ad

ಹೆಣ ಬಿದ್ದ ಮೇಲೆ ತಂತಿ ಬೇಲಿ ನಿರ್ಮಾಣ-ಸುದ್ದಿಲೈವ್ ಪರಿಣಾಮಕಾರಿ ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ-Suddilive effective report

 SUDDILIVE || NAGARA

ಹೆಣ ಬಿದ್ದ ಮೇಲೆ ತಂತಿ ಬೇಲಿ ನಿರ್ಮಾಣ-ಸುದ್ದಿಲೈವ್ ಪರಿಣಾಮಕಾರಿ ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ-Forest Department wakes up to the news after construction of wire fence after body falls - Suddilive effective report

Suddilive, report


ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಯಡೂರು ಹೋಬಳಿಯ ವ್ಯಾಪ್ತಿಗೆ ಬರುವ ತಲಾಸಿ ಅಬ್ಬಿ ಫಾಲ್ಸ್ ಗೆ ಯಾರು ಪ್ರವೇಶಿಸದಂತೆ ಅರಣ್ಯ ಇಲಾಖೆ ತಂತಿಬೇಲಿ ಕಟ್ಟುವ ಮೂಲಕ ಪ್ರವೇಶ ದ್ವಾರವನ್ನೇ ಬಂದ್ ಮಾಡಿದೆ. ಇದರಿಂದ ಹೆಣ ಬಿದ್ದಮೇಲಾದರೂ ಅರಣ್ಯ ಇಲಾಖೆ  ಕೊನೆಗೂ ಎಚ್ಚೆತ್ತುಕೊಂಡಂತಾಗಿದೆ.

ಇದು ಸಹ ಸುದ್ದಿಲೈವ್ ನ  ಪರಿಣಾಮಕಾರಿ ವರದಿಯ ಎಂದೇ ಪರಿಗಣಿಸಲಾಗಿದೆ. ಈ ಮೊದಲು ಪ್ರವೇಶ ದ್ವಾರದಲ್ಲಿ ಬ್ಯಾನರ್ ಅಳವಡಿಸಿ ಪ್ರವೇಶವನ್ನ ನಿಷೇಧಿಸಲಾಗಿದೆ ಎಂದು ಬರೆದು  ಅಳಗವನ್ನು ತೋಡಿ ಬರುತ್ತಿದ್ದ ಅರಣ್ಯ ಇಲಾಖೆ, ಈ ವರ್ಷ ನಿದ್ದೆಯಿಂದ ಎಚ್ಚೆತ್ತುಕೊಂಡಿದೆ.

ಪ್ರತಿವರ್ಷ ಹೀಗೆ ಮಾಡಿ ಬರುತ್ತಿದ್ದ ಇಲಾಖೆ ನಿದ್ರೆಗೆ ಜಾರುತ್ತಿತ್ತು. ಹೆಣಬಿದ್ದ ನಂತರ ಸ್ಥಳಕ್ಕೆ ಹೋಗಿ ಬರುತ್ತಿದ್ದ ಇಲಾಖೆ ಸಿಬ್ವಂದಿಗಳು ಈ ಬಾರಿ ಸುದ್ದಿಲೈವ್ ನ ಪರಿಣಾಮಕಾರಿ ವರದಿಯ ಬೆನ್ನಲ್ಲೇ ಪ್ರವೇಶ ದ್ವಾರವನ್ನ ತಂತಿ ಬೇಲಿ ಹಾಕಿ ಬಂದ್ ಮಾಡಿದ್ದಾರೆ. 

ನಿನ್ನೆ ಬೆಂಗಳೂರಿನ ವ್ಯಕ್ತಿ ನೀರಿಗೆ ಇಳಿದು ಹೆಣವಾಗಿದ್ದ. ಪ್ರತಿ ವರ್ಷ ಹೆಣ ಬಿದ್ದರು ಅರಣ್ಯ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿರಲಿಲ್ಲ. ನಿಷೇಧ ಜಾಗವಾದರೂ ಜನ ಫಾಲ್ಸ್ ಗೆ ಇಳಿಯೋದು ಮಾಮೂಲಿಯಾಗಿತ್ತು. ಪ್ರತಿವರ್ಷ ಜನ ಸಾಯೋದು ಸಹ ಮಾಮೂಲಿಯಾಗಿತ್ತು. ಪ್ರತಿ ವರ್ಷ ಹೆಣ ಬೀಳುತ್ತಿದ್ದರೂ ಅರಣ್ಯ ಇಲಾಖೆ ಕ್ರಮ ಜರುಗಿಸಿಲ್ಲ ಎಂದು ವರದಿ ಮಾಡಲಾಗಿತ್ತು. ಬೆನ್ನಲ್ಲೇ ತಂತಿ ಬೇಲಿ ಹಾಕಲಾಗಿದೆ. 

Suddilive effective report


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close