ಸೂಡ ಗಂಜಿಕೇಂದ್ರವಾಗಿದೆ, ಮೆಗ್ಗಾನ್ ನಲ್ಲಿ ಬಾಕಿ ಉಳಿದ ಕಟ್ಟಡ ಉದ್ಘಾಟಿಸದಿದ್ದರೆ ಜೆಡಿಎಸ್ ಪ್ರತಿಭಟನೆ- Sooda has become a sugarcane plantation center, JDS will protest if the pending building in Meggaon is not inaugurated

 SUDDILIVE || SHIVAMOGGA

ಸೂಡ ಗಂಜಿಕೇಂದ್ರವಾಗಿದೆ, ಮೆಗ್ಗಾನ್ ನಲ್ಲಿ ಬಾಕಿ ಉಳಿದ ಕಟ್ಟಡ ಉದ್ಘಾಟಿಸದಿದ್ದರೆ ಜೆಡಿಎಸ್ ಪ್ರತಿಭಟನೆ-  Sooda has become a sugarcane plantation center, JDS will protest if the pending building in Meggaon is not inaugurated  

Sooda, sugarcane


ನಗರದ ಮೆಗ್ಗಾನ್ ಮತ್ತು ಸೂಡದ ಅವ್ಯವಸ್ಥೆಯ ಬಗ್ಗೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ ಪ್ರಸನ್ನ ಕುಮಾರ್ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಶಿವಮೊಗ್ಗ ನಗರದ ಮೆಗ್ಗಾನ್ ಸಿಮ್ಸ್ ಆಸ್ಪತ್ರೆಯ ಆಡಳಿತ ವೈಖರಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಅವ್ಯವಸ್ಥೆಯಿಂದ  ಕೆಲವರಿಗೆ ಇದು ಗಂಜಿಕೇಂದ್ರವಾಗಿದೆ. ಇದು ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ ತನವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಮಂತ್ರಿಗಳ ನಿರ್ಲಕ್ಷತನದಿಂದ ಅಧಿಕಾರಿಗಳು ಬೇಜವಬ್ದಾರಿತನ ತೋರುತ್ತಿದ್ದಾರೆ.  ಅಸಹಜ ಸಾವಾದರೆ ಮೆಗ್ಗಾನ್ ನಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತದೆ. ಸತ್ತವರ ಬಂಧುಬಳಗ ಮತ್ತು ಕುಟುಂಬ ಕನಿಷ್ಠ 2 ಗಂಟೆಗಳ ಕಾಲ ಕಾಯುವಂತಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಸಾರ್ವಜನಿಜರಿಗೆ ಕೂರಲು ಸ್ಥಳಾವಕಾಶವಿಲ್ಲದಂತಾಗಿದೆ ಎಂದು ದೂರಿದರು.

2017 ರಲ್ಲಿ ಹೈಎಕ್ ಮಾರ್ಚರಿ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿತ್ತು. ಬಿಜೆಪಿ ಸರ್ಕಾರ ಕೆಲಸ ಮುಗಿಸಿತ್ತು. ಈಗ ಇನ್ನೂ 8-10% ಕಾಮಗಾರಿ ಉಳಿದಿದೆ ಎಂದು ಹೇಳುತ್ತಿದ್ದಾರೆ. ಇದನ್ನ ಬೇಗ ಪೂರ್ಣಗೊಳಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಮೊನ್ನೆ ಭೇಟಿ ನೀಡಿದಾಗ ಅದು ಬೀಗ ಹಾಕಲಾಗಿದೆ. ಲೋಕಾರ್ಪಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇದನ್ನ ತೆರೆಯುವಲ್ಲಿ ಕ್ರಮ ಕೈಗೊಳ್ಳದೆ ಇರುವುದು ನಿರ್ಲಕ್ಷತನ ಕಂಡು ಬರುತ್ತಿದೆ.

ಮರದ ಕೆಳಗೆ ಕುಳಿತುಕೊಳ್ಳುವಂತಾಗಿದೆ. ಒಂದು ವೇಳೆ ಮರದ ರಂಬೆಕೊಂಬೆ ಬಿದ್ದು ಸತ್ತವರನ್ನ ನೋಡಲು ಬಂದವರೆ ಹೆಣವಾಗುವ ವರೆಗೂ ಇವರು ಗಮನ ಹರಿಸುವಂತೆ ಕಾಣುತ್ತಿಲ್ಲ. 15 ದಿನಗಳ ಒಳಗೆ ಇದು ಲೋಕಾರ್ಪಣೆ ಆಗದಿದ್ದರೆ ಜೆಡಿಎಸ್ ಸ್ಥಳದಲ್ಲಿಯೇ ಪ್ರತಿಭಟಿಸಲಾಗುವುದು. ಎರಡು ಕೋಟಿಗೂ ಹೆಚ್ಚು ತೆರಿಗೆ ಹಣದಲ್ಲಿ ನಿರ್ಮಾಣವಾಗಿದೆ ಎಂದರು.

ತಾಯಂದಿರ ಮತ್ತು ಮಕ್ಕಳ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆದರೂ ಲೋಕರ್ಪಣೆ ಆಗಿಲ್ಲ. ಡಿಜಿಟಲ್ ಲೈಬ್ರರಿಯನ್ನ‌ ಮೂರು ಕೋಟಿಯಲ್ಲಿ ನಿರ್ಮಾಣವಾಗಿದೆ ಲೋಕರ್ಪಣೆ ಮಾಡಲಾಗಿಲ್ಲ. ಜಿಲ್ಲಾ ಉಸ್ತುವರಿ ಸಚಿವರು ಬಜೆಟ್ ನಲ್ಲಿ ಒಂದು ರೂ. ಶಿವಮೊಗ್ಗಕ್ಕೆ ತರಲಿಲ್ಲ. ಮೆಗ್ಗಾನ್ ನಲ್ಲಿ ರೋಗಿಗಳ ಸಂಬಂಧಿಕರಿಗೆ ಬೇಕಾದ ವಿಶ್ರಾಂತಿ ಗೃಹಕ್ಕೆ ಹಣ ಬಿಡುಗಡೆಯಾದರೂ ಕಾಮಗಾರಿ ಆರಂಭಿಸಿಲ್ಲ ಎಂದು ದೂರಿದರು.

ನಗರಾಭಿವೃದ್ಧಿ ಪ್ರಾಧಿಕಾರ ಗಂಜಿ ಕೇಂದ್ರವಾಗಿದೆ.ಊರುಗಡೂರು ಲೇಔಟ್ ಗೆ  ಅರ್ಜಿ ಕರೆದು ಎರಡು ವರ್ಷವಾಗಿದೆ. 3039 ಅರ್ಜಿ ಇದೆ 687 ನಿವೇಷನವಿದೆ ಭೂಮಾಲೀಕರಿಗೆ ಬಿಟ್ಟು 432 ನಿವೇಶನ ಮಾತ್ರ ಹಂಚುವಂತಾಗಿದೆ. ಎರಡು ಬಾರಿ ಅರ್ಜಿ ಕರೆಯಲಾಗಿದೆ. 30.37 ಕೋಟಿ ಹಣ ದ ಲೇಔಟ್ ನ್ನ 2022 ರಲ್ಲೇ ನಿವೇಶನದ ಕಾಮಗಾರಿ ಮುಗಿಯಬೇಕಿತ್ತು. ಹಣಕಟ್ಟಿದ ನಿವೇಶನದಾರರಿಗೆ ಅರ್ಜಿ ಹಾಕಿ 4 ವರ್ಷ ಕಳೆದಿದ್ದು ಅವರು ಆಗಲೇ ಹಣಕಟ್ಟಿದರೂ ನಿವೇಶನ ಹಂಚಿಕೆಯಾಗಿಲ್ಲ. ಸೂಡಾ ಜನರ ಹಣಕ್ಕೆ ಬಡ್ಡಿಕೊಡುತ್ತದಾ ಎಂದು ಪ್ರಶ್ನಿಸಿದರು.

ಹೊಸ ಆಯುಕ್ತರು ಬಂದಿದ್ದಾರೆ. ಅವರ ಗಮನದಲ್ಲಿ ಈ ಲೇಔಟ್ ಇಲ್ಲ. ನಾಲ್ಕು ವರ್ಷವಾದರೂ ಸೈಟ್ ಹಂಚಿಕೆಯಾಗಿಲ್ಲ. ನಿರ್ಲಕ್ಷತನವಾ ಬೇಜವಬ್ದಾರಿತನವಾ ? ಯಾರಾರು ಪಾಲುದಾರಿಕೆ ಇದೆ ಎಂದು ಗಂಬೀರ ಆರೋಪ ಮಾಡಿದ ಅವರು ಇದರ ವಿರುದ್ಧವೂ ಜೆಡಿಎಸ್ ಪ್ರತಿಭಟನೆ ಮಾಡಲಿದೆ ಎಂದರು.
Sooda has become a sugarcane plantation center, JDS will protest if the pending building in Meggaon is not inaugurated

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close