SUDDILIVE || SHIVMOGGA
ಮೆಗ್ಗಾನ್ ನಲ್ಲಿ ಉತ್ತಮ ಸೇವೆ ನೀಡಲಾಗುತ್ತಿದೆ-ಡಾ.ವಿರೂಪಾಕ್ಷಪ್ಪ-Good service is being provided at Meggan - Dr. Virupakshappa
ಮೆಗ್ಗಾನ್ ಆಸ್ಪತ್ರೆಯ ಅವ್ಯವಸ್ಥೆಯನ್ನ ವಿರೋಧಿಸಿ ನಾಳೆಯಿಂದ ಎರಡು ದಿನಗಳ ವಿರುದ್ಧ ಪ್ರತಿಭಟನೆ ನಡೆಸಲು ಕರವೇ ನಾರಾಯಾಣ ಗೌಡ ಬಣ ತೀರ್ಮಾನಿಸಿರುವ ಬೆನ್ನಲ್ಲೇ ಆಸ್ಪತ್ರೆಯ ಎಂಎಸ್ ಡಾ.ತಿಮ್ಮಪ್ಪ, ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ಡಿಎಸ್ ಡಾ.ಸಿದ್ದನಗೌಡ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೆ ವಿವರಣೆನೀಡಿದ್ದಾರೆ.
ಮೆಗ್ಗಾನ್ ಆಸ್ಪತ್ರೆಗಳಲ್ಲಿ ಕೆಲ ಘಟನಾವಳಿಗಳು ಅರಿವಾಗಿದೆ. ಒಳ್ಳೆಯ ಕೆಲಸಗಳು ಆಗುತ್ತಿದ್ದರೂ ಜನರಿಗೆ ಮಾಹಿತಿ ತಲುಪುತ್ತಿಲ್ಲ. ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಉತ್ತಮ ಸೇವೆಯನ್ನ ನೀಡಲಾಗುತ್ತಿದೆ ಎಂದು ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ ಅಭಿಪ್ರಾಯಪಟ್ಟರು.
2005-06 ರಲ್ಲಿ ಸಿಮ್ಸ್ ಕಾಲೇಜು ಆರಂಭಗೊಂಡಿತು. 2007 ರಿಂದ ಅಡ್ಮಿಷನ್ ಶುರುವಾಯಿತು. 2012 ರಲ್ಲಿ ಪರ್ಮನೆಂಟ್ ಅಡ್ಮಷನ್ ಗೆ ಅನುಮತಿ ಸಿಕ್ತು. ಈಗ ಪ್ಯಾರ ಮೆಡಿಕಲ್, ಪಿಹೆಚ್ ಎಸ್, ನರ್ಸಿಂಗ್ ಕಾಲೇಜುಗಳು ನಡೆಯುತ್ತಿದ್ದು 2000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸಿಸುತ್ತಿದ್ದಾರೆ. ಸೂಪರ್ ಸ್ಪೆಷಲಿಟಿ, ಮಕ್ಕಳ ಆಸ್ಪತ್ರೆ, ವಸತಿ ಗೃಹ, ಯುಜಿ ಹಾಸ್ಟೆಲ್, ಬಾಯ್ಸ್ ಅಂಡ್ ಗರ್ಲ್ಸ್ ಹಾಸ್ಟೆಲ್, ಆಧುನಿಕ ಶವಗಾರ ಇದೆ. 237 ಕ್ವಾಟ್ರಸ್ ಮನೆಗಳಿವೆ ಎಂದರು.
ಮೆಗ್ಗಾನ್ 1200 ಬೆಡ್ ಆಸ್ಪತ್ರೆ ಆಗಿದೆ. ಮೂರು ನಾಲ್ಕು ಆಸ್ಪತ್ರೆಗಳು ಸೇರಿ ಒಂದೇ ಆಸ್ಪತ್ರೆಯಲ್ಲಿ ಸೇವೆ ಸಿಗುತ್ತಿದೆ. ಜನವರಿ-ಆಗಸ್ಟ್ ನಲ್ಲಿ ಪ್ರತಿ ದಿನ ಹೊರರೋಗಿಗಳು ಮತ್ತು ಒಳರೋಗಿಗಳು 4500 ಸಜನ ಚಿಕಿತ್ಸೆಯ ಸೇವೆ ಪಡೆಯುತ್ತಿದ್ದಾರೆ. ಹಣ ಕರ್ಚು ಮಾಡದೆ ಸೇವೆ ಪಡೆಯುತ್ತಿದ್ದಾರೆ. ಪ್ರತಿ ತಿಂಗಳು ಎಬಿಆರ್ಕೆಯಲ್ಲಿ 3000 ಪೇಷಂಟ್ ಉಚಿತ ಸೇವೆ ಪಡೆಯುತ್ತಿದ್ದಾರೆ. 200 ಕೋಟಿ ಹಣವನ್ನ ಪ್ರತಿವರ್ಷ ರೋಗಿಗಳು ಈ ಯೋಜನೆಯಲ್ಲಿ ಉಚಿತ ಸೇವೆ ಪಡೆಯುತ್ತಿದ್ದಾರೆ ಎಂದರು.
ಪ್ರತಿದಿನ 50-60 ಮೇಜರ್ ಸರ್ಜರಿ ನಡೆಯುತ್ತಿದೆ. 130-140 ಜನ ಮೈನರ್ ಸರ್ಜರಿ ಪಡೆಯುತ್ತಿದ್ದಾರೆ. ಎನ್ ಎಸ್ ಯುಐನಲ್ಲಿ ಇದೆ. ನವಜಾತ ಶಿಶುಗಳಲ್ಲಿ ಪ್ರತಿತಿಂಗಳು 240 ಮಕ್ಕಳಿಗೆ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂಆರ್ಐ 25-30 ಮಾಡಲು ಸಾಧ್ಯ. ಹೊರಗಡೆ 10-15 ಸಾವಿರ ರೂ. ಇದೆ. ಹೊರರೋಗಿಗಳಾಗಿ ಬರುವವರಿಗೆ ದಿನಾಂಕ ನಿಗದಿ ಮಾಡಲಾಗುತ್ತಿದೆ. ಕಾರಣ ಎಂಐಅರ್ ನಡೆಸಿದರೆ ಇಲ್ಲಿ 1500-2000 ಕರ್ಚಾನಲ್ಲಿ ಪ್ರತಿದಿನ. ಸಿಟಿಸ್ಕ್ಯಾನ್ ನಲ್ಲಿ 125 ಜನರಿಗೆ ಸೇವೆ ನೀಡಲಾಗುತ್ತಿದೆ. 370 ರಿಂದ 400 ಎಕ್ಸ್ ರೇ ನೀಡಲಾಗುತ್ತಿದೆ. 100 ಜನರಿಗೆ ಅಲ್ಟ್ರಸೌಂಡ್ ಸ್ಕ್ಯಾನಿಂಗ್ ಸೇವೆ ನೀಡಲಾಗುತ್ತಿದೆ ಎಂದರು.
ಸೂಪರ್ ಸ್ಪೆಷಾಲಿಟಿಯಲ್ಲಿ ಒಪಿಡಿ ಪ್ರತ್ಯೇಕ ಪಡಿಸಲಾಗಿದೆ. ವಾರಕ್ಕೆ 2 ದಿನಗಳಿರುತ್ತದೆ. ಸಿಬ್ಬಂದಿಗಳು ಪ್ರತ್ಯೇಕವಾಗಲಿದ್ದಾರೆ. 8 ಡಿಪಾರ್ಟ್ ಮೆಂಟ್ ಆರಂಭಿಸಲಾಗಿದೆ. 4 ಮಾಲ್ ಮಡ್ಯೂಲರ್ ಆಪರೇಷನ್ ತಿಯೇಟರ್ ನಿರ್ಮಿಸಲಾಗಿದೆ. ಔಷಧಿಯನ್ನ ಕೆಬಿಆರ್ ಬಿಕೆ, ಆಯುಷ್ ಮಾನ್ ಮತ್ತಿತರೆ ಯೋಜನೆ ಅಡಿಯಲ್ಲಿ 20-25 ಕೋಟಿ ರೂ.ವಿನ ಮೆಡಿಸಿನ್ ಪೂರೈಸಲಾಗುತ್ತಿದೆ.
ಎಂಎಸ್ ಡಾ.ಸಿದ್ದಪ್ಪ ಮಾತನಾಡಿ ಉಪ ಲೋಕಾಯುಕ್ತರು ಭೇಟಿನೀಡಿದಾಗ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಹೆರಿಗೆ ವಾರ್ಡ್ ನಲ್ಲಿ ಪುರುಷ ಅಟೆಂಡರ್ ನ್ನ ನಿರ್ಬಂಧಿಸಲಾಗಿದೆ. ಮಕ್ಕಳ ಕಳ್ಳತನ ತಡೆಯಲು ಸಿಸಿ ಟಿವಿ ಹಾಕಲಾಗಿದೆ. ಒಬಿಜಿ ಲೇಬರ್ ಚಾರ್ಡ್, ಎಂಎಸ್ ಯುಐ ಇಲ್ಲಿ ದೂರುಗಳು ಹೆಚ್ಚು. ಅಲ್ಲಿ ನಮ್ಮ ಗಮನಹೆಚ್ಚಿದೆ. 35 ಕೋಟಿ ವಾರ್ಷಿಕ ವರಮಾನವಿದೆ ಎಂದರು.
ಶೌಚಾಲಯಗಳು 500 ಇವೆ 11 ಸಾವಿರ ಜನ ರೊಟೇಷನ್ ಇದೆ. ಪ್ರತಿ ಶೌಚಾಲಯಗಳನ್ನ ದಿನಕ್ಕೆ ಕನಿಷ್ಠ ಎರಡು ಬಾರಿ ಸ್ವಚ್ಛವಾಗಿಸಲಾಗುತ್ತದೆ. ಸಮಸ್ಯೆಗಳಿವೆ. ಆದರೆ ಮಾಧ್ಯಮಗಳಲ್ಲಿ ಹೇಳುವಂತೆ ಸಮಸ್ಯೆಗಳಿಲ್ಲ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
Good service is being provided at Meggan - Dr. Virupakshappa