SUDDILIVE || SHIVAMOGGA
ಡಿಕೆಶಿಗೆ ಸಿಎಂ ಸ್ಥಾನ ಕೊಡುವಂತೆ ಎರಡು ಸಂಘಟನೆಗಳ ಒತ್ತಾಯ-Two organizations demand that DKS be given the CM position
ಎರಡು ಸಂಘಟನೆಗಳು ಎರಡು ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಡಿಸಿಎಂ ಡಿಕೆ ಶಿವಕುಮಾರ್ ಪರ ಬ್ಯಾಟ್ ಬೀಸಿವೆ. ಸಿಎಂ ಸ್ಥಾನವನ್ನ ಸಿದ್ದರಾಮಯ್ಯನವರು ಬಿಟ್ಟುಕೊಟ್ಟು ನಡೆದಂತೆ ನುಡಿಯಬೇಕೆಂದು ಆಗ್ರಹಿಸಿದೆ.
ಮೊದಲಿಗೆ ಸುದ್ದಿಗೋಷ್ಠಿ ನಡೆಸಿದ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ನ ಕಲ್ಲೂರು ಮೇಘರಾಜ್
2023 ರಲ್ಲಿ 136 ಸ್ಥಾನ ಗೆದ್ದ ಕಾಂಗ್ರೆಸ್ ದೆಹಲಿಯಲ್ಲಿ ಹೈಕಮಾಂಡ್ ಸಂಧಾನ ಸೂತ್ರವನ್ನ ತಂದು ಎರಡು ವರೆ ವರ್ಷ ಒಬ್ಬರು ಉಳಿದರೆಡು ವರ್ಷ ಮತ್ತೊಬ್ಬರು ಎಂದು ತೀರ್ಮನಿಸಿದ್ದು ಈ ವಿಷಯವನ್ನ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಹೇಳಿದ್ದಾರೆ ಎಂದು ತಿಳಿಸಿದರು.
ಕೊಟ್ಟ ಮಾತಿನಂತೆ ಸಿದ್ದರಾಮಯ್ಯನವರು ಡಿಕೆಶಿಗೆ ಮುಂದಿನ ಎರಡುವರೆ ವರ್ಷ ಸಿಎಂ ಸ್ಥಾನವನ್ನ ಬಿಟ್ಟುಕೊಡಬೇಕೆಂದು ಆಗ್ರಹಿಸಿದರು.
ಶಿವಮೊಗ್ಗ ಜಿಲ್ಲಾ ಒಕ್ಕಲಿಗ ಒಕ್ಕೂಟದ ಅಧ್ಯಕ್ಷ ಗೋ ರಮೇಶ್ ಗೌಡ ಅವರು ಸಹ ಮಾತನಾಡಿ ಡಿ ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು. ವಚನಭ್ರಷ್ಠ ಎಂಬ ಹಣೆಪಟ್ಟಿಕೊಳ್ಳದ ಸಿದ್ದರಾಮಯ್ಯನವರು ತನು ಮನ ದನದಿಂದ ಸಿಎಂ ಸ್ಥಾನ ಬಿಟ್ಟುಕೊಡಬೇಕು.
ಸಿದ್ದರಾಮಯ್ಯನವರು ಒಬ್ಬರೇ ಅಹಿಂದ ನಾಯಕರಲ್ಲ ಡಿಕೆಶಿಯವರು ಸಹ ಅಹಿಂದ ನಾಯಕರು ಎಂದು ಬ್ಯಾಟ್ ಬೀಸಿದ್ದಾರೆ.
Two organizations demand that DKS be given the CM position

