SUDDILIVE || SHIKARIPURA
ಮಧು ಬಂಗಾರಪ್ಪ ಅವರಂತೆ ಮಾತಿನಿಂದ ನಾಯಕತ್ವ ಬರುವುದಿಲ್ಲ- ಎಲ್ಲವನ್ನೂ ಬಿಚ್ಚಿಡ್ತಿನಿ ಎಂದ ಹರತಾಳು ಹಾಲಪ್ಪ-Leadership does not come from words like Madhu Bangarappa - you have revealed everything, says Harathalu Halappa
ಶಿಕಾರಿಪುರ: ಸಚಿವ ಮಧು ಬಂಗಾರಪ್ಪ ವಿರುದ್ಧವೂ ಹರತಾಳು ಹಾಲಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಲ್ಲವನ್ನ್ನೂ ಬಿಚ್ಚಿಟ್ತೀನಿ ಎಂದು ಗುಡುಗಿದ್ದಾರೆ.
ಶಿಕಾರಿಪುರದಲ್ಲಿ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಡಿಯೂರಪ್ಪ, ವಿಜೇಂದ್ರ ರಾಘವೇಂದ್ರವಿರುದ್ಧ ಮಾತನಾಡುವ ಸಚಿವ ಮಧು ಬಂಗಾರಪ್ಪನವರು ನನ್ನ ವಿಷಯಕ್ಕೆ ಬಂದರೆ ಎಲ್ಲವನ್ನೂ ಬಿಚ್ಚಿಡ್ತೀನಿ ಎಂದಿದ್ದಾರೆ.
“ಮಧು ಬಂಗಾರಪ್ಪನವರು ಬಾರಿ ದೊಡ್ಡ ಲೀಡರ್ ಅಲ್ಲ. ಆ ಪುಣ್ಯಾತ್ಮ ನಮ್ಮ ಜೊತೆಗೆ ಚುನಾವಣೆ ನಿಂತಿದ್ದ. ಬಿಜೆಪಿಯಲ್ಲೇ ನಿಂತಿದ್ದರು, ಅಲ್ಲೂ ಸೋತರು. ಮೂರು ಸಾರಿ ಸೋತಿದ್ದಾರೆ, ಒಂದು ಎಂಪಿಗೆ ಸೋತಿದ್ದಾರೆ, ಅಕ್ಕನ ಮೇಲೆ ಎರಡು ಸಾರಿ ಸೋತಿದ್ದಾರೆ. ಆರು ಸಾರಿ ಸೋತು ಎರಡು ಸಾರಿ ಗೆದ್ದಿದ್ದಾರೆ. ತಾನು ಮಹಾನ್ ನಾಯಕ ಅಂತ ನನ್ನ ಹತ್ತಿರ ಹೇಳಿದರೆ ನಾನು ಒಪ್ಪೋದಿಲ್ಲ” ಎಂದು ಹೇಳಿದರು.
“ಇಷ್ಟಕ್ಕೂ ಸೊರಬದಲ್ಲಿ ಏನು ಮಾಡಿದ್ದೀರಿ? ಆಯ್ತುಪ್ಪ, ಬಂಗಾರಪ್ಪನವರ ದಿನಗಳು ಹೋರಾಟದ ದಿನಗಳು, ಸೊರಬವನ್ನ ಅಭಿವೃದ್ಧಿ ಮಾಡೋಕೆ ಆಗಲಿಲ್ಲ. ಈಗ ಏನು ಮಾಡಿದ್ದೀರಿ? ಈಗ ಬಂದೆ ನಾನು ಉಳವಿಯಿಂದ ಶಿರಾಳಕೊಪ್ಪದ ಮೇಲೆ. ಎಲ್ಲಿದೆ ರಸ್ತೆ? ಹೇಗಿದೆ ರಸ್ತೆ? ಅನೇಕ ಜನ ನೀವು ಓಡಾಡಿದವರು ಇದ್ದೀರಿ. ಶಿರಾಳಕೊಪ್ಪ–ಸೊರಬ ರಸ್ತೆ ಹೇಗಿದೆ? ಚಂದ್ರಗುಪ್ತಿ, ಹರಿಸಿ ರಸ್ತೆ ಎಲ್ಲಿದೆ? ಅದನ್ನು ಮಾತಾಡ್ರಿ ಮಧು ಬಂಗಾರಪ್ಪನವರೇ. ಈ ತರ ಟೇಂಕಾರದ ಮಾತಾಡೋದು, ಅಹಂಕಾರದ ಮಾತಾಡೋದು ಬಿಡಿ” ಎಂದು ಅವರು ಹೇಳಿದರು.
ಬರಗಾಲದ ಬಗ್ಗೆ ಪ್ರಶ್ನೆ
“ಬರಗಾಲದ ಬಗ್ಗೆ ನಿಮಗೇನು ಗೊತ್ತಿದೆ? ಅವರಿಗೆ ಏನು ಗೊತ್ತೇ ಇಲ್ಲ. ಅಡಿಕೆ ಗಿಡ ಎಷ್ಟು ಅಡಿಗೆ ಒಂದು ನಡ್ತಾರೆ? ಕೇಳಿ ನಿಮ್ಮ ಉಸ್ತುವಾರಿ ಸಚಿವರಿಗೆ. ಅವರ ತಂದೆ 131 ಎಕರೆ ತೋಟ ಮಾಡಿದ್ದರು. ನಾವೆಲ್ಲ ಹೋಗ್ತಿದ್ವಿ, ನಮ್ಮನ್ನೆಲ್ಲ ಕರ್ಕೊಂಡು ಹೋಗಿ ತೋರಿಸೋರು. ‘ನೀನು ಮಾಡೋ ಒಂದು ತೋಟ’ ಅಂತ ನಾನು ಹತ್ತಾರು ಎಕರೆಯಲ್ಲಿ ಮಾಡಿದ್ದು 10 ಎಕರೆ ತೋಟ ಅವರನ್ನು ನೋಡಿ. ‘ಒಂಬತ್ತು ಅಡಿಗೆ ಒಂದು ಗಿಡ ನೋಡಬೇಕು ಕಣೋ’ ಅಂತ ಹೇಳಿ ಕಲಿಸಿದರು. ಇವರನ್ನ ಕೇಳಿ ಎಷ್ಟು ಅಡಿಗೆ ಒಂದು ನಡ್ತಾರೆ, ಅದರ ಮಧ್ಯೆ ಏನು ನಡ್ತಾರೆ, ಮೆಣಸಿನ ಬಳ್ಳಿ ಹೆಂಗೆ ಹಚ್ಚುತ್ತಾರೆ, ಗೊತ್ತಾ ಇವರಿಗೆ?” ಎಂದು ಪ್ರಶ್ನಿಸಿದರು.
“ಆ 131 ಎಕರೆ ಏನು ಮಾಡಿದ್ದಾರೆ, ಗೊತ್ತೇನು? ಐದು ವರ್ಷಕ್ಕೆ ಚೆಂಡು ಹೊಡಿಯೋಕೆ ಕೊಟ್ಟಿದ್ದಾರೆ. ಗೊತ್ತಾಯ್ತೋ? ನನಗೆ ಗೊತ್ತು, ನಿಮ್ಮದು ನಾನು ಬಿಚ್ಚಾಕ್ತೀನಿ ನಾನು. ಬಿಚ್ಚತೀನಿ, ಯಾವ ಭಯವೂ ಇಲ್ಲ ಇಲ್ಲಿ. ನಮ್ಮ ಹತ್ತಿರ ರಾಜಹುಲಿ ಇದೆ” ಎಂದು ಹಾಲಪ್ಪ ಹೇಳಿದರು.
“ಹೇ, ರಾಜಹುಲಿ ನಮ್ಮ ಹತ್ತಿರ ಇದ್ದಾರೆ, ನಮಗೆ ಭಯ ಇಲ್ಲ. ಆದರೆ ಹೇಳುವಾಗ ಯಾರ ಮೇಲೆ ಟೇಂಕಾರದ ಮಾತಾಡ್ತೀರಿ, ಅಹಂಕಾರದ ಮಾತಾಡ್ತೀರಿ, ಇಷ್ಟಕ್ಕೂ ಯಾಕೆ ಅಹಂಕಾರ ಪಡ್ತೀರಿ? 60 ವರ್ಷಕ್ಕೆ ಒಂದು ಪ್ರಬುದ್ಧತೆ ಬರೋದು ಬೇಡ್ವಾ? ಒಂದು ನಾಯಕತ್ವ ಬರೋದು ಬೇಡ್ವಾ?” ಎಂದು ಪ್ರಶ್ನಿಸಿದರು.
‘ವಿಜಯೇಂದ್ರ ಅವರಿಗೆ ನಾಯಕತ್ವ ಬರಬೇಕು ಎಂದು ಮೊದಲ ಭೇಟಿಯಲ್ಲೇ ಹೇಳಿದ್ದೆ’
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಾಯಕತ್ವದ ಕುರಿತು ಮಾತನಾಡಿದ ಹಾಲಪ್ಪ, “ನಮ್ಮದು 50 ವರ್ಷದ್ದು, ನಮ್ಮದು ಮರಿಹುಲಿ ವಿಜಯೇಂದ್ರ ಅವರು. ನಾನಾಗೇ ಹೇಳಿದೆ ನಾನು, ‘ನಿಮಗೊಂದು ನಾಯಕತ್ವ ಬರಬೇಕು ಸರ್, ನಿಮಗೊಂದು ದೊರೆತನತ್ವ ಬರಬೇಕು ಸರ್’ ಅಂತ ಮೊದಲನೇ ಭೇಟಿಯಲ್ಲಿ ಅಧ್ಯಕ್ಷರಾದಾಗ” ಎಂದರು.
“ಅದಕ್ಕೆ ಏನು ಮಾಡಬೇಕು? ಹೋರಾಟಗಳನ್ನು ಮಾಡಬೇಕು, ಪಾದಯಾತ್ರೆಗಳನ್ನು ಮಾಡಬೇಕು, ಜನರ ಜೊತೆಗೆ ಹೋಗಬೇಕು. ಅದನ್ನು ಮಾಡೋದು ಬಿಟ್ಟುಬಿಟ್ಟು ಹಿಂಗೆ ಬಾಯಿಗೆ ಬಂದ ಹಾಗೆ ಯಾರೋ ಹೇಳಿಕೊಟ್ರು, ಬರೆದುಕೊಟ್ರು ಅಂತ ಈ ತರ ಮಾತಾಡಿದರೆ ನಾಯಕತ್ವ ಬರೋದಿಲ್ಲ ಮಧು ಬಂಗಾರಪ್ಪನವರೇ. ಜಾಗ್ರತೆ!” ಎಂದು ಹೇಳಿದರು.
“ಬರೋದಿಲ್ಲ, ಹೇಳ್ರಿ ನೀವು. ಯಾಕಂದರೆ ನಮ್ಮವರು ಹೋದ್ರು ಅವರೆಲ್ಲ, ಪತ್ರಕರ್ತರು. ಬರಲಿ, ದೇವೇಗೌಡರ ಮಕ್ಕಳು ಹಾಗೆ ಬೆಳೆದಿದ್ದಾರೆ. ಯಡಿಯೂರಪ್ಪನವರ ಮಕ್ಕಳು ಬೆಳಿತಾ ಇದ್ದಾರೆ. ಬಂಗಾರಪ್ಪನವರ ಮಕ್ಕಳು ಬೆಳೆಯಲಿ. ಆದರೆ ಈ ತರ ಹೆಂಗಪ್ಪ ಬೆಳೆಯೋದು? ಹಿಂಗೆ ಮಂಗಾಟ ಮಾಡಿಕೊಂಡು ಬಾಯಿಗೆ ಬಂದ ಹಾಗೆ ಮಾತಾಡಿದರೆ?” ಎಂದು ಪ್ರಶ್ನಿಸಿದರು.
“ಮೂಲೆ ಮೂಲೆಯಲ್ಲಿ ಅಭಿಮಾನಿಗಳನ್ನು ಮಾಡಿ ಇಟ್ಟಿರಲಿಲ್ಲವಾ ಪುಣ್ಯಾತ್ಮ ಬಂಗಾರಪ್ಪ? ಅವರನ್ನೆಲ್ಲಾ ವೋಟ್ ಮಾಡೋದು ಬಿಟ್ಟುಬಿಟ್ಟು, ಅವರನ್ನೆಲ್ಲಾ ಹೊರಗೆ ಹಾಕಿದರು, ನನ್ನನ್ನೂ ಸೇರಿದಂತೆ” ಎಂದರು.
‘ಯಡಿಯೂರಪ್ಪನವರ ಬಗ್ಗೆ ಮಾತನಾಡಲು ನನಗೇನು ಅಧಿಕಾರ?’
“ಇರಲಿ, ಅದನ್ನು ಬಿಟ್ಟುಬಿಟ್ಟು ಯಡಿಯೂರಪ್ಪನವರ ಬಗ್ಗೆ, ಯಡಿಯೂರಪ್ಪನವರ ಮಕ್ಕಳ ಬಗ್ಗೆ ಮಾತಾಡಲಿಕ್ಕೆ, ಬಂಗಾರಪ್ಪನವರ ಬಗ್ಗೆ ಮಾತಾಡಲಿಕ್ಕೆ ನನಗೇನ್ರೀ ಅಧಿಕಾರ ಇದೆ? ಹೀಗೆ ಬಂಧುಗಳೇ, ಹೋರಾಟವನ್ನು ನಾವು ಮಾಡಬೇಕು ಅಂತ ಹೇಳುತ್ತಾ, ಹೋರಾಟವನ್ನು ಮಾಡೋಣ” ಎಂದು ಹಾಲಪ್ಪ ಹೇಳಿದರು.
“ಮೊದಲಿಗೆ ವಿದ್ಯುತ್ ಕೊಡಿಸೋದು ದೊಡ್ಡ ವಿಷಯ ಅಲ್ಲ. ನೋಡಿ, ಬರಗಾಲ ಹೆಂಗೆ ಬರುತ್ತೆ? ಒಂದು ಜೋಳ ಬಂದ್ವೋ, ಆಮೇಲೆ ಹೋಗ್ತಾ ನಮ್ಮ ರೈತರು. ಒಂದು ಭತ್ತ ಹೋಯ್ತು, ಹೋಗ್ತಾನೆ. ಬಹುವಾರ್ಷಿಕ ಬೆಳೆಗಳು ತೋಟಕ್ಕೆ ಒಂದು...” ಎಂದು ಅವರು ತಮ್ಮ ಮಾತನ್ನು ಮುಂದುವರಿಸಿದರು.
‘ಡೆಲ್ಲಿಯಲ್ಲಿ ನರೇಂದ್ರ, ಬೆಂಗಳೂರಿನಲ್ಲಿ ವಿಜಯೇಂದ್ರ, ಶಿವಮೊಗ್ಗದಲ್ಲಿ ರಾಘವೇಂದ್ರ’
“ಆ ಪ್ರಯತ್ನ ಮಾಡಿ. ಇದು ಒಂದೇ ವರ್ಷ, ಒಂದುವರೆ ವರ್ಷ. ನಾವು ಇನ್ನೇನು ಆಗಿಹೋಗಿದೆ, ದೇಶದ ಜನ ತೀರ್ಮಾನ ಮಾಡಿದ್ದಾರೆ. ಡೆಲ್ಲಿಯಲ್ಲಿ ನರೇಂದ್ರ, ಬೆಂಗಳೂರಿನಲ್ಲಿ ವಿಜಯೇಂದ್ರ, ಶಿವಮೊಗ್ಗದಲ್ಲಿ ರಾಘವೇಂದ್ರ. ಜನ ತೀರ್ಮಾನ ಮಾಡಿದ್ದಾರೆ. ಕೇವಲ ಒಂದುವರೆ ವರ್ಷ ತಡೆದುಕೊಳ್ಳಿ, ನಾವು ಅಧಿಕಾರ ಹಿಡಿದೆ ಹಿಡಿಯುತ್ತೇವೆ” ಎಂದು ಹಾಲಪ್ಪ ಹೇಳಿದರು.
“ನಾನು ನೋಡಿದ್ದೇನೆ, ಪ್ರತಿ ಮಂಗಳವಾರ ಬುಧವಾರ ಬಿಜೆಪಿ ಆಫೀಸ್ನಲ್ಲಿ ಹೋಗಿ ಕೂರುತ್ತೇನೆ ಬೆಂಗಳೂರಿನಲ್ಲಿ. ಎಲ್ಲಿದ್ದಾರೆ ನಮ್ಮ ಅಭ್ಯರ್ಥಿಗಳು, ಎಲ್ಲೆಲ್ಲಿ ಹೋಗಬಹುದು ಅಂತ ತಗೊಂತೀವಿ. ಲಕ್ಷಾಂತರ ಕಿಲೋಮೀಟರ್ ಈ ವಯಸ್ಸಿನಲ್ಲಿ ಓಡಾಡಿದ್ದಾರೆ, ಓಡಾಡ್ತಿದ್ದಾರೆ. ಅದು ಫಲ ಕೊಟ್ಟೇ ಕೊಡುತ್ತೆ” ಎಂದು ಹೇಳಿದರು.
‘ಮಧು ಬಂಗಾರಪ್ಪ ಅವರಂತೆ ಮಾತಿನಿಂದ ನಾಯಕತ್ವ ಬರುವುದಿಲ್ಲ’
ಮತ್ತೆ ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಮಧು ಬಂಗಾರಪ್ಪನ ತರ ಸುಮ್ಮನೆ ನಾನೇನೋ ಮಾಡ್ತೀನಿ ಅಂದರೆ ಆರು ಸಾರಿ ಸೋಲಕ್ಕೆ ತಯಾರಾಗಿರಬೇಕು, ಎರಡು ಸಾರಿ ಗೆದ್ದಿದ್ದೀಯಾ. ಏನೋ ಪುಣ್ಯಾತ್ಮ ‘ನಂದಿ ಮಾರ್ಕ್’ನ ಪೇಪರ್ನವರ ಇನ್ಫ್ಲುಯೆನ್ಸ್ನಿಂದ ಮತ್ತೆ ಮಂತ್ರಿಯಾಗಿದ್ದೀರಿ, ಅದೂ ಗೊತ್ತಿದೆ ನನಗೆ. ಅವರು ಪುಣ್ಯಾತ್ಮರು ಆ ಕಾಲದಿಂದ 100 ವರ್ಷದಿಂದ ಪತ್ರಿಕೆ ಬೆಳೆಸಿಕೊಂಡು ಬಂದು, ಆ ಪುಣ್ಯವನ್ನು ಧಾರೆ ಎರೆದು ಮಂತ್ರಿ ಮತ್ತೊಮ್ಮೆ ಆಗಿದ್ದೀರಿ, ಆಗಲಿ” ಎಂದರು.
“ಆದರೆ ಬರಿ ಸರ್ವಜ್ಞ ಒಂದು ಕಡೆ ಹೇಳ್ತಾನೆ, ಬರಿ ಟೇಂಕಾರದಿಂದ ಆಗಲ್ಲ. ನಮಗೆ ನಮ್ಮ ಮೇಷ್ಟ್ರು ಹೇಳಿದರು. ಈಗ ಹೇಳಿದ್ದು ದೊಡ್ಡ ವಿವಾದ ಆಗಿ ಏನೇನೋ ಆಗಿಹೋಯಿತು ಪ್ರಭುಸ್ವಾಮಿ ಮಠದ್ದು ಅಂತ. ಕೆಲಸ ಮಾಡಬೇಕು, ಹಾರ್ಡ್ ವರ್ಕ್ ಮಾಡಬೇಕು. ಅದನ್ನೇ ವಿಜಯೇಂದ್ರ ಮಾಡ್ತಿರೋದು” ಎಂದು ಹಾಲಪ್ಪ ಹೇಳಿದರು.
“ಏನಿತ್ತು ಪಾದಯಾತ್ರೆ ಮಾಡೋದು? ಮಾಡಬೇಕು, ಕಟ್ಟಬೇಕು, ಪಕ್ಷವನ್ನು ಕಟ್ಟಬೇಕು, ಜನರನ್ನು ಕಟ್ಟಬೇಕು. ಅವರಲ್ಲಿ ಸ್ಪೂರ್ತಿ ತುಂಬಬೇಕು, ‘ನಾನಿದ್ದೀನಿ ನಿಮ್ಮ ಜೊತೆಗೆ’ ಅಂತ ಹೇಳಬೇಕು” ಎಂದರು.
ಕಸ್ತೂರಿ ರಂಗನ್ ವರದಿ ವಿಚಾರವನ್ನು ಕಾಂಗ್ರೆಸ್ನವರು ಆರಂಭಿಸಿದ್ದೇ ಹೊರತು, ಬಿಜೆಪಿ ಸರ್ಕಾರವಲ್ಲ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆರೋಪಿಸಿದರು.
“ಕಸ್ತೂರಿ ರಂಗನ್ ವರದಿ ಪಾಪದ ಕೂಸು ಒಂದೇ. ಇದು ಶುರು ಮಾಡಿದವರೇ ಕಾಂಗ್ರೆಸ್ನವರು” ಎಂದು ಹೇಳಿದರು.
“ಜೈರಾಮ್ ರಮೇಶ್ ಅವರು ಕೇಂದ್ರ ಸಚಿವರಾಗಿದ್ದಾಗ, ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಯಾರೋ ಒಂದಿಷ್ಟು ಜನ ಹೋಗಿ ಹೀಗೆ, ಹಾಗೆ ಎಂದು ಹೇಳಿದ ಕೂಡಲೇ ಒಂದು ಸಮಿತಿ ನೇಮಕ ಮಾಡಿದರು. ಅದು ಮಾಧವ್ ಗಾಡ್ಗೀಳ್ ಕಮಿಟಿ. ಅವರು ಒಂದು ವರದಿ ಕೊಟ್ಟರು. ಆ ವರದಿಯನ್ನು ಸಾರಾಸಗಟಾಗಿ ತಿರಸ್ಕಾರ ಮಾಡಿದರು. ಮಲೆನಾಡಿನಲ್ಲಿ ಜೀವನವೇ ಸಾಧ್ಯವಿಲ್ಲ ಎಂಬ ರೀತಿಯ ವರದಿ ಅದು. ಇದನ್ನು ಮಾಡಿದ್ದು ಕಾಂಗ್ರೆಸ್ನವರು. ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಇದು ಆಗಿತ್ತು” ಎಂದು ಹಾಲಪ್ಪ ಹೇಳಿದರು.
“ಅದಾದ ಮೇಲೆ ಜಯಂತಿ ನಟರಾಜನ್ ಅವರು ಮಂತ್ರಿಯಾದರು. ಅವರು ಈ ವರದಿಯನ್ನು ತಿರಸ್ಕಾರ ಮಾಡಿ ಕಸ್ತೂರಿ ರಂಗನ್ ವರದಿಗೆ ನೇಮಕ ಮಾಡಿದರು. ನೇಮಕವಾದ ಕಸ್ತೂರಿ ರಂಗನ್ ಸಮಿತಿ 2014ರ ಮಾರ್ಚ್ ತಿಂಗಳಲ್ಲಿ ವರದಿ ನೀಡಿತು. ಆ ವರದಿಯನ್ನು ಅಕ್ಸೆಪ್ಟ್ ಮಾಡಿಕೊಂಡರು. ಆಗ ಅಧಿಕಾರದಲ್ಲಿದ್ದವರು ಯಾರು? ಕಾಂಗ್ರೆಸ್ನವರು” ಎಂದು ಅವರು ಆರೋಪಿಸಿದರು.
“ಅದನ್ನು ನಮ್ಮ ಸಂಸದ ಬಿ.ವೈ. ರಾಘವೇಂದ್ರ ಅವರ ಮೇಲೆ ಹೇಳಿದರೆ, ನಮ್ಮ ಸರ್ಕಾರದ ಮೇಲೆ ಹೇಳಿದರೆ, ನಮ್ಮ ಮೇಲೆ ಹೇಳಿದರೆ ಇನ್ಯಾಕೆ? ಏನು ಬಾಯಿಗೆ ಬಂದ ಹಾಗೆ ಪೇಪರ್ನಲ್ಲಿ ಬರಲಿ, ಮೀಡಿಯಾದಲ್ಲಿ ಬರಲಿ ಅಂತ ಮಾತಾಡುತ್ತಾರೆ. ಇಷ್ಟಕ್ಕೂ ಮಾತಾಡಿ ಏನು ಸಾಧನೆ ಮಾಡಿದ್ದೀರಿ?” ಎಂದು ಪ್ರಶ್ನಿಸಿದರು..
‘ಹೋರಾಟ ಮಾಡದಿದ್ದರೆ ಏನೂ ಆಗಲ್ಲ’
“ಈಗ ಹೋಗಿ ಬಂದಿದ್ದೀರಲ್ಲ ಅನೇಕ ಜನ, ಬೆಳೆ, ವ್ಯವಸಾಯವೇ ಇಲ್ಲ ಅಲ್ಲಿ. ಅವತ್ತೇ ಚೀಫ್ ಮಿನಿಸ್ಟರ್ ಹೆಲಿಕಾಪ್ಟರ್ನಲ್ಲಿ ಬಂದು ವೀಕ್ಷಣೆ ಮಾಡಿದರು ಬರನಾ, ವಿಜಯೇಂದ್ರ ಸ್ಟೇಟ್ಮೆಂಟ್ ಕೊಟ್ಟು ಪಾದಯಾತ್ರೆ ಶುರು ಮಾಡಿದ ಕೂಡಲೇ. ಅಲ್ಲಿಯವರೆಗೂ ಗೊತ್ತೇ ಆಗಿಲ್ಲ. ಅದಕ್ಕಾಗಿ ಹೋರಾಟ ಮಾಡಬೇಕು ಅಂತ ಹೇಳಿದ್ದು, ಅದಕ್ಕೆ ಹೋರಾಟ ಮಾಡಿದ್ದು ಯಡಿಯೂರಪ್ಪ ಅದಕ್ಕಾಗಿ” ಎಂದು ಹಾಲಪ್ಪ ಹೇಳಿದರು.
“ಹೋರಾಟ ಮಾಡದಿದ್ದರೆ ಏನೂ ಆಗಲ್ಲ ಮಧು ಬಂಗಾರಪ್ಪನವರೇ, ಬರಿ ಟೇಂಕಾರದ ಮಾತಿನಿಂದ ಇದರಿಂದ ಆಗೋದಿಲ್ಲ” ಎಂದು ಆಗ್ರಹಪಡಿಸುತ್ತಾ, “ಅದಕ್ಕೆ ಸರ್ವಜ್ಞ ಒಂದು ಕಡೆ ಹೇಳ್ತಾನೆ...” ಎಂದು ತಮ್ಮ ಮಾತನ್ನು ಮುಂದುವರಿಸಿದರು.
