ad

ಡಾ.ಅಂಬೇಡ್ಕರ್ ಭವನಕ್ಕಾಗಿ ಪಾದಯಾತ್ರೆ- March for Dr. Ambedkar Bhavan

 SUDDILIVE || SHIVAMOGGA

ಡಾ.ಅಂಬೇಡ್ಕರ್ ಭವನಕ್ಕಾಗಿ ಪಾದಯಾತ್ರೆ- March for Dr. Ambedkar Bhavan   


ಡಾ. ಅಂಬೇಡ್ಕರ್‌ ಭವನಕ್ಕೆ ಜಾಗ ಮಂಜೂರು ಮಾಡಿಕೊಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಗಾಜನೂರು ಗ್ರಾಮದಿಂದ ಜಿಲ್ಲಾ ಪಂಚಾಯಿತಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಯಿತು.

ಗಾಜನೂರು ಗ್ರಾಮ ಪಂಚಾಯಿತಿಯ ಎ.ಕೆ, ಎ.ಡಿ ಕಾಲೋನಿ ಪಕ್ಕದಲ್ಲಿರುವ ಹಳೆಯ ದೊಡ್ಡಿ ಖಾಲಿ ಜಾಗವನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭವನಕ್ಕೆ ಮಂಜೂರು ಮಾಡಿಕೊಡುವಂತೆ ಆಗ್ರಹಿಸಲಾಯಿತು. ಜಿಲ್ಲಾ ಪಂಚಾಯಿತಿ ಸಿಇಒ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಗಾಜನೂರು ಗ್ರಾಮ ಪಂಚಾಯಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ ಆದಿ ಕರ್ನಾಟಕ ಹಾಗೂ ಆದಿ ದ್ರಾವಿಡ ಜನಾಂಗದ ಸುಮಾರು 150ಕ್ಕೂ ಹೆಚ್ಚು ಕುಟುಂಬಗಳ ವಾಸವಾಗಿವೆ. ಪ್ರತಿ ಮನೆಯಲ್ಲಿ ಎರಡು ಮೂರು ಕುಟುಂಬಗಳು ವಾಸವಾಗಿವೆ. ಈ ಜನಾಂಗದವರಿಗೆ ಶುಭ ಕಾರ್ಯಗಳನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಭಾಂಗಣವಿಲ್ಲ. ಆದ್ದರಿಂದ ಡಾ. ಅಂಬೇಡ್ಕರ್‌ ಭವನಕ್ಕೆ ಜಾಗ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ಪ್ರಮುಖರಾದ ಹಾಲೇಶಪ್ಪ, ಶಿವಾಜಿ, ಮೂರ್ತಿ, ನಾಗರಾಜ್, ಪ್ರಭು, ರಾಜ್‌ಕುಮಾ‌ರ್, ಆನಂದ್, ಶೇಷಪ್ಪ, ಪರಮೇಶ್ವರ ಸೂಗೂರು, ರಂಗಪ್ಪ ಸೇರಿ ಹಲವರು ಇದ್ದರು.

March for Dr. Ambedkar Bhavan

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close