SUDDILIVE || SHIVAMOGGA
ಸಹ್ಯಾದ್ರಿ ಕಾಲೇಜಿನಲ್ಲಿ ಲ್ಯಾಪ್ ಟಾಪ್ ಕಳುವು-Laptop stolen from Sahyadri College
ಸಹ್ಯಾದ್ರಿ ಕಾಲೇಜಿನ ಕೊಠಡಿಯಲ್ಲಿ ಅತಿಥಿ ಉಪನ್ಯಾಸಕರೊಬ್ಬರ ಲ್ಯಾಪ್‌ಟಾಪ್ ಕಳ್ಳತನವಾಗಿದೆ. ಈ ಸಂಬಂದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಾ. ಮಹೇಶ್ ಎಂಬುವವರು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಭೂ ವಿಜ್ಞಾನ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಕಾಲೇಜಿನ ಕೆಲಸಕ್ಕಾಗಿ ತಮ್ಮ ಡೆಲ್ ಲ್ಯಾಪ್‌ಟಾಪ್ ತಂದಿದ್ದರು. ಭೂವಿಜ್ಞಾನ ವಿಭಾಗದ ತಮ್ಮ ಕೊಠಡಿಯಲ್ಲಿ ಲ್ಯಾಪ್‌ಟಾಪ್ ಚಾರ್ಜ್‌ಗೆ ಹಾಕಿ ಪಕ್ಕದ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ತೆರಳಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪಾಠ ಮುಗಿಸಿ ತಮ್ಮ ಕೊಠಡಿಗೆ ಮರಳಿದಾಗ ಚಾರ್ಜ್‌ಗೆ ಹಾಕಿದ್ದ 60 ಸಾವಿರ ರೂ. ಮೌಲ್ಯದ ಡೆಲ್ ಲ್ಯಾಪ್‌ಟಾಪ್ ಕಳ್ಳತನವಾಗಿತ್ತು ಎಂದು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Laptop stolen from Sahyadri College