SUDDILIVE || SHIVAMOGGA
ಪುನರಾರ್ವತನೆಗೊಂಡ ಕನ್ನಡ ಪ್ರಶ್ನೆ ಪತ್ರಿಕೆ-ಮುಂದೂಡಲ್ಪಟ್ಟ ಪರೀಕ್ಷೆ-Repeating Kannada Question Paper-Delayed Exam
ಪ್ರಶ್ನೆ ಪತ್ರಿಕೆಯಲ್ಲಿನ ಗೊಂದಲದಿಂದಾಗಿ ಕುವೆಂಪು ವಿಶ್ವವಿದ್ಯಾಲಯದ ಬಿ.ಎ. ಕನ್ನಡ ಐಚ್ಛಿಕ ಪರೀಕ್ಷೆ ದಿಢೀರ್ ರದ್ದಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆಗಳನ್ನು ಹಿಂಪಡೆದು ಕಳುಹಿಸಲಾಗಿದೆ. ಜೂ.3 ರ ಒಳಗೆ ಪರೀಕ್ಷೆ ನಡೆಸುವ ಸಾಧ್ಯತೆಯಿದೆ.
ಬಿ.ಎ. 6ನೇ ಸೆಮಿಸ್ಟರ್ ಐಚ್ಛಿಕ ಕನ್ನಡ ಪರೀಕ್ಷೆ (ಪ್ರಶ್ನೆ ಪತ್ರಿಕೆ ಸಂಖ್ಯೆ 30632) ಇವತ್ತು ನಿಗದಿಯಾಗಿತ್ತು. ನಿನ್ನೆ ಭಾಷ ಪತ್ರಿಕೆ ಕನ್ನಡ ಪ್ರಶ್ನೆಯಲ್ಲಿ ಕೇಳಿದ ಬಹುತೇಕ ಪ್ರಶ್ನೆಗಳು ಇಂದು ನಡೆದ ಐಚ್ಛಿಕ ಪ್ರಶ್ನೆ ಪತ್ರಿಕೆಗಳಲ್ಲಿ ಪುನರಾವರ್ತನೆಯಾದ ಬೆನ್ನಲ್ಲೇ ಪರೀಕ್ಷೆಯನ್ನಬಿಂದು ರದ್ದುಪಡಿಸಲಾಗಿದೆ.
ಬೆಳಗ್ಗೆ 9 ಗಂಟೆಯಿಂದ ಇವತ್ತು ಐಚ್ಛಿಕ ವಿಷಯಗಳ ಪರೀಕ್ಷೆ ನಿಗದಿಯಾಗಿತ್ತು. ಪರೀಕ್ಷೆ ಬರೆಯಲು ಮುಂದಾದ ವಿದ್ಯಾರ್ಥಿಗಳಿಗೆ ಇದು ಶಾಕ್ ನೀಡಿದೆ. ಭಾಷ ಪತ್ರಿಕೆ ಕನ್ನಡದ ಪ್ರಶ್ನೆಪತ್ರಿಕೆಯಲ್ಲಿ ನಿನ್ನೆ ಕೇಳಿದ ಐದು ಆರು ಪ್ರಶ್ನೆಗಳು ರಿಪೀಟ್ ಆದ ಪರಿಣಾಮ ಪರೀಕ್ಷೆ ಮುಂದೂಡಲಾಗಿದೆ ಎನ್ನಲಾಗಿದೆ.
ಆದರೆ ಪ್ರಶ್ನೆ ಪತ್ರಿಕೆಯಲ್ಲಿ ಗೊಂದಲ ಉಂಟಾಗಿದೆ ಎಂಬ ವಿಷಯ ತಿಳಿದು ಆತಂಕಗೊಂಡರು. ಇತ್ತ ಪರೀಕ್ಷೆ ರದ್ದುಪಡಿಸಬೇಕೆ, ಬೇರೆ ಪ್ರಶ್ನೆ ಪತ್ರಿಕೆ ಬರುತ್ತದೆಯೇ ಎಂಬುದು ಗೊತ್ತಾಗದೆ ಉಪನ್ಯಾಸಕರು, ಕಾಲೇಜು ಆಡಳಿತ ಮಂಡಳಿಗಳು ಗೊಂದಲಕ್ಕೀಡಾಗಿದ್ದವು. ಈಗ ಜೂ.3 ರ ಅಂತ್ಯದಲ್ಲಿ ಒಂದು ದಿನ ಈ ಪರೀಕ್ಷೆ ನಡೆಸುವುದಾಗಿ ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ.
ಇನ್ನೊಂದೆಡೆ ಸಮಸ್ಯೆಯ ಮಾಹಿತಿ ತಿಳಿಯುತ್ತಿದ್ದಂತೆ ಕುವೆಂಪು ವಿಶ್ವವಿದ್ಯಾಲಯ ಪರೀಕ್ಷೆಯನ್ನು ಮುಂದೂಡಿದೆ. ಎಲ್ಲ ಕಾಲೇಜುಗಳಿಗೆ ವಾಟ್ಸಪ್ ಮೂಲಕ ಮಾಹಿತಿ ರವಾನಿಸಲಾಗಿದೆ. ‘ತಾಂತ್ರಿಕ ಕಾರಣದಿಂದಾಗಿ ಇಂದು ನಿಗದಿಯಾಗಿದ್ದ ಐಚ್ಛಿಕ ಕನ್ನಡ ವಿಷಯದ (ಪ್ರಶ್ನೆ ಪತ್ರಿಕೆ ಸಂಖ್ಯೆ 30632) ಪರೀಕ್ಷೆಯನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುತ್ತದೆ. ವಿದ್ಯಾರ್ಥಿಗಳಿಂದ ಪ್ರಶ್ನೆ ಮತ್ತು ಉತ್ತರ ಪತ್ರಿಕೆ ಹಿಂಪಡೆಯುವಂತೆ’ ತಿಳಿಸಲಾಗಿದೆ.
Repeating Kannada Question Paper-Delayed Exam