SUDDILIVE || SHIVAMOGGA
ಆಂಜನೇಯ ಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕೆ. ದೇವೇಂದ್ರಪ್ಪ ನೇಮಕ-Anjaneya Swamy Temple Management Committee Chairman K. Devendrappa appointed
ಶಿವಮೊಗ್ಗ: ನಗರದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ, ದೂರ್ವಾಸ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟಿದೆ ಎಂದು ನಂಬಲಾಗುವ ಸುಮಾರು 400 ವರ್ಷಗಳ ಪುರಾತನ ಕೋಟೆ ಸೀತಾರಾಮ ಆಂಜನೇಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕೆ. ದೇವೇಂದ್ರಪ್ಪ ಅವರನ್ನು ಕರ್ನಾಟಕ ರಾಜ್ಯ ಸರ್ಕಾರ ನೇಮಕ ಮಾಡಿದೆ.
ಸರ್ಕಾರ ರಚಿಸಿರುವ ಒಂಬತ್ತು ಸದಸ್ಯರ ವ್ಯವಸ್ಥಾಪನಾ ಸಮಿತಿಯಲ್ಲಿ ಕೆ. ದೇವೇಂದ್ರಪ್ಪ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆಯ ಕಾರ್ತಿಕ್, ಕಂದಾಯ ಇಲಾಖೆಯ ವಿನಾಯಕ ಹಾಗೂ ಸತೀಶ್ ಉಪಸ್ಥಿತರಿದ್ದರು.
ಸಮಿತಿಯ ಸದಸ್ಯರಾದ ಎ.ಎಚ್. ಸುನಿಲ್, ಎಸ್.ಟಿ. ಚಂದ್ರಶೇಖರ್, ರಾಜಶೇಖರ್, ಎಚ್.ಎಸ್. ಬಾಲಾಜಿ, ರೇಖಾ ರಂಗನಾಥ್, ರೂಪಾ ಸೇರಿದಂತೆ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮಪ್ರಸಾದ್ ಹಾಗೂ ದೇವಸ್ಥಾನದ ಕಾರ್ಯನಿರ್ವಾಹಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ನೂತನ ಅಧ್ಯಕ್ಷ ಕೆ. ದೇವೇಂದ್ರಪ್ಪ ಅವರಿಗೆ ದೇವಸ್ಥಾನದ ಭಕ್ತರು, ಗಣ್ಯರು ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿ, ದೇವಸ್ಥಾನದ ಅಭಿವೃದ್ಧಿಗೆ ಶುಭ ಹಾರೈಸಿದರು.
