Girl in a jacket

ಮಹಿಳೆಗೆ ಚಾಕು ತೋರಿಸಿ ಚಿನ್ನಾಭರಣ ದೋಚಿಕೊಂಡು ಹೋದ ಪ್ರಕರಣ, ಆರೋಪಿ ಅರೆಸ್ಟ್!



ಸುದ್ದಿಲೈವ್/ಸಾಗರ

ಒಂಟಿ ಮನೆಯ ಒಳಗೆ ನುಗ್ಗಿ ಆಕೆಗೆ ಚಾಕು ತೋರಿಸಿ ಕಲ್ಮನೆ ಗ್ರಾಮದ ಕುಂಬಾರಗುಂಡಿಯ ಒಂಟಿ ಮನೆಯೊಂದರಲ್ಲಿ ವಾಸವಿದ್ದ ಮಹಿಳೆಗೆ  ಚಾಕು ತೋರಿಸಿ, ರೂಂನಲ್ಲಿ ಲಾಕ್ ಮಾಡಿ ಬಂಗಾರದ ಮಾಂಗಲ್ಯಸರ, ಮೊಬೈಲ್, ಹಾಗೂ ಪರ್ಸ್ ಕಿತ್ತುಕೊಂಡು ಹೋದ ಪ್ರಕರಣ ದಾಖಲಾಗಿತ್ತು. 

ಪ್ರಕರಣದ ಕಳುವಾದ ಮಾಲು ಹಾಗೂ ಆರೋಪಿತರ ಪತ್ತೆಗಾಗಿ ಮಿಥುನ್ ಕುಮಾರ್ ಜಿ. ಕೆ. ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ , ಅನಿಲ್ ಕುಮಾರ್ ಭೂಮಾರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 1 ಶಿವಮೊಗ್ಗ ಜಿಲ್ಲೆ ಮತ್ತು   ಕಾರಿಯಪ್ಪ ಎ.ಜಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ,  ಗೋಪಾಲಕೃಷ್ಣ ನಾಯ್ಕ ಟಿ ಪೊಲೀಸ್ ಉಪಾಧೀಕ್ಷಕರು ಸಾಗರ ಉಪವಿಭಾಗರವರ ರವರ ಮೇಲ್ವಿಚಾರಣೆಯಲ್ಲಿ,   ಮಹಾಬಲೇಶ್ವರ ನಾಯಕ್, ಪಿಐ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂದಿಗಳಾದ ಸಿಹೆಚ್ಸಿ - ಷೇಖ್ ಫೈರೋಜ್ ಅಹಮ್ಮದ್, ಸನಾವುಲ್ಲಾ, ಸಿಪಿಸಿ – ರವಿಕುಮಾರ್, ಹನುಮಂತ ಜಂಬೂರ್, ನಂದೀಶ್, ಪ್ರವೀಣ್ ಕುಮಾರ್, ಚಾಲಕರಾದ ಎ.ಹೆಚ್.ಸಿ  ಗಿರೀಶ್ ಬಾಬು ಹಾಗೂ ಜಿಲ್ಲಾ ಪೊಲೀಸ್ ಕಛೇರಿ ತಾಂತ್ರೀಕ ಸಿಬ್ಬಂಧಿಗಳಾದ ಗುರುರಾಜ, ಇಂದ್ರೇಶ್ ಮತ್ತು ವಿಜಯ್ ಕುಮಾರ್ ರವರುಗಳನ್ನೊಳಗೊಂಡ  ವಿಶೇಷ ತನಿಖಾ ತಂಡವನ್ನು ರಚಿಸಲಾಗಿರುತ್ತದೆ. 

ಸದರಿ ತನಿಖಾ ತಂಡವು ಪ್ರಕರಣದ ಆರೋಪಿತನಾದ ಪವನ್ ಹೆಚ್.ಎಸ್,  26 ವರ್ಷ, ಕೆಂಚನಗುಪ್ಪೆ ಬೆಂಗಳೂರು ಈತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದ ಅಂದಾಜು ಮೌಲ್ಯ 2,78,231 ರೂಗಳ 39  ಗ್ರಾಂ 94 ಮಿಲಿ ತೂಕದ ಬಂಗಾರದ ಮಾಂಗಲ್ಯ ಸರ ಮತ್ತು ಕೃತ್ಯಕ್ಕೆ ಬಳಸಿದ ಒಂದು ಚಾಕು ವಶಕ್ಕೆ ಪಡೆದುಕೊಂಡಿರುತ್ತದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

1 ಕಾಮೆಂಟ್‌ಗಳು

  1. ಕಳವು ಮಾಡಿದ ಆರೋಪಿಗಳ ಭಾವಚಿತ್ರಗಳನ್ನು ಪ್ರಕಟಿಸಿದರೆ ಸಾರ್ವಜನಿಕ ರು ಮುಂದೆ ಎಚ್ಚರಿಕೆಯಿಂದ ಇರಲು ಅನುಕೂಲವಾಗುತ್ತದೆ.

    ಪ್ರತ್ಯುತ್ತರಅಳಿಸಿ
ನವೀನ ಹಳೆಯದು
close