SUDDILIVE || SHIVAMOGGA
ಮದುವೆ ಮನೆಗಳಲ್ಲಿ ಚಿನ್ನಾಭರಣ ಕದಿಯುತ್ತಿದ್ದವಳು ಈಗ ಪೊಲೀಸರ ಅತಿಥಿ-Woman who used to steal gold ornaments from weddings is now a guest of the police
ಮದುವೆ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ತುಂಗ ನಗರ ಪೊಲೀಸರು ಬಂದಿಸಿ ಆಕೆಯಿಂದ 120 ಗ್ರಾಂ ಚಿನ್ನಾಭರಣಗಳನ್ನ ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾದಿಮಹಲ್ ಗಳಲ್ಲಿ ಮದುವೆಯ ಸಮಯದಲ್ಲಿ ನಡೆಯುತ್ತಿದ್ದ ಕಳ್ಳತನ ಪ್ರಕರಣಗಳ ಪತ್ತೆಗಾಗಿ ಪೊಲೀಸರು ತಂಡ ರಚಿಸಲಾಗಿತ್ತು.
ಎಸ್.ಪಿ ನಿಖಿಲ್ ಬಿ. ಎ.ಜಿ ಕಾರಿಯಪ್ಪ, ರಮೇಶ್ ಕುಮಾರ್ ಎಸ್ ಹಾಗೂ ಉಪವಿಭಾಗದ ಡಿ.ವೈ.ಎಸ್.ಪಿ ಬಾಬು ಅಂಜನಪ್ಪರವರ ಮಾರ್ಗದರ್ಶನದಲ್ಲಿ ತುಂಗಾನಗರ ಇನ್ಸ್ ಪೆಕ್ಟರ್ ಕೆ.ಟಿ ಗುರುರಾಜ್, ಶ್ರೀ ಗಾದಿಲಿಂಗಪ್ಪ ಗೌಡರ್ ಪಿಎಸ್ಐ ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಹೆಚ್ಸಿ ಕಿರಣ್ ಮೋರೆ, ಅರುಣ್ ಕುಮಾರ್, ಶ್ರೀಮತಿ ಶೋಭಾರಾಣಿ ಹಾಗೂ ಪಿಸಿಗಳಾದ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಹರೀಶ್, ರಂಗನಾಥ್, ತಮ್ಮಣ್ಣ ಜಂಬಗಿ, ರವರನ್ನೊಳಗೊಂಡ ತಂಡವನ್ನು ರಚಿಸಿರುತ್ತಾರೆ.
ಈ ತಂಡ ಶಿವಮೊಗ್ಗ, ತುಂಗಾನರ ಪೊಲೀಸ್ ಠಾಣಾ ವ್ಯಾಪ್ತಿಯ ಶಾದಿಮಹಲ್ ಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿತೆಯಾದ ಶ್ರೀಮತಿ ರುಕ್ಸಾರ್ ಫಿರ್ದೋಸ್ ಕೊಂ ಮೊಹಮದ್ ನಯಾಜ್ 30 ವರ್ಷ ವಾಸ: ಸೂಳೆಬೈಲ್ ಶಿವಮೊಗ್ಗ ಈಕೆಯನ್ನು ದಿನಾಂಕ:07/03/2026 ರಂದು ವಶಕ್ಕೆ ಪಡೆದು ಆರೋಪಿತೆಯಿಂದ ತುಂಗಾನಗರ ಪೊಲೀಸ್ ಠಾಣೆಯ 04 ಪ್ರಕರಣಗಳಲ್ಲಿ ಒಟ್ಟು 18,00,000/- ರೂ ಅಂದಾಜು ಮೌಲ್ಯದ 120 ಗ್ರಾಂ ಬಂಗಾರದ ಆಭರಣಗಳನ್ನು ವಶ ಪಡಿಸಿಕೊಂಡಿರುತ್ತಾರೆ. ತಂಡದ ಕೆಲಸದ ಬಗ್ಗೆ ಮೇಲಾಧಿಕಾರಿಗಳು ಶ್ಲಾಘಿಸಿದ್ದಾರೆ.
Woman who used to steal gold ornaments from weddings is now a guest of the police

