Girl in a jacket

ಮಲವಗೊಪ್ಪದಲ್ಲಿ ರಸ್ತೆ ಅಪಘಾತ-ಪಾದಚಾರಿ ಸಾವು




ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ಹೊರವಲಯದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮಹಿಳಾ ಪಾದಚಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಅವರನ್ನ ಮೆಗ್ಗಾನ್ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ದಾಖಲಿಸಲಾಗಿದೆ. 


ಶಿವಮೊಗ್ಗದಿಂದ ಮಾಚೇನಹಳ್ಳಿಯ ಶಿಮೂಲ್‌ಗೆ ಹೊರಟಿದ್ದ ಟಾಟಾ ಏಸ್‌ನ ಹಾಲಿನ ವಾಹನ ಮಲಗೊಪ್ಪದ ಬಳಿ ಮಹಿಳೆಯರಿಬ್ಬರಿಗೆ ಡಿಕ್ಕಿ ಹೊಡೆದಿದೆ. ಇದರಲ್ಲಿ ನಿರ್ಮಲಾ ಬಾಯಿ ಎಂಬ (50) ವರ್ಷದ ಮಹಿಳೆ ಸಾವು ಕಂಡಿದ್ದಾರೆ. 



ಇನ್ನೊಬ್ಬರ ಮಹಿಳೆ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಮಲವಗೊಪ್ಪದಲ್ಲಿಯೇ ಮನೆಯಿರುವುದರಿಂದ ರಸ್ತೆ ಬದಿ ನಡೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ. ಪ್ರಕರಣ ಸಂಚಾರಿ ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. 


ಇದೇ ವೇಳೆ ಮಲವಗೊಪ್ಪದ ಮುಖ್ಯರಸ್ತೆಯಲ್ಲಿರುವ ವಿದ್ಯುತ್ ಕಂಬವೂ ಸಹ ಅಪಘಾತದಿಂದ ಹಾನಿಗೊಳಗಾಗಿರುವುದು ತಿಳಿದು ಬಂದಿದೆ. ‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು