ಲಿಂಗನಮಕ್ಕಿ ಜಲಾಶಯ |
ಸುದ್ದಿಲೈವ್/ಶಿವಮೊಗ್ಗ
ಇಡೀ ರಾಜ್ಯಕ್ಕೆ ಶೇ.30 ರಷ್ಟು ವಿದ್ಯುತ್ ಪೂರೈಕೆ ಮಾಡುವ ಲಿಂಗನಮಕ್ಕಿ ಜಲಾಶಯದಿಂದ ನದಿಗೆ ನೀರು ಹರಿಸಲಾಗಿದೆ. ಮುರು ಗೇಟ್ ಮೂಲಕ ಜಲಾಶಯಕ್ಕೆ 10 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
ಜಲಾಶಯಕ್ಕೆ 53 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1819 ಸಾಮರ್ಥ್ಯದ ಜಲಾಶಯ ಇಂದು 1814 ಅಡಿ ತುಂಬಿದ್ದು, ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
ಜಲಾಶಯದಿಂದ ನದಿಗೆ ನೀರು ಹರಿಸುವ ಮುನ್ನ ಗೇಟ್ ಗಳಿಗೆ ಪೂಜೆ ಸಲ್ಲಿಸಲಾಯಿತು. ಜಲಾಶಯದಿಂದ ನೀರು ಹರಿಸುವುದನ್ನ ನೋಡಲು ಜನ ಹೆಚ್ಚಿನ ಸಂಖ್ಯೆಯಲ್ಲಿದ್ದರು. ನೀರು ಧುಮುಕುವುದನ್ನ ನೋಡಿ ಜನ ಹರ್ಷೋದ್ಗಾರ ಮುಗಿಲು ಮುಟ್ಟಿದೆ.
ಲಿಂಗನಮಕ್ಕಿಗೆ ಬಾಗಿನ ಭಾಗ್ಯವಿಲ್ಲ
ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಅಧ್ಯಕ್ಷರು ಯಾವಾಗಲೂ ರಾಜ್ಯದ ಮುಖ್ಯಮಂತ್ರಿಗಳುವಾಗಿರುತ್ತಾರೆ. ಆದರೆ ಲಿಂಗನಮಕ್ಕಿಗೆ ಬಾಗಿನ ಅರ್ಪಿಸಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ವಾಡಿಕೆ ಮಾತುಗಳು ಇವರುಗಳನ್ನ ಅಡ್ಡಗಟ್ಟಿವೆ.
ಇತಿಹಾಸವಿದೆ.
ಯಾರು ರಾಜ್ಯದಲ್ಲಿ ಅಧಿಕಾರದಲ್ಲಿರುತ್ತಾರೆ ಅವರುಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ಇರುವುದರಿಂದ ಅದರಂತೆ ಎರಡು ಬಾರಿ ನಡೆದಿದೆ. ಇತ್ತೀಚನೆ 20 ವರ್ಷದಲ್ಲಿ ಒಬ್ಬ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಸ್ಥಾನ ಕಳೆದುಕೊಂಡ ಉದಾಹರಣೆ ಇದೆ. ಹಾಗಾಗಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಮುಂದಾಗಲ್ಲ.
ಸಿಎಂ ಅವರು ಬಾಗಿನ ಅರ್ಪಿಸದಿದ್ದರೆ ಅವರ ಕೆಳಗೆ ಬರುವ ಜಿಲ್ಲಾ ಉಸ್ತುವರಿ ಸಚಿವರು ಬಾಗಿನ ಅರ್ಪಿಸುವ ಪ್ರೋಟೋಕಾಲ್ ಇದೆ. ಆದರೆ ಉಸ್ತುವಾರಿ ಸಚಿವರೂ ಸಹ ಬಾಗಿನ ಅರ್ಪಿಸಲು ಬಂದಿಲ್ಲ.
ಆದರೆ ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ ಅವರಿಗೆ ಸಾಗರದ ಐಬಿಯಲ್ಲೇ ನಿರ್ದೇಶಿಸಲಾಗಿತ್ತು. ಲಿಂಗನಮಕ್ಕಿಗೆ ಬಾಗಿನ ಅರ್ಪಿಸಬಾರದು ಎಂದು. ಈ ಹಿನ್ನಲೆಯಲ್ಲಿ ಅವರು ಸಹ ಬಂದು ಜಲಾಶಯದಿಂದ ನೀರು ಹರಿಸಿದ್ದನ್ನು ನೋಡಿ ವಾಪಾಸ್ ಆಗಿದ್ದಾರೆ.
ಜಲಾಶಯದ ಸಂಪ್ರದಾಯ ಮುರಿಯಲಾಯಿತಾ?
1819 ಸಾಮರ್ಥ್ಯದ ಜಲಾಶಯಕ್ಕೆ ಸಧ್ಯಕ್ಕೆ 1814 ಅಡಿ ನೀರು ಸಂಗ್ರಹವಾಗಿದೆ. ಯಾವಾಗಲೂ 1816 ತುಂಬಿದ ನಂತರವೇ ಜಲಾಶಯದಿಂದ ನೀರು ಹರಿಸಲಾಗುತ್ತದೆ. ಆದರೆ 1814 ಅಡಿ ತುಂಬಿದ ತಕ್ಷಣವೇ ನೀರು ಹರಿಸಲಾಗುತ್ತಿರುವುದು ಸಂಪ್ರದಾಯವನ್ನ ಮುರಿಯಲಾಯಿತಾ ಎಂಬ ಅನುಮಾನಕ್ಕೆ ಈಡಾಗಿದೆ.
ಈ ರೀತಿ ನಡೆದುಕೊಳ್ಳಲು ಒಂದು ಕಾರಣವಿದೆ. ಕರಾವಳಿ ಭಾಗದ ಜನಪ್ರತಿನಿಧಿ ಹಾಗೂ ಸಚಿವರಾದ ಮಂಕಾಳು ವೈದ್ಯರು ಒಂದೇ ಏಟಿಗೆ 50 ಸಾವಿರ ಕ್ಯೂಸೆಕ್ ನೀರು ಹರಿಸಿದರೆ ಘಟ್ಟದ ಕೆಳಗೆ ಪ್ರವಾಹ ನಿರ್ಮಾಣವಾಗುತ್ತದೆ ಎಂಬ ಕಾರಣಕ್ಕೆ ಹಾಗೂ ಲಿಂಗನಮಕ್ಕಿಯ ಜಲಾಯನ ಪ್ರದೇಶದಲ್ಲಿ ಮಳೆ ಇರುವುದರಿಂದ ಸಂಪ್ರದಾಯ ಮುರಿಯಲಾಗಿದೆ ಎಂಬ ಮಾಹಿತಿ ಕೇಳಿಬರುತ್ತಿದೆ.
ಇದನ್ನೂ ಓದಿ-https://www.suddilive.in/2024/08/blog-post_95.html