ಸುದ್ದಿಲೈವ್/ಭದ್ರಾವತಿ
ಭದ್ರಾವತಿಯಲ್ಲಿ ಜೆಡಿಎಸ್ Vs ಕಾಂಗ್ರೆಸ್ ನ ಜಟಾಪಟಿ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಟ್ರೆಂಡ್ ಪಡೆದುಕೊಂಡಿದೆ. ನಿನ್ನೆ ಶಾಸಕ ಸಂಗಮೇಶ್ ಅವರ ಪುತ್ರ ಬಸವೇಶ್ ಅವರು ಅಜಿತ್ ಗೌಡರ ಮಾವನ ದೋ ನಂ ದಂಧೆಗೆ ಅಜಿತ್ ಗೌಡರೆ ಗಾಡ್ ಫಾದರ್ ಎಂದು ಪೋಸ್ಡ್ ಮಾಡಿದ್ದಕ್ಕೆ ತಿರುಗೇಟು ನೀಡಲಾಗಿದೆ.
ಭದ್ರಾವತಿಯನ್ನು ಮುಂಬೈ ಮಾಡಲು ಹೊರಟಿರುವ ಮಿ. ಬಸವೇಶ್ ರವರೇ ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಅನ್ನುವ ರೀತಿ ಇದೆ ನಿಮ್ಮ ಪೋಸ್ಟ್ ಎಂದು ಅಜಿತ್ ಗೌಡರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೊನ್ನೆ ನಡೆದ ನಿಮ್ಮ ಜನ್ಮ ದಿನಾಚರಣೆಯ ಫ್ಲೆಕ್ಸ್ ಗಳಲ್ಲಿ ನಿಮ್ಮ ಜೊತೆ ಫೋಟೋ ಹಂಚಿಕೊಂಡು ನಿಮ್ಮ ಜನ್ಮದಿನಾಚರಣೆ ಆಚರಿಸದವರು ಯಾರು ಸ್ವತಂತ್ರ ಹೋರಾಟಗಾರರಲ್ಲ. ಭದ್ರಾವತಿ ಇಸ್ಪೀಟ್ ಮಾಫಿಯಾದ ದೊರೆಗಳು!
ಮಾಡಿದುಣ್ಣೋ ಮಾರಾಯ ಅನ್ನುವ ಹಾಗೆ ತಾವು ಮಾಡುತ್ತಿರುವ ಪ್ರತಿಯೊಂದು ಕಾನೂನುಬಾಹಿರ ಚಟುವಟಿಕೆಗಳು ಇಂದು ಭದ್ರಾವತಿಯ ಸಾಮಾನ್ಯ ಜನರಿಗೆ ಸಹ ತಿಳಿಯುತ್ತಿದೆ. ಇವತ್ತು ನಿಮ್ಮ ತಂದೆಯವರೇ ಶಾಸಕರಾಗಿದ್ದಾರೆ ನೆನಪಿಡಿ, ಭದ್ರಾವತಿಯ ರಸ್ತೆಗಳಲ್ಲಿ ಹಾಲು ಹಣ್ಣು ತರಕಾರಿ ಸಿಗುತ್ತದೆಯೋ ಗೊತ್ತಿಲ್ಲ ಒಸಿ ಬರೆಯುವರು ಗಾಂಜಾ ಮಾರುವವರು ಸಿಕ್ಕೇ ಸಿಗುತ್ತಾರೆ... ಕಡಿವಾಣ ಹಾಕಿ ಭದ್ರಾವತಿ ಸುತ್ತಮುತ್ತಲಿನ ಕಾಡು ಪ್ರದೇಶಗಳಲ್ಲಿ ಕಾಡುಮೃಗ ಇದೆಯೋ ಇಲ್ಲವೋ ಆದರೆ ನಿಮ್ಮ ಶಿಷ್ಯಂದಿರು ಪ್ರತಿದಿನ ಇಸ್ಪೀಟ್ ಹಾಡಿ ಹಣ ಗಳಿಸುತ್ತಿದ್ದಾರೆ... ಕಡಿವಾಣ ಹಾಕಿ Mr. Basavesh
ಇನ್ನು ನನ್ನ ವ್ಯಕ್ತಿತ್ವ ತೇಜೋವದೆ ಮಾಡಲು ಪ್ರಯತ್ನಿಸಿದಿರಾ... ನನ್ನ ಜೀವಮಾನದಲ್ಲಿ ದೋ ನಂಬರ್ ದಂದೆ ಆಗಲಿ ವಸೂಲಿ ದಂದೆ ಮಾಡಿಲ್ಲ. ನಮ್ಮ ಮಾವನವರ ಒಸಿ ದಂದೆಗೆ ನಾನೇ ಗಾಡ್ ಫಾದರ್ ಅಂತ ಪೋಸ್ಟ್ ಮಾಡಿದ್ದೀರಾ... ನಮ್ಮ ಮಾವ ನನ್ನ ಮದುವೆ ಮುಂಚೆ ಒಸಿ ದಂದೆ ಮಾಡುತಿದ್ದಿದ್ದು ನಿಜ ನನ್ನ ಮದುವೆಯ ವರ್ಷದಲ್ಲಿ ನನ್ನ ಗೌರವಕ್ಕೆ ಕಪ್ಪು ಚುಕ್ಕೆ ಆಗುತ್ತೆ ಅಂತ ನಿಲ್ಲಿಸಿದ್ದಾರೆ ತಾವು ಪರಿಶೀಲಿಸಬಹುದು...
ಭದ್ರಾವತಿಯಲ್ಲಿ ಯಾವನೇ ಒಬ್ಬ ಜೆಡಿಎಸ್ ಕಾರ್ಯಕರ್ತನು, ನಾಯಕರು ಇವತ್ತು ಇಸ್ಪೀಟ್ ಆಡಿಸುವುದಾಗಲಿ, ಒಸಿ ದಂದೆ ಮಾಡುವುದಾಗಲಿ, ಕ್ರಿಕೆಟ್ ಬೆಟ್ಟಿಂಗ್, online gambling ಮಾಡುತ್ತಿಲ್ಲ. ಬೇಕಾದರೆ ಪೊಲೀಸ್ ಇಲಾಖೆಗೆ ಕೇಳಿ ತಿಳಿದುಕೊಳ್ಳಿ #Save Bhadravathi ಎಂದು ಅಜಿತ್ ತಮ್ಮ ಪೋಸ್ಟ್ ನಲ್ಲಿ ಸ್ಪಷ್ಟನೆ, ಟಾಂಗ್ ನೀಡಿದ್ದಾರೆ.