ಕೋಟೆ ಠಾಣೆ ಮುಂದೆ ರಾಷ್ಟ್ರ ಭಕ್ತರ ಬಳಗ ಪ್ರತಿಭಟನೆ-Rastra Bhakthara Balaga protest

SUDDILIVE || SHIVAMOGGA

ಕೋಟೆ ಠಾಣೆ ಮುಂದೆ ರಾಷ್ಟ್ರ ಭಕ್ತರ ಬಳಗ ಪ್ರತಿಭಟನೆ-Rastra Bhakthara Balaga protest in front of Note police station

Rastra Bhaktara Balaga, protest

ಶಿವಮೊಗ್ಗದ ಬಾಪೂಜಿ ನಗರದಲ್ಲಿ ಪೌರ ಕಾರ್ಮಿಕ ನಾಗರಾಜ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆದ ಪ್ರಕರಣ ವಿಚಾರದಲ್ಲಿ 9 ಆರೋಪಿಗಳನ್ನ ಬಂಧಿಸುವಂತೆ ಆಗ್ರಹಿಸಿ ಇಂದು ರಾಷ್ಟ್ರಭಕ್ತರ ಬಳಗ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರತಿಭಟಿಸಿದೆ. 

ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆದಿದೆ. ಕೋಟೆ ಪೊಲೀಸ್ ಠಾಣೆ ಆವರಣದಲ್ಲಿ ಪ್ರತಿಭಟನೆ ನಡೆಸಿದ ರಾಷ್ಟ್ರ ಭಕ್ತರ ಬಳಗದ ಕಾರ್ಯಕರ್ತರು ಹಲ್ಲೆ ನಡೆಸಿರುವ ರಾಹಿಲ್ ಮತ್ತಿತರ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ. ಪದೇ ಪದೇ ಈ ರೀತಿಯ ಪ್ರಕರಣ ನಡೆಯುತ್ತಿರುವುದನ್ನು ತಡೆಯುವಂತೆ ಆಗ್ರಹಿಸಲಾಗಿದೆ. 

ಮುಸ್ಲಿಂ ಗೂಂಡಾಗಳಿಂದ ಹಲ್ಲೆ ನಡೆದಿದೆ ಎಂದು ಆರೋಪಿಸುತ್ತಿರುವ ಪ್ರತಿಭಟನಾಕಾರರು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆದಿದೆ ಈಗ ಪೊಲೀಸರು ಇಬ್ಬರ ವಿರುದ್ಧ ಕ್ರಮ ಜರುಗಿಸಿದ್ದಾರೆ. ಅವರು 9 ಜನರು ಬಙದು ಹಲ್ಲೆ ನಡೆಸಿದ್ದು ಉಳಿದ ಏಳು ಜನರನ್ನೂ ಕೈಡಲೇ ಬಂಧಿಸುವಂತೆ ಆಗ್ರಹಿಸಲಾಗಿದೆ. 

ಜಾತಿ ಕೇಳಿ ಹೊಡೆದಿದ್ದಾರೆ ಎಂದು ಆರೋಪಿಸುತ್ತಿರುವ ಪ್ರತಿಭಟನಾಕಾರರು ಕಿರಿಕಿರಿ ಮಾಡುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಹೀಗೆ ಮಾಡಿದ್ದಾರೆ. ಪೊಲೀಸರು ತನಿಖೆ ಮಾಡುತ್ತೀವಿ ಎಂದು ಹೇಳುತ್ತಿದ್ದಾರೆ. ಗಾಂಜಾ ಹಾವಳಿಯಿಂದ ಈ ರೀತಿಯ ಘಟನೆ ನಡೆಯುತ್ತಿದೆ ಎಂದು ರಾಷ್ಟ್ರಭಕ್ತರ ಬಳ ಆರೋಪಿಸಿದೆ. 

ಪೊಲೀಸರು ಸೂಕ್ತ ರೀತಿಯಲ್ಲಿ ಕ್ರಮ ಜರುಗಿಸುತ್ತಿಲ್ಲ.  ಎಂದು ಆರೋಪಿಸಿದ ಸ್ಥಳೀಯ ರೇವಣ್ಣಪ್ಪ, ಪೌರ ಕಾರ್ಮಿಕ ನಾಗರಾಜ್ ಮೇಲೆ ನಡೆದಿರುವುದು ಖಂಡನೀಯ. ಘಟನೆಯಲ್ಲಿ ೯ ಜನ ಪಾಲ್ಗೊಂಡಿದ್ದಾರೆ. ಆದರೆ ಪೊಲೀಸರು ಕೇವಲ ೨ ಜನರನ್ನು ಬಂಧಿಸಿದ್ದಾರೆ. ಉಳಿದವರನ್ನು ಬಂಧಿಸುತ್ತೇವೆ ಎಂದು ಪೊಲೀಸರು ಹೇಳುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು  ಮಾಜಿ ಕಾರ್ಪೋರೇಟರ್ ಈ.ವಿಶ್ವಾಸ್ ಆಗ್ರಹಿಸಿದ್ದಾರೆ. 

Rastra Bhakthara Balaga protest

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close