ಹೋಟೆಲ್ ಗಳಲ್ಲಿ ರಾಸಾಯನಿಕ ವಸ್ತು ಬಳಕೆ ವಿರುದ್ಧ ಕ್ರಮಕ್ಕೆ NSUI ಬಿಗಿಪಟ್ಟು- NSUI tightens grip on action against use of chemicals in hotels

 SUDDILIVE || SHIVAMOGGA

ಹೋಟೆಲ್ ಗಳಲ್ಲಿ ರಾಸಾಯನಿಕ ವಸ್ತು ಬಳಕೆ ವಿರುದ್ಧ ಕ್ರಮಕ್ಕೆ NSUI ಬಿಗಿಪಟ್ಟು- NSUI tightens grip on action against use of chemicals in hotels   

NSUI, tightening


ಹೋಟೆಲ್ ತಿಂಡಿ ಗಾಡಿಗಳಲ್ಲಿ ಆಹಾರಕ್ಕೆ ರಾಸಾಯನಿಕ ಬಣ್ಣಗಳು ಮತ್ತು ಟೇಸ್ಟಿಂಗ್ ಪೌಡರ್ ಬಳಕೆ ಮಾಡಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆರೋಪಿಸಿ ಎನ್‌ಎಸ್‌ಯುಐ ಸಂಘಟನೆ ಕಾರ್ಯಕರ್ತರು ಮಹಾನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಿದರು.

ಆಹಾರ ಸುರಕ್ಷತಾ ಕಾಯ್ದೆಯಂತೆ ಹೋಟೆಲ್, ತಿಂಡಿ ಅಂಗಡಿಗಳಲ್ಲಿ ಆರೋಗ್ಯಕ್ಕೆ ಮಾರಕವಾದ ರಾಸಾಯನಿಕ ಬಣ್ಣ ಮತ್ತು ಟೇಸ್ಟಿಂಗ್ ಪೌಡರ್ ಬಳಸುವಂತಿಲ್ಲ. ಇವುಗಳ ಬಳಕೆಯಿಂದ ಕ್ಯಾನ್ಸರ್‌ ಬರಲಿದೆ. ಇದೇ ಕಾರಣಕ್ಕೆ ಸರ್ಕಾರ ಟೇಸ್ಟಿಂಗ್‌ ಪೌಡರ್‌, ಕೃತಕ ಬಣ್ಣ ಬಳಕೆ ನಿಷೇಧಿಸಿದೆ. ಆದರೆ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವು ಹೋಟೆಲ್‌ಗಳು ತಿಂಡಿ ಗಾಡಿಗಳಲ್ಲಿ ಟೇಸ್ಟಿಂಗ್ ಪೌಡರ್ ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ. ಇದನ್ನು ತಡೆಯಬೇಕಿರುವ ಮಹಾನಗರ ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ನಗರದಲ್ಲಿ ಕಂಡಕಂಡಲೆಲ್ಲ ಮಾಂಸಾಹಾರ ಹೋಟೆಲ್‌ಗಳು, ಚಾಟ್ಸ್, ಅಂಗಡಿಗಳು ತಲೆ ಎತ್ತುತ್ತಿವೆ. ಫುಟ್‌ಪಾತ್‌ಗಳಲ್ಲಿ ಚಿಕ್ಕ ಗಾಡಿಗಳಲ್ಲಿ ತಿಂಡಿ, ತಿನಿಸು ಮಾರಾಟ ಮಾಡಲಾಗುತ್ತಿದೆ. ಇಂತಹ ಅಂಗಡಿಗಳಿಗೆ ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಟೇಸ್ಟಿಂಗ್‌ ಪೌಡರ್‌, ಕೃತಕ ಬಣ್ಣ ಬಳಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಎನ್‌ಎಸ್‌ಯುಐ ನಗರ ಅಧ್ಯಕ್ಷ ರವಿ ಕುಮಾರ್‌, ನಗರ ಉಪಾಧ್ಯಕ್ಷ ಆದಿತ್ಯ ಸುಭಾನ್‌, ವರುಣ್‌ ಪಂಡಿತ್‌, ವಿಕ್ರಮ್‌, ವಿಕಾಸ್‌, ಹಾಲಸ್ವಾಮಿ, ಕೌಶಿಕ್‌ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಇದ್ದರು.

NSUI tightens grip on action against use of chemicals in hotels

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close