ad

ಹಿಂದೂ ಸಮಾಜವನ್ನ ಒಡೆಯುವುದೇ ಕಾಂಗ್ರೆಸ್ ನ ಹಿಡನ್ ಅಜೆಂಡಾ- ಈಶ್ವರಪ್ಪ-Congres hidden agenda is to divide Hindu societ

 SUDDILIVE || SHIVAMOGGA

ಹಿಂದೂ ಸಮಾಜವನ್ನ ಒಡೆಯುವುದೇ ಕಾಂಗ್ರೆಸ್ ನ ಹಿಡನ್ ಅಜೆಂಡಾ- ಈಶ್ವರಪ್ಪ-Congres hidden agenda is to divide Hindu society - Eshwarappa

Hidden, society


ಜಾತಿ ಜನಗಣತಿಯ ವಿಚಾರದಲ್ಲಿ ಕಾಂಗ್ರೆಸ್ ಹಿಂದೂ ಸಮಾಜವನ್ನ ಒಡೆಯುವ ಹುನ್ನಾರ ನಡೆಸಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ ಮಾಡಲು ರಾಜ್ಯ ಸರ್ಕಾರಕ್ಕೆ ಇಷ್ಟವಿಲ್ಲ. ಜಾತಿ ಜನಗಣತಿಯ ಹೆಸರಿನಲ್ಲಿ ರಾಜ್ಯ ಸರ್ಕಾರ ಹಿಂದೂ ಸಮಾಜಕ್ಕೆ ಎಷ್ಟು ಅನ್ಯಾಯ ಮಾಡಬೇಕು ಅಷ್ಟು ಮಾಡಿದೆ ಎಂದರು.

ಕಾಂತರಾಜು ವರದಿಯನ್ನ ಜಾರಿ ಮಾಡುವುದಾಗಿ ಹೇಳಿದ್ದ ಸಿದ್ದರಾಮಯ್ಯ ಹೈಕಮಾಂಡ್ ಆದೇಶದ ಮೇರೆಗೆ ಮುಚ್ಚಿಹಾಕಿದರು. ಸೆ.22 ರಿಂದ 420 ಕೋಟಿ ಹಣವನ್ನ ಜಾತಿ ಗಣತಿಗೆ ತೆಗೆದಿಡಲಾಗಿದೆ. ಕಾಂತರಾಜು ವರದಿ ಹಳೆಯದೆಂದು ಹೇಳಿ 158 ಕೋಟಿ ಹಣ ನೀರಿನಲ್ಲಿ ಹೋಮ ಮಾಡಿದರ ಟೀಕಿಸಿದರು. 

ಹಿಂದೂ ಸಮಾಜವನ್ನ ಒಡೆಯುವುದೇ ಕಾಂಗ್ರೆಸ್ ನ ಹಿಡನ್ ಅಜೆಂಡವಾಗಿದೆ. ಹಲವು ಕ್ರಿಶ್ಚಿಯನ್ ಜಾತಿಯನ್ನ‌ಮಾಡಲಾಗಿದೆ. ಇದು ಕ್ರಾಂತಿಯಾಗಲಿದೆ. ರಾಜ್ಯ ಸರ್ಕಾರ ಎಚ್ಚರಗೊಳ್ಳದಿದ್ದರೆ ಇದೇ ಸುಡುವ ಬೆಂಕಿಯಾಗೊಇದೆ ಎಂದ ಅವರು ಬಿಜೆಪಿ ಲಿಂಗಾಯಿತರು ಮತ್ತು ಹಿಂದುಳಿದ ನಾಯಕರು ಸಭೆ ಸೇರುತ್ತಿದ್ದಾರೆ. ಕಾಂಗ್ರೆಸ್ ಹಿಂದೂ ಸಮಾಜವನ್ನ ಒಡೆಯುವುದಲ್ಲದೆ ಪಕ್ಷವನ್ನೂ ಒಡೆತುತ್ತಿದ್ದಾರೆ. ಕುರ್ಚಿಗೆ ಅಡ್ಡಬರುತ್ತಿದೆ ಎಂಬ ಕಾರಣಕ್ಕೆ ಧರ್ಮವನ್ನ‌ಒಡೆಯುವ ಪ್ರಯತ್ನ ನಡೆಯುತ್ತಿದೆ ಎಂದರು. 

ದೇವರಾಜ್ ಅರಸ್ ಸಿಎಂ ಆಗಿದ್ದಾಗ ದಿಟ್ಟ ಹೆಜ್ಜೆ ಇಟ್ಟಕಾರಣ ಕಾನೂನು ಕಾಯ್ದೆಗಳು ಜಾರಿಯಾದವು. ಕಾಂಗ್ರೆಸ್ ಹಿಡನ್ ಅಜೆಂಡಾವನ್ನ‌ ಹಿಂದೂ ಸಮಾಜವನ್ನ ಒಡೆಯಲಾಗುತ್ತಿದೆ. ಹಿಂದುಳಿದ ವರ್ಗಗಳ ಉದ್ದಾರ ಮಾಡಲು ಕಾಂತರಾಜ ವರದಿ ಜಾರಿಗೆ ತರುವ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟಪಡಿಸಿ ಎಂದರು.

ಕುರುಬರನ್ನ ಎಸ್ಟಿಗೆ ಸೇರಿಸಲು ಪ್ರಯತ್ನ ನಡೆಯಿತು ಇದು 10 ವರ್ಷದ ಹಿಂದಿನ ಪ್ರಯತ್ನವಾಗಿದೆ. ಕೇಂದ್ರ ಸ್ಪಷ್ಟೀಕರಣ ಕೇಳಿದೆ. ಈ ಸ್ಪಷ್ಟೀಕರಣಕ್ಕೆ ನನ್ನ ನೇತೃತ್ವದ ಸಭೆ ಎಂದು ಬಿಂಬಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. 50 ಕ್ಕೂ ಹೆಚ್ಚು ಜಾತಿಯಲ್ಲಿ ಕ್ರಿಶ್ಚಿಯನ್ ಮಾಡಲಾಗಿದೆ. ಬಾಯಲ್ಲಿ ಹೇಳದೆ ಸಿದ್ದರಾಮಯ್ಯನವರು ಫಾರಂನಲ್ಲಿ ಹೇಳಲಿ. ಇದು ಹಿಂದೂಗಳ ಮೇಲೆ ಮಾತ್ರ ಒಡಕಾಗುವುದಿಲ್ಲ. ಇದು ಕ್ರಿಶ್ಚಿಯನ್ ಮೇಲೆ ಎಫೆಕ್ಟ್ ಆಗಲಿದೆ. ಇದು ಮುಸ್ಲೀಂ ವಿಚಾರದಲ್ಲಿ ಯಾಕೆ ಸೇರಿಸಿಲ್ಲ. ಇದೇ ವಿಚಾರದಲ್ಲಿ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದು ಭವಿಷ್ಯ ನುಡಿದರು. 

ಕಾಂತರಾಜು ವರದಿಯನ್ನ ಜಾರಿಗೊಳಿಸಿದರೆ ಸಿಎಂ ಕುರ್ಚಿ ಕಳೆದುಕೊಳ್ಳುವ ಭೀತಿ ಸಿಎಂಗೆ ಆಗಿರಬಹುದು ಆದುದರಿಂದ ಸಿಎಂ ಜಾತಿಜನಗಣತಿಯಲ್ಲಿ ಯೂಟರ್ನ್ ಹೊಡೆದಿದೆ ಎಂದರು. ಹಿಂದೂ ಹಬ್ಬ ಆಚರಣೆ ಮಾಡಬೇಡಿ ಎಂಬ ಕಾನೂನು ಜಾರಿಗೊಳಿಸಲಿ ಎಂದು ಈಶ್ವರಪ್ಪ ತಿಳಿಸಿದರು. 

ಕೋಮುಗಲಭೆಗೆ ಆರ್ ಎಸ್ ಎಸ್ ಬಿಜೆಪಿ ಕಾರಣ ಎಂದು ಸಿಎಂ ಹೇಳುತ್ತಾರೆ. ಮಸೀದಿಯಿಂದ ಕಲ್ಲುತೂರಲು ಬಿಜೆಪಿಗೆ ಆಗುತ್ತ? ಹಾಗಾಗಿ ಹಿಂದೂಗಳು ಹಬ್ಬ ಆಚರಣೆ ಮಾಡಬಾರದು ಎಂದು ಕಾನೂನು ತನ್ನಿ ಎಂದು ಆಗ್ರಹಿಸಿದರು. ಪಾಕಿಸ್ತಾನ್ ಜಿಂದಾಬಾದ್ ಎಂದು ಭದ್ರಾವತಿಯಲ್ಲಿ ಕೂಗಿದ್ದಾರೆ. ಎಸ್ಪಿ ಹೆಜ್ಹೆ ಮಚ್ಚುವೆ. ಆದರೆ ರಾಜ್ಯ ಸರ್ಕಾರ ಅವರಿಗೆ ಕ್ರಮ ತೆಗೆದುಕೊಳ್ಳಲು ಬಿಡುತ್ತಾ ಎಂಬುದೆ ಚರ್ಚೆ ಆಗಿದೆ. ತಕ್ಷಣವೇ ಕ್ರಮ ಆದರೆ ಸರಿಯಾದ ರೀತಿಯಲ್ಲಿ ಸರ್ಕಾರವಿದೆ ಎನ್ನಬಹುದು ಎಂದರು.

ನಿನ್ನೆ ಮುಸ್ಲೀಂರ ಈದ್ ಮಿಲಾದ್ ಮೆರವಣಿಗೆಯಲ್ಲಿ ಮೂವಿಂಗ್ ಡಿಜೆ ಹಾಕಿರುವುದನ್ನ‌ಪೊಲೀಸ್ ಒಪ್ಪಿದೆ ಕ್ರಮ‌ಕೈಗೊಳ್ಳುವುದಾಗಿ ಹೇಳಿದೆ. 

Congres hidden agenda is to divide Hindu societ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close