ad

ಓವರ್ ರೆಡ್ ವಿದ್ಯುತ್ ಮಾರ್ಗ ಹಾಗೂ ಹಳೆ ವಿದ್ಯುತ್ ಕಂಬಗಳನ್ನು ತೆಗೆಯಲು ಉನ್ನತ ಮಟ್ಟದ ಸಭೆ ನಡೆಸುವಂತೆ ಆಗ್ರಹ-Demand for high-level meeting

 


SUDDILIVE || SHIVAMOGGA

ಓವರ್ ರೆಡ್ ವಿದ್ಯುತ್ ಮಾರ್ಗ ಹಾಗೂ ಹಳೆ ವಿದ್ಯುತ್ ಕಂಬಗಳನ್ನು ತೆಗೆಯಲು ಉನ್ನತ ಮಟ್ಟದ ಸಭೆ ನಡೆಸುವಂತೆ ಆಗ್ರಹ-Demand for high-level meeting to remove overhead power lines and old electricity poles

Demand, meeting



ಶಿವಮೊಗ್ಗ ನಗರದಲ್ಲಿ ಹಳೆ ವಿದ್ಯುತ್ ಕಂಬಗಳು ಮತ್ತು ಓವರ್ ಹೆಡ್ ವಿದ್ಯುತ್ ಮಾರ್ಗಗಳನ್ನು ತೆಗೆಯದೆ ಇರುವ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸುವಂತೆ ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದೆ.

ಸ್ಮಾರ್ಟ್ ಸಿಟಿ ಯೋಜನೆ ಅಡಿ 200 ಕೋಟಿ ರೂಗಳು ಮತ್ತು ಕೇಂದ್ರ ಸರ್ಕಾರದ ಮೆಸ್ಕಾಂ ಮೂಲಕ 80 ಕೋಟಿ ರೂ ವೆಚ್ಚದಲ್ಲಿ ನೆಲದಡಿಯ ವಿದ್ಯುತ್ ಕೇಬಲ್ ಕಾಮಗಾರಿಗಳನ್ನು ಮಾಡಲಾಗಿತ್ತು ಈ ವೇಳೆ ಓವರ್ ಹೆಡ್ ಹಾಗೂ ಹಳೆಯ ವಿದ್ಯುತ್ ಕಂಬಗಳನ್ನು ತೆಗೆದು ಭೂಗತಕ್ಕೆ ಕೇಬಲ್ ಮೂಲಕ ವಿದ್ಯುತ್ ಸಂಪರ್ಕ ನೀಡಲು ನೀಡುವುದಾಗಿ ಹಿಂದೆ ತಿಳಿಸಲಾಗಿತ್ತು.

ಮೆಸ್ಕಾಂಗೆ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟವು ಎರಡು ವಿನಂತಿಗಳನ್ನು ಮಾಡಿಕೊಂಡು ಓವರ್ ಹೆಡ್ ಹಾಗೂ ಹಳೆಯ ವಿದ್ಯುತ್ ಕಂಬಗಳನ್ನು ತೆಗೆಯುವಂತೆ ಒತ್ತಾಯಿಸಲಾಗಿತ್ತು ಆದರೆ ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಲೆ ಮೆಸ್ಕಾಂನವರು ಹೊಸದಾಗಿ ಅಳವಡಿಸಿರುವ ಬೀದಿ ದೀಪದ ಕಂಬಗಳಿಗೆ ಮಹಾನಗರ ಪಾಲಿಕೆಯು ಬೀದಿ ದೀಪಗಳನ್ನು ಅಳವಡಿಸಬೇಕಿದೆ ಆನಂತರ ಹಳೆಯ ವಿದ್ಯುತ್ ಕಂಬಗಳನ್ನು ತೆಗೆಯುವುದಾಗಿ ಮೆಸ್ಕಾಂ ತಿಳಿಸಿತ್ತು.

ಈ ಹೇಳಿಕೆಯು ಸಂಪೂರ್ಣವಾಗಿ ನೈಜ ಸ್ಥಿತಿಗೆ ವಿರುದ್ಧವಾಗಿದೆ ಕಾರಣ ಗಾಂಧಿನಗರದ ಬೀದಿ ದೀಪಗಳನ್ನು ಈಗಾಗಲೇ ಹೊಸ ವಿದ್ಯುತ್ ಕಂಬಗಳಲ್ಲಿ  ಅಳವಡಿಸಲಾಗಿದೆ. ಹಾಗಾಗಿ ಈ ಕುರಿತು ಗಂಭೀರವಾಗಿ ಜಿಲ್ಲಾಧಿಕಾರಿಗಳು ಪರಿಗಣಿಸಬೇಕಾಗಿ ನಾಗರೀಕ ಒಕ್ಕೂಟವು ವಿನಂತಿಸಿದ್ದು ಈ ನಿಟ್ಟಿನಲ್ಲಿ ತಕ್ಷಣ ಶಾಸಕರ ಸಂಸದರ ಸಭೆ ಏರ್ಪಡಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ ವಿ ವಸಂತ್ ಕುಮಾರ್ ಅವರ ನೇತೃತ್ವದಲ್ಲಿ ಈ ಮನವಿಯನ್ನು ಸಲ್ಲಿಸಲಾಯಿತು. ಸಂಘಟನಾ ಕಾರ್ಯದರ್ಶಿ ಡಾ. ಎ ಸತೀಶ್ ಕುಮಾರ್ ಶೆಟ್ಟಿ ಎಸ್ ಆರ್ ಗೋಪಾಲ್ ಮೊದಲಾದವರು ಉಪಚಿತರಿದ್ದರು.

Demand for high-level meeting

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close