SUDDILIVE || SHIKARIPURA
ಬಿ.ವೈ.ವಿಜೇಂದ್ರ ತವರು ಕ್ಷೇತ್ರದಲ್ಲಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ ಚರ್ಚೆ, ಏಕತಾದಿನದಲ್ಲಿ ಶಿಕಾರಿಪುರದಲ್ಲಿ ಏಕತಾನಡಿಗೆ-B.Y. Vijendra is in his home constituency and is being discussed on social media, leading to unity in the monotonous Shikaripura.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತವರು ಕ್ಷೇತ್ರವಾದ ಶಿಕಾರಿಪುರದಲ್ಲಿ ತಂಗಿಯಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯೊಂದು ಆರಂಭಗೊಂಡಿದೆ ವಿಜೇಂದ್ರ ಅವರಿಗೆ ತಿಳಿಹೇಳಿ ಪಕ್ಷ ಸಂಘಟನೆ ಹೋರಾಟ ಹಾಗೂ ಜೆಡಿಎಸ್ ಬಿಜೆಪಿ ಒಂದಾಗುವ ಬಗ್ಗೆ ಬುದ್ಧಿ ವಾದ ಹೇಳಲಾಗುತ್ತಿದೆ.
ಮೊದಲು ಮನೆಯ ಹೊರಗೆ ಬಂದು ಹೋರಾಟ ಮಾಡಿ ಜನರ ದನಿಯಾಗಿ. ಚುನಾವಣೆ ಇನ್ನೂ ದೂರ ಇದೆ. ಎರಡೂ ಪಕ್ಷಗಳು ಒಟ್ಟಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ.
ಪ್ರಖರ ಹಿಂದೂವಾದಿ ಪ್ರತಾಪ್ ಸಿಂಹ, ಅನಂತ ಕುಮಾರ್ ಹೆಗ್ಡೆ, ಸಿಟಿ ರವಿಯವರನ್ನು ತುಳಿಯುವ ಪ್ರಯತ್ನ ಬಿಡಿ. ನಾನೇ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ಅಹಂಕಾರ, ಕನಸು ಬಿಡಿ. ಮೊದಲು ಬಹುಮತ ಗಳಿಸುವ ಪ್ರಯತ್ನ ಮಾಡಿ. ಅಪ್ಪನ ಹೆಸರಿನ, ಜಾತಿಯ ಪ್ರಭಾವಳಿ ಕಿತ್ತಾಕಿ ಸ್ವಂತ ಶಕ್ತಿ ತೋರಿಸಿ.
ಲಿಂಗಾಯತ ವೀರಶೈವ ಸಮಾಜ ಒಡೆಯುವ ಪ್ರಯತ್ನ ಖಂಡಿಸಿರಿ, ತಡೆಯಿರಿ. ಇನ್ನು ಅದೆಷ್ಟು ವರ್ಷಗಳು ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮತವನ್ನ ಕೇಳುತ್ತೀರಾ, ದಯಮಾಡಿ ಬದಲಾಗಿ ಹಿಂದೂ ಕಾರ್ಯಕರ್ತರನ್ನು ಕಳೆದುಕೊಳ್ಳಬೇಡಿ ಎಂದು ಹೇಳಿ ಹ್ಯಾಶ್ ಟ್ಯಾಗ್ ಬಳಸಿ byvijendra ಎಂದು ಉಲ್ಲೇಖಿಸಲಾಗಿದೆ. ಬಿ.ವೈ ವಿಜೇಂದ್ರ ಅವರ ಫೊಟೊ ಬಳಸಲಾಗಿದೆ. ಸಕತ್ ಚರ್ಚೆಗೆ ಗ್ರಾಸವಾಗಿದೆ.
ಏಕತಾಯಾತ್ರೆಯಲ್ಲಿ ವಿಜೇಂದ್ರ ಭಾಗಿ
ದಿವಂಗತ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಜನ್ಮದಿನವಾದ ಇಂದು ಏಕತಾ ಯಾತ್ರೆಯನ್ನು ಶಿಕಾರಿಪುರದಲ್ಲಿ ಹಮ್ಮಿಕೊಳ್ಳಲಾಗಿದೆ ಏಕತಾ ಯಾತ್ರೆಯಲ್ಲಿ ಬಿವೈ ವಿಜಯೇಂದ್ರ ಸಹ ಭಾಗಿಯಾಗಿದ್ದರು ಮೊದಲಿಗೆ ಹುತಾತ್ಮ ಸೇನಾಧಿಕಾರಿಗಳಿಗೆ ನಮನ ಸಲ್ಲಿಸಿ ಓ ಪೂಜೆ ಮಾಡಿ ಶಿಕಾರಿಪುರದ ಆರಾಧ್ಯ ದೇವ ಮುದ್ರಾಯಸ್ವಾಮಿ ಪೂಜೆ ಸಲ್ಲಿಸಿ ಅಲ್ಲಿಂದ ಯಾತ್ರೆ ನಡೆಸಲಾಗಿದೆ ಜಾತ್ರೆಯು ನಾಲ್ಕು ಕಚೇರಿ ಬಳಿ ಕೊನೆಗೊಂಡಿದೆ ಈ ಯಾತ್ರೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಗುರುಮೂರ್ತಿ ಮೊದಲಾದವರು ಉಪಚಿತರಿದ್ದರು.
B.Y. Vijendra is in his home constituency
 


 
 
 
