SUDDILIVE || SHIVAMOGGA
ಮಾಲ್ ನಲ್ಲಿ ಸ್ವಚ್ಛೋತ್ಸವದ ಅಂಗವಾಗಿ ರಂಗೋಲಿ ಬಿಡಿಸಿ ಜಾಗೃತಿಯ ಅಭಿಯಾನ-Awareness campaign by drawing rangoli as part of cleanliness drive at mall
ಗಾಂಧಿ ಜಯಂತಿ ಹಾಗೂ ಸ್ವಚ್ಛೋತ್ಸವದ ಅಂಗವಾಗಿ ಮಹಾನಗರ ಪಾಲಿಕೆ ವತಿಯಿಂದ ರಂಗೋಲಿ ಬಿಡಿಸಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮುಂದುವರೆದಿದೆ.
ನಗರದ ಶಿವಪ್ಪ ನಾಯಕ ಬ್ಯಾರಿ ಮಾಲ್ ನಲ್ಲಿ ಪಾಲಿಕೆಯ ಇಂಜಿನಿಯರ್ ಪುಷ್ಪವತಿ ಅವರ ನೇತೃತ್ವದಲ್ಲಿ ರಂಗೋಲಿ ಬಿಡಿಸಿ ಜಾಗೃತಿ ಮೂಡಿಸಲಾಗಿದೆ. ಈ ಹಿಂದೆ ನಗರದ ಕೆಲ ಬಡಾವಣೆಗಳಲ್ಲಿ ರಂಗೋಲಿ ಬಿಡಿಸಿದ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ರಂಗೋಲಿ ಬಿಡಿಸಿ ಸ್ವಚ್ಛತೆಯ ಅಭಿಯಾನ ನಡೆಸಿದ್ದರು.
ಈ ಬಾರಿ ಮಾಲ್ ಗಳಲ್ಲಿ ದಟ್ಟ ಜನಸಂದಣೆಯಿರುವುದರಿಂದ ಸ್ವಚ್ಛತಾಲೋಂದನದ ಅಭಿಯಾನ ನಡೆಸಲಾಗಿದೆ. ಪಾಲಿಕೆಯ ಇತರೆ ಸಿಬ್ಬಂದಿಗಳು ಕಣ್ಣಿಗೆ ಮುದನೀಡುವಂತೆ ರಂಗೋಲಿಯನ್ನ ಬಿಡಿಸುವ ಅಭಿಯಾನದಲ್ಲಿ ಭಾಗಿಯಾಗಿ ಜಾಗೃತಿ ಮೂಡಿಸಿರುವುದು ಗಮನಸೆಳೆದಿದೆ.

