SUDDILIVE || TARIKERE
ಚಿರತೆ ಫಿನಿಷ್!Leopard finish
ಮನೆಯ ಮುಂದೆ ಕುರುಕುರೆ ತಿನ್ನುತ್ತಿದ್ದ 11 ವರ್ಷದ ಬಾಲಕನ ಮೇಲೆ ಬೈರಾಪುರ ಗ್ರಾಮದಲ್ಲಿ ದಾಳಿ ನಡೆಸಿದ್ದ ನರಭಕ್ಷಕ ಚಿರತೆಯನ್ನ ಅರಣ್ಯ ಇಲಾಖೆ ಸಾಯಿಸುವ ಮೂಲಕ ಚಿರತೆ ಕಾರ್ಯಾಚರಣೆಯನ್ನ ಮುಗಿಸಿದ್ದಾರೆ.
ಚಿರತೆಯ ದಾಳಿಗೆ11 ವರ್ಷದ ಬಾಲಕನ ತಲೆಗೆ 38 ಹೊಲಿಗೆ ಹಾಕಲಾಗಿದೆ. ಮನೆಯ ಮುಂದೆಯೇ ಕುಳಿತಿದ್ದ ಬಾಲಕನನ್ನ ಚಿರತೆ ಚರಂಡಿ ಒಳಗೆ ತೆಗೆದುಕೊಂಡು ಹೋಗಿತ್ತು. ತಲೆಗೆ ಗಾಯವಾಗಿದ್ದರಿಂದ ರಕ್ತಸ್ರಾವವಾಗಿದ್ದ ಬಾಲಕನನ್ನ ಮೆಗ್ಗಾನ್ ಗೆ ದಾಖಲಿಸಲಾಗಿತ್ತು.
ನಿನ್ನೆ ಹನುನಂತಪ್ಪನವರ ನೇತೃತ್ವದಲ್ಲಿ ದಾಖಲಾಗಿದ್ದ ಬಾಲಕನ ಆರೋಗ್ಯವನ್ನ ವಿಚಾರಿಸಿಕೊಂಡು ಬಂದಿದ್ದ ಅರಣ್ಯ ಅಧಿಕಾರಿಗಳು ಇಂದು ಬೆಳಗ್ಗೆನೆ ಚಿರತೆ ಕಾರ್ಯಚರಣೆಗೆ ಇಳಿದಿದ್ದರು. ಸಂಜೆ ಸುಮಾರು 4 ಗಂಟೆಯ ಸುಮಾರಿಗೆ ಚಿರತೆಗೆ ಡಾಟ್ ಮಾಡಲಾಗಿತ್ತು. ರಕ್ಷಣ ವೇಳೆ ಚಿರತೆ ಮೃತಪಟ್ಟಿದೆ.
ಚಿರತೆ ನರಭಕ್ಷಕನಾಗಿದ್ದರಿಂದ ಚಿರತೆಯ ಶೂಟ್ ಗೆ ಆದೇಶವೂ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಚಿರತೆಯ ಕಾರ್ಯಾಚರಣೆ ಯಶಸ್ವಿಯಾಗಿ ಫಿನಿಷ್ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಸಕ್ರೆಬೈಲಿನ ಮೂರು ಆನೆಗಳನ್ನ ತರಿಸಿಕೊಳ್ಳಲಾಗಿತ್ತು. ಆದರೆ ಕಾರ್ಯಾಚರಣೆಗೆ ಆನೆಗಳು ಇಳಿದಿರಲಿಲ್ಲ.
ಜ್ಯೂ.ಅರ್ಜುನ್, ಸೋಮಣ್ಣ, ಬಹದ್ದೂರು ಆನೆಗಳನ್ನ ಸಕ್ರೆಬೈಲಿನಿಂದ ಕರೆತರಲಾಗಿತ್ತು. ಆದರೆ ಆನೆಗಳನ್ನ ಕಾರ್ಯಾಚರಣೆಗೆ ಇಳಿಸಿರಲಿಲ್ಲ. ಬೈರಾಪುರದ ಅಗಾದವಾದ ತೋಟಗಳ ಮಾವಿನಮರದಲ್ಲಿ ಚಿರತೆ ಮಲಗಿದ್ದಾಗ ಶೂಟ್ ಮಾಡಾಗಿದೆ. 8 ವರ್ಷದ ಗಂಡು ಚಿರತೆಯ ಸಾವಾಗಿದೆ. ಇದಕ್ಕೂ ಮುನ್ನ ಚಿರತೆ ಹಂದಿಯೊಂದನ್ನ ಹೊಡೆದುಕೊಂದಿತ್ತು.
ಮೈಸೂರಿನ ಚಿರತೆ ಕಾರ್ಯಾಪಡೆ, ತಮಟೆ ತಂಡ, ಡಾರ್ಟ್ ತಙಡ, ಸೇರಿ 70-80 ಜನರ ತಂಡ ಕಾರ್ಯಾಚರಣೆಯಲ್ಲಿ ತೊಡಗಿದ್ದವು.
Leopard finish
