SUDDILIVE || SHIVAMOGGA
15 ನೇ ಮೈಲಿಗಲ್ಲಿನ ಬಳಿ ಬಸ್ ಮತ್ತು ಆಲ್ಟೋ ನಡುವೆ ಅಪಘಾತ, ಮೂವರಿಗೆ ಗಾಯ- Accident between bus and Alto near 15th milestone, three injured
ಆಲ್ಟೋ ಮತ್ತು ಖಾಸಗಿ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ.
ತುಂಗ ನಗರ ಪೊಲೀಸ್ ಠಾಣ ವ್ಯಾಪ್ತಿಯ ತೀರ್ಥಹಳ್ಳಿ ರಸ್ತೆಯಲ್ಲಿ ಬರುವ 15 ನೇ ಮೈಲಿಗಲ್ಲಿನಲ್ಲಿ ಶಿವಮೊಗ್ಗದ ಕಡೆ ತೆರಳುತ್ತಿದ್ದ ಖಾಸಗಿ ಬಸ್ ಗೆ ಮಾಳೂರಿಗೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ.
ರವೀಂದ್ರ ಎಂಬುವರು (65) ಕಾರನ್ನ ಚಲಾಯಿಸುತ್ತಿದ್ದು, ಭಾಸ್ಕರ್ (50) ಮತ್ತು ಲಕ್ಕಪ್ಪ ಎಂಬುವರಿಗೆ (80) ಗಂಭೀರ ಗಾಯಗಳಾಗಿವೆ. ರವೀಂದ್ರರವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಭಾಸ್ಕರ್ ಅವರಿಗೆ ತಲೆಗೆ ಹೊಡೆತ ಬಿದ್ದಿದೆ. ಲಕ್ಕಪ್ಪರವರ ಸ್ಥಿತಿ ಗಂಭೀರವಾಗಿದೆ. ರವೀಂದ್ರ ಮತ್ತು ಭಾಸ್ಕರ್ ಹೊಸನಗರದವರೆಂದು ತಿಳಿದುಬಂದಿದೆ. ಲಕ್ಕಪ್ಪ ತೀರ್ಥಹಳ್ಳಿ ತಾಲೂಕಿನವರು ಎಂದು ತಿಳಿದು ಬಂದಿದೆ.
ಮೂವರನ್ನ ಶಿವಮೊಗ್ಗದ ಮೆಗ್ಗಾನ್ ಗೆ ಕರೆತರಲಾಗಿದೆ. ಲಕ್ಕಪ್ಪನವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿವೆ. ಉಳಿದಿಬ್ವರಿಗೆ ಮೆಗ್ಗಾನ್ ನಲ್ಲಿ ಚಿಕಿತ್ಸೆ ನೀಡಲಾಗಿದೆ.
Accident between bus and Alto near 15th milestone, three injured
