ಲಲಿತಮ್ಮನವರ ಕ್ಷಮೆಯಾಚಿಸಿದ ಬಿಜೆಪಿ ಜಿಲ್ಲಾಧ್ಯಕ್ಷ


ಸುದ್ದಿಲೈವ್/ಶಿವಮೊಗ್ಗ

ಸಾಗರದ ನಗರಸಭೆ ಕಾಂಗ್ರೆಸ್ ಸದಸ್ಯೆ ಲಲಿತಮ್ಮನವರಿಗೆ ನೋವಾಗಿದ್ದರೆ ಕ್ಷಮೆಯಾಚಿಸುವುದಾಗಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ಡಿ.ಮೇಘರಾಜ್ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರ ನಗರಸಭೆಗೆ ಎರಡು ವರ್ಷದಿಂದ ಅಧ್ಯಕ್ಷ ಉಪಾಧ್ಯಕ್ಷರಿಲ್ಲ. ಈಗ ಅಧ್ಯಕ್ಷ‌ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎಂ ಎ ಮೀಸಲಾತಿ ಹೊರಡಿಸಿ ಸರ್ಕಾರ ಆದೇಶಿಸಿತ್ತು. 

ಮೀಸಲಾತಿಯನ್ನ ಪ್ರಶ್ನಿಸಿ ಕಾಂಗ್ರೆಸ್ ಸದಸ್ಯೆ ಲಲಿತಮ್ಮ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಇದನ್ನ ನಗರ ಸಭೆ ಸಭೆಯಲ್ಲಿ ಪ್ರಶ್ನಿಸಿದಾಗ ಕಾಂಗ್ರೆಸ್ ಹಿತಾಸಕ್ತಿಯಿಂದ ತಡೆಯಾಜ್ಞೆ ತರಲಾಗಿತ್ತಾ ಅಥವಾ ಲಲಿತಮ್ಮನವರ ಸ್ವ ಇಚ್ಛೆಯಿಂದ ತಂದಿದ್ದ ಎಂದು ಕೇಳಿದ್ದೆ. ಕಾಂಗ್ರೆಸ್ ಪಕ್ಷ ಲಲಿತಮ್ಮರ ಸ್ವ ಇಚ್ಛೆ ಎಂದು ಹೇಳಿತ್ತು. ನಗರ ಸಭೆಯ ಕಾಯ್ದೆ ಪ್ರಕಾರ‌ ತಡೆಯಾಜ್ಞೆ ತಂದವರು ಸಭೆಗೆ ಭಾಗಿಯಾಗುವಂತಿಲ್ಲ ಎಂಬ ಕಾನೂನು ಇದೆ. ಆದರೆ ಲಲಿತಮ್ಮ ಭಾಗಿಯಾಗಿ ನಮ್ಮ ವಿರುದ್ಧವೇ ಆರೋಪಿಸಿದರು. 

ತಡೆಯಾಜ್ಞೆ ತಂದು ಅಪರಾಧಿಯಾಗಿದ್ದೀರಿ ಎಂದು ಹೇಳಿದ್ದು ಸತ್ಯ. ಆದರೆ ಅದರ ಉದ್ದೇಶ ಅವರನ್ನ ನಿಂದಿಸುವುದಾಗಿರಲಿಲ್ಲ, ಅದರ ಹಿಂದಿನ ಉದ್ದೇಶ ಮಹಿಳೆಯ ಸಬಲೀಕರಣಕ್ಕೆ ತಡೆಯಾಜ್ಞೆ ತರಲಾಗಿದೆ ಎಂಬ ಉದ್ದೇಶವಿತ್ತು. ಪೂರ್ವಾಗ್ರಹ ಪೀಡಿತ ಅಂಶ ನನ್ನ ಹೇಳಿಕೆ ಹಿಂದಿರಲಿಲ್ಲ. 

ಆದರೂ ಅವರು ಹೇಳಿದಂತೆ ಮನಸ್ಸಿಗೆ ನೋವಾಗಿದ್ದರೆ, ನಾನು,  ಗಣೇಶ್ ಪ್ರಸಾದ್, ಮಧುರಾ ಶಿವಾನಂದ್ ಮತ್ತು ಮಹೇಶ್ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ. ಅವರ ಮನಸ್ಸಿಗೆ ನೋವಾಗಿದ್ದರೆ, ನಾನು  ಸೇರಿ ನಾಲ್ವರು ಕ್ಷಮೆಯಾಚಿಸಿದ್ದೇವೆ ಎಂದರು.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close