Advertisement

ಹೆದ್ದಾರಿಪುರ ಬಳಿ ಭೀಕರ ಅಪಘಾತ: ಪೇಪರ್ ಸಾಗಿಸುತ್ತಿದ್ದ ಕಾರು ಪಲ್ಟಿ-Terrible accident near Heddaripur: Car carrying paper overturns

SUDDILIVE || RIPPONPETE

ಹೆದ್ದಾರಿಪುರ ಬಳಿ ಭೀಕರ ಅಪಘಾತ: ಪೇಪರ್ ಸಾಗಿಸುತ್ತಿದ್ದ ಕಾರು ಪಲ್ಟಿ-Terrible accident near Heddaripur: Car carrying paper overturns   

Terrible, accident

ರಿಪ್ಪನ್‌ಪೇಟೆ: ಶಿವಮೊಗ್ಗದಿಂದ ದಿನಪತ್ರಿಕೆಗಳನ್ನು ಸಾಗಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಓರ್ವ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರದ ಜಂಬಳ್ಳಿ ತಿರುವಿನಲ್ಲಿ ನಡೆದಿದೆ.

ಅಪಘಾತದಲ್ಲಿ ಶಿವಮೊಗ್ಗ ಮೂಲದ ಶಿವಕುಮಾರ್ (45) ಮೃತಪಟ್ಟಿದ್ದಾರೆ. ಗಾಯಗೊಂಡಿರುವ ವ್ಯಕ್ತಿ ತೀರ್ಥಹಳ್ಳಿಯ ಕವಲೆದುರ್ಗದ ನಿವಾಸಿ ಶಿವಕುಮಾರ್ (27) ಎಂದು ಗುರುತಿಸಲಾಗಿದೆ, ಗಾಯಗೊಂಡವರು ಕೋಳಿ ಫಾರಂನಲ್ಲಿ ಸೂಪರ್ ವೈಸರ್ ಆಗಿದ್ದು ಬೆಳಗಿನ ಜಾವ ಪೇಪರ್ ಹಂಚುವ ವಾಹನದಲ್ಲಿ  ಬರುವಾಗ ಈ ಘಟನೆ ಸಂಭವಿಸಿದೆ.

ದಿನಪತ್ರಿಕೆ ತಲುಪಿಸಿ ವಾಪಸ್ಸಾಗುವಾಗ ದುರಂತ

ಶಿವಮೊಗ್ಗದಿಂದ ವಿಜಯವಾಣಿ ದಿನಪತ್ರಿಕೆಗಳನ್ನು ತೀರ್ಥಹಳ್ಳಿಗೆ ತಲುಪಿಸಿ, ಬಳಿಕ ರಿಪ್ಪನ್‌ಪೇಟೆಗೆ ಬರುತ್ತಿದ್ದ ವೇಳೆ ಜಂಬಳ್ಳಿ ತಿರುವಿನ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಶಿವಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳು ಶಿವಮೊಗ್ಗಕ್ಕೆ ರವಾನೆ

ಗಾಯಾಳುವಿಗೆ ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಮೃತ ಶಿವಕುಮಾರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಈ ಘಟನೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Terrible accident near Heddaripur: Car carrying paper overturns  

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು