ಬೀದಿನಾಯಿಗಳ ಹಾವಳಿಗೆ ಸುಪ್ರೀಂ ಗೈಡ್ ಲೈನ್ ಅಡಿ ಆಪರೇಷನ್-ಡಿಸಿ- Operation DC under Supreme Guidelines to combat stray dog ​​menace

 SUDDILIVE || SHIVAMOGGA

ಬೀದಿನಾಯಿಗಳ ಹಾವಳಿಗೆ ಸುಪ್ರೀಂ ಗೈಡ್ ಲೈನ್ ಅಡಿ ಆಪರೇಷನ್-ಡಿಸಿ-  Operation DC under Supreme Guidelines to combat stray dog ​​menace 

Dog, operation

ದೇಶದಾದ್ಯಂತ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು ಆ ನಿರ್ದೇಶನದ ಅಡಿಯಲ್ಲಿಯೇ ಶಿವಮೊಗ್ಗದಲ್ಲಿಯೂ ಬೀದಿ ನಾಯಿಗಳ ಹಾವಳಿಯನ್ನ ನಿಯಂತ್ರಿಸಲು ಜಿಲ್ಲಾಡಳಿತ ಮುಂದಾಗಿದೆ. 

ಬೀದಿ ನಾಯಿ ಹಾವಳಿಗೆ ಇತ್ತೀಚೆಗೆ ವಿದ್ಯಾನಗರದ 7 ವರ್ಷದ ಬಾಲಕನ ಮೇಲೆ ದಾಳಿ ನಡೆಸಿ ಅನಾಹುತಕ್ಕೆ ಕಾರಣವಾಗಿತ್ತು. ಬಾಲಕನ ಕುಟುಂಬ ಪಾಲಿಕೆ ಆಯುಕ್ತ ಮತ್ತು ಹೆಲ್ತ್ ಇನ್ ಸ್ಪೆಟಕ್ಟರ್ ಮೇಲೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಬಂದಿತ್ತು. 

ಆದರೆ ಸುಪ್ರೀಂ ಕೋರ್ಟ್ ಗೈಡ್ ಲೈನ್ ಪ್ರಕಾರ 6 ವಾರಗಳಲ್ಲಿ ಬೀದಿ ನಾಯಿಗಳ ಆಪರೇಷನ್ ನಡೆಸಲು ಸಮಯ ನಿಗದಿ ಪಡಿಸಿದೆ. ಈ ಕುರಿತು ತಮ್ಮನ್ನ ಭೇಟಿ ಮಾಡಿದ ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆಪರೇಷನ್ ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಿರ್ದೇಶನ ನೀಡಿದ್ದಾರೆ. 

ಮೊದಲು ಸರ್ಕಾರಿ ಸ್ಥಳಗಳಾದ ಪೊಲೀಸ್ ಠಾಣೆ, ಜಿಲ್ಲಾಧಿಕಾರಿಗಳ ಕಚೇರಿ, ಗ್ರಾಮಪಂಚಾಯಿತಿ, ಸೇರಿದಂತೆ ಎಲ್ಲೆಡೆ ಸರ್ಕಾರಿ ಸ್ಥಳಗಳಲ್ಲಿ ಕಾಣುವ ಬೀದಿನಾಯಿಗಳನ್ನ ಗುರುತಿಸಿ ಅವಗಳನ್ನ ಹಿಡಿದು ತಂದು ಒಂದು ಜಾಗದಲ್ಲಿ ಸಂತಾನ ಹರಣ ಮಾಡಲಾಗುವುದು ಎಂದಿದ್ದಾರೆ.

ಆರು ವಾರದಲ್ಲಿ ಈಗ ಒಂದು ಅಥವಾ ಎರಡು ವಾರ ಮುಗಿದಿದೆ. ಉಳಿದ ವಾರಗಳಲ್ಲಿ ಸರ್ಕಾರಿ ಸ್ಥಳಗಳಲ್ಲಿರುವ ಬೀದಿ ನಾಯಿಯನ್ನ ಹಿಎಇದು ಸಙತಾನ ಹರಣ ಮಾಡಲಾಗುವುದು ನಂತರ ಇತರೆ ಖಾಸಗಿ ಸ್ಥಳಗಳಲ್ಲಿ ಬೀದಿ ನಾಯಿ ಹಿಡಿದು ಸಂತಾನ ಹರಣ ಕೆಲಸ ಮಾಡಲಾಗುವುದು ಎಂದಿದ್ದಾರೆ. 

ಈ ಆಪರೇಷನ್ ಕಾರ್ಯ ಹೇಗೆ ಯಶಸ್ವಿಯಾಗುತ್ತೆ ಎಂಬುದೇ ಕುತೂಹಲವಾಗಿದೆ. ಆದರೂ ಕಾದು ನೋಡಬೇಕಿದೆ. 

Operation DC under Supreme Guidelines to combat stray dog ​​menace

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close