Girl in a jacket

ಬಿಜೆಪಿಯ ಸೇವಾ ಕಾರ್ಯಕ್ರಮಗಳು


ಸುದ್ದಿಲೈವ್/ಶಿವಮೊಗ್ಗ

ಸದಸ್ಯತ್ವ ಅಭಿಯಾನ ಆರಂಭವಾಗಿದೆ. ಬಿಜೆಪಿ ಅತಿಹೆಚ್ಚು ಸದಸ್ಯರನ್ನ ಹೊಂದಿದೆ. ಐದು ವರ್ಷಕ್ಕೊಮ್ಮೆ ಸದಸ್ಯತ್ವ ಅಭಿಯಾನ ಪರಿಶೀಲಿಸಲಾಗುವುದು ಎಂದು ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಶಿವಮೊಗ್ಗದಿಂದ 1 ಕೋಟಿ ಸದಸ್ಯತ್ವ ಹೊಂದಿದ್ದೇವೆ 40 ಲಕ್ಷ ಈಗಾಗಲೇ ಆಗಿದೆ ಕಳೆದ ಬಾರಿ 48 ಲಕ್ಷ ಜನ ಸದಸ್ಯತ್ವ ಹೊಂದಿತ್ತು. ಈಬಾರಿ 1 ಕೋಟಿ ಜನ ಸದಸ್ಯತ್ವ ಹೊಂದಿದ್ದೇವೆ. 60 ಲಕ್ಷ ಇನ್ನು 15 ದಿನಗಳಲ್ಲಿ ಮುಗಿಸಲಿದ್ದೇವೆ ಎಂದರು. 

ಅಟಲ್, ಪ್ರಧಾನಿ ಮೋದಿ ಧೀನ್ ದಯಾಳು ಉಪಾಧ್ಯರ ಹುಟ್ಟು ಹಬ್ಬಕ್ಕಾಗಿ ಸ್ವಚ್ಛತೆ, ಶಾಲೆಗಳ ಸ್ವಚ್ಛತೆ, ದೇವಸ್ಥಾನ ಸ್ವಚ್ಛತೆ, ಕಣ್ಣಿನ ತಪಾಸಣೆ ಮಾಡಿಸಲಾಗಿದೆ. ಸೇವಾ ಕಾರ್ಯಕ್ರಮ ಈ ವಾರಿ ಯುವಮೋರ್ಚದಿಂದ 105 ಯುನಿಟ್ ಸಂಗ್ರಹಿಸುವ ಮೂಲಕ ಆರಂಭವಾಗಿದೆ. 

ರೈತ ಮೋರ್ಚಾದಿಂದ 1000 ಸಸಿಗಳನ್ನ ಬೂತ್ ಗಳಿಂದ ನೆಡಲಾಗಿದೆ. ತಾಯಿಯ ಹೆಸರಿನಲ್ಲಿ ನೆಡಲಾಗುತ್ತದೆ. ನಾಳೆ ಮಹಿಳಾ ಮೋರ್ಚಾದಿಂದ ಬೊಮ್ಮನ್ ಕಟ್ಟೆಯಲ್ಲಿ ಆರಂಭಿಸಲಾಗುವುದು. ಮೂಳೆ ಚಿಕಿತ್ಸೆ, ಕಣ್ಣಿನ ಶಸ್ತ್ರ‌ಚಿಕಿತ್ಸೆ ದಂತ ಚಿಕಿತ್ಸೆ ಈ ಶಿಬಿರದಲ್ಲಿ ನಡೆಯಲಿದೆ ಅನ್ನಪೂರ್ಣೇಶ್ವರಿ ಸಮುದಾಯ‌ಭವನದಲ್ಲಿ ನಡೆಯಲಿದೆ. 

ಒಬಿಸಿ ಮತ್ತು ಎಸ್ ಸಿ ಎಸ್ಟಿ ಮೋರ್ಚಾದಿಂದ ನಾಳೆಯಿಂದ ಸ್ವಚ್ಚತಾ ಕಾರ್ಯ ನಡೆಯಲಿದೆ ಎಂದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು