SUDDILIVE || SHIVAMOGGA
ಬಾಣಂತಿ ಸಾವು-ಮೆಗ್ಗಾನ್ ವೈದ್ಯರ ವಿರುದ್ಧ ದೂರು- Pregnant woman dies - Meggan files complaint against doctor
ಶಿವಮೊಗ್ಗ ಮೆಗ್ಗಾನ್ ವೈದ್ಯರ ನಿರ್ಲಕ್ಷ ಬಾಣಂತಿ ಸಾವಾಗಿದೆ. ಚಿಕಿತ್ಸೆ ಫಲಕಾರಿಯಾಗದೆ 26 ವರ್ಷದ ನೂರ್ ಅಪ್ ಶಾ ಸಾವಾಗಿದೆ. ವೈದ್ಯರ ನಿರ್ಲಕ್ಷದ ವಿರುದ್ಧ ಮೃತ ಮಹಿಳೆಯ ಕುಟುಂಬ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಾಣಂತಿ ಸಾವಿನಿಂದ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ. ನವಂಬರ್ 21ರಂದು ನೂರ್ ಅಪ್ ಶಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಶಸ್ತ್ರಚಿಕಿತ್ಸೆ ಮೂಲಕ ಗಂಡುಮಗುವಿಗೆ ಜನ್ಮ ನೀಡಿದ್ದರು. ಅಪರೇಷನ್ ವೇಳೆ ವೈದ್ಯರ ಎಡವಟ್ಟು ಆರೋಪಿಸಲಾಗಿದೆ.
ಅಪರೇಷನ್ ನಂತರ ಮಹಿಳೆಯ ಆರೋಗ್ಯದಲ್ಲಿ ಏರುಪೇರಾಗಿದೆ. ದಿನದಿಂದ ದಿನಕ್ಕೆ ಮಹಿಳೆಯ ಹೊಟ್ಟೆ ದಪ್ಪಗಾಗಿದೆ. ಮಲವಿಸರ್ಜನೆ ಆಗದೆ ಬಾಣಂತಿ ಪರದಾಡಿದ್ದಾರೆ.
ನಂತರ ಬಾಣಂತಿಗೆ ಮಲ ವಾಂತಿಯ ರೂಪದಲ್ಲಿ ಬೇಧಿ ಆರಂಭವಾಗಿದೆ. ಒಂದು ವಾರದಿಂದ ಮಲವಿಸರ್ಜನೆ ಮಾಡದ ಬಾಣಂತಿ ಮತ್ತೊಂದು ಅಪರೇಷನ್ ನಡೆಸಲಾಗಿದೆ. ಮತ್ತೆ ಎರಡನೇ ಅಪರೇಷನಲ್ಲೂ ವೈದ್ಯರ ನಿರ್ಲಕ್ಷದಿಂದ ಬಾಣಂತಿ ಸಾವಾಗಿದೆ ಎಂದು ಆರೋಪಿಸಲಾಗಿದೆ.
ವೈದ್ಯರ ವಿರುದ್ಧ ಆಕ್ರೋಷ ವ್ಯಕ್ತ ಪಡಿಸಿದ ಕುಟುಂಬಸ್ಥರು, ನೂರ್ ಅಪ್ ಶಾ ಮೂರುವರ್ಷದ ಹೆಣ್ಣುಮಗು ಹಾಗೂ ನವಜಾತ ಗಂಡು ಶಿಶುವಿಗೆ ಜನ್ಮನೀಡಿದ್ದಾರೆ. ಮಹಿಳೆಯ ಕಡೆಯವರು ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ. ವೈದ್ಯರ ನಿರ್ಲಕ್ಷದ ವಿರುದ್ದ ದೊಡ್ಡಪೇಟೆ ಪಿಐಗೆ ದೂರು ನೀಡಲಾಗಿದೆ.
Pregnant woman dies - Meggan files complaint against doctor
