SUDDILIVE || SHIVAMOGGA
27 ವರ್ಷಗಳಿಂದ ನಾಪತ್ತೆಯಾಗಿರುವ ಯುವಕನ ಪತ್ತೆಗೆ ಪೊಲೀಸರ ಮನವಿ-Police appeal to find young man missing for 26 years
ತೀರ್ಥಹಳ್ಳಿ: ಸುಮಾರು 26 ವರ್ಷಗಳ ಹಿಂದೆ ಕಾಣೆಯಾಗಿದ್ದ ಯುವಕನ ಪತ್ತೆಗೆ ಮಾಳೂರು ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ. ಮಾಳೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಆಧಾರದ ಮೇಲೆ ಈ ಸಂಬಂಧ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಉಡುಪಿ ಮೂಲದ ಪ್ರಿಯಾ ಎಂಬುವವರ ಸಹೋದರ ಸೋಹನ್ ಎಂಬ ಯುವಕ 1999ರಲ್ಲಿ ಕಾಣೆಯಾಗಿದ್ದಾನೆ. ಆಗ ಆತನ ವಯಸ್ಸು ಸುಮಾರು 24 ವರ್ಷವಾಗಿತ್ತು. ತಂದೆ-ತಾಯಿ ಇಲ್ಲದ ಕಾರಣ ಮೂವರು ಸಹೋದರ-ಸಹೋದರಿಯರು ಅನಾಥಾಶ್ರಮದಲ್ಲಿ ಬೆಳೆದಿದ್ದು, ಸೋಹನ್ 10ನೇ ತರಗತಿ ವಿದ್ಯಾಭ್ಯಾಸದ ಬಳಿಕ ತೀರ್ಥಹಳ್ಳಿ ಹಾಗೂ ಗಬಡಿ ಭಾಗದಲ್ಲಿರುವ ಅಜ್ಜಿ ಮನೆಯಲ್ಲಿ ವಾಸವಿದ್ದು ವಿವಿಧ ಕೆಲಸಗಳನ್ನು ಮಾಡುತ್ತಿದ್ದ ಎನ್ನಲಾಗಿದೆ. ಇದೇ ಅವಧಿಯಲ್ಲಿ ಆತ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಕಾಣೆಯಾಗುವ ಸಮಯದಲ್ಲಿ ಸೋಹನ್ ಸುಮಾರು 5.7 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ ಹಾಗೂ ಸಾಧಾರಣ ಮೈಕಟ್ಟು ಹೊಂದಿದ್ದ ಎಂದು ವಿವರಿಸಲಾಗಿದೆ.
ಈ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ಇರುವವರು ಮಾಳೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಸಂಪರ್ಕ ಸಂಖ್ಯೆ: 08181-235142, 08181-228310, 9480803353, 9480803333, 08182-261413, 9480803300.
