ಸುದ್ದಿಲೈವ್/ಶಿವಮೊಗ್ಗ
ವಕ್ಫ್ ಆಸ್ತಿವಿಚಾರದಲ್ಲಿ ಮುಸ್ಲೀಂ ಸಮುದಾಯವೇ ಅಧೋಗತಿಗೆ ಇಳಿಯುವ ಆತಂಕವಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಹೇಳಿದರು.
ವಕ್ಫ್ ಗೆ ಕೆಡಗಾಲ ಬಂದಿದೆ. ವಕ್ಫ್ ಆಸ್ತಿ ಬಗ್ಗೆ ಮಠ ಮತ್ತು ರೈತರ ಆಸ್ತಿಯನ್ನ ವಕ್ಫ್ ಆಸ್ತಿಎಂದು ಹೇಳಲಾಗುತ್ತಿದೆ. ಹಿಂದೂ ಸಮಾಜ ಜಾಗೃತಿಯಾಗಿದೆ. ನನಗರ ಬಿಜಾಪುರ, ಕಲ್ಬುರ್ಗಿ, ಬಾಗಲಕೋಟೆಯ ವಿವವಿದ ಸಾಧು ಸಂತರು ಕರೆ ಮಾಡಿ ಪ್ರವಾಸ ಮಾಡಲು ಸೂಚಿಸಿದ್ದಾರೆ.
ಜಯಮೃತ್ಯುಂಜಯ ಸ್ವಾಮಿ ಮತ್ತು ಇತರೆ ಸಮಾಜದ ಸ್ವಾಮಿಗಳು ಪ್ರವಾಸ ಮಾಡಲು ಸೂಚಿಸಿದ್ದಾರೆ 1,10 ಲಕ್ಷ ಜಮೀನು ವಕ್ಫ್ ಆಸ್ತಿ ಇದೆ. 31 ಜಿಲ್ಲೆಯಲ್ಲೂ ವಕ್ಫ್ ಆಸ್ತಿಯಿದೆ ಎಂದು ಸಚಿವ ಜಮೀರು ವಿಧಾನ ಸಭೆಯಲ್ಲಿ ತಿಳಿಸಿದ್ದಾರೆ. ಇದನ್ನ ಸಂವಿಧಾನ ಒಪ್ಪಲು ಸಾಧ್ಯವಿಲ್ಲ. ಎಂದರು.
ಕಲ್ಬುರ್ಗಿ ಜಿಲ್ಲಾ ರಾಮನಗರ ತಾಂಡ, ಮಂಡ್ಯದಲ್ಲಿ ರೈತರ ಜಮೀನು, ಶಾಲೆ ಆಸ್ತಿಯು ಸಹ ವಕ್ಫ್ ಆಸ್ತಿ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿಗಳು ಹೆದರಬೇಡಿ, ನೊಟೀಸ್ ವಾಪಾಸ್ ಪಡೆಯುವುದಾಗಿ ಹೇಳಿದ್ದಾರೆ. ಈ ಹೇಳಿಕೆ ಉಪಯೋಗವಿಲ್ಲ. ಪಹಣಿಯಲ್ಲಿ ವಕ್ಫ್ ಹೆಸರು ತೆಗೆಯಬೇಕು. ಹಿಂದೂ ಸ್ವಾಮೀಜಿಗಳು ಜಾಗೃತಿಯಾಗಿದ್ದಾರೆ ಎಂದರು.
ಸಿಎಂಗೆ ರೈತರ ಬಗ್ಗೆ, ಹಿಂದೂ ಸಾಧುಸಂತರ ಬಗ್ಗೆ ಗೌರವ ಇದ್ದರೆ ವಕ್ಫ್ ಆಸ್ತಿ ಹಿಂಪಡೆಯಬೇಕು. ಜಮೀರು ವಕ್ಫ್ ಟ್ರಿಬ್ಯೂನಲ್ ಮೂಲಕ ಆಸ್ತಿ ಮಾಡುವುದಾಗಿ ಹೇಳಿದ್ದಾರೆ. ಜಮೀರ್ ಸಿಎಂ ಹೇಳಿಕೆಯ ಮೇಲೆ ಆಸ್ತಿ ಮಾಡಲಾಗುತ್ತಿದೆ ಎಂದಿದ್ದಾರೆ. ಸಿಎಂ ಜಮೀರ್ ಮಾತಿನಂತೆ ಮುಂದು ವರೆದರೆ ಸಿಎಂ ಸ್ಥಾನ ಕಳೆದುಕೊಳ್ಳುವುದಾಗಿ ಆತಂಕ ವ್ಯಕ್ತಪಡಿಸಿದರು.
ಸಿಎಂ ಹಿಂದುಳಿದ ವರ್ಗಗಳ ಚಾಂಪಿಯನ್ ಎಂದಿದ್ದಾರೆ. ಬೀರಲಿಂಗೇಶ್ವರ ದೇವಸ್ಥಾನವನ್ನೇ ವಕ್ಫ್ ಆಸ್ತಿ ಎಂದು ಮಾಡಲಾಗಿದೆ. ರಾಜ್ಯದ ಕುರುಬರು ಸೇರಿದಂತೆ ಎಲ್ಲಾ ಹಿಂದುಳಿದ ವರ್ಗದವರಿಗೆ ಸಿಎಂ ಮೇಲೆ ಬೇಸರ ಮಡಿಕೊಂಡಿದ್ದಾರೆ. ಹಿಂದೂಗಳ ಆಸ್ತಿಗಳನ್ನ ಇಸ್ಲಾಮೀಕರಣ ಮಾಡುವ ಹುನ್ನಾರ ನಡೆದಿದೆ. ನೋಟೀಸ್ ಗೆ ಬೆಲೆ ಇಲ್ಲ, ಮೊದಲು ಪಹಣಿಯಲ್ಲಿರುವ ವಕ್ಫ್ ಹೆಸರು ತೆಗೆಯಿರಿ ಎಂದು ಗುಡುಗಿದರು.
ಇದೇ ವರ್ತನೆ ರಾಜ್ಯ ಸರ್ಕಾರ ಮುಂದು ವರೆದರೆ ಸಾಧು ಸಂತರ ನೇತೃತ್ವದಲ್ಲಿ ರಕ್ತ ಕ್ರಾಂತಿ ನಡೆಯಲಿದೆ. ಸಿಎಂ ಗಮನ ಹರಿಸಬೇಕು. ವಕ್ಫ್ ಕಾಯ್ದೆ ತಿದ್ದುಪಡಿಗೆ ಜಗದಾಂಬಿಕ ಪಾಲ್ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಸಮಿಯಿ ಸಭೆಯನ್ನ ಆದಷ್ಟು ಬೇಗ ನಡೆಸಿ ವರದಿ ಕೊಡಬೇಕು. ವಕ್ಫ್ ಆಸ್ತಿ ಕಬಳಿಕೆಗೆ ತಡೆ ಆಗಬೇಕು. ಮುಂದಿನ ಚಳಿಗಾಲದ ಅಧಿವೇಶನದಲ್ಲಿ ವಕ್ಫ್ ತಿದ್ದುಪಡಿ ಆಗಬೇಕು ಎಂದರು.
ಬಾಗಲಕೋಟೆಯಲ್ಲಿ ಮೂರುದಿನ ಪ್ರವಾಸ ಮಾಡುತ್ತಿದ್ದೇನೆ. ಬೊಮ್ನಾಯಿ ವಕ್ಫ್ ಆಸ್ತಿ ಉಳಿಸಿಕೊಳ್ಳಿ ಎಂದು ಹೇಳಿರುವುದಕ್ಕೆ ಗರಂ ಆದ ಈಶ್ವರಪ್ಪ ಬೊಮ್ಮಾಯಿ ಮೇಲಿಂದ ಕೆಳಗೆ ಇಳಿದಿದ್ದಾರಾ? ವಕ್ಫ್ ಆಸ್ತಿ ವಿಚಾರದಲ್ಲಿ ದಂಗೆ ಎದ್ದರೆ ಆಶ್ಚರ್ಯವಿಲ್ಲ. ಕಾಂಗ್ರೆಸ್ ನ ಒಬ್ಬ ಗಂಡು ಸಚಿವ ರಾಜಣ್ಣ ವಕ್ಫ್ ವಿಚಾರದಲ್ಲಿ ಸರಿಯಾಗಿ ಮಾತನಾಡಿದ್ದಾರೆ. ಹುಲಿಯ ಬಾಯಿಗೆ ಕೈ ಹಾಕಿದ್ದಾರೆ. ಇರಿಂದ ಬಜಾವ್ ಆಗೋದು ಕಷ್ಟ ಎಂದು ಗುಡುಗಿದರು.
ಹಾವೇರಿಯ ಕಡಕೋಳ ಗ್ರಾಮದಲ್ಲಿ ಮಸೀದಿಯಲ್ಲಿ ಆಂಜನೇಯನ ಮೂರ್ತಿ ದೊರೆಯಿತು. ಜಾಗವನ್ನ ವಕ್ಫ್ ಆಸ್ತಿ ಎಂದು ಮಾಡಾಯಿತು. ಇದಕ್ಕೆ ಮುಸ್ಲೀಂ ಮನೆಯ ಮೇಲೆ ಕಲ್ಲು ಹೊಡೆಯಲಾಯಿತು. ಬ್ರಿಗೇಡ್ ಈ ವಿಚಾರದಲ್ಲಿ ಏನು ಮಾಡಲಿದೆ ತೀರ್ಮಾನಿಸಲಿದೆ ಎಂದರು.
ರಾಜ್ಯ ಸರ್ಕಾರ ರಸ್ತೆಯ ಗುಂಡಿ ಮುಚ್ಚಲು ಹಣವಿಲ್ಲದ ಪರಿಸ್ಥಿತಿಯಲ್ಲಿದೆ. ಇದನ್ನಮರೆಮಾಚಲು ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಬಗ್ಗೆ ಹಗೂರವಾಗಿ ಮಾತನಾಡಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಕ್ಷಮೆ ಕೇಳಬೇಕು. ನನಗೂ ಅದೇ ಭಾಷೆಯಲ್ಲಿ ಸಿದ್ದರಾಮಯ್ಯನವರಿಗೆ ತಿರುಗಿಸಿ ಹೇಳಲು ಬರೊಲ್ವಾ ಎಂದುಹೇಳಿದ ಈಶ್ವರಪ್ಪ ತಕ್ಷಣವೇ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದರು.
ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದ ಆಶ್ರಯ ಮನೆ ಸಂಪೂರ್ಣ ಆಗಬೇಕಿದೆ. ಕೆಲವರು ಮನೆ ಲೋನ್ ಆಗ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದನ್ನೂ ಪಾಲಿಕೆ ಆಯುಕ್ತರ ಬಳಿ ಮಾತನಾಡಲಿದ್ದೇನೆ ಎಂದರು.