್ ನೀರು ಹರಿಯುತ್ತಿದೆ. ದೇವರಿಗೆ ಡ್ರೈನೇಜ್ ನೀರು ಸುತ್ತು ಆವರಿಸಿಕೊಂಡಿದೆ. 



ಇದರ ಹಿಂಭಾಗದಲ್ಲಿರುವ ತಿರುಮಲ ಪ್ಲೇವುಡ್ ಸ್ಟೋರ್ ಡ್ರೈನೇಜ್ ನೀರಿನಿಂದ ಜಲಾವೃತಗೊಂಡಿದೆ. ನೀರು ದರ್ವಾಸನೆ ಹೊಡೆಯುತ್ತಿದೆ. ಈ ಕುರಿತು ಮಾತನಾಡಿರುವ ಮಾಲೀಕ ವಿಠಲ ಪ್ರತಿ ಮಳೆಗಾಲದಲ್ಲಿ ನದಿ ಅಪಾಯ ಮಟ್ಟದಲ್ಲಿ ಹರಿದರೆ ಡ್ರೈನೇಜ್ ನೀರು ವಾಪಾಸ್ ಹೊಡೆಯುತ್ತದೆ. 



ನಾಲ್ಕೈದು ದಿನದ ಹಿಂದೆ ನೀರು ಬಂದಿತ್ತು. ಆಗಲೂ ಪ್ರೇವುಡ್ ಕರ್ ಮೋಟಾರ್ ಗಳು ಸುಟ್ಟು ವೈಂಡಿಂಗ್ ಮಾಡಿಸಲಾಗಿತ್ತು. ಈಗ ಮತ್ತೆ ಈ ಪರಿಸ್ಥಿತಿ ನಿರ್ಮಾಣವಾಗಿದೆ ಒಂದು ಲಕ್ಷ ರೂ. ಪ್ಲೇವುಡ್ ಮತ್ತು ಮೋಟಾರು ಹಾಳಾಗಿದೆ.‌


ಸಧ್ಯಕ್ಕೆ ನದಿಯ ಒಳಹರಿವು ಇಳಿಮುಖವಾಗಿದೆ. ಸ್ಮಾರ್ಟ್ ಸಿಟಿಯ ಕಾಮಗಾರಿಯಿಂದ ರಾಜಕಾಲುವೆಯ ಬಳಿ ಇರುವ ಕುಡಿಯುವ ನೀರಿನ ಪೈಪ್ ಲೈನು ಸಹ ಜಲಾವೃತಗೊಂಡಿದೆ. ಸಧ್ಯಕ್ಕೆ ಪಾಲಿಮೆ ಬ್ಲೀಚಿಂಗ್ ಪೌಡರ್ ಹಾಕಿ ಹೋಗಿದ್ದಾರೆ.


ಈ ಕುರಿತು ಪಾಲಿಕೆ ಮಾಜಿ ಕಾರ್ಪರೇಟರ್ ಜಿಲಾನ್ ಸುದ್ದಿಲೈವ್ ಗೆ  ಮಾತನಾಡಿ ಇಮಾಮ್ ಬಾಡಾ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಮನೆ ಬಿದ್ದವರಿಗೆ ಈ ಹಿಂದೆ ಬಿಜೆಪಿ ಸರ್ಕಾರ ನೀಡುತ್ತಿದ್ದ ಐದು ಲಕ್ಷ ರೂ ಪರಿಹಾರ ಮತ್ತು ಭಾಗಶಃ ಮನೆಗಳಿಗೆ 1.20 ಸಾವಿರ ಕೊಡಬೇಕು. ಡ್ರಯನೇಜ್ ನೀರು ಸರಿಪಡಿಸಬೇಕೆಂದಿದ್ದಾರೆ.


ಇದನ್ನೂ ಓದಿ-https://www.suddilive.in/2024/07/blog-post_549.html

ನಾಳೆ ಲಿಂಗನಮಕ್ಕಿ ಜಲಾಶಯದಿಂದ ನದಿಗೆ ನೀರು



ಸುದ್ದಿಲೈವ್/ಜೋಗ


ಲಿಂಗನಮಕ್ಕಿ ಜಲಾಶಯ 1812.65 ಕ್ಯೂಸೆಕ್ ನೀರು ಹರಿದು ಬರುತ್ತಿರುವ ಬೆನ್ನಲ್ಲೇ ನದಿಯ ಪಾತ್ರದ ಜನರಿಗೆ ಅಲರ್ಟ್ ಮಾಡಲಾಗಿದೆ. 


ಇದರ ಬೆನ್ನಲ್ಲೇ ನಾಳೆ ಆ.01 ರಂದು ನದಿಗೆ  ನೀರು ಹರಿಸಲಾಗುತ್ತಿದೆ. ಬೆಳಿಗ್ಗೆ 10 ಗಂಟೆಗೆ ಜಲಾಶಯದಿಙದ ನದಿಗೆ ನೀರು ಹರಿಸಲಾಗುತ್ತಿದೆ. 


ಲಿಂಗನಮಕ್ಕಿ ಜಲಾಶಯಕ್ಕೆ 82 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಜಲಾಶಯ 1819 ಅಡಿ ಗರಿಷ್ಠ ಮಟ್ಟವನ್ನ ವೇಗವಾಗಿ ತುಲುಪುವುದರಿಂದ ನಾಳೆ 10 ಗಂಟೆಗೆ ನದಿಗೆ ನೀರು ಹರಿಸಲಾಗುತ್ತಿದೆ. 


ನದಿಪಾತ್ರದ ಜನ ತಮ್ಮ‌ಜಾನುವಾರುಗಳನ್ನ ಸುರಕ್ಷಿತ ಸ್ಥಳಕ್ಕೆ ಜಾನುವಾರುಗಳನ್ನ ಕರೆದು ಕರೆದುಕೊಂಡು ಹೋಗಲು ಅಙತಿಮ ಅಲರ್ಟ್ ಸಹ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ನೀಡಿದೆ.‌ 

ಇದನ್ನೂ ಓದಿ-https://www.suddilive.in/2024/07/blog-post_819.html