SUDDILIVE || SHIVAMOGGA
ನವುಲೆ ಚಾನೆಲ್ ಏರಿಯಾ, ಬಿತ್ತು ದಂಡ-Navule Channel Area, Bithu Danda
ಕಸದ ರಾಶಿಯನ್ನ ತಂದು ಸುರಿಯುವವರಿಗೆ ಮಹಾನಗರ ಪಾಲಿಕೆ ದಂಡ ವಿಧಿಸುವುದಾಗಿ ಸೂಚಿಸಿದರ ಸಹ, ಕಸದ ರಾಶಿಯನ್ನ ಎಲ್ಲಂದರಲ್ಲಿ ಬಿಸಾಕುವ ಚಾಳಿಯನ್ನ ಕೆಲವರು ಮುಂದುವರೆಸಿದ್ದಾರೆ. ಪರಿಣಾಮ ಪಾಲಿಕೆಯ ದಂಡ ವಸೂಲಿ ಮುಂದುವರೆದಿದೆ.
ಸಾರ್ವಜನಿಕವಾಗಿ ಬೈಪಸ್ ಬಳಿ ಕಟ್ಟಡದ ಅವಶೇಷಗಳನ್ನ ತಂದು ಸುರಿಯುತ್ತಿದ್ದು, ಇದನ್ನ ಕಂಡ ಕಂಡಲ್ಲಿ ಬಿಸಾಕದಂತೆ ಸೂಚಿಸಿ ಫೆ.7 ರಂದು ಟ್ಯಾಕ್ಟರ್ ನಲ್ಲಿ ಕಸಗಳ ತಂದವರಿಗೆ ಸಾವಿರ ರೂ. ದಂಡ ಸಂಗ್ರಹಿಸಲಾಯಿತು. ನಿನ್ನಯೂ ಸಹ ದಂಡ ವಿಧಿಸಲಾಯಿತು. ಆದರೆ ದಂಡ ವಸೂಲಿ ಮಾಡಿದರು ಬುದ್ದಿಕಲಿಯದ ಕೆಲಸವರು ತಮ್ಮ ಚಾಳಿಯನ್ನ ಮುಂದುವರೆಸಿದ್ದರಿಂದ ದಂಡ ಸಂಗ್ರಹಿಸಿ ಜಾಗೃತಿ ಮೂಡಿಸಲಾಗಿದೆ.
ಮಾನ್ಯ ಆಯುಕ್ತರ ನಿರ್ದೇಶನದಂತೆ ಸಾರ್ವಜನಿಕ ಪ್ರದೇಶದಲ್ಲಿ ಅನಧಿಕೃತವಾಗಿ ನವುಲೆ ಚಾನಲ್ ಏರಿಯಾ ದಲ್ಲಿ ತ್ಯಾಜ್ಯ ಸುರಿಯುತ್ತಿರುವವರಿಗೆ ದಂಡ ವಿಧಿಸಿ, ಇನ್ನು ಮುಂದೆ ಈ ರೀತಿ ಸಾರ್ವಜನಿಕ ಪ್ರದೇಶದಲ್ಲಿ ಎಲ್ಲಿಯೂ ಕೂಡ ಸುರಿಯದಂತೆ ಆರೋಗ್ಯ ನಿರೀಕ್ಷಕರಾದ ಲೋಹಿತ್ ಯಾದವ್ ಮತ್ತು ಅಮರೇಶ್ ರವರು ತಿಳುವಳಿಕೆ ನೀಡಿದರು.
Navule Channel Area, Bithu Danda
