ಆ.31ರಂದು ವಿದ್ಯುತ್ ವ್ಯತ್ಯಯ

 


ಸುದ್ದಿಲೈವ್/ಶಿವಮೊಗ್ಗ


ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಗುವ ಫೀಡರ್ ಎ.ಎಫ್-03 ರಲ್ಲಿ ಮೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಇರುವುದರಿಂದ  ಆ.31 ರಂದು ಬೆಳಗ್ಗೆ 10.00 ರಿಂದ   ಸಂಜೆ 5.00 ರವರೆಗೆ ಈ ವ್ಯಾಪ್ತಿಗೆ ಬರುವ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 


ಎಸ್.ವಿ. ಬಡಾವಣೆ ಎ,ಬಿ.ಎಫ್ ಬ್ಲಾಕ್, ಗುಡ್‌ಲಕ್ ಸರ್ಕಲ್, ಅಮ್ಮ ನಿಲಯ, ಸ್ನೇಹ ಅಪಾರ್ಟ್ಮೆಂಟ್ ಸುತ್ತಮುತ್ತಲಿನ ಪ್ರದೇಶ, ಎಂ.ಎಂ.ಎಸ್. ಲೇಔಟ್, ಬೋವಿ ಕಾಲೋನಿ, ವಿಜಯಲಕ್ಷ್ಮೀ ಲೇಔಟ್, ಸೋಮನಾಥ್ ಲೇಔಟ್, ಪುಷ್ಪಗಿರಿ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close