ರಾಹುಲ್ ಹುಂಡೈ ಶೋರೂಮ್‌ನ ನೇಮ್ ಪ್ಲೇಟ್‌ಗೆ ಬೆಂಕಿ: ಎರಡು ವರ್ಷಗಳ ಹಿಂದಿನ ಅಗ್ನಿ ಅವಘಡದ ನೆನಪು ಮತ್ತೆ ಕೆದಕಿದ ಘಟನೆ- Rahul Hyundai showroom name plate catches fire: An incident that brought back memories of a fire accident two years ago

 SUDDILIVE ||  SHIVAMOGGA

ರಾಹುಲ್ ಹುಂಡೈ ಶೋರೂಮ್‌ನ ನೇಮ್ ಪ್ಲೇಟ್‌ಗೆ ಬೆಂಕಿ: ಎರಡು ವರ್ಷಗಳ ಹಿಂದಿನ ಅಗ್ನಿ ಅವಘಡದ ನೆನಪು ಮತ್ತೆ ಕೆದಕಿದ ಘಟನೆ- Rahul Hyundai showroom name plate catches fire: An incident that brought back memories of a fire accident two years ago  
Rahul, hundai


ಶಿವಮೊಗ್ಗ: ನಗರದ ಶಂಕರ ಮಠ ರಸ್ತೆಯಲ್ಲಿರುವ ರಾಹುಲ್ ಹುಂಡೈ ಶೋರೂಮ್‌ನ ನೇಮ್ ಪ್ಲೇಟ್‌ಗೆ ಇಂದು ಸಂಜೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಗುರುವಾರ ಸಂಜೆ ಸುಮಾರು 5.25ರ ವೇಳೆಗೆ ಶೋರೂಮ್‌ನ ಮುಂಭಾಗದಲ್ಲಿರುವ ನೇಮ್ ಪ್ಲೇಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ತೀವ್ರತೆಗೆ ನೇಮ್ ಪ್ಲೇಟ್‌ನಲ್ಲಿದ್ದ ಕನ್ನಡದ ಅಕ್ಷರಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಆದರೆ ಅದೇ ನೇಮ್ ಪ್ಲೇಟ್‌ನಲ್ಲಿದ್ದ ಇಂಗ್ಲಿಷ್ ಬರಹದ ಭಾಗ ಬೆಂಕಿಯಿಂದ ಬಹುತೇಕ ಉಳಿದುಕೊಂಡಿದೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಬೆಂಕಿ ನಂದಿಸಿದ ಪರಿಣಾಮ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಎರಡು ವರ್ಷಗಳ ಹಿಂದಿನ ಭೀಕರ ಅಗ್ನಿ ಅವಘಡದ ನೆನಪು

ರಾಹುಲ್ ಹುಂಡೈ ಶೋರೂಮ್‌ಗೆ ಬೆಂಕಿ ಕಾಣಿಸಿಕೊಂಡಿರುವ ಘಟನೆ ಎರಡು ವರ್ಷಗಳ ಹಿಂದಿನ ಭೀಕರ ಅಗ್ನಿ ಅವಘಡದ ನೆನಪನ್ನು ಮತ್ತೆ ತಾಜಾಗೊಳಿಸಿದೆ.

2024ರಲ್ಲಿ ಇದೇ ಶೋರೂಮ್‌ನಲ್ಲಿ ರಾತ್ರಿ ವೇಳೆ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಸರ್ವಿಸ್‌ಗೆ ಬಿಟ್ಟಿದ್ದ ಕಾರುಗಳು ಹಾಗೂ ಶೋರೂಮ್‌ನಲ್ಲಿದ್ದ ವಾಹನಗಳು ಬೆಂಕಿಗೆ ಆಹುತಿಯಾಗಿದ್ದವು. ಬೆಂಕಿಯ ತೀವ್ರತೆಗೆ ಹಲವು ವಾಹನಗಳು ಸುಟ್ಟು ಕರಕಲಾಗಿದ್ದವು. ಘಟನೆಯಿಂದ ಭಾರಿ ಪ್ರಮಾಣದ ನಷ್ಟ ಉಂಟಾಗಿತ್ತು.

ಆ ಅಗ್ನಿ ಅವಘಡದ ಬಳಿಕ ಶೋರೂಮ್ ಅನ್ನು ತಾತ್ಕಾಲಿಕವಾಗಿ ಬೈಪಾಸ್ ರಸ್ತೆಗೆ ಸ್ಥಳಾಂತರಿಸಲಾಗಿತ್ತು. ನಂತರ ಶಂಕರ ಮಠ ರಸ್ತೆಯಲ್ಲಿದ್ದ ಶೋರೂಮ್ ಕಟ್ಟಡವನ್ನು ನವೀಕರಿಸಿ, ರಿನೋವೇಶನ್ ಪೂರ್ಣಗೊಂಡ ಬಳಿಕ ಮತ್ತೆ ಕಾರ್ಯಾರಂಭ ಮಾಡಲಾಗಿತ್ತು.

ಆ ಭೀಕರ ಘಟನೆ ನಡೆದು ಸುಮಾರು ಎರಡು ವರ್ಷಗಳ ಬಳಿಕ ಇದೀಗ ಅದೇ ಶೋರೂಮ್‌ನ ನೇಮ್ ಪ್ಲೇಟ್‌ಗೆ ಬೆಂಕಿ ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದೆ.

ಈ ಬಾರಿ ಬೆಂಕಿ ಹೇಗೆ ಕಾಣಿಸಿಕೊಂಡಿತು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.  ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಹಿಂದಿನ ಅಗ್ನಿ ಅವಘಡದ ನೆನಪು ಇನ್ನೂ ಸ್ಥಳೀಯರ ಮನಸ್ಸಿನಲ್ಲಿ ಇರುವಾಗಲೇ ಮತ್ತೊಮ್ಮೆ ಶೋರೂಮ್‌ನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಗಮನ ಸೆಳೆದಿದೆ.

Rahul Hyundai showroom name plate catches fire: An incident that brought back memories of a fire accident two years ago  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close