SUDDILIVE || SHIVAMOGGA
ಅ.26 ರಂದು ಜಿಲ್ಲಾ ಹಾಪ್‌ಕಾಮ್ಸ್ ಚುನಾವಣೆ-District HAPCOMS elections on October 26th
ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘವು 5 ವರ್ಷದ ಅವಧಿಗೆ ಆಡಳಿತ ಮಂಡಳಿಯ ಸಾಮಾನ್ಯ ಚುನಾವಣೆಯನ್ನು ಅ.26 ರಂದು ಸಂಘದ ಎಪಿಎಂಸಿ ಆವರಣದ ಕಟ್ಟಡದಲ್ಲಿ ನಡೆಸುತ್ತಿದೆ.
ಈ ಸಂಬAಧ ಅ.6 ರಂದು ಚುನಾವಣೆ ವೇಳಾಪಟ್ಟಿ ಹೊರಡಿಸಲಾಗಿದ್ದು, ಅದನ್ನು ಸಂಘದ ಅರ್ಹ ಸದಸ್ಯರಿಗೆ ಅಂಚೆ ಮೂಲಕ ಕಳುಹಿಸಿ ಸಂಘದ ನಾಮಫಲಕದಲ್ಲಿ ಪ್ರಕಟಿಸಲಾಗಿದೆ. ಅಂಚೆ ತಲುಪದ ಸಂಘ ಅರ್ಹ ಸದಸ್ಯರ ತಿಳುವಳಿಕೆಗಾಗಿ ಈ ಪ್ರಕಟಣೆಯನ್ನು ನೀಡಲಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಬಾಲರಾಜ್ ಅರಸ್ ರಸ್ತೆ ಗಾಂಧಿ ಪಾಕ್ ಶಿವಮೊಗ್ಗ, ಹಾಪ್‌ಕಾಮ್ಸ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ರಿಟರ್ನಿಂಗ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
District HAPCOMS elections on October 26th