ಗುರುವಾರ, ಆಗಸ್ಟ್ 1, 2024

ಲೈಟಿಂಗ್ ನಲ್ಲಿ ಲಿಂಗನಮಕ್ಕಿ ಜಗಮಗ-9 ಗೇಟ್ ಎತ್ತರಿಸಿ ನದಿಗೆ ನೀರು

 

ಲಿಂಗನಮಕ್ಕಿ ಜಲಾಶಯ

ಸುದ್ದಿಲೈವ್/ಲಿಂಗನಮಕ್ಕಿ


ಲಿಂಗನಮಕ್ಕಿ ಜಲಾಶಯದಿಂದ ಹೆಚ್ಚುವರಿಯಾಗಿ ನೀರು ಬಿಡಲಾಗಿದೆ. 11 ಗೇಟಿನಲ್ಲಿ 9 ರೇಡೊಯಲ್ ಗೇಟನ್ನ ಎತ್ತರಿಸಿ ಸುಮಾರು 18 ಸಾವಿರ ಕ್ಯೂಸೆಕ್ ನೀರನ್ನ ನದಿಗೆ ನದಿಗೆ ಬಿಡಲಾಗಿದೆ. 


ಸುದ್ದಿಲೈವ್ ಗೆ ಲಿಂಗನಮಕ್ಕಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಇಂದು ರಾತ್ರಿ 9 ಗಂಟೆಗೆ ಮಾಹಿತಿ ನೀಡಿದ್ದು, ಒಳಹರಿವು ಹೆಚ್ಚಾದ ಕಾರಣ, ನೀರನ್ನ ನದಿಗೆ ಬಿಡಲಾಗಿದೆ. 54 ಸಾವಿರ ಕ್ಯೂಸೆಕ್ ನೀರಿನ‌ ಒಳಹರಿವಿದೆ. 



ಇಂದು ಬೆಳಿಗ್ಗೆ 1814 ಅಡಿ ನೀರಿತ್ತು. ಮುಂಜಾನೆ ವೇಳೆಗೆ ಈ ಅಡಿ ಹೆಚ್ಚಾಗಲಿದೆ. ಅಧಿಕಾರಿಗಳು ಒಳಹರಿವಿನ‌ ಹೆಚ್ಚು ಗಮನ ಇರಿಸಿದ್ದಾರೆ. ಇಂದು ಬೆಳಿಗ್ಗೆ ಮೂರು ಗೇಟಿನಿಂದ 10  ಸಾವಿರ ಕ್ಯೂಸೆಕ್ ನೀರು ಹರಿಸಲಾಗಿತ್ತು. ಸಂಜೆಗೆ ಇದರ ಒಳಹರಿವು ಹೆಚ್ಚಾಗಿ 9 ಗೇಟನ್ನ ಒಪನ್ ಮಾಡಲಾಗಿದೆ.


ಸಂಜೆಯ ವೇಳೆಗೆ ಜಲಾಶಯಕ್ಕೆ ನೀರು ಹರಿಸಲಾಗಿದ್ದು ಜಲಾಶಯಕ್ಕೆ ಲೈಟಿಂಗ್ ಅಳವಡಿಸಿದ್ದು ಇಂದು ಮನಮೋಹಕವಾಗಿ ಕಾಣಿಸುತ್ತಿದೆ. 

ಇದನ್ನೂ ಓದಿ-https://www.suddilive.in/2024/08/blog-post_72.html

ಶಿಮೂಲ್ ಚುನಾವಣೆಗೆ ಇವತ್ತು ಎಷ್ಟು ಜನ ನಾಮಪತ್ರ ಸಲ್ಲಿಸಿದ್ದಾರೆ?



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಹಾಲು ಒಕ್ಕೂಟದ ಆಡಳಿತ ಮಂಡಳಿ ಸಾಮಾನ್ಯ ಸದಸ್ಯರ ಸಭೆಗೆ ಒಬ್ವರೇ ನಾಮಪತ್ರ ಸಲ್ಲಿಸಿದ್ದಾರೆ. 


ಆಗಸ್ಟ್‌ 6ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.  ಆ.8ರಂದು ನಾಮಪತ್ರ ವಾಪಸ್‌ ಪಡೆಯಬಹುದಾಗಿದೆ.  ಆ.14ರಂದು ಮತದಾನ ನಡೆಯಲಿದೆ. ಬಳಿಕ ಮತ ಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ. ಚುನಾವಣ ಅಧಿಕಾರಿಯಾಗಿ ತಹಶೀಲ್ದಾರ್‌ ಬಿ.ಎನ್‌.ಗಿರೀಶ್‌ ಅವರನ್ನು ನೇಮಿಸಲಾಗಿದೆ.


ನಿನ್ನೆ 14 ಜನ ನಾಮಪತ್ರ ಸಲ್ಲಿಸಲಾಗಿತ್ತು. ಇಂದು ಬುಳ್ಳಾಪುರ ಹಾಲು ಉತ್ಪಾದಕರ ಸಂಘದ  ಹೆಚ್ ಬಿ ದಿನೇಶ್ ಬುಳ್ಳಾಪುರನಾಮಪತ್ರ ಸಲ್ಲಿಸಿದ್ದಾರೆ.‌


ಇದನ್ನೂ ಓದಿ-https://www.suddilive.in/2024/08/blog-post_76.html

ಬಿಜೆಪಿ ಪಾದಯಾತ್ರೆಗೆ ಶಿವಮೊಗ್ಗದಿಂದ ಎಷ್ಟು ಜನ ಪಾಲ್ಗೊಳ್ಳಲಿದ್ದಾರೆ ಗೊತ್ತಾ?



ಸುದ್ದಿಲೈವ್/ಶಿವಮೊಗ್ಗ


ನಗರದ ದೈವನಜ್ಞ ಕಲ್ಯಾಣ ಮಂಟಪದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಮೋಹನ್ ರೆಡ್ಡಿ ನೇತೃತ್ವದಲ್ಲಿ ನಗರ ಕಾರ್ಯಕಾರಣಿ ಸಬೆ ನಡೆದಿದೆ. 


ಸಭೆಯಲ್ಲಿ ವಾಲ್ಮೀಕಿ ಮತ್ತು ಮೂಡಾ ಹಗರಣದಲ್ಲಿ ರಾಜ್ಯ ಸರ್ಕಾರ ನಡೆದುಕೊಂಡ ರೀತಿಯನ್ನ‌ ಖಂಡಿಸಲಾಯಿತು. ಅಲ್ಲದೆ ಮೂಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಕುಟುಂಬ ನೇರ ಪಾಲ್ಗೊಳ್ಳುವಿಕೆ ಹಾಗೂ ವಾಲ್ಮೀಕಿ ಹಗರದಲ್ಲಿಯೂ ಪಾಲುಗಾರಿಕೆ ಹೊಂದಿರುವುದರಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಖಂಡನಾನಿರ್ಣಯ ತೆಗೆದುಕೊಳ್ಳಲಾಯಿತು. 


ಶನಿವಾರ  ಬಿಜೆಪಿಯು ಮೈಸೂರಿನಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಪಾದಯಾತ್ರೆಗೆ ಸಿದ್ದತೆ ನೋಡಿಕೊಳ್ಳಲು ನಾಳೆ 160 ಜನ‌ ಮೈಸೂರಿಗೆ ತೆರಳಲಿದ್ದಾರೆ. 


ಶನಿವಾರ ನಡೆಯಲಿರುವ ಈ ಪಾದಯಾತ್ರೆಗೆ ಬಿಜೆಪಿ ಶಿವಮೊಗ್ಗ ಜಿಲ್ಲೆಯ 3 ಸಾವಿರ ಜನ ಭಾಗಿಯಾಗುವ ನಿರೀಕ್ಷೆ ಇದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಮೇಘರಾಜ್ ನೇತೃತ್ವದಲ್ಲಿ ಪಾದಯಾತ್ರೆಯಲ್ಲಿ ಶಿವಮೊಗ್ಗ ನಗರದಿಂದ ಒಂದು ಸಾವಿರ ಉಳಿದ ತಾಲೂಕಿನಿಂದ 2 ಸಾವಿರ ಜನ  ಕಾರ್ಯಕರ್ತರು ಭಾಗಿಯಾಗಲಿದ್ದಾರೆ. 


ಸಭೆಯಲ್ಲಿ ನಗರ ಶಾಸಕ ಚೆನ್ನಬಸಪ್ಪ, ಬಿಜೆಪಿ ಮುಖಂಡರಾದ ಹರಿಕೃಷ್ಣ, ಜಗದೀಶ್, ಸುರೇಖ ಮುರಳೀಧರ್ ಮಹಾಶಕ್ತಿಕೇಂದ್ರದ ಐದು ಜನರ ತಂಡ, ವಾರ್ಡ್ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಬೂತ್ ಅಧ್ಯಕ್ಷರು,ಕಾರ್ಯದರ್ಶಿಗಳು, ಶಕ್ತಿಕೇಂದ್ರದ ಪ್ರಮುಖರು ಭಾಗಿಯಾಗಿದ್ದರು. 

ಇದನ್ನೂ ಓದಿ-https://www.suddilive.in/2024/08/43.html

ಶರತ್ ಕಲ್ಯಾಣಿಯಿಂದ 43ರ ಮಹಿಳೆಯ ಮೇಲೆ ನಡೆಯಿತೆ...? ಅತ್ಯಾಚಾರ!?

 


ಸುದ್ದಿಲೈವ್/ಶಿವಮೊಗ್ಗ


ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಕಾರ್ಯಕರ್ತ ಶರತ್ ಕಲ್ಯಾಣಿಯ ವಿರುದ್ಧ ಮಹಿಳೆಯೋರ್ವಳು ಮದುವೆಯಾಗಿ ನಂಬಿಸಿ ವಂಚಿಸುರಯವ ಪ್ರಕರಣ ದಾಖಲಾಗಿದೆ.


ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಪ್ರಮುಖರಾದ  ಶರತ್ ಕಲ್ಯಾಣಿ ಖಾಸಗಿ ಕಂಪನಿಯಲ್ಲಿ ಕೆಲಸ ಮಢುವ 43 ವಯಸ್ಸಿನ ಮಹಿಳೆಯನ್ನ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಹೊಂದಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.


ಆಗಸ್ಟ್ 21, 2023ರಿಂದ ಶರತ್ ಕಲ್ಯಾಣಿ ಪರಿಚಯವಿದ್ದು, ತನಗೆ ಮದುವೆಯಾಗುವುದನ್ನ ಮುಚ್ಚಿಟ್ಟು, ನಾನಿನ್ನೂ ಅವಿವಾಹಿತ ನಿನ್ನನ್ನ ಪ್ರೀತಿಸುತ್ತಿದ್ದೇನೆ. ಬಾಳುಕೊಡುವುದಾಗಿ ನಂಬಿಸಿ ಬೇಡವೆಂದರೂ ದೈಹಿಕ ಸಂಪರ್ಕ ಬೆಳೆಸಿರುವುದಾಗಿ  ಮಹಿಳೆ ದೂರಿನಲ್ಲಿ ದೂರಿದ್ದಾರೆ.


ಏಳೆಂಟು ತಿಂಗಳಿಂದ ನಿರಂತರ ಸಂಪರ್ಕದಲ್ಲಿದ್ದ ಶರತ್ ಮನೆಕಡೆ ಸಮಸ್ಯೆ ಇದೆ.ಸಮಸ್ಯೆ ಬಗೆಹರಿದ ಮೇಲೆ ಮದುವೆಯಾಗುವುದಾಗಿ ನಂಬಿಸಿದ್ದಾನೆ. ಈಗ ಸಹಾಯ ಮಾಡು ಎಂದು ನಾಲ್ಕು ಲಕ್ಷ ರೂಗಳನ್ನ ವಿವಿಧ ಹಂತದಲ್ಲಿ ಪಡೆದಿದ್ದಾರೆ ಎನ್ನಲಾಗಿದೆ.


ಮದುವೆಗೆ ಮಹಿಳೆ ಬಿಗಿಪಟ್ಟು ಹಿಡಿದಾಗ ಆಕೆಯ ಮನೆಕಡೆ ಹೋಗುವುದನ್ನ ಶರತ್ ನಿಲ್ಲಿಸಿದ್ದಾರೆ. ಆತನ ಮನೆ ಹುಡುಕಿಕೊಂಡು ಹೋದ ಮಹಿಳೆಗೆ ಅವ್ಯಚ್ಯ ಶಬ್ದಗಳಿಂದ ನಿಂದಿಸಿ ಮತ್ತೊಮ್ಮೆ ಮನೆಕಡೆ ಬಂದರೆಕೊಲೆ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಮಹಿಳೆ ದೂರಿದ್ದಾರೆ.


ಮದುವೆಯಾಗುವುದಾಗಿ ನಂಬಿಸಿ ಬಲವಂತಾಗಿ ದೈಹಿಕ ಸಂಪರ್ಕಹೊಂದಿ, ಲಕ್ಷಾಂತರ ರೂ ಹಣವನ್ನ ಪಡೆದು ಕೊಲೆಬೆದರಿಕೆ ಹಾಕುರುವ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ವಾರದಿಂದ ಶರತ್ ಕಲ್ಯಾಣಿ ತಲೆಮರೆಸಿಕೊಂಡಿರುವುದಾಗಿ ತಿಳಿದು ಬಂದಿದೆ. 


ಈ ಹಿಂದೆ ಶರತ್ ವಿರುದ್ಧ ದೂರು ದಾಖಲು


ಈ ಹಿಂದೆ ಸೆನ್ ಪೊಲೀಸ್ ಠಾಣೆಯಲ್ಲಿ ಶರತ್ ವಿರುದ್ಶ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ನಾಯಕರ ವಿಡಿಯೋಗೆ  ಅವಹೇಳನಾಕಾರಿ ಅಡಿಯೊ ಮಾಡಿ ಹರಿಬಿಟ್ಟ ಪ್ರಕರಣದಲ್ಲಿ ದೂರು ದಾಖಲಾಗಿತ್ತು.

ಇದನ್ನೂ ಓದಿ-https://www.suddilive.in/2024/08/blog-post_70.html

ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ



ಸುದ್ದಿಲೈವ್/ಭದ್ರಾವತಿ


ಭದ್ರಾ ಮೇಲ್ದಂಡೆಯಿಂದ ಚಿತ್ರದುರ್ಗದ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಲು ನಿರ್ಧರಿಸಲಾಗಿದ್ದು, ಕಾಲುವೆ ಮತ್ತು ಹಳ್ಳದ ಪಾತ್ರದ ಜನ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ


ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಅಡಿಯಲ್ಲಿ ಬರುವ ಭದ್ರಾ ಮೇಲ್ದಂಡೆ ಯೋಜನೆ ಕಾಲುವೆಯ ಭದ್ರಾ ಜಲಾಶಯದಿಂದ ಪ್ರಾರಂಭವಾಗಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ, ಲಿಂಗದಹಳ್ಳಿ, ತರೀಕೆರೆ ಕಸಬಾ, ಅಮೃತಾಪುರ,  ಅಜ್ಜಂಪುರ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಹಾದು ಹೋಗಿದ್ದು, ಸರ್ಕಾರದ ನಿರ್ದೇಶನದಂತೆ ದಿ: 31-07-2024 ರಿಂದ ಶಾಂತಿಪುರ ಪಂಪ್‌ಹೌಸ್-1, 



ಜಂಭದಹಳ್ಳ ಅಕ್ವೆಡಕ್ಟ್, ತರೀಕೆರೆ ರೈಲು ಸೇತುವೆ, ಬೆಟ್ಟತಾವರೆಕೆರೆ ಪಂಪ್‌ಹೌಸ್-2 ಅಜ್ಜಂಪುರ ಸುರಂಗದ ಮಾರ್ಗವಾಗಿ ಹೆಬ್ಬೂರು ಗ್ರಾಮದ ಹತ್ತಿರವಿರುವ ವೈ-ಜಂಕ್ಷನ್‌ನಿಂದ  ಹೆಬ್ಬೂರು, ಕಾಟಿನಗೆರೆ, ಬೆಣಕುಣಸೆ, ಮುಗಳಿ, ಬೇಗೂರು, ಆಸಂದಿ, ಹಡಗಲು, ಕಲ್ಕೆರೆ, ಹೆಚ್.ತಿಮ್ಮಾಪುರ, ಕಲ್ಲಹಳ್ಳಿ, ಚಿಕ್ಕಬಳ್ಳೇಕೆರೆ, ಹನುಮನಹಳ್ಳಿ, ಚೌಳಹಿರಿಯೂರು ಮತ್ತು ಹಿ. ತಿಮ್ಮಾಮರ ಗ್ರಾಮಮಗಳ ಮಾರ್ಗವಾಗಿ ವೇದಾವತಿ ನದಿಗೆ ಸೇರುವ ಹಳ್ಳದ ಮುಖಾಂತರ ವಾಣಿ ವಿಲಾಸ ಸಾಗರಕ್ಕೆ ನೀರನ್ನು ಹರಿಸಲಾಗಿದೆ.


ಆದ್ದರಿಂದ, ಸಾರ್ವಜನಿಕರ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಕಾಲುವೆ ಹಾಗೂ ಹಳ್ಳದ ಪಾತ್ರಗಳಲ್ಲಿ ಸಾರ್ವಜನಿಕರು ತಿರುಗಾಡುವುದು, ಜನ ಜಾನುವಾರುಗಳನ್ನು ಕಾಲುವೆ ಒಳಗಡೆ ಬಿಡುವುದು ಹಾಗೂ ಇತರೆ ಚಟುವಟಿಕೆಗಳನ್ನು ಮಾಡುವುದು ನಿಷೇಧಿಸಲಾಗಿದೆ. 


ಈ ಸೂಚನೆಗಳನ್ನು ಉಲ್ಲಂಘಿಸುವುದು, ನಿಗಮದ ಆಸ್ತಿಯಾದ ನೀರಾವರಿ ಕಾಲುವೆ, ಕಟ್ಟಡಗಳನ್ನು ಜಖಂಗೊಳಿಸುವುದು, ಅನಧಿಕೃತವಾಗಿ ಪಂಪ್‌ಸೆಟ್‌ಗಳನ್ನು ಅಳವಡಿಸಿ ನೀರನ್ನು ಎತ್ತುವುದು ನೀರಾವರಿ ಕಾಯ್ದೆಯ ವಿವಿಧ ನಿಯಮಗಳ ಪ್ರಕಾರ ಕಾನೂನು ಬಾಹಿರಬಾಗಿದ್ದು, ಇದನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಾರ್ವಜನಿಕರ ಗಮನಕ್ಕೆ  ತರಲಾಗಿದೆ ಎಂದು ಸುಪರಿಂಟೆಂಡಿಂಗ್ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ಸಾಗರ ಎಆರ್‌ಟಿಓ ಕಚೇರಿಗೆ ಲೋಕಾಯುಕ್ತ ಅನಿರೀಕ್ಷಿತ ಭೇಟಿ



ಸುದ್ದಿಲೈವ್/ಸಾಗರ


ಶಿವಮೊಗ್ಗ ಕರ್ನಾಟಕ ಲೋಕಾಯುಕ್ತ, ಎಂ.ಹೆಚ್ ಪೊಲೀಸ್ ಅಧೀಕ್ಷಕರು, ಮಂಜುನಾಥ್ ಚೌದರಿರವರು ಪೊಲೀಸ್ ನಿರೀಕ್ಷಕರಾದ ವೀರಬಸಪ್ಪ ಎಲ್ ಕುಸಲಾಪುರ ಮತ್ತು ಸಿಬ್ಬಂದಿಗಳೊAದಿಗೆ ಜುಲೈ 31 ರಂದು ಸಾಗರ ಎ.ಆರ್.ಟಿ.ಓ ಕಛೇರಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಕೈಗೊಂಡಿರುತ್ತಾರೆ.


ಈ ಸಂದರ್ಭದಲ್ಲಿ ಸಾಗರ ಎ.ಆರ್.ಟಿ.ಓ ಕಛೇರಿಯ ಎ.ಆರ್.ಟಿ.ಓ ವೀರೇಶ್ ಡಿ.ಹೆಚ್ ಮತ್ತು ಐ.ಎಂ.ವಿ ಇನ್‌ಪೆಕ್ಟರ್ ವಾಸುದೇವ, ಕಛೇರಿ ಅಧೀಕ್ಷಕರು, ಸಿಬ್ಬಂದಿಯವರು ಮತ್ತು ಡಿಜಿಟಲ್ ಕಾರ್ಡ್ ಪ್ರಿಂಟಿAಗ್ ಸಿಬ್ಬಂದಿಯವರು ಹಾಜರಿದ್ದು, ಸಿಬ್ಬಂದಿಗಳ ಹಾಜರಾತಿ ಮಸ್ತಕ, ಕ್ಯಾಷ್ ಡಿಕ್ಲರೇಷನ್, ಚಲನವಲನ ವಹಿ, ದಸ್ತಾವೇಜುಗಳ ರಿಜಿಸ್ಟರ್‌ಗಳ, ಸಾರಥಿ ಮತ್ತು ವಾಹನ ತಂತ್ರಾAಶವನ್ನು ಪರಿಶೀಲಿಸಿ ಎಲ್.ಎಲ್.ಆರ್., ಡಿ.ಎಲ್., ಎಫ್.ಸಿ., ಹೊಸ ವಾಹನಗಳ ನೊಂದಣಿ, ವಾಹನಗಳ ವರ್ಗಾವಣೆ, 


ದಂಡವಸೂಲಿ, ಡಿಜಿಟಲ್ ಕಾರ್ಡ್ ಪ್ರಿಂಟಿAಗ್, ಆರ್.ಸಿ. ಕಾರ್ಡ್ ವಿತರಣೆ ಮತ್ತು ಸಕಾಲ ಯೋಜನೆಯಡಿಯಲ್ಲಿ ಬಾಕಿ ಇರುವ ಅರ್ಜಿಗಳಿಗೆ ಸಂಬAದ ಪಟ್ಟ ದಾಖಲಾತಿಗಳನ್ನು ಪರಿಶೀಲಿಸಿದ್ದು, ಪರಿಶೀಲನಾ ಸಮಯದಲ್ಲಿ ಕಂಡು ಬಂದ ನ್ಯೂನ್ಯತೆಗಳ ಬಗ್ಗೆ ಎ.ಆರ್.ಟಿ.ಓ ವೀರೇಶ್.ಡಿ.ಹೆಚ್ ರವರಿಗೆ ಸ್ಥಳದಲ್ಲಿಯೇ ಸೂಚನೆಗಳನ್ನು ನೀಡಲಾಗಿದ್ದು, ನ್ಯೂನ್ಯತೆಗಳ ಬಗ್ಗೆ ಕ್ರಮವಹಿಸಿ ಪಾಲನಾ ವರದಿಯನ್ನು ಸಲ್ಲಿಸುವಂತೆ ಸೂಚನೆಗಳನ್ನು ನೀಡಿರುತ್ತಾರೆ.


ಇದನ್ನೂ ಓದಿ -https://www.suddilive.in/2024/08/blog-post_48.html

ನಾನು ಸಚಿವಸ್ಥಾನದ ಆಕಾಂಕ್ಷಿಯಲ್ಲ-ಬೇಳೂರು



ಸುದ್ದಿಲೈವ್/ಶಿವಮೊಗ್ಗ


ಕಳೆದ ವರ್ಷ ಬರಗಾಲ ಇತ್ತು. ಈ ಬಾರಿ ಉತ್ತಮವಾಗಿ ಮಳೆಯಾಗುತ್ತಿದೆ. ಕಳೆದ ವರ್ಷ ಕುಡಿಯುವ ನೀರಿನ‌ ಪೂರೈಯ ಬಗ್ಗೆ ಆತಂಕ ಇತ್ತು. ಈ ವರ್ಷ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿ ನದಿಗೆ ನೀರು ಹರಿಸಲಾಗಿದೆ ಎಙದು ಶಾಸಕ ಹಾಗೂ ಕರಗನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ತಿಳಿಸಿದರು. 


ಕಾರ್ಗಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು,  ಆದರೆ ಈ ಬಾರಿ ಆ ಆತಂಕ‌ ಇಲ್ಲ. ಚೆನ್ನಾಗಿ ಮಳೆಯಾದ ಹಿನ್ನೆಲೆಯಲ್ಲಿ ಸಾಕಷ್ಟು ಹಾನಿಯಾಗಿದೆ. ಈ ಬಾರಿ ಮೂರು ಕ್ರಸ್ಟ್‌ ಗೇಟ್ ಮೂಲಕ ಶರಾವತಿ ನದಿಗೆ 10 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ. ೧ ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ನದಿಪಾತ್ರದ ಸುಮಾರು 2 ಸಾವಿರ ಮನೆಗಳು ಮುಳುಗುವ ಸಾಧ್ಯತೆ ಇದೆ ಎಂದು ಆತಂಕವ್ಯಕ್ತಪಡಿಸಿದರು. 


ಒಳ‌ ಹರಿವು ನೋಡಿಕೊಂಡು ನೀರು ಹರಿಸಲಾಗುತ್ತದೆ. ಜೋಗ ಜಲಾಶಯದ ಬಳಿ ಪ್ರವಾಸೋದ್ಯಮ‌ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇವಲ ಯೋಜನೆ ರೂಪಿಸಲಾಗಿತ್ತು. ಆದರೆ ಯಾವುದೇ ಹಣ ಮಂಜೂರು ಆಗಿರಲಿಲ್ಲ. ನಮ್ಮ ಕಾಂಗ್ರೆಸ್ ಸರ್ಕಾರ‌ ಅಧಿಕಾರಕ್ಕೆ ಬಂದ ನಂತರ 30 ಕೋಟಿ ಬಿಡುಗಡೆ ಆಗಿದೆ ಎಂದರು. 


ಜೋಗ ರಾಮೋಜಿರಾವ್ ಫಿಲ್ಮ್ ಸಿಟಿ ರೀತಿ ಅಭಿವೃದ್ಧಿ


ಜೋಗವನ್ನ ರಾಮೋಜಿರಾವ್ ಫಿಲ್ಮ್ ಸಿಟಿ ಮಾದರಿ ಅಭಿವೃದ್ಧಿ ಪಡಿಸುವ ಆಲೋಚನೆ ಇದೆ. ಇದಕ್ಕಾಗಿ ನಾನು ಕೆಲವು ಸ್ಥಳಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದೇನೆ. ಜೋಗದ ಅಭಿವೃದ್ಧಿಯಿಂದ ಪರಿಸರಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಪರಿಸರಕ್ಕೆ ಹಾನಿ ಆಗದ ರೀತಿಯಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದರು. 


ಇನ್ನೊಂದು ವರ್ಷದಲ್ಲಿ ಈ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಪ್ರವಾಸಿಗರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ವಹಿಸಲಾಗುತ್ತದೆ. ಆಗುಂಬೆ ಘಾಟಿಯ ಬಳಿ‌ ಟನಲ್ ನಿರ್ಮಾಣ ಪ್ರಸ್ತಾಪ ಸರಿ ಇದೆ. ಇದರಿಂದ ಘಾಟಿ ಕುಸಿತದಂತಹ  ಪ್ರಕರಣ ತಪ್ಪುತ್ತದೆ. ಪರಿಸರಕ್ಕೆ ಧಕ್ಕೆ ಆಗದ ರೀತಿಯಲ್ಲಿ ತನ್ನ ಕೆಲಸ ಆಗಬೇಕಿದೆ ಎಂದರು. 


ಪಾದಯಾತ್ರೆ ಗಿಮಿಕ್


ಮೂಡಾ ಹಾಗು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿರುದ್ಧ ಬಿಜೆಪಿಯ ಪಾದಯಾತ್ರೆಯ ಕುರಿತು ಮಾತನಾಡಿದ ಶಾಸಕರು ಬಿಜೆಪಿ ಅವರು ಪಾದಯಾತ್ರೆ ನಡೆಸುತ್ತಿರುವುದು ಒಂದು ಗಿಮಿಕ್ ಆಗಿದೆ. ಬಿಜೆಪಿಯವರಾದ ಬಸವರಾಜ್ ಪಾಟೀಲ್ ಯತ್ನಾಳ್ ಸೇರಿದಂತೆ ಅನೇಕರು ವಾದಯಾತ್ರೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗೆ ಬಿಜೆಪಿಯ ಮೈತ್ರಿ ಪಕ್ಷವಾದ ಜೆಡಿಎಸ್ ಸಹ ಪಾದಯಾತ್ರೆಗೆ ಬೆಂಬಲ ವ್ಯಕ್ತಪಡಿಸಿಲ್ಲ ಎಂದರು


ಮೈಸೂರು ಭಾಗದಲ್ಲಿ ತಮ್ಮ ಪ್ರಾಬಲ್ಯ ಕುಗ್ಗುತ್ತದೆ ಎಂಬ ಕಾರಣಕ್ಕೆ ಜೆಡಿಎಸ್ ಈ ರೀತಿ ನಡೆದುಕೊಳ್ಳುತ್ತಿದೆ. ಹಗರಣದ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ಹಾಗಾಗಿ ಸಿಎಂ ರಾಜೀನಾಮೆ ನೀಡುವ ಅಗತ್ಯ ಕಾಣುತ್ತಿಲ್ಲ. ಮುಖ್ಯಮಂತ್ರಿಯ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಮಾಹಿತಿ ಕೇಳಿದ್ದಾರೆ. ರಾಜ್ಯಪಾಲರಿಗೆ ಅವರದೇ ಅಧಿಕಾರ ಇದೆ ಎಂದರು. 


ನಮ್ಮ ನಿಗಮದಲ್ಲಿ ಹಣವಿಲ್ಲ


ನಾನು ಅಧ್ಯಕ್ಷನಾಗಿರುವ ಅರಣ್ಯ ಹಾಗೂ ಕೈಗಾರಿಕಾ ಉತ್ಪನ್ನ ಅಭಿವೃದ್ಧಿ ನಿಗಮದಲ್ಲಿ ಯಾವುದೇ ಹಗರಣ ನಡೆದಿಲ್ಲ. ಹಾಗೆ ನೋಡಿದರೆ ನಮಗೆ ಅನುದಾನ ಬರುವುದೇ ಇಲ್ಲ. ಸರಕಾರಿ ಸಂಸ್ಥೆಗಳಿಗೆ ಹಾಗೂ ಕಚೇರಿಗೆ ನಾವು ಪೀಠೋಪಕರಣಗಳನ್ನು ತಯಾರಿಸಿ ಪೂರೈಸುತ್ತೇವೆ.ಅವರಿಂದ ಬಂದ ಹಣವನ್ನು ನಾವು ಚಟುವಟಿಕೆಗೆ ಬಳಸಿಕೊಳ್ಳುತ್ತೇವೆ ಎಂದರು. 


ಅನುದಾನದ ಕೊರತೆಯ ನಡುವೆಯೂ ನಾವು ಒಂದು ಕೋಟಿ ರೂಪಾಯಿ ಲಾಭವನ್ನು ಸರ್ಕಾರಕ್ಕೆ ನೀಡಿದ್ದೇವೆ. ಲಿಂಗನಮಕ್ಕಿ ಜಲಾಶಯದ ಬಳಕೆ ಅವಧಿ ಮುಗಿದಿದೆ ಎಂಬ ಮಾಹಿತಿ ಇದೆ. ಆದರೆ ಕಾಲಕಾಲಕ್ಕೆ ಡ್ಯಾಮ್ ನ ದುರಸ್ತಿ ಹಾಗೂ ನಿರ್ವಹಣೆ ಆಗಬೇಕಿದ. ಹಾಗಾಗಿ ಡ್ಯಾಮ್ ನ ಸುರಕ್ಷತೆಯ ಬಗ್ಗೆ ಗಾ ಯಾವುದೇ ರೀತಿಯ ಆತಂಕ ಪಡುವ ಅಗತ್ಯ ಇಲ್ಲ ಎಂದರು. 


ಶರಾವತಿ ನೀರು ಬೆಂಗಳೂರಿಗೆ-ಕಂಡೀಷನ್ ಅಪ್ಲೆ


ಲಿಂಗನಮಕ್ಕಿಯಿಂದ ಬೆಂಗಳೂರಿಗೆ ಕುಡಿಯುವ ನೀರನ್ನು ತೆಗೆದುಕೊಂಡು ಹೋಗುವ ಪ್ರಸ್ತಾಪ ಈ ಹಿಂದೆ ಇತ್ತು.‌ ಕುಡಿಯುವ ನೀರನ್ನು ಬಳಸಿಕೊಳ್ಳಲು ನಮ್ಮ ಯಾವುದೇ ಆಕ್ಷೇಪವಿಲ್ಲ. ಏಕೆಂದರೆ ಲಿಂಗನಮಕ್ಕಿ ಜಲಾಶಯ ಯಾವುದೇ ಕೃಷಿ ಚಟುವಟಿಕೆಗೆ ಬಳಕೆಯಾಗುವುದಿಲ್ಲ. ಆದರೆ ಡ್ಯಾಮ್ ನ ನಿರ್ಮಾಣಕ್ಕಾಗಿ ಭೂಮಿಯನ್ನು ತ್ಯಾಗ ಮಾಡಿರುವ ಜನರಿಗೆ ವಿದ್ಯುತ್ ಸಂಪರ್ಕ ನೀಡಬೇಕಿದೆ ಎಂದರು.


ಸಂತ್ರಸ್ತರಿಗೆ ವಿದ್ಯುತ್ ಸಂಪರ್ಕವನ್ನು ನೀಡಿದ ನಂತರ ಕುಡಿಯುವ ನೀರನ್ನು ತೆಗೆದುಕೊಂಡು ಹೋಗಲು ನಮ್ಮ ಅಕ್ಷೇಪ ಇಲ್ಲ. ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ಆಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಮಾಧ್ಯಮಗಳ ಮೂಲಕ ಈ ಬಗ್ಗೆ ನಾನು ಕೇಳಿದ್ದೇನೆ.‌ ಆದರೆ ನನಗೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಇಲ್ಲ. ಕೆಲವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ ಎಂದು ಹೇಳಲಾಗುತ್ತಿದೆ ಎಂದರು.

ನಾನು ಆಕಾಂಕ್ಷಿಯಿಲ್ಲ

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆದರೆ ಅವಕಾಶ ಸಿಕ್ಕರೆ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಶಾಸಕ ಬೇಲೂರು ಗೋಪಾಲಕೃಷ್ಣ ತಿಳಿಸಿದರು.


ಇದನ್ನೂ ಓದಿ-https://www.suddilive.in/2024/08/blog-post_55.html