SUDDILIVE || SHIVAMOGGA
ಎರಡನೇ ಬಾರಿಗೆ ಬಿಜೆಪಿ ವಿಜಯೋತ್ಸವ-BJP celebrates victory for the second time
ಪಂಚರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಗೆದ್ದು ಬಂದ ಬಿಜೆಪಿ ನೇತೃತ್ವದ ಎನ್ ಡಿಎ ಪಕ್ಷ ಭರ್ಜರಿ ಬಹುಮತಗಳಿಸಿದ ಬೆನ್ನಲ್ಲೇ ಇಂದು ಎರಡನೇ ಬಾರಿಗೆ ವಿಜಯೋತ್ಸವ ಆಚರಿಸಿದೆ.
ವಿಜಯೋತ್ಸವದ ಅಂಗವಾಗಿ ಇಂದು ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಗೋಪಿ ವೃತ್ತದ ವರೆಗೆ ಬೈಕ್ ರ‌್ಯಾಲಿ ನಡೆದಿದೆ. ಬೈಕ್ ರ‌್ಯಾಲಿಯಲ್ಲಿ ಶಾಸಕ ಚೆನ್ನಬಸಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್ ಇತರೆ ಕಾರ್ಯಕರ್ತರ ಜೊತೆ ಬೈಕ್ ಸವಾರಿ ಮಾಡಿಕೊಂಡು ಸಾಗಿದ್ದಾರೆ.
ನಿನ್ನೆ ಮಧ್ಯಾಹ್ನ 1 ಗಂಟೆಯ ವೇಳೆಗೆ ಪಂಚರಾಜ್ಯದಲ್ಲಿ ಅಸ್ಸಾಂ ನಲ್ಲಿ ಬಿಜೆಪಿ ಸರ್ಕಾರ ಮೂರನೇ ಬಾರಿಗೆ ಪ್ರಚಂಡ ಬಹುಮತದೊಂದಿಗೆ ಬಹುಮತ ಸಾಗಿ ಸೆಂಚೂರಿ ಸನಿಹ ತಲುಪಿತ್ತು. ಪಶ್ಚಿಮ ಬಂಗಾಳದಲ್ಲಿ ದ್ವಿಶತಕದ ಹತ್ತಿರವಿತ್ತು. ಪುದುಚರಿಯಲ್ಲಿ ಸರಳ ಬಹುಮತದತ್ತ ಮತ್ತೊಮ್ಮೆ ಗದ್ದುಗೆ ಏರಲು ಸಿದ್ದವಾಗಿತ್ತು.
ಈ ವೇಳೆ ಪ್ರಥಮಬಾರಿಗೆ ವಿಜಯೋತ್ಸವ ಆಚರಿಸಿದ್ದ ಬಿಜೆಪಿ ಪಟಾಕಿ ಸಿಡಿಸಿ ಸಿಹಿ ಹಂಚಿತ್ತು. ಇಂದು ಮತ್ತೆ ಎರಡನೇ ಬಾರಿಗೆ ವಿಜಯೋತ್ಸವ ಆಚರಿಸಲಾಗಿದೆ. ಎಂಎಲ್ ಸಿ ಡಾ.ಧನಂಜಯ ಸರ್ಜಿ ಸಹ ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು.
BJP celebrates victory for the second time
