SUDDILIVE || SHIVAMOGGA
ಸಾಯಿ ಸೂರ್ಯ ಹುಟ್ಟುಹಬ್ಬದ ಅಂಗವಾಗಿ ಹೊನ್ನೇತಾಳು ಶಾಲೆಗೆ ಅರ್ಥಪೂರ್ಣ ಕೊಡುಗೆ-A meaningful gift to Honnethalu School as part of Sai Surya's birthday
ಹೊನ್ನೇತಾಳು: ಶ್ರೀಮತಿ ಹೇಮಾವತಿ ಹಾಗೂ ಶ್ರೀಯುತ ಟೀಕಪ್ಪ ಗೌಡ ಮಾನಸಗಾರ್ ಅವರ ಮೊಮ್ಮಗ, ಶ್ರೀಮತಿ ಚೇತನಾ ರಾಜಶೇಖರ್ ಅವರ ಪುತ್ರ ಸಾಯಿ ಸೂರ್ಯ ಅವರ ಹುಟ್ಟುಹಬ್ಬವನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಹುಟ್ಟುಹಬ್ಬದ ಅಂಗವಾಗಿ ಹೊನ್ನೇತಾಳು ಶಾಲೆಯ ವಿದ್ಯಾರ್ಥಿಗಳಿಗೆ ಅಗತ್ಯವಾದ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಧಿಗಾಗಿ ₹1,20,000 (ಒಂದು ಲಕ್ಷ ಇಪ್ಪತ್ತು ಸಾವಿರ ರೂ.) ದೇಣಿಗೆಯನ್ನು ಶಾಲೆಗೆ ನೀಡಲಾಯಿತು.
ಶ್ರೀಮತಿ ಚೇತನಾ ರಾಜಶೇಖರ್ ಅವರು ತಮ್ಮ ಸರಳ ವಿವಾಹದ ಮೂಲಕ ಉಳಿಸಿದ ಹಣವನ್ನು ಮಕ್ಕಳ ಶಿಕ್ಷಣದ ನೆರವಿಗೆ ಬಳಸುವ ಉದ್ದೇಶದಿಂದ ಶಾಲೆಗೆ ದೇಣಿಗೆಯಾಗಿ ನೀಡಿರುವುದು ವಿಶೇಷವಾಗಿತ್ತು. ಈ ಮೂಲಕ ವೈಯಕ್ತಿಕ ಸಂಭ್ರಮವನ್ನು ಸಮಾಜಮುಖಿ ಕಾರ್ಯದೊಂದಿಗೆ ಬೆಸೆದು ಮಾದರಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಿಗೆ ಬಾಗಿನ ಸಮರ್ಪಿಸುವ ಮೂಲಕ ಗೌರವ ಸಲ್ಲಿಸಲಾಯಿತು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯವಾದ ನೆರವು ನೀಡುವುದರ ಜೊತೆಗೆ, ಆರ್ಥಿಕವಾಗಿ ಹಿಂದುಳಿದ ಮಕ್ಕಳ ಭವಿಷ್ಯಕ್ಕೆ ಸಹಕಾರಿಯಾಗುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು.
ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಬದಲು ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿರುವ ಈ ಸೇವಾ ಕಾರ್ಯವು ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ.

