ಕೈಕೊಟ್ಟ ಬೀದಿ ದೀಪಗಳು-15 ದಿನಗಳಿಂದ ನಿರಂತರ ಕತ್ತಲು ಕಾರಣವೇನು?Not lighting street lights

 SUDDILIVE || SHIVAMOGGA

ಕೈಕೊಟ್ಟ ಬೀದಿ ದೀಪಗಳು-15 ದಿನಗಳಿಂದ ನಿರಂತರ ಕತ್ತಲು ಕಾರಣವೇನು?Not lighting street lights - What is the reason for the continuous darkness for 15 days?

Street, lights

ಶಿವಮೊಗ್ಗದ ಬೀದಿ ದೀಪಗಳು ಕೈಕೊಟ್ಟ ಕಾರಣ ನಿರಂತರವಗಿ 15 ದಿನಗಳಿಂದ ಕತ್ತಲು ಆವರಿಸಿದೆ. ಸಂಜೆ ಇಳೆಗತ್ತಲು ಆವರಿಸುತ್ತಿದ್ದಂತೆ ಹಾರ್ಟ್ ಆಫ್ ದ ಸಿಟಿ ಬೀದಿ ದೀಪದ ಕೊರತೆಯಿಂದ  ಕತ್ತಲಿನಲ್ಲಿ ಮುಳುಗಿದೆ. ಆದರೆ ಹೇಳೋರು ಕೇಳೋರೆ ಇಲ್ಲದಂತಾಗಿದೆ. 

ಇಲ್ಲಿ ಬೀದಿ ದೀಪಗಳನ್ನ ಇತ್ತೀಚೆಗಷ್ಟೆ ಅಳವಡಿಸಲಾಗಿತ್ತು. ಉಷಾ ನರ್ಸಿಂಗ್ ಹೋಮ‌್ ವೃತ್ತದಿಂದ ರತ್ನಗಿರಿ ಲೇ ಔಟ್ ವರೆಗೆ ಬೀದಿ ದೀಪಗಳಿಂದ ಸ್ವರ್ಗವೇ ಇಳಿಸಲಾಗಿತ್ತು. ಆದರೆ ಸ್ವರ್ಗದ ದಾರಿಯೇ ಕತ್ತಲಿನಲ್ಲಿ ತುಂಬಿದೆ. ಎರಡು ದಿನ ಮೂರು ದಿನಗಳಿಂದ ಕತ್ತಲಿದ್ದರೆ ಒಂದು ವೇಳೆ ಒಕೆ ಎನಬಹುದಿತ್ತು. ಇವತ್ತಲ್ಲ ನಾಳೆ ಈ ಬೀದಿ ದೀಪಗಳು ಸರಿಯಾಗಲಿದೆ ಎಂಬ ಭರವಸೆಯಿತ್ತು‌ ಆದರೆ ಇಲ್ಲಿನ ಸ್ಥಳೀಯ ಜನ ಕಳೆದ 15 ದಿನಗಳಿಂದ ಈ ಬೀದಿ ದೀಪಗಳು ಬೆಳಗುತ್ತಿಲ್ಲ ಎಂದು ದೂರಿದ್ದಾರೆ. 


ಈ ಜಾಗ ಮೆಸ್ಕಾಂಗೆ ಬರಲಿದ್ದು ಈ ಬಗ್ಗೆ ಅಧಿಕಾರಿಗಳನ್ನ ಕೇಳಿದರೆ ಅಧಿಕರಿಗಳು ಕರೆಯನ್ನ ಎತ್ತಿ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ. ಆದರೆ ಪಾಲಿಕೆ ಎಇಇ ಎಲೆಕ್ಟ್ರಿಕಲ್ ಇಂಜಿನಿಯರ್ ತೇಜೋಪ್ರಸಾದ್ ಇದು ಕಳೆದ 15 ದಿನಗಳಿಂದ ಬೀದಿ ದೀಪ ಬೆಳಗುತ್ತಿರುವುದಲ್ಲ. ಇದು ಕಳೆದ 2-3 ತಿಂಗಳಿಂದ ಬೆಳಗುತ್ತಿಲ್ಲ ಎಂದಿದ್ದಾರೆ. 

ಕಾರಣ ಮೆಸ್ಕಾಂ ನಿಂದ ಮೀಟರ್ ಪಡೆದು ಮೀಟರ್ ಅಳವಡಿಸುವ ಕಾರ್ಯ ನಡೆಯಬೇಕಿದೆ. ಹೈಕೋರ್ಟ್ ನಲ್ಲಿ ಈ ಬಗ್ಗೆ ದಾವೆ ಹೂಡಿರುವುದರಿಂದ ಮೀಟರ್ ಅಳವಡಿಕೆಗೆ ತಡೆಯಾಜ್ಞೆಯಾಗಿತ್ತು. ಈಗ ಕ್ಲಿಯರ್ ಆಗಿರುವುದರಿಂದ ಇನ್ನು ಮುಂದಿನ ಒಂದು ವಾರದ ಒಳಗೆ ಮೀಟರ್ ಅಳವಡಿಸಿ ಬೀದಿ ದೀಪಗಳನ್ನ ಬೆಳಗಿಸುವ ಭರವಸೆ ನೀಡಿದ್ದಾರೆ. 

Not lighting street lights

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close