ಸೆ.18ಕ್ಕೆ ತೆರೆಗೆ ‘ಟಾಸ್’ – ಕನ್ನಡ, ತುಳು ಭಾಷೆಯಲ್ಲಿ ಸಿನಿ ಜಾತ್ರೆ-‘Toss’ to hit screens on September 18th – Kannada, Tulu language film festival

 SUDDILIVE || SHIVAMOGGA

ಸೆ.18ಕ್ಕೆ ತೆರೆಗೆ ‘ಟಾಸ್’ – ಕನ್ನಡ, ತುಳು ಭಾಷೆಯಲ್ಲಿ ಸಿನಿ ಜಾತ್ರೆ-‘Toss’ to hit screens on September 18th – Kannada, Tulu language film festival   
Toss, movie

ಶಿವಮೊಗ್ಗ: ನಟ ಹಾಗೂ ನಿರ್ದೇಶಕ ಅರ್ಜುನ್ ದೇವ್ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ‘ಟಾಸ್’ ಸಿನಿಮಾ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

ಗೋಲ್ಡನ್ ಮೂವೀಸ್ ಅರ್ಪಿಸುವ ಈ ಚಿತ್ರವನ್ನು ಅವಿಕಾ ಪ್ರೊಡಕ್ಷನ್ಸ್ ಹಾಗೂ ಬಿ.ಆರ್.ಬಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಿವೆ. ವಿಶೇಷವೆಂದರೆ, ‘ಟಾಸ್’ ಸಿನಿಮಾ ಕನ್ನಡ ಹಾಗೂ ತುಳು ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣಗೊಂಡಿದೆ. ಚಿತ್ರದಲ್ಲಿ ಸುತೇಜ್ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಅವರ ಸ್ವಂತ ಬ್ಯಾನರ್‌ನಲ್ಲಿಯೂ ಈ ಸಿನಿಮಾ ನಿರ್ಮಾಣವಾಗಿರುವುದು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಈಗಾಗಲೇ ಚಿತ್ರದ ಮೊದಲ ಹಾಡು ‘ಹೆಲೋ ಹೆಲೋ ನೀಲಾಂಬರಿ’ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಖ್ಯಾತ ನಿರ್ದೇಶಕ ಹಾಗೂ ಗೀತರಚನೆಕಾರ ಯೋಗರಾಜ್ ಭಟ್ ಸಾಹಿತ್ಯ ಬರೆದಿರುವ ಹಾಡಿಗೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಅರ್ಮಾನ್ ಮಲಿಕ್ ಹಾಡಿಗೆ ಧ್ವನಿ ನೀಡಿದ್ದಾರೆ.

ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿರುವ ‘ಹೆಲೋ ಹೆಲೋ ನೀಲಾಂಬರಿ’ ಹಾಡು ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದ್ದು, ಸಂಗೀತಪ್ರಿಯರ ಗಮನ ಸೆಳೆಯುತ್ತಿದೆ.

ಚಿತ್ರದ ಕಥೆ-ಚಿತ್ರಕಥೆಯನ್ನು ಡಾ. ದೇವದಾಸ್ ಬರೆದಿದ್ದು, ಜೋಯೆಲ್ ಶರ್ಮನ್ ಡಿಸೋಜಾ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಶನೀಲ್ ಗೌತಮ್ ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಕನ್ನಡ ಹಾಗೂ ತುಳು ಭಾಷೆಯ ಪ್ರೇಕ್ಷಕರನ್ನು ಏಕಕಾಲದಲ್ಲಿ ತಲುಪುವ ಉದ್ದೇಶದೊಂದಿಗೆ ಸಿದ್ಧಗೊಂಡಿರುವ ‘ಟಾಸ್’ ಸಿನಿಮಾ ಸೆಪ್ಟೆಂಬರ್ 18ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಎರಡು ಭಾಷೆಗಳಲ್ಲಿ ಒಂದೇ ಸಮಯದಲ್ಲಿ ಸಿನಿಮಾ ತೆರೆಗೆ ಬರುತ್ತಿರುವುದು ಪ್ರೇಕ್ಷಕರಲ್ಲಿ ವಿಶೇಷ ನಿರೀಕ್ಷೆ ಮೂಡಿಸಿದೆ.

Toss’ to hit screens on September 18th – Kannada, Tulu language film festival

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close