Girl in a jacket

ಡ್ರಾಪ್ ಕೇಳಿ ಕಳ್ಳತನ ನಡೆಸಿದ ತೃತೀಯಲಿಂಗಿ



ಸುದ್ದಿಲೈವ್/ಶಿವಮೊಗ್ಗ

ನಡುರಾತ್ರಿ ಬೈಕ್‌ನಲ್ಲಿ ಡ್ರಾಪ್‌ ಪಡೆದ ತೃತೀಯ ಲಿಂಗಿಯೊಬ್ಬಳು ಸವಾರನ ಕೊರಳಲಿದ್ದ 15 ಗ್ರಾಂ ತೂಕದ ಚಿನ್ನದ ಸರ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ಮರ್ಯಾದೆಗೆ ಅಂಜಿದ ಬೈಕ್‌ ಸವಾರ ಒಂದೂವರೆ ತಿಂಗಳು ತಡವಾಗಿ ದೂರು ನೀಡಿದ್ದಾರೆ


ಖಾಸಗಿ ಕಂಪನಿಯ ಉದ್ಯೋಗಿಯೊಬ್ಬ ರಾತ್ರಿ 11.30ರ ಹೊತ್ತಿಗೆ ಬಸ್‌ ಸ್ಟಾಂಡ್‌ಗೆ ಬಂದು ಊಟ ಮುಗಿಸಿ ತನ್ನ ರೂಮ್‌ಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಬಸ್‌ ನಿಲ್ದಾಣದ ಸಮೀಪ ಮಂಗಳಮುಖಿಯಂತಿದ್ದ ಒಬ್ಬಳು ತನಗೆ ಮೆಗ್ಗಾನ್‌ ಆಸ್ಪತ್ರೆಗೆ ಡ್ರಾಪ್‌ ನೀಡುವಂತೆ ಮನವಿ ಮಾಡಿದ್ದಳು. ಅದೇ ಮಾರ್ಗದಲ್ಲಿ ರೂಮ್‌ಗೆ ತೆರಳಬೇಕಿದ್ದರಿಂದ ಖಾಸಗಿ ಕಂಪನಿಯ ಉದ್ಯೋಗಿ ತೃತೀಯ ಲಿಂಗಿಯನ್ನು ತನ್ನ ಬೈಕ್‌ಗೆ ಹತ್ತಿಸಿಕೊಂಡಿದ್ದರು.


ಮೆಗ್ಗಾನ್‌ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ತೃತೀಯ ಲಿಂಗಿ ಬೈಕ್‌ ಸವಾರನ ಮೈ ಮುಟ್ಟಲು ಶುರು ಮಾಡಿದ್ದಳು. ಬೈಕ್‌ ಸವಾರ ಇದನ್ನು ವಿರೋಧಿಸಿದ್ದಾಗಿ ಆರೋಪಿಸಲಾಗಿದೆ. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಡ್ರಾಪ್‌ ನೀಡಿ ರೂಮ್‌ಗೆ ತೆರಳಿ ಬಟ್ಟೆ ಬದಲಿಸುವಾಗ ಕೊರಳಲ್ಲಿದ್ದ ಚೈನ್‌ ನಾಪತ್ತೆ ಆಗಿರುವುದು ಅರಿವಿಗೆ ಬಂದಿದೆ. ಒಂದೂವೆರೆ ತಿಂಗಳು ತೃತೀಯ ಲಿಂಗಿಗಾಗಿ ಎಲ್ಲೆಡೆ ಹುಡುಕಿದರೂ ಆಕೆ ಪತ್ತೆಯಾಗಿರಲಿಲ್ಲ. ಅಲ್ಲದೆ ಮರ್ಯಾದೆಗೆ ಅಂಜಿ ದೂರು ನೀಡಿರಲಿಲ್ಲ ಎಂದು ಉಲ್ಲೇಖಿಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close