ಬುಧವಾರ, ಸೆಪ್ಟೆಂಬರ್ 4, 2024

ಹೊಸೂಡಿ ಗ್ರಾಪಂ ನಲ್ಲಿ ಮಾರಾಮಾರಿ


ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ ಸಮೀಪದ ಹೊಸೂಡಿ ಗ್ರಾಮ ಪಂಚಾಯತಿಯಲ್ಲಿ  ಖರ್ಚು ವೆಚ್ಚದ ಬಗ್ಗೆ ಲೆಕ್ಕ ಕೇಳಿದ್ದಕ್ಕೆ ಮಾರಾಮಾರಿ ನಡೆದಿದೆ. 


ಗ್ರಾ.ಪಂ.ಅಧ್ಯಕ್ಷೆ ಚೈತ್ರಾ ಎದುರೇ ಈ ಮಾರಾ ಮಾರಿ ನಡೆದಿದೆ. ಗ್ರಾ.ಪಂ.ನ ಚಿಕ್ಕ ಮರಡಿಯ ನೀರಗಂಟಿ ಹನುಮಂತಪ್ಪ ಎಂಬುವರ ಮೇಲೆಯೇ ಗ್ರಾಮಸ್ಥ ಅಜರ್ ಎಂಬಾತ ತಾನು ಕುಳಿತ್ತಿದ್ದ ಮರದ ಖುರ್ಚಿಯನ್ನೇ ಎಸೆದು ಹಲ್ಲೆ ಮಾಡಿದ ವೀಡಿಯೋ ಈಗ ವೈರಲ್ ಆಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು. ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳಾದ ಸತ್ಯನಾರಾಯಣ, ವಿಜಿ, ಸಿಬ್ಬಂದಿ ಕಲ್ಲನಗೌಡ ದೌಡಾಯಿಸಿ ಪರಿಶೀಲನೆ.



ಗ್ರಾಂ.ಪಂ.ಅಧ್ಯಕ್ಷರು, ಕೆಲ ಸದಸ್ಯರ ಹಾಗೂ ಪಿಡಿಒ ಮಂಜಮ್ಮನವರೇ ಈ ಕುಕೃತ್ಯಕ್ಕೆ ಶಾಮೀಲು ಎಂಬ ಆರೋಪ ಪ್ರತ್ಯಕ್ಷ ದರ್ಶಿಗಳದ್ದು ಎನ್ನಲಾಗಿದೆ.

ತೀರ್ಥಹಳ್ಳಿಯ ಕಾರ್ ಬೈಲು ಗುಡ್ಡ ಕುಸಿತ



ಸುದ್ದಿಲೈವ್/ತೀರ್ಥಹಳ್ಳಿ


ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ ಬೈಲು ಗುಡ್ಡ ಮಂಗಳವಾರ ಬೆಳಿಗ್ಗೆ ಕುಸಿದಿದೆ. ಸುತ್ತಮುತ್ತಲೂ ಗದ್ದೆ, ತೋಟ, ವಾಸದ ಮನೆ ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.


ದಟ್ಟ ಕಾಡುಗಳಿಂದ ಆವರಿಸಿರುವ ಗುಡ್ಡ ಪ್ರದೇಶದಲ್ಲಿ ಜನರ ಓಡಾಟ ಇಲ್ಲ. ತೀರ್ಥಹಳ್ಳಿ- ಆಗುಂಬೆ ರಾಷ್ಟ್ರೀಯ ಹೆದ್ದಾರಿ ಮಾರ್ಗ ಮಧ್ಯೆ ಇರುವ ಬಿಳಚಿಕಟ್ಟೆಯಿಂದ ಗುಡ್ಡ ಜರಿತವನ್ನು ವೀಕ್ಷಿಸಬಹುದು. ಕಲ್ಲು ಬಂಡೆಯ ಮೇಲೆ ಇದ್ದ ಮಣ್ಣು, ಗಿಡ ಮರಗಳು ಅಂದಾಜು 50 ಅಡಿ ಕುಸಿದಿವೆ. ಸುತ್ತಮುತ್ತ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಅತಿಯಾದ ಮಳೆಯಿಂದ ಗುಡ್ಡ ಕುಸಿದಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.

KSRTC ಮತ್ತು ರೈಲ್ವೆ ನಿಲ್ದಾಣದ ವಾಣಿಜ್ಯ ಮಳಿಗೆಗಳ ಮೇಲೆ ಆಹಾರ ಇಲಾಖೆ ನಿರೀಕ್ಷಕರ ದಾಳಿ



ಸುದ್ದಿಲೈವ್/ಶಿವಮೊಗ್ಗ


ಆಹಾರ ನಾಗರಿಕ ಸರಬರಾಜು ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಗಳು ಜಂಟಿಯಾಗಿ ಮಂಗಳವಾರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ದಾಳಿ ನಡೆಸಿ ಪಟ್ಟಣ ಸಾಮಗ್ರಿ ನಿಯಮ ಉಲ್ಲಂಘಿಸಿದ ಅಂಗಡಿಗಳಿಗೆ ದಂಡ ವಿಧಿಸಿರುತ್ತಾರೆ.


ಆಹಾರ ಸುರಕ್ಷತೆ ಮತ್ತು ಕಲಬೆರಕೆ ತಡೆಗಟ್ಟಲು ಜಿಲ್ಲಾಧಿಕಾರಿಗಳ ನಿರ್ದೇಶನದ ಅನ್ವಯ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪಟ್ಟಣ ಸಾಮಗ್ರಿ ನಿಯಮ ಉಲ್ಲಂಘನೆ ಪ್ರಕರಣದಡಿ ಕೆಎಸ್‌ಆರ್‌ಟಿಸಿ ನಿಲ್ದಾಣದ ಸ್ವಾತಿ ಎಂಟರ್ಪ್ರೈಸಸ್ ಇವರಿಗೆ ರೂ.10,000/- ಮತ್ತು ಹಾಟ್‌ಸ್ಪಾಟ್ ಕೆಫೆ ಹಾಗೂ ರೈಲ್ವೆ ನಿಲ್ದಾಣದಲ್ಲಿನ ಕಾಫಿ ಶಾಪ್ ಇವರಿಗೆ ತಲಾ ರೂ.5000/- ಗಳ ದಂಡವನ್ನು ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ವಿಧಿಸಿರುತ್ತಾರೆ. 


ಮತ್ತು ಗೃಹಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿದ್ದ ಮೂರು ಹೋಟೆಲ್ ಗಳಿಂದ ಒಟ್ಟು ಏಳು ಸಿಲಿಂಡರ್‌ಗಳನ್ನು ವಶಕ್ಕೆ ಪಡೆದು ಅವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿರುತ್ತಾರೆ.


ತಯಾರಿ ದಿನಾಂಕ ಮತ್ತು ಎಕ್ಸ್ಪೈರಿ ದಿನಾಂಕ ಇಲ್ಲದ ಆಹಾರ ಪದಾರ್ಥಗಳನ್ನು ಮಾರುತ್ತಿದ್ದ ಅಂಗಡಿಗಳಿಗೆ ಆಹಾರ ಸುರಕ್ಷತಾ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು ದಿನಾಂಕ ನಮೂದಾಗಿರದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದಿರುತ್ತಾರೆ.

ನ್ಯಾಯಾಲಯ ತೀರ್ಪು ಬರುವ ಮುಂಚೆನೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ-ಬಿಎಸ್ ವೈ



ಸುದ್ದಿಲೈವ್/ಶಿವಮೊಗ್ಗ


ನ್ಯಾಯಾಲಯ ಪ್ರಾಸಿಕ್ಯೂಷನ್ ಗೆ ಕೊಡುವ ಮುಂಚೆ ಸಿಎಂ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡೋದು ಒಳ್ಳೆಯದು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಲಹೆ ನೀಡಿದ್ದಾರೆ. 


ಶಿವಮೊಗ್ಗದಲ್ಲಿ ಸ್ವಗೃಹದಲ್ಲಿ ಮಾಧ್ಯಮಗಳಿಂದ ಮಾತನಾಡಿದ ಬಿಎಸ್ ವೈ ನಾಳೆ ನ್ಯಾಯಾಲಯದ ತೀರ್ಪು ನೂರಕ್ಕೆ ನೂರು ಬರುತ್ತೆ ತೀರ್ಪು ಬಂದ ನಂತರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ.‌ ಯಾಕೆಂದರೆ ಸಿಎಂ ಸಿದ್ದರಾಮಯ್ಯ ಮಾಡಿರುವ ಹಗರಣಗಳು ಸಾರ್ವಜನಿಕವಾಗಿದೆ ಎಂದರು.


ಯಾವುದೇ ಕಾರಣಕ್ಕೆ ಸಿದ್ದರಾಮಯ್ಯನವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಿಂತ ಮೊದಲೇ ಗೌರವಯುತವಾಗಿ ರಾಜೀನಾಮೆ ‌ಕೊಡೋದು ಒಳ್ಳೆಯದು ಅವರು ಮಾಡಿರುವ ಎಲ್ಲಾ ಹಗರಣ ಸಾಬೀತಾಗುತ್ತಿವೆ. ಯಾವುದೇ ಕಾರಣಕ್ಕು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು. 


ಮೂಡ ಹಗರಣ ಜಗಜ್ಜಾಹಿರು ಆಗಿರುವ ಸಂಗತಿಯಾಗಿದೆ. ಬಿಜೆಪಿ ಸರಕಾರದ ಅವಧಿಯ ಕೋವಿಡ್ ವರದಿ ವಿಚಾರದ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸರಕಾರ ಸ್ವತಂತ್ರ ಇದೆ. ಯಾವುದೇ ತೀರ್ಮಾನ ತೆಗೆದುಕೊಳ್ಳಲಿ ಎಂದರು‌.


ನಾವು ಯಾವುದೇ ಹೋರಾಟ  ಮಾಡಲ್ಲ. ರಾಜ್ಯಪಾಲರು ಇನ್ನುಳಿದ ನಾಲ್ವರು ಸಚಿವರಿಗೆ ನೋಟೀಸ್ ಕೊಟ್ಟಿರುವ ವಿಚಾರದ ಬಗ್ಗೆ ಅವರು ಸರ್ವ ಸ್ವತಂತ್ರ ಇದ್ದಾರೆ. ಎಲ್ಲರಿಗೂ ನೋಟೀಸ್ ಕೊಟ್ಟಿದ್ದಾರೆ. ಏನು ಬೇಕಾದರೂ  ತೀರ್ಮಾನ ತೆಗೆದುಕೊಳ್ಳಲಿ. ರಾಜ್ಯಪಾಲರು ನೋಟೀಸ್ ಕೊಟ್ಟಿದ್ದಾರೆ ಏನು ಮಾಡ್ತಾರೆ ನೋಡೋಣ ಎಂದರು. 


ಸಿದ್ದರಾಮಯ್ಯ ಅವರ ತನಿಖೆ ಬಹುತೇಕ ಮುಗಿಯುವ ಹಂತ ತಲುಪಿದೆ. ಅವರು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ತಿಳಿಸಿದರು. 

ಡಾ.ಶಿವಕುಮಾರ್ ಶಿವಾಚಾರ್ಯ ಸ್ವಾಮಿಗಳ ಪೀಠ ತ್ಯಾಗದ ಬಗ್ಗೆ ಭಕ್ತವೃಂಧ ಹೇಳಿದ್ದೇನು?



ಸುದ್ದಿಲೈವ್/ಶಿವಮೊಗ್ಗ


ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ತಾಲೂಕಿನಲ್ಲಿ ತರಳಬಾಳು ಜಗದ್ಗುರು 1108 ನೇ ಡಾ.ಶಿವಕುಮಾರ್ ಶಿವಾಚಾರ್ಯ ಮಹಾಸ್ವಾಮಿಗಳ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಯಲವಟ್ಟಿ ಗ್ರಾಮದಿಂ 101 ಕ್ವಿಂಟಾಲ್ ಅಕ್ಕಿ ಕಳುಹಿಸಲಾಗುತ್ತಿದೆ.


ಈ ಕುರಿತು ಸುದ್ದಿಗೋಷ್ಠಿ ನಡೆಸಿದ ತರಳಬಾಳು ಸೇವಾ ಸಮಿತಿಯ ಷಣ್ಮುಖಪ್ಪ ಮಾತನಾಡಿ, 2006-07 ರಿಂದ ಭಕ್ತಿ ಸಮಾರ್ಪಣಾ ಕಾರ್ಯಕ್ರಮ ಆರಂಭವಾಗಿದೆ. ಭಕ್ತಿ ಸಮರ್ಪಣ ಕಾರ್ಯಕ್ರಮದಲ್ಲಿ 100 ಕ್ವಿಂಟಲ್ ಅಕ್ಕಿ ಕಳುಹಿಸಲಾಗುವುದು. 


ಹರಮಘಟ್ಟದಿಂದ ಆರಂಭವಾಗಿತ್ತು. ಹೊಳಲೂರು ಆಲ್ದಳ್ಳಿ ಸೋಮಿನಕೊಪ್ಪ, ಕೊಮ್ಮನಾಳ್,  ನುಗ್ಗಿ ಮಲ್ಲಾಪುರ,ಮಂಡಘಟ್ಟ, ಕುಂಸಿ, ಸೂಗೂರು, ಕುಂವನಹಳ್ಳಿ, 2020-21 ರಲ್ಲಿ ಕೊರೋನ ಬಂದ ಕಾರಣ ನಡೆದಿರಲಿಲ್ಲ  ಹಾಡೋನ ಹಳ್ಳಿ, ಗೊಂಧಿ ಚಟ್ನಹಳ್ಳಿ ಯಲ್ಲಿ ನಡೆದ ಕಾರ್ಯಕ್ರಮ 2024 ರಂದು ಯಲವಟ್ಟಿಯಲ್ಲಿ  ನಡೆಸಲಾಗುತ್ತಿದೆ.‌


ಯಲವಟ್ಟಿ ಗ್ರಾಮದಲ್ಲಿ ರಕ್ತದಾನ ಶಿಬಿರ, ನೇತ್ರ ತಪಾಸಣೆ ಶಿಬಿರ, ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ನಂತರ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮತ್ತು ಬೆಕ್ಕಿನಕಲ್ಮಠದ ಎಅ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ಚಾಮಿಗಳಿಙದ ಧರ್ಮಸಭೆ ನಡೆಯಲಿದೆ ಎಂದರು. 


ಪೀಠ ತ್ಯಾಗದ ಬಗ್ಗೆ ಮಾತಕತೆ ನಡೆಯುತ್ತಿದೆ. 9 ಕೋಟಿಯಿಂದ ನಡೆಸಿದ ಮಠವನ್ನ ಸ್ವಾಮಿಗಳು ಸಾವಿರ ರೂ. ಆಸ್ತಿ ಮಾಡಿದ್ದಾರೆ. ಭಕ್ತರು ಮತ್ತು ಸಮಿತಿಯು ಹೇಳುವವರನ್ನ ಶಿಷ್ಯರನ್ನಾಗಿ ಮಾಡಲಾಗುತ್ತಿದೆ. ಡಾ.ಶಿವಮೂರ್ತಿ ಸ್ವಾಮಿಗಳು, ರೈತರಿಗೆ ನೀರುಕೊಡಿಸಿದ, ಊಟ ಹಾಕಿ ಅವರ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದ ಷಣ್ಮುಖ ರೆಸಾರ್ಟ್ ನಲ್ಲಿ ನಡೆಯುವ ಮಠವಲ್ಲ. ಮಠಕ್ಕೆ ಬಂದು ಏನಿದೆ ಕೇಳಲಿ ಎಂದು ಸ್ವಾಮೀಜಿನೇ ಹೇಳಿದ್ದಾರೆ. 


ಒಂದು ಬಣ ಡಾ.ಶಿವಮೂರ್ತಿ ಶಿವಾಚಾರ್ಯರ ಪೀಠ ತ್ಯಾಗಕ್ಕೆ ಒತ್ತಡ ಹಾಕುತ್ತಿದೆ. ಅಹವಾಲು ಇದ್ದರೆ ಮಠಕ್ಕೆ ಬಂದು ಮಾತನಾಡಬೇಕು. ಶ್ಯಾಮನೂರು ಶಿವಶಂಕರಪ್ಪನವರು ಒಂದು ಸಭೆಗೆ ಭಾಗಿಯಾಗಿದ್ದರು. ಈಗಲೂ ಸರಿ ಮಾಡಿಕೊಳ್ಳಲು ಅವಕಾಶವಿದೆ. ಯಲವಟ್ಟಿಯ 70 ಹಳ್ಳಿ ಭಕ್ತರು ನಾಳೆ ಮಠಕ್ಕೆ ಭೇಟಿ ನೀಡಲಾಗುತ್ತಿದೆ. 70 ಹಳ್ಳಿಯ ಭಕ್ತರು ಡಾ.ಶಿವಮೂರ್ತಿ ಶಿವಾಚಾರ್ಯ ತಿಳಿಸಿದರು. 

ಲಾಫಿಂಗ್ ಬುದ್ದ ಕುರಿತು ಪ್ರಮೋದ್ ಶೆಟ್ಟಿ ಹೇಳಿದ್ದೇನು?



ಸುದ್ದಿಲೈವ್/ಶಿವಮೊಗ್ಗ


ಲಾಫಿಂಗ್ ಬುದ್ದ ಸಿನಿಮಾ ಪ್ರಮೋಷನ್  ಕುರಿತು ನಟ ಪ್ರಮೋದ್ ಶೆಟ್ಟಿ ಶಿವಮೊಗ್ಗಕ್ಕೆ ಭೇಟಿ ನೀಡಿ ಸುದ್ದಿಗೋಷ್ಠಿ ನಡೆಸಿದ್ದಾರೆ. 


ಪ್ರೊಡ್ಯೂಸರ್ ಉಸಿರಾಡುವಂತೆ ಆಗಸ್ಟ್ ತಿಂಗಳು ಮಾಡಿದೆ.ಕೃಷ್ಣಂ ಪ್ರಣಯಸಖಿ, ಭೀಮಾ ಹಾಗೂ ಲಾಫಿಂಗ್ ಬುದ್ದ ಉತ್ತಮ ಪ್ರತಿಕ್ರಿಯೆಯನ್ನ ನೀಡಿದೆ.  ರಿಷಬ್ ಶೆಟ್ಟಿ ಪ್ರೊಡಕ್ಷನ್ ನಲ್ಲಿ ಮೂಡಿಬಂದ 6 ನೇ ಸಿನಿಮಾ ಇದಾಗಿದೆ. ನಗುವಿಗಾಗಿ ಮಾಡಿದ ಸಿನಿಮಾ ಲಾಫಿಂಗ್ ಬುದ್ದ ಆಗಿದೆ ಎಂದರು. 


ಶಶಿಕುಮಾರ್ ಕಾಲದಲ್ಲಿ ಪೊಲೀಸರ ಸಿನಿಮಾ ಬಂದಿತ್ತು, ಪೊಲೀಸರ ಹೆಂಡ್ತಿ, ಇಬ್ಬರ ಹೆಂಡತಿ ಮುದ್ದಿನ ಪೋಲೀಸ್ ರಿಲೀಸ್ ಆಗಿತ್ತು. ಇದಾದ ನಂತರ ಪೊಲೀಸರ ಬಗ್ಗೆ ಯಾವ ಸಿನಿಮಾ ಮೂಡಿಬಂದಿಲ್ಲ.  ಲಾಫಿಂಗ್ ಬುದ್ಧ ಜೋನರ್ ಸಿನಿಮಾವಾಗಿದೆ. ಗೋವರ್ಧನ ಕ್ಯಾರೆಕ್ಟರ್ ನ್ನ ತಾನು ಮಾಡುವುದಾಗಿ ತಿಳಿಸಿದ ಪ್ರಮೋದ್ ಶೆಟ್ಟಿ, ಮನೆ ಮತ್ತು ಕಚೇರಿಯನ್ನ ಲವಲವಿಕೆಯಿಂದ ವಾತಾವರಣವನ್ನ ಪಿಸಿ ಗೋವರ್ಧನ್ ಇಟ್ಟುಕೊಂಡಿರುತ್ತಾರೆ. ಲಾಫಿಂಗ್ ಬುದ್ಧದಲ್ಲಿ ಪೊಲೀಸರು ಒಳ್ಳವರಿದ್ದಾರೆ. ಅವರು ಮನುಷ್ಯರುಎಂದು ಹೇಳುವ ಪ್ರಯತ್ನವಾಗಿದೆ ಎಂದು ತಿಳಿಸಿದರು. 


ಕುಟುಂಬ ಕುಳಿತು ನೋಡುವ ಸಿನಿಮಾವಾಗಿದೆ. ಆರಂಭದಲ್ಲಿ 100 ಚಲನಚಿತ್ರದಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಈಗ 150 ಚಲನಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿದೆ. ಕಲೆಕ್ಷನ್ ಬಗ್ಗೆ ರಿಷಬ್ ಗೆ ಕೇಳಬೇಕು. ಆದರೆ ನಿರ್ಮಾಪಕರಿಗೆ ಉತ್ತಮ ಸಂಪಾದನೆ ಮಾಡಿಕೊಟ್ಟಿದೆ ಎಂಬ ನಂಬಿಕೆ ಇದೆ ಎಂದರು.‌


ನಿರ್ದೇಶಕ ಭರತ್ ರಾಜ್ ಮಾತನಾಡಿ, ಸಿನಿಮಾಕ್ಕೆ ಉತ್ತಮ ಪ್ರತಿಕ್ತಿಯೆ ದೊರೆತಿದೆ. ಹೆಚ್ಚು ಜನಕ್ಕೆ ತಲುಪಬೇಕೆಂಬ ಉದ್ದೇಶದಿಂದ ರಾಜ್ಯದ್ಯಂತ ಪ್ರವಾಸ ಮಾಡುತ್ತಿದ್ದೇವೆ. ಎರಡು ಕಾಲುಗಂಟೆ ಸಿನಿಮಾ ಇದಾಗಿದೆ. ಲಾಫಿಂಗ್ ಬುದ್ದ ಸಿನಿಮಾ ಗೋವರ್ಧನ್ ಎಂಬ ಪೊಲೀಸ್ ಕಾನ್ ಸ್ಟೇಬಲ್ ನ ಕಥೆ ಇದು.ತಿಳಿಹಾಸ್ಯದ ಮೂಲಕ ಪೊಲೀಸ್ ವ್ಯವಸ್ಥೆಯಲ್ಲಿ ಹೇಳುವ ಚಿತ್ರ ಇದಾಗಿದೆ ಎಂದರು.


ಲಾಫಿಂಗ್ ಬುದ್ಧನಲ್ಲಿ ನಗುನಗುತ್ತಿದ್ದ ಸನ್ಯಾಸಿಯಾಗಿದ್ದಾನೆ. ಅದೇ ಕಾನ್ಸೆಪ್ಟ್ ನಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಇರುತ್ತಾನೆ. ಹೀರೋ ಮೊದಲನೆಯ ಚಿತ್ರ ಇದು ಎರಡನೇ ಚಿತ್ರವಾಗಿದೆ. ಪ್ರಮೋದ್ ಶೆಟ್ಟರನ್ನ ಆಯ್ಕೆ ಮಾಡಿರುವ ಬಗ್ಗೆ ಕುತೂಹಲವಿದೆ. ರಂಗಭೂಮಿಯಿಂದ ಬಂದ ಕಾರಣ ಸ್ನೇಹಬಳಸಿಕೊಳ್ಳುವುದು ಕರಗತವಾಗಿದೆ. 


 ಜಲಂಧರ್, ಶಭಾಸ್ ಬಡ್ಡಿಮಗನೆ, ಸಾಗರದಲ್ಲಿ ಶೂಟ್ ಮಾಡಿರುವ ಅಧಿಕಪ್ರಸಂಗ, ಸಂಪೋರ್ಟಿಂಗ್ ಕ್ಯಾರೆಕ್ಟರ್ ನಲ್ಲಿ ಬಗೀರ, ಚೀತಾ, ಶೇಷಾ, ತಮಿಳಿನಲ್ಲೂ ಅಭಿನಯಿಸಿರುವೆ. ಅಣ್ಣಯ್ಯ ಎಂಬ ಸೀರಿಯಲ್ ನ್ನೂ ಪಾತ್ರವಹಿಸಿರುವೆ ಎಂದು ಪ್ರಮೋದ್ ಶೆಟ್ಟಿ ತಿಳಿಸಿದರು. 


ಲಾಫಿಂಗ್ ಬುದ್ದನನ್ನ ಭದ್ರಾವತಿ, ಸಾಗರದಲ್ಲಿ ಶೂಟಿಂಗ್ ನಡೆದಿದೆ. ಸ್ಥಳೀಯ ಕಲಾವಿದರನ್ನೂ ಈ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ ಎಂದು ನಿರ್ಮಾಪಕ ಭರತ್ ತಿಳಿಸಿದರು.

ಯಾವ ದೇವರ ಬಳಿ ಬಂದು ಮಾತನಾಡಲು ಸಿದ್ಧ-ಬಿ.ವೈ.ರಾಘವೇಂದ್ರ



ಸುದ್ದಿಲೈವ್/ಶಿವಮೊಗ್ಗ


ಸಂಸದರ ವಿರುದ್ಧ ಭ್ರಷ್ಠಾಚಾರದ ಆರೋಪ ಮಾಡಿರುವ ಆಯನೂರು ಮಂಜುನಾಥ್ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ನಾನು ಯಾವುದೇ ದೇವರ ಸಮ್ಮುಖಕ್ಕೆ ಬಂದು ಯಾವ ಭ್ರಷ್ಠಾಚಾರ ನಡೆಸಿಲ್ಲ ಎಂದು ಹೇಳಲು ಸಿದ್ದ ಎಂದು ಸವಾಲು ಹಾಕಿದ್ದಾರೆ.  


ಇಂದು ಸುದ್ದಿಗೋಷ್ಟಿ ನಡೆಸಿದ, ಸಂಸದ ಬಿ.ವೈ.ರಾಘವೇಂದ್ರ ಆಯನೂರು ಮಂಜುನಾಥ್ ಆಸ್ಪತ್ರೆ, ಹೋಟೆಲ್ ಹಾಗೂ ಟೋಲ್ ಬಗ್ಗೆ ಮಾತನಾಡಿದ್ದಾರೆ.  ನಾನು ಅವರು ಎಲ್ಲಿ ಕರೆದರೂ ಅಲ್ಲಿ ದೇವರ ಬಳಿ ಬಂದು ಮಾತನಾಡಲು ರೆಡಿ ಇದ್ದೀನಿ ಎಂದು ಆಯನೂರಿಗೆ ತಿಳಿಸಿದ್ದಾರೆ. 



ಹರಕೆರೆ ಆಸ್ಪತ್ರೆಯ ಬಗ್ಗೆ ಆರೋಪ ಮಾಡಿದ್ದಾರೆ.  ರೈತನಿಗೂ ಕೆಐಡಿಬಿಗೂ ಸಂಪರ್ಕ ಮಾಡಿಸಲಾಗಿದೆ. ಕೆಐಡಿಬಿ ಲ್ಯಾಂಡ್ ಅಲ್ಲ ಅದು.  ಕನ್ಸಲ್ಟ್ ಅವಾರ್ಡ್ ಆಗಿ ಸಿಂಗಲ್ ವಿಂಡೋದಲ್ಲಿ  ದೊರೆತಿದೆ. ಆದರೆ ಮಿನಿ ಮೂಡ ಎಂದು ಅವರು ಬಿಂಬಿಸಿದ್ದಾರೆ.  


ಟೋಲ್ ಬಗ್ಗೆ ಆಯನೂರು  ಮಂಜುನಾಥ್ ಅರೊಪಿಸಿದ್ದಾರೆ. ನಾವೇ ಟೋಲ್  ಬೇಡ ಎಂದಿದ್ವಿ. ಸರ್ಕಾರ ಬದಲಾದಂತೆ ಟೋಲ್ ನಿರ್ಮಾಣವಾಗಿದೆ. 


ಡಿಸಿಗೂ ಹೇಳಲಾಗಿದೆ. ಆದರೆ ಟೋಲ್ ಸ್ಥಾಪನೆಯಲ್ಲಿ ನಮ್ಮ ಕೂವಾಡವಿದೆ ಎಂದು ಆರೋಪಿಸಲಾಗುತ್ತಿದೆ. ನಾವು ಎಲ್ಲಿಗೆ ಬಂದು ದೇವರ ಬಳಿ ಬಂದು ಮಾತನಾಡಲು ಸಿದ್ದ ಎಂದಿರುವುದು ಕುತೂಹಲ ಮೂಡಿಸಿದ್ದಾರೆ.