SUDDILIVE || SHIVAMOGGA
ಬಸವೇಶ್ವರ ಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದಲ್ಲಿ ಬಿಎಸ್ ವೈಗೆ ಸನ್ಮಾನ-BSY honored at Basaveshwara Swamy Town Pattana Cooperative Society
ಅಣ್ಣ ಬಸವಣ್ಣನ ಹೆಸರಿನಲ್ಲಿ ಆರಂಭಗೊಂಡ ಬಸವೇಶ್ವರ ಸ್ವಾಮಿ ಪಟ್ಟಣ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವನ್ನ ಆಚರಿಸುತ್ತಿರುವುದು ಸಂತೋಷದ ವಿಷಯ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.
ಅವರು ನಗರದ ಕುವೆಂಪು ರಂಗಮಂದಿರದಲ್ಲಿ ಬಸವೇಶ್ವರಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು,
40 ಸದಸ್ಯರಿಂದ 1925 ರಲ್ಲಿ ಶುಭಾರಂಭಗೊಂಡ ಪತ್ತಿನ ಸಹಕಾರ ಸಂಘ ಮಹಲಿಂಗಪ್ಪನವರ ಮಾರ್ಗದರ್ಶನದಲ್ಲಿ ನಡೆದು ಬಂದಿದೆ. ಈಗ ಬಳ್ಳಕೆರೆ ಅವರ ಆಡಳಿತ ಮಂಡಳಿ ಚೆನ್ನಾಗಿ ಸಂಘವನ್ನ ಅಭಿನಂದಿಸಿದರು. ಮರ ಬೃಹತ್ ಆಗಿ ಬೆಳದು ಬೇರವರಿಗೆ ನೆರಳಾಗುವದೇ ಪ್ರಕೃತಿ ನಿಯಮ ಅದರಂತೆ ಸಂಘ ಬೆಳೆದಿದೆ ಎಂದರು.
ಸಹಕಾರ ತತ್ವದ ಮೇಲೆ ಶತಮಾನದ ಮಾರ್ಗ ಹಿಡಿದಿರುವುದು ಸಂತೋಷ ತಂದಿದೆ ಇನ್ನೂ ಹೆಚ್ಚು ಜನರಿಗೆ ಇದು ಉಪಯೋಗ ನೀಡಲಿ ಎಂದು ಆಶಿಸಿದರು.
ಸಂಸದ ರಾಘವೇಂದ್ರ ಮಾತನಾಡಿ, ಸಂಘ ಹಣಕಾಸಿನ ವ್ಯವಹಾರದ ಸಂಸ್ಥೆಯಾಗದೆ ಶಿವಮೊಗ್ಗದ ಆಸ್ಮಿತೆಯಾಗಿ ಬೆಳೆಯಲಿ ಎಂದರು.
ಬಿಎಸ್ ವೈ ಎಲ್ಲ ವರ್ಗದವರಿಗೆ ಅವರ ಅಧಿಕಾರದ ಅವಧಿಯಲ್ಲಿ ಮಾಡಿದ್ದಾರೆ ಕ್ಷೀರಧಾರೆ, ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕ ಮಂತ್ರಾಲಯವನ್ನ ಆರಂಭಿಸುವಂತಾಗಿದ್ದು ಬಿಎಸ್ ವೈನಿಂದ ಎಂದರು.
100 ವರ್ಷಗಳ ಹಿಂದೆ ಸಂಘ ಆಳವಾಗಿ ಬೇರೂರಿದೆ. ಇನ್ನೂ ಮರ ಆಳವಾಗಿ ಬೇರೂರಿ ವಿಶಾಲವಾಗಿ ಹರಡಲಿ. ಪ್ರತಿ ಕುಟುಂಬಕ್ಕೆ ಈ ಸಂಘ ಬೇನ್ನಲುಬಾಗಿ ನಿಲ್ಲಲಿ ಎಂದರು.
ಕಾಶಿಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಬಾಳೆಹೊನ್ನೂರು ಪೀಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಬಳ್ಳೇಕೆರೆ ಸಂತೋಷ್, ಮಾಜಿ ಸಂಸದ ಆಯನೂರು ಮಂಜುನಾಥ, ಎಸ್ಪಿ ದಿನೇಶ್, ಎಂಎಲ್ ಸಿ ಡಾ.ಧನಂಜಯ ಸರ್ಜಿ, ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಾಕ್ಷರಿ ಭಾಗಿಯಾಗಿದ್ದರು.
BSY honored at Basaveshwara Swamy Town Pattana Cooperative Society
