SUDDILIVE || SHIVAMOGGA
ಶಿವಮೊಗ್ಗದ ಹಲವು ಬಡಾವಣೆಗಳಲ್ಲಿ ನ.19ರಂದು 8 ಗಂಟೆ ವಿದ್ಯುತ್ ವ್ಯತ್ಯಯ-Power outage for 8 hours in several areas of Shivamogga on November 19
ಶಿವಮೊಗ್ಗ: ನಗರದ ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದ ಎ.ಎಫ್-11 ಫೀಡರ್‌ನಲ್ಲಿ ತುರ್ತು ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 19ರಂದು ನಗರದ ಹಲವು ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾಮಗಾರಿ ನಡೆಯಲಿದ್ದು, ಅರವಿಂದನಗರ, ಸೂರ್ಯ ಲೇಔಟ್, ದೇವರಾಜ ಅರಸ್ ಬಡಾವಣೆ, ದೂರವಾಣಿ ಬಡಾವಣೆ, ಕನಕನಗರ, ಶಾರದಮ್ಮ ಲೇಔಟ್, ಜಿ.ಎಸ್. ಶಿವರುದ್ರಪ್ಪ ಲೇಔಟ್, ಮೈತ್ರಿ ಅಪಾರ್ಟ್‌ಮೆಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ಸಾರ್ವಜನಿಕರು ಮೆಸ್ಕಾಂನ ಕಾಮಗಾರಿಗೆ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Power outage for 8 hours in several areas of Shivamogga on November 19



0 ಕಾಮೆಂಟ್‌ಗಳು