ಸುದ್ದಿಲೈವ್/ಶಿವಮೊಗ್ಗ
ತೋಟದಲ್ಲಿ ಕೆಲಸ ಮಾಡುವಾಗ ಜೆಸಿಬಿ ವಾಹನ ಚಾಲಕ ಮಾಡಿದ್ದ ನಿರ್ಲಕ್ಷತನದಚಾಲನೆಯಿಂದಾಗಿ ಪಶ್ಚಿಮ ಬಂಗಾಳದಿಂದ ಬದುಕು ಕಟ್ಟಿಕೊಳ್ಳಲು ಬಂದಿದ್ದ 41 ವರ್ಷದ ಮದ್ಯವಯಸ್ಕನೋರ್ವ ಅಸು ನೀಗಿದ್ದಾನೆ.
ಪಶ್ಚಿಮ ಬಂಗಾಳದಿಂದ ಶಿವಮೊಗ್ಗದ ಚೇತನ್ ಕುಮಾರ್ ಅವರ ಅಡಿಕೆ ತೋಟ ಮತ್ತು ಅವರ ಪುಷ್ಪ ಕ್ರಶರ್ ನಲ್ಲಿ ಕೆಲಸಕ್ಕೆ ಬಂದಿದ್ದ ಅಜಿತ್ ಕುಮ್ರಿ, ಜಿತನ್ ಕುಮ್ರಿ ಮತ್ತು ಸುಬಾಲ್ ಕುಮ್ರಿ ಎರಡು ವರ್ಷದ ಕೆಳಗೆ ಕೆಲಸಕ್ಕೆ ಬಂದಿರುತ್ತಾರೆ. ತಾಲೂಕಿನ ಇಂದಿರಾ ನಗರದ ಸರ್ವೆ ನಂಬರ್ 112 ರಲ್ಲಿ ತೋಟ ಮಾಡಿಕೊಂಡಿದ್ದರು.
ಸೆ. 3 ರಂದು ತೋಟದಲ್ಲಿ ಅಜಿತ್ ಕುಮ್ರಿ, ಫಕೀರಪ್ಪ ತೋಟದಲ್ಲಿ ಕೆಲಸ ಮಾಡುವಾಗ ಜೆಸಿಬಿ ತೋಟದಲ್ಲಿ ಕೆಎ 16 ಎಂ 8331 ಕ್ರಮ ಸಂಖ್ಯೆಯ ಜೆಸಿಬಿಯನ್ನ ಚಲಾಯಿಸುತ್ತಿದ್ದ ವಿಜಯಕಾಂತ್ ಎಂಬಾತನು ಚಲಾಯಿಸುತ್ತಿದ್ದನು.
ಮರದ ಬಳಿ ನಿಂತಿದ್ದ ಅಜಿತ್ ಕುಮ್ರಿಗೆ ಹಿಂದಿನಿಂದ ಅಜಾಗರೂಕತೆಯಿಂದ ಜೆಸಿಬಿಯನ್ನ ವಿಜಯ ಕಾಂತ್ ಚಲಾಯಿಸಿದ ಪರಿಣಾಮ ಜೆಸಿಬಿಯ ಬಕೆಟ್ ತಗುಲಿದೆ. ಜೆಸಿಬಿಯ ಬಕೆಟ್ ತಗುಲಿದ ಪರಿಣಾಮ ಅಮಿತ್ ಕುಮ್ರಿಯ ಮರ್ಮಾಂಗಕ್ಕೆ ಬಲವಾದ ಪೆಟ್ಟು ಬಿದ್ದಿದೆ.
ಉಸಿರುಗಟ್ಟಿ ಒದ್ದಾಡುತ್ತಿದ್ದ ಕುಮ್ರಿಯನ್ನ ಬೈಕ್ ನಲ್ಲಿ ಕೂರಿಸಿಕೊಂಡು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದ ಕಾರಣ ಅಜಿತ್ ಅಸು ನೀಗಿದ್ದಾನೆ. ಜೆಸಿಬಿ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮೃತನ ಕುಟುಂಬ ತುಂಗ ನಗರ ಠಾಣೆಯಲ್ಲಿ ದೂರು ದಾಖಲಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ