Girl in a jacket

ಹಿಂದೂ ಮಹಾಸಭಾ ಗಣಪತಿಯ ದರ್ಶನ ಪಡೆದ ಸಚಿವ ಮಧು ಬಂಗಾರಪ್ಪ-ಹಾಲಿನ ದರ ಏರಿಕೆ ಕುರಿತು ಹೇಳಿದ್ದೇನು?



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ದರ್ಶನ ಪಡೆದ ಸಚಿವ ಮಧು ಬಂಗಾರಪ್ಪ ದೇವರ ಆಶೀರ್ವಾದ ಪಡೆದಿದ್ದಾರೆ. ಭೀಮೇಶ್ವರ ದೇವಾಲಯದಲ್ಲಿ  ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಟಾಪಿಸಲಾಗಿದೆ. 


80 ವರ್ಷಗಳ ಇತಿಹಾಸ ಇರುವ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವವನ್ನ ಸೆ.17 ರಂದು ನಡೆಸಲಾಗುತ್ತಿದೆ.‌ ಈ ಬಾರಿ ಅದ್ದೂರಿಯ ರಾಜಬೀದಿ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ. ಈ ಹಿನ್ನಲೆಯಲ್ಲಿ ನಗರದೆಲ್ಲಡೆ ಕೇಸರಿ ಬಂಟಿಂಗ್ಸ್, ಮಹಾದ್ವಾರಗಳು ಕಲಾಕೃತಿಗಳನ್ನ ನಿರ್ಮಿಸಲಾಗಿದೆ.


ವಿಸರ್ಜನಾ ಮೆರವಣಿಗೆಯ ದಿನ ಕಲ್ಬುರ್ಗಿಯಲ್ಲಿ ಸಚಿವ ಸಂಪುಟ ಇರುವುದರಿಂದ ಸಚಿವರು ರಾಜಬೀದಿ ಉತ್ಸವದಲ್ಲಿ ಭಾಗಿಯಾಗುವ ಸಾಧ್ಯತೆ ಕಡಿಮೆ. ಹಾಗಾಗಿ ಅವರು ಇಂದೇ  ಹಿಂದೂ ಮಹಾಸಭಾ ಗಣಪತಿ ದರ್ಶನ ಪಡೆದಿದ್ದಾರೆ.‌ ಸಚಿವರಿಗೆ  ಶಾಸಕ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಸಾಥ್ ನೀಡಿದ್ದಾರೆ. 


ಸಚಿವರ ಮಾತು



ನಂತರ ಮಾಧ್ಯಮಗಳಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ ಶಾಸಕ‌ ಮುನಿರತ್ನರ ಬಂಧನವನ್ನ ಸಮರ್ಥಿಸಿಕೊಂಡಿದ್ದಾರೆ. ಕಾನೂನು ಬಾಹಿರ ಹೇಳಿಕೆ ಚಟುವಟಿಕೆ ನೋಡಿದಾಗ ಅವರ ಬಂಧನದಿಂದ ನಮ್ಮ ದೇಶದಲ್ಲಿ ಕಾನೊನು ಇದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದು ಅಚ್ಚರಿ ಮೂಡಿಸಿದ್ದಾರೆ. 


ಮುಖ್ಯಮಂತ್ರಿ ಅದನ್ನು ಗಮನಿಸುತ್ತಾರೆ ಎಂದ ಸಚಿವರು ನಾಗಮಂಗಲ ಘಟನೆಗೆ ಕಾಂಗ್ರೆಸ್ ಕಾರಣ ಎಂಬ ಹೆಚ್ ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರಿಗೆ ಮಾಡಲು ಕೆಲಸ ಇಲ್ಲ ಎಂದು ಅಷ್ಟೇ ಹೇಳಿದ್ದಾರೆ. 


ಘಟನಾ ಸ್ಥಳಕ್ಕೆ ಹೋದಾಗ ಸಚಿವರು ಶಾಂತಿ ಕೇಳಬೇಕು. ಗಲಭೆಗೆ ಅವಕಾಶ ಕೊಡಬಾರದು. ಕಾನೊನು ಬಾಹಿರ ಯಾವುದೇ ಚಟುವಟಿಕೆ ನಡೆಯಬಾರದು. ರಾಹುಲ್ ಗಾಂಧಿ ವಿರುದ್ದ ಯತ್ನಾಳ್ ಹೇಳಿಕೆ ವಿಚಾರದಲ್ಲಿ ಉತ್ತರಿಸಿದ ಮಧು ಬಂಗಾರಪ್ಪ, ಪ್ರಜಾಪ್ರಭುತ್ವಕ್ಕೆ ಗೌರವ ಕೊಡಲು ಬಾರದ ವ್ಯಕ್ತಿ ಹೇಳಿಕೆ ಬಗ್ಗೆ ನಾನು ಏನು ಮಾತನಾಡೋದು ಎಂದು ಹೇಳಿದರು. 


ಹಾಲಿನ ದರ ಏರಿಕೆ


ಕೆಎಂಎಫ್‌ನ ನಂದಿನಿ ಹಾಲಿನ ಬೆಲೆ ಏರಿಕೆ ಕುರಿತು ರಾಜ್ಯದಲ್ಲಿ ಚರ್ಚೆ ಆಗುತ್ತಿದೆ. ಒಂದು ಕಡೆ ಹಾಲಿನ ದರ ಏರಿಕೆಯಾಗಿ ಎರಡು ತಿಂಗಳು ಕಳೆದಿಲ್ಲ. ಆಗಲೇ ಬೆರೆ ಏರಿಕೆಯ ಪ್ರಸ್ತಾವನೆಯಾಗಿದೆ. ಇನ್ನೊಂದೆಡೆ ರೈತರ ಪ್ರೋತ್ಸಾಹ  ಧನ ಸಹ ನೀಡಿಲ್ಲ. ಈ ನಡುವೆ ಶಿವಮೊಗ್ಗದಲ್ಲಿ ಮಾತನಾಡಿದ ಸಚಿವರು, ಹಾಲಿನ ಬೆಲೆ ಏರಿಕೆಯಾದರೆ ಆ ಹಣ ರೈತರಿಗೆ ಹೋಗುವುದು. ಬಾಲಕೃಷ್ಣ ಅವರು ಹಾಲಿನ ದರ ಏರಿಸಿ ಎಂದು ಕೇಳಿದ್ದರು. 


ಈ ಬಗ್ಗೆ ಸಿಎಂ ಕ್ರಮ ಕೈಗೊಳ್ತಾರೆ. ವರ್ಷಕ್ಕೆ 800 ಕೋಟಿ ರೂ.ನ್ನ  ನಮ್ಮ ಇಲಾಖೆ ಹಾಲು ಖರೀದಿ ಮಾಡಲಿದೆ. ಹಾಲಿನ ದರ ಏರಿಕೆ ಆದರೆ ಇಲಾಖೆಗೆ ಹೊರೆ ಎಂಬ ಪ್ರಶ್ನೆ ಅಲ್ಲ. ಏನೇದಾರೂ ನಮ್ಮ ರೈತರಿಗೆನೇ ಹಣ ಹೋಗುವುದು ಎಂದು ಸಮರ್ಥಿಸಿಕೊಂಡಿದ್ದಾರೆ. 


ಹಾಗಾದರೆ ಕಳೆದ 6 ತಿಂಗಳಿಂದ ರೈತರಿಗೆ ಪ್ರೋತ್ಸಾಹ ಧನ ಸಿಗುತ್ತಿಲ್ಲವೆಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ನೋಡೋಣ ಮುಖ್ಯಮಂತ್ರಿಗಳು ಮಾಗಡಿಯಲ್ಲಿದ್ದಾಗ ಬಾಲಕೃಷ್ಣರು ದರ ಏರಿಕೆ ಬಗ್ಗೆ ಪ್ರಸ್ತಾಪಿಸಿದರು. ಏನಾಗಲಿದೆ ನೋಡೋಣ ಎಂದು ಹೇಳಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು