SUDDILIVE || SHIVAMOGGA
ಶಿವಮೊಗ್ಗದ ಹುಡುಗಿ ಈಗ ನ್ಯಾಯಾಧೀಶೆ- A girl from Shimoga is now a judge
ಜಿಲ್ಲೆಯ ಹೊಸನಗರ ತಾಲೂಕಿನ ಕಾಳೇಶ್ವರ ಗ್ರಾಮದ ಯುವತಿ ರಕ್ಷಿತಾ ಕೆ.ಎಸ್. ಅವರು ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗುವ ಮೂಲಕ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಹೊಸ ಆಯಾಮ ನೀಡಿದ್ದಾರೆ. ಅತೀ ಕಿರಿಯ ವಯಸ್ಸಿನಲ್ಲಿಯೇ ನ್ಯಾಯಾಂಗ ಸೇವೆಗೆ ಪ್ರವೇಶ ಪಡೆದಿರುವುದು ಅವರ ಅಚಲ ಶ್ರಮ ಮತ್ತು ಸಾಧನೆಗೆ ಸಾಕ್ಷಿಯಾಗಿದೆ.
ಕಾಳೇಶ್ವರದ ಸತ್ಯನಾರಾಯಣ್ ಮತ್ತು ನಾಗರತ್ನ ದಂಪತಿಯ ಪುತ್ರಿಯಾದ ರಕ್ಷಿತಾ, ಸರ್ಕಾರಿ ಶಾಲೆಗಳಲ್ಲಿ ಓದಿ ಇಂದಿನ ಸ್ಥಾನಕ್ಕೆ ತಲುಪಿರುವುದು ವಿಶೇಷ. ಬಾಳೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆರಂಭವಾದ ಇವರ ಶಿಕ್ಷಣದ ಹಾದಿ, ರಿಪ್ಪನ್‌ಪೇಟೆಯ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಮುಂದುವರಿಯಿತು. ಬಳಿಕ ಶಿವಮೊಗ್ಗದ ನ್ಯಾಷನಲ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು, ವಕೀಲರಾಗಿ ವೃತ್ತಿ ಅನುಭವ ಪಡೆದರು
ಕರ್ನಾಟಕ ಉಚ್ಚ ನ್ಯಾಯಾಲಯ ನಡೆಸಿದ ಸಿವಿಲ್ ನ್ಯಾಯಾಧೀಶರ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ರಾಜ್ಯಾದ್ಯಂತ ಆಯ್ಕೆಯಾದ 83 ಅಭ್ಯರ್ಥಿಗಳಲ್ಲಿ ರಕ್ಷಿತಾ ಅವರು 42ನೇ ಶ್ರೇಯಾಂಕ ಪಡೆದು ಮಿಂಚಿದ್ದಾರೆ. ಹಳ್ಳಿಯ ಹಿನ್ನೆಲೆಯಿಂದ ಬಂದ ಯುವತಿಯೊಬ್ಬರು ಈ ಮಟ್ಟದ ಸಾಧನೆ ಮಾಡಿರುವುದು ಜಿಲ್ಲೆಯಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ.
ವರ್ತಮಾನದಲ್ಲಿ ಶಿಕ್ಷಣವೇ ಅತಿ ಮುಖ್ಯ. ಓದು ಎಲ್ಲವನ್ನೂ ನೀಡುತ್ತದೆ, ಅದರಲ್ಲೂ ತಳ ಸಮುದಾಯದವರು ಶಿಕ್ಷಣದ ಮೂಲಕವೇ ಬದುಕನ್ನು ಕಟ್ಟಿಕೊಳ್ಳಬೇಕಿದೆ. ನನ್ನ ವೃತ್ತಿ ಬದುಕಿನಲ್ಲಿ ಸಂವಿಧಾನದ ಆಶಯಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ ಹಾಗೂ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ.
ವರ್ತಮಾನದಲ್ಲಿ ಶಿಕ್ಷಣವೇ ಅತಿ ಮುಖ್ಯ. ಓದು ಎಲ್ಲವನ್ನೂ ನೀಡುತ್ತದೆ, ಅದರಲ್ಲೂ ತಳ ಸಮುದಾಯದವರು ಶಿಕ್ಷಣದ ಮೂಲಕವೇ ಬದುಕನ್ನು ಕಟ್ಟಿಕೊಳ್ಳಬೇಕಿದೆ. ನನ್ನ ವೃತ್ತಿ ಬದುಕಿನಲ್ಲಿ ಸಂವಿಧಾನದ ಆಶಯಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ ಹಾಗೂ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ರಕ್ಷಿತಾ ಕೆ.ಎಸ್. ಹೇಳಿದ್ದಾರೆ.
A girl from Shimoga is now a judge
