ಸಂಚಾರಿ ಪೊಲೀಸ್ ಪಿಎಸ್ಐ ಡ್ಯೂಟಿ ಮಾಡುತ್ತಿದ್ದಾರಾ? ಅಥವಾ ಪ್ರಚಾರದ ಗೀಳಿಗೆ ಇಳಿದಿದ್ದಾರಾ? obsessed with publicity

 SUDDILIVE || SHIVAMOGGA

ಸಂಚಾರಿ ಪೊಲೀಸ್ ಪಿಎಸ್ಐ ಡ್ಯೂಟಿ ಮಾಡುತ್ತಿದ್ದಾರಾ? ಅಥವಾ ಪ್ರಚಾರದ ಗೀಳಿಗೆ ಇಳಿದಿದ್ದಾರಾ?Is the traffic police PSI doing duty? Or is he obsessed with publicity?

Obessed, publicity


ಜಾಗೃತಿ ಮೂಡಿಸುವ ನೆಪದಲ್ಲಿ ಸಂಚಾರಿ ಪೊಲೀಸರು ಅದರಲ್ಲೂ ಮಿನಿಟ್ ಮೇಲೆ ಬಂದಿರುವಂತಹ ಪಿಎಸ್ಐ ಓರ್ವ ಮಾನವ ಹಕ್ಕು ಮುಲ್ಲಂಗಿಸಿ ದಂತೆ ಆಗಿಲ್ಲವೇ? ಹಲವು ಜಾಗೃತಿ ಮೂಡಿಸುವ  ವಿಡಿಯೋದಲ್ಲಿ ಮಗು ಮತ್ತು ಪತ್ನಿಯೊಂದಿಗೆ ಬಂದ ಬೈಕ್ ಸವಾರನಿಗೆ ನೀವೇ ಸ್ವಾಮಿ ನೀವೆ ಎಂಬ ವಿಡಿಯೋ ಹೆಚ್ಚು ವೈರಲ್ ಆಗಿದೆ. 

ಈ ರೀತಿ ವೈರಲ್ ಆದ  ಮಕ್ಕಳ ವಿಡಿಯೋವನ್ನ ತೋರಿಸುವ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬೈಕ್ ಸವಾರ ಹಾಗೂ ಆತನ ಪತ್ನಿಯನ್ನ ತೋರಿಸಿರುವುದು ಮಕ್ಕಳ ಹಕ್ಕು ಮತ್ತು ಮಾನವಹಕ್ಲು ಉಲ್ಲಂಘನೆಯಾಗಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ. 

ಮಾಧ್ಯಮಗಳು ಈ ಹಿಂದೆ ಅಪ್ರಾಪ್ತ ಬಾಲಕನ ಹೆಸರು ಬರೆದಿದ್ದಕ್ಕೆ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸುವಂತೆ ಮಾಡಿದ್ದ ಮಕ್ಕಳ ಸಂರಕ್ಷಣ ಆಯೋಗ ಈ ವಿಚಾರದಲ್ಲಿ ಹೇಗೆ ಸುಮ್ಮನೆ ಕುಳಿತಿದೆ. ಸಂಚಾರಿ ಪೊಲೀಸರು ಡ್ಯೂಟಿ ಮಾಡುತ್ತಿದ್ದರಾ ಅಥವಾ ಹೀರೋಯಿಸಂನ ಗೀಳಿಗೆ ಬಿದ್ದಿದ್ದಾರಾ ಎಂಬ ಅನುಮಾನವೂ ಹೆಚ್ಚಾಗಿದೆ.


ಈ ಹಿಂದೆ ಬಸ್ ಚಾಲಕರ ಕೊರಳಪಟ್ಟಿ ಹಿಡಿದು ಹಾರನ್ ಹೊಡೆಸಿದ ವಿಷಯದಲ್ಲಿ ಇದೇ ಪಿಎಸ್ಐಗೆ ಸಾರ್ವಜನಿಕರು ತಪರಾಕಿ ಹಾಕಿದ್ದರು.  ಫೇಸ್ ಬುಕ್ ನಲ್ಲಿ  ಎಸ್ಪಿ ಶಿವಮೊಗ್ಗ ಪೊಲೀಸ್ ಪೇಜ್ ನಲ್ಲಿ ವೈರಲ್ ಆಗಿದ್ದ ಈ ವಿಡಿಯೋವನ್ನ ನಂತರ ಡಿಲೀಟ್ ಆಗಿತ್ತು. ಸಂಘಟನೆಯೊಂದು ಇದೇ ಪಿಎಸ್ಐ ವಿರುದ್ಧ ಪ್ರತಿಭಟಿಸಿತ್ತು. ಆದರೂ ಬುದ್ದಿಕಲಿಯದ ಈ ಪಿಎಸ್ಐ ಪ್ರಚಾರದ ಭರದಲ್ಲಿ ಮತ್ತೊಂದು ಯಡವಟ್ಟಿಗೆ ಕೈಹಾಕಿದ್ದಾರೆ. 

ಜಾಗೃತಿ ಮೂಡಿಸುವ ಭರದಲ್ಲಿ ಸಾರ್ವಜನಿಕನೋರ್ವನ ತೇಜೋವಧೆ ಮಾಡಿದಂತಾಗಿಲ್ಲವೇ? ಹೆಲ್ಮೆಟ್ ಹಾಕದೆ ಇರುವುದು ಕಾನೂನು ಉಲ್ಲಂಘನೆಯಾಗಿರಬಹುದು ಆದರೆ ಘನಘೋರ ಅಪರಾಧಿತನವಲ್ಲ. ಬೈಕ್ ಸವಾರ ತಪ್ಪು ಮಾಡಿದ್ದು ಹೌದು ಎಂದಾದರೂ  ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದು ಎಷ್ಟು ಸರಿ? 

ಮಹಾವೀರ ವೃತ್ತದಲ್ಲಿ ಬಂದ ಬೈಕ್ ಸವಾರನಿಗೆ ಜಾಗೃತಿ ಮೂಡಿಸುವುದು ಸರಿಯೇ ಆದರೆ ಸಾಮಾಜಿಕ ಜಾಲತಾಣದಲ್ಲಿ ಬೈಕ್ ಸವಾರನ ವಿಡಿಯೋ ಹರಿಬಿಟ್ಟು ಆತನ ಹಕ್ಕನ್ನ ಉಲ್ಲಂಘನೆ ಮಾಡಲು ಪೊಲೀಸರಿಗೆ ಅಧಿಕಾರವಿದೆಯಾ? ಬೈಕ್ ಸವಾರ ಮತ್ತು ಆತನ ಕುಟುಂಬ ಏನಾದರೂ ಹೆಚ್ಚು ಕಡಿಮೆ ಮಾಡಿಕೊಂಡರೆ ಯಾರು ಜವಬ್ದಾರರು? 

ಎಸ್ಪಿ ಮಿಥುನ್ ಕುಮಾರ್ ಡಿವೈಎಸ್ಪಿಗಳು, ಸಂಚಾರಿ ಪೊಲೀಸ್ ಠಾಣೆಯ ಸಿಪಿಐ ದಕ್ಷರಿದ್ದಾರೆ. ಹೆಲ್ಮೆಟ್ ಮತ್ತು ಸಣ್ಣಪುಟ್ಟ ಕಾನೂನು ಉಲ್ಲಂಘನೆಗಳನ್ನ ಸಾಮಾಜಿಕ ಜಾಲತಾಲದಲ್ಲಿ ಹಾಕುವ ಮೊದಲು ಚಿಂತಿಸಲಿ. 

obsessed with publicity

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close