SUDDILIVE || SHIVAMOGGA
ಕಮಲ ಹಾಸನ್ ಭಾವ ಚಿತ್ರವನ್ನ ಸುಟ್ಟು ಪ್ರತಿಭಟನೆ-Protest by burning Kamal Haasan's portrait
ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂಬ ನಟ ಕಮಲ್ ಹಾಸನ್ ಅವರ ಹೇಳಿಕೆ ವಿರುದ್ಧ ಕನ್ನಡ ಸಂಘಟನೆಗಳು ಮುಗಿಬಿದ್ದಿವೆ. ಈ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದ ಬಳಿ ವಾಟಾಳ್ ಮಂಜು ಅವರ ನೇತೃತ್ವದಲ್ಲಿ ಕನ್ನಡ ಕಾರ್ಮಿಕ ರಕ್ಷಣ ವೇದಿಕೆ ಕಮಲ ಹಾಸನ್ ಅವರ ಪ್ರತಿಕೃತಿ ದಹಿಸಲಾಯಿತು.
ಚೆನ್ನೈನಲ್ಲಿ ನಿನ್ನೆ ಅವರ ನಟನೆಯ ಥಗ್ ಲೈಫ್ ಸಿನಿಮಾ ಪ್ರಮೋಷನ್ ಮಾಡಲು ನಡೆದ ಕಾರ್ಯಕ್ರಮದಲ್ಲಿ ನಟ ಕಮಲ ಹಾಸನ್ ತಮಿಳು ಭಾಷೆಯಿಂದಲೇ ಕನ್ನಡ ಹುಟ್ಟಿದೆ ಎಂದು ಹೇಳಿಕೆ ನೀಡಿರುವ ಬೆನ್ನಲ್ಲೇ ಅವರ ಹೇಳಿಕೆ ಖಂಡಿಸಿ ಕನ್ನಡ ಕಾರ್ಮಿಕ ರಕ್ಷಣ ವೇದಿಕೆ ಬೀದಿಗಿಳಿದು ಪ್ರತಿಭಟಿಸಿದೆ.
ಜೂ.06 ರಂದು ಅವರ ಥಗ್ ಲೈಫ್ ಸಿನಿಮಾ ಬಿಡುಗಡೆಯಾಗಿದ್ದು, ಈಗ ಅವರ ಸಿನಿಮಾ ಬಿಡುಗಡೆಗೆ ಕನ್ನಡ ರಕ್ಷಣ ವೇದಿಕೆ ಪ್ರತಿಭಟಿಸುವುದಾಗಿ ಹೇಳಿದೆ. ಇದರಿಂದಾಗಿ ರಾಜ್ಯದಲ್ಲಿ ಥಗ್ ಲೈಫ್ ಬಿಡುಗಡೆಯಾಗಲಿದೆಯಾ ಎಂದು ಕಾದು ನೋಡಬೇಕಿದೆ.
Protest by burning Kamal Haasan's portrait